Monday, September 27, 2010

-ನೀವು ಹೇಳಿದ್ದು ನಾವು ಕೇಳಿದ್ದು-


.ನನ್ನ ಬ್ಲಾಗಿನ ಓದುಗ ಮಹಾಶಯರಿಗೆ ನಮಸ್ಕಾರಗಳು

.ನನ್ನ ಇಂದಿನ ಪೋಸ್ಟ್ ONCE AGAIN ನಮ್ಮ ಕಿಂಗ್ ಗೆ ಸಂಬಂಧ ಪಟ್ಟಿದ್ದು

.ನಮ್ಮ ಜನಗಳಲ್ಲಿ ಕಿಂಗ್ ನ ಬಗ್ಗೆ ಇರುವ ತಪ್ಪು ಕಲ್ಪನೆಗಳ ಬಗ್ಗೆ ಈ ಪೋಸ್ಟ್

.ಸಾಮಾನ್ಯವಾಗಿ ಕಿಂಗ್ ಮನೆ ಹತ್ತಿರ ಬಂದಿದೆ ಎಂದರೆ ಆ ಮನೆಯವರು ಬಹಳ ಭಯಕ್ಕೊಳಗಾಗುತ್ತಾರೆ 

.ಕಿಂಗ್ ಮನೆಗೆ ಬಂದಿದೆ ಎಂದರೆ ಆ ಮನೆಗೆ ಏನೋ ಗ್ರಹಚಾರ ಕಾದಿದೆ ಎಂದು ತಿಳಿಯುತ್ತಾರೆ

.ಅವರ ಮನಸ್ಸಿನಲ್ಲಿ ಕಿಂಗ್ ಅಂದರೆ ಬೇರೆ ಹಾವುಗಳಿಗಿಂತ ಭಯ ಜಾಸ್ತಿ

.ಅವರ ರೀತಿಯಲ್ಲೇ ಹೇಳುವುದಾದರೆ ಕಿಂಗ್ ನಮ್ಮನ್ನು ಓಡಿಸಿಕೊಂಡು ಬಂದು ಕಚ್ಚುತ್ತದೆ ಅದು ದೂರದಿಂದಲೇ ವಿಷವನ್ನು ನಮ್ಮ ಮೇಲೆ ಎಸೆಯುತ್ತದೆ,ಅದು ಕಚ್ಚಿದರೆ ಸಾವು ಗ್ಯಾರಂಟಿ.....

.ಕೆಲವರು ಇರುತ್ತಾರೆ ಅವರ ಪ್ರಕಾರ ಕಿಂಗ್ ಮನೆ ಹತ್ತಿರ ಬಂದಿದೆ ಎಂದರೆ ಅದು ಯಾರಿಗೋ ಕಚ್ಚಲೆಂದೇ ಬಂದಿದೆ ಎಂದು ಹೇಳಿ ಇದ್ದ ಜನರನೆಲ್ಲಾ ಗಾಭರಿಗೊಳಿಸುತ್ತಾರೆ

.ಜನರು ಒಳ್ಳೆಯದನ್ನ ಬೇಗ ನಂಬೋದಿಲ್ಲ,ಆದರೆ ಕೆಟ್ಟದನ್ನ ನಾ ಮುಂದು,ತಾ ಮುಂದು ಎಂದು ನಂಬಿಬಿಡುತ್ತಾರೆ

.ಕೆಲವು ಜನರು  ಕಿಂಗ್ ಬಗ್ಗೆ  ಹೇಳುವುದನ್ನು ಕೇಳಿದರೆ ನಗಬೇಕೋ,ಅಳಬೇಕೋ ತಿಳಿಯುವುದಿಲ್ಲ

.ಜುಟ್ಟು ಕಾಳಿಂಗ ಅಂತ ಇದೆಯಂತೆ .ಅದು ಜುಟ್ಟಿನಲ್ಲೇ ಮನುಷ್ಯರಿಗೆ  ಹೊಡೆದು ಸಾಯಿಸುತ್ತದೆಯಂತೆ

.ಇನ್ನು ಕೆಲವರ ಪ್ರಕಾರ ಸೀಟಿ ಕಾಳಿಂಗ ಅಂತ ಇದೆಯಂತೆ,ನೀವು ಕಾಡಿಗೆ ಹೋಗಿ ಸೀಟಿ ಹೊಡೆದರೆ ನಿಮ್ಮನ್ನು ಓಡಿಸಿಕೊಂಡು ಬರುತ್ತದೆಯಂತೆ

.ನಾವು ಚಿಕ್ಕವರಿದ್ದಾಗ ಇದನೆಲ್ಲ ನಂಬುತ್ತಿದ್ದೆವು,ಆಗ ಕಾಳಿಂಗ ಸರ್ಪ ಎಂದರೆ ಗಡ,ಗಡ...
.
.ಎಲ್ಲೊ ಕಾಡಿನ ಮದ್ಯೆ ಒಂಟಿಯಾಗಿ ನಡೆದು ಹೋಗುತ್ತಿದ್ದರೆ ಅದೇ ಜುಟ್ಟು ಕಾಳಿಂಗ,ಸೀಟಿ ಕಾಳಿಂಗ ಇವರೆಲ್ಲ ಕಣ್ಣ ಮುಂದೆ ಬಂದು ಬಾಯಲ್ಲಿ ರಾಮ ನಾಮ ಹೇಳುವಂತೆ ಮಾಡುತ್ತಿದ್ದವು

.ಇನ್ನು ಕೆಲವು ಅತಿಯಾಗಿ ತಲೆ ಓಡಿಸುವವರ ಪ್ರಕಾರ ಕಿಂಗೆ ಗೆ 10 ತಲೆ ಇರುತ್ತದಂತೆ ,ಸಿಟ್ಟು ಬಂದಾಗ 10 ತಲೆ ಪ್ರದರ್ಶನ ಮಾಡುತ್ತದಂತೆ

.ಹಾವಿನ ದ್ವೇಷ 12 ವರುಷ ಬಹಳ ಪ್ರಸಿದ್ದಿ ಮಾತಿದು...ಇದು ನಮ್ಮ ಕಿಂಗ್ ಗೆ ಕೂಡ ಅನ್ವಯಿಸುತ್ತದೆ

.ಒಟ್ಟಿನಲ್ಲಿ ನಮ್ಮ ಕಿಂಗ್ ಅನ್ನು ವಿಲನ್ ಮಾಡಲು ಏನೇನು ಕತೆ ಮಾಡಬೇಕೋ ಅದನ್ನೆಲ್ಲಾ ಮಾಡುತ್ತಾರೆ ನಮ್ಮ ಜನ

.ಆದರೆ ಯಾವುದೋ  ಒಂದು ರೀತಿಯಲ್ಲಿ ಜನರ ಈ ಕಾಗಕ್ಕ ಗುಬ್ಬಕ್ಕ ಕತೆಗಳು ಕಿಂಗ್ ಗೆ  ಕೆಲವೊಮ್ಮೆ ವರವಾಗಿ ಪರಿಣಮಿಸುತ್ತದೆ ,ಏಕೆಂದರೆ ಜನ ಕಿಂಗ್ ಅನ್ನು ವಿಲನ್ ರೀತಿಯಲ್ಲಿ ನೋಡುವುದರಿಂದ ಅದರ ತಂಟೆಗೆ ಹೋಗಲು ಹೆದರುತ್ತಾರೆ,ಮನೆ ಹತ್ತಿರ ಬಂದರೆ ಅದಕ್ಕೆ ಏನು ಮಾಡದೆ ಹಾವು ಹಿಡಿಯುವ ಜನರನ್ನು ಕರೆಯುತ್ತಾರೆ..SO ಕಿಂಗ್ ಸೇಫ್ ಆಗ್ತಾನೆ

.BUT ಜನರ ಈ  ಮೂಢ ನಂಬಿಕೆಗಳಿಂದ ಕಿಂಗ್ ಗೆ ರಕ್ಷಣೆಗಿಂತ ಅಪಾಯವೇ ಜಾಸ್ತಿ.. ಕಿಂಗ್ ಅನ್ನು ಹಿಡಿಸುವ ನೆಪದಲ್ಲಿ ಅವರು ಮಾಡುವ ಗಲಾಟೆ,ಕಿಂಗ್ ಅನ್ನು ನೋಡುವ ಕುತೂಹಲದಲ್ಲಿ ಸೇರುವ ಜನ ಸಾಗರ,ಇದರಿಂದ ಉತ್ಸಾಹ ಬಂದು ಕೆಲವು ಹಾವು ಹಿಡಿಯುವವರು ಕಿಂಗ್ ಮೇಲೆ ತಮ್ಮ ಬಲ ಪ್ರಯೋಗ ಮಾಡುವುದು...ಹೀಗೆ ನಮ್ಮ ಕಿಂಗ್ ಬಹಳ ತೊಂದರೆಗೊಳಗಾಗುತ್ತಾನೆ

.ನಾನು ಜನಗಳನ್ನು ದೂರುತ್ತಿಲ್ಲ.ಪಾಪ ಕಿಂಗ್ ಬಗೆಗಿನ ಕತೆಗಳು ಅವರಿಗೆ ವಂಶ ಪಾರಂಪರ್ಯವಾಗಿ ಬಂದಿರುತ್ತದೆ

.ಜನರ ಮನಸ್ಸಿನಲ್ಲಿ ಹೆಮ್ಮರವಾಗಿ ಬೆಳೆದಿರುವ ಈ ಕತೆಗಳನ್ನು ನಾವು ಬುಡ ಸಮೇತ ಕಿತ್ತೊಗೆಯಬೇಕಿದೆ..

.ಕಿಂಗ್ ಅಂದ್ರೆ ಏನು,ಅವನು ಎಷ್ಟು ಒಳ್ಳೆಯವನು,ಅವನ ಜೀವನ ವಿಧಾನ ಹೇಗೆ,ಅವನು ಅನಭವಿಸುತ್ತಿರುವ ತೊಂದರೆಗಳು ಏನು...ಹೀಗೆ ಇವುಗಳ ಬಗ್ಗೆ ಜನರಲ್ಲಿ ಅರಿವು ಬೆಳೆಸಿದರೆ ಆಗ ಅವರ ಮನಸ್ಸಿನಲ್ಲಿ ನಮ್ಮ ಕಿಂಗ್ ಹೀರೋ ಆಗಿ ಮೆರೆಯುತ್ತಾನೆ

.If you plan for one year, plant rice.If you plan for ten years,plant trees,If you plan for one hundread years ,educate the people ಎಷ್ಟು ಸತ್ಯದ ಮಾತಲ್ಲವೇ.........

.ನಶಿಸುತ್ತಿರುವ ಕಿಂಗ್ ನ ಸಂತತಿ ಯನ್ನು ಉಳಿಸಲು ಇಂದು ಜನರಲ್ಲಿ ಕಿಂಗ್ ಬಗ್ಗೆ ತಿಳುವಳಿಕೆಯನ್ನು ನೀಡಬೇಕಾಗಿದೆ

.ಪ್ರಕೃತಿಯ ಒಬ್ಬ ಸುಂದರವಾದ ಜೀವಿಯ ರಕ್ಷಣೆ ನಮ್ಮೆಲ್ಲರ ಹೊಣೆ..ಈ ಭೂಮಿ ನಮಗೆ ಹೇಗೆ ಮನೆಯೋ ಹಾಗೆ ಅವನಿಗೂ ಇದು ಮನೆ.. ಅವನನ್ನು ಮನೆಯಿಂದ ಹೊರಗೆ ಕಳಿಸುವ ಹಕ್ಕು ನಮಗಿಲ್ಲ.....

.ಇಷ್ಟೆಲ್ಲಾ ಓದಿದ ಮೇಲೂ.ಕಿಂಗ್ ಬಗ್ಗೆ ತಿಳಿದ ಮೇಲೂ....ನಾಳೆ ನಿಮ್ಮ ಮಗ ಅಥವಾ ಮಗಳು ಅಪ್ಪ ಕಿಂಗ್ ಅನ್ನು ನೋಡಬಾರದಂತೆ,ಜುಟ್ಟು ಕಾಳಿಂಗ,ಸೀಟಿ ಕಾಳಿಂಗ ಬಂದು ಕಚ್ಚುತವೆಯಂತೆ..ಅದನ್ನು ಹೊಡೆದು ಓಡಿಸು ಎಂದು ಹೇಳಿದರೆ ಅದಕ್ಕೆ ನೀವೇ ಜವಾಬ್ದಾರರು......................

-ತಿಳಿಯಿರಿ,ತಿಳಿಸಿರಿ,ಕಿಂಗ್ ಅನ್ನು ಉಳಿಸಿರಿ-

Image courtesy-Dinesh.jk,Adithya.bm

Share this post with your friends

Bookmark and Share