Tuesday, November 30, 2010

-AMAZING AMAZON-
.ನಭೋಮಂಡಲ ದಲ್ಲಿ ಸಣ್ಣ ಸಾಸಿವೆ ಕಾಳಿನಂತೆ ಕಾಣುವ ನಮ್ಮ ಭೂಮಿಯಲ್ಲಿ ನಾವು ಜೀವಮಾನವಿಡೀ ನೋಡಿದರೂ ಮುಗಿಸಲಾರದಷ್ಟು ಅದ್ಭುತಗಳಿವೆ

.ಅಂತಹ ಸಹಸ್ರ,ಸಹಸ್ರ ಪ್ರಕೃತಿಯ ಅದ್ಭುತಗಳಲ್ಲಿ ಅತೀ ಅದ್ಭುತ ಒಂದರ ಬಗ್ಗೆ ನಾನು ಈ ಪೋಸ್ಟ್ನಲ್ಲಿ ಬರೆದಿದ್ದೇನೆ

.AMAZON -ಈ ಹೆಸರನ್ನು ನೀವು ಈಗಾಗಲೇ ಕೇಳಿರಬಹುದು.ಹೌದು ಮನುಷ್ಯ ಮಾತ್ರರಿಗೆ ಇದನ್ನು ಒಂದು ಜನ್ಮದಲ್ಲಿ ಪೂರ್ತಿ ಅರ್ಥ ಮಾಡಿಕೊಳ್ಳಲ್ಲು ಆಗದ ಒಂದು ಪ್ರಕೃತಿಯ ಅದ್ಭುತ ಕೊಡುಗೆ ಈ ನಮ್ಮ Amazon ನದಿ

.ಈ ಮಹಾ ನದಿಯ ಬಗ್ಗೆ ನಾನು ಸಾವಿರ ಬ್ಲಾಗ್ ತೆಗೆದು,ಲಕ್ಷ ಲಕ್ಷ ಲೇಖನಗಳನ್ನು ಬರೆದರೂ ಅದು ಕಡಿಮೆಯೇ

.ನೀವು ಈಗಾಗಲೇ Amazon ಬಗ್ಗೆ ತಿಳಿದಿದ್ದರೆ ಇನ್ನೊಮ್ಮೆ ಇದನ್ನು ಓದಿ ಆನಂದಿಸಿ.ತಿಳಿದಿಲ್ಲವಾದರೆ ಇದನ್ನು ಓದಿ ಆಮೇಲೆ ನಿಮಗೇನೇ ಗೊತ್ತಾಗುತ್ತದೆ ಪ್ರಕೃತಿಯ ಮಹಿಮೆ

.ನಾನು ಈ ನದಿಯ ಬಗ್ಗೆ ಇಲ್ಲಿ ಬರೆದ ವಿವರಗಳು ಕೇವಲ ೦.0000001 percent ಅಷ್ಟೆ

.ಪ್ರಪಂಚದ ಅತ್ಯಂತ ದೊಡ್ಡದಾದ ನದಿ ಈ Amazon

.ಇರುವ ಸ್ಥಳ South America

.ಪೆರುವಿನ Andes ಪರ್ವತದಲ್ಲಿ ಈ ನದಿ ಸಣ್ಣ ಪ್ರಮಾಣದಲ್ಲಿ ಉಗಮವಾಗುತ್ತದೆ.ಈ ತೊರೆಯನ್ನು Apurimac River  ಎಂದು ಕರೆಯುತ್ತಾರೆ

.Amazon ನದಿಯ drainage basin (ಜಲಾನಯನ ಪ್ರದೇಶ) ನ ಒಟ್ಟು ವಿಸ್ತೀರ್ಣ 7,050,000 square kilometres

.Amazon ನದಿಯು south america ದಲ್ಲಿ ಹುಟ್ಟಿ Guyana, Ecuador, Venezuela, Bolivia, Brazil, Colombia ,peru ದೇಶಗಳಲ್ಲಿ ಹರಿದು Atlantic ಸಾಗರಕ್ಕೆ ಸೇರುತ್ತದೆ

.ಇಲ್ಲಿ ಇನ್ನೊಂದು ವಿಚಿತ್ರವೆಂದರೆ Amazon ನದಿ ಹುಟ್ಟುವ ಪ್ರದೇಶಕ್ಕೆ ಪಸಿಫಿಕ್ ಸಾಗರ ಹತ್ತಿರವಿದ್ದರೂ ಕೂಡ Amazon ನದಿ ಸಾವಿರಾರು ಮೈಲಿ ದೂರದ atlantic ಸಾಗರಕ್ಕೆ ಹರಿಯುತ್ತದೆ

.ಈ ನದಿಯ ಒಟ್ಟು ಉದ್ದ 6400 kilometres

.Amazon ನದಿಯ ಅಗಲ ಸಾಮಾನ್ಯವಾಗಿ 1 .6 ರಿಂದ 10 kilometer .ಇನ್ನು ಮಳೆಗಾಲದಲಂತೂ 40 km ಗಿಂತಲೂ ಹೆಚ್ಚು (ಸುಮ್ಮನೆ ಊಹಿಸಿಕೊಳ್ಳಿ 48 kilometer ಅಗಲದ ನದಿಯನ್ನು)

.ಈ ನದಿ atlantic ಸಾಗರಕ್ಕೆ ಸೇರುವ ಮುಂಚಿನ estuary (ನದೀಮುಖ) ಯೇ 240 kilometer ಉದ್ದವಿದೆ

.ಈ ದ್ಯತ್ಯ ನದಿಯನ್ನು 'River Sea' ಅಂತಲೂ ಕರೆಯುತ್ತಾರೆ

.ಈ ನದಿಯ ನೀರು ಅತ್ಯಂತ ಶುದ್ದ ನೀರು

.Amazon ನದಿಯು ಮಳೆಗಾಲದಲ್ಲಿ ಪ್ರತೀ ಸೆಕೆಂಡ್ ಗೆ 60 million gallons ನಷ್ಟು ನೀರನ್ನು atlantic ಸಾಗರಕ್ಕೆ ಸೇರಿಸುತ್ತದೆ (ನೀವು ಈ ಲೈನ್ ಓದಿ ಮುಗಿಸುವಷ್ಟರಲ್ಲಿ)

.ಇದು ಸಾಗರ ಸೇರಿದ ಮೇಲೂ ಹಲವಾರು ಕಿಲೋಮೀಟರುವರೆಗೆ ಸಿಹಿ ನಿರಾಗಿಯೇ  ಇರುತ್ತದೆ .ಅಂದರೆ ಇದು ಸಾಗರ ಸೇರಿದ ಮೇಲಿನ ಹಲವಾರು kilometer (100) ಗಳವರೆಗೆ ನೀರಿನಲ್ಲಿ ಉಪ್ಪಿನ ಅಂಶ ಬಹಳ ಕಡಿಮೆ ಇರುತ್ತದೆ

.ಪ್ರಪಂಚದಲ್ಲಿ ಸಾಗರಕ್ಕೆ ಸೇರುವ 20 percent ನಷ್ಟು ಸಿಹಿ ನೀರು amazon ನದಿ ಒಂದರಿಂದಲೇ ಸೇರುತ್ತದೆ
 image courtesy-national geographic.com

.ಈ ಮಹಾನದಿಗೆ ಎಲ್ಲೂ ಸೇತುವೆಗಳಿಲ್ಲ

.ಈವರೆಗೆ 3000 ಕ್ಕಿಂತಲೂ ಹೆಚ್ಚಿನ ಜಾತಿಯ ಮೀನುಗಳನ್ನು ಈ ನದಿಯಲ್ಲಿ ಗುರುತಿಸಲಾಗಿದೆ.ಇನ್ನೂ ಅದೆಷ್ಟು ಜಾತಿಯ ಮೀನುಗಳು ಇಲ್ಲಿವೆಯೋ ಆ ದೇವರಿಗೇ ಗೊತ್ತು

.ಇನ್ನು 'amazon ಮಳೆ ಕಾಡುಗಳು' ಅತ್ಯಂತ ಹೆಚ್ಚಿನ ಜೀವ ಸಾಂದ್ರತೆಯನ್ನು ಹೊಂದಿರುವ ಈ ಮಳೆ ಕಾಡುಗಳು ಇರುವುದು ಈ ನದಿ ಪ್ರದೇಶದಲ್ಲೇ

.ಅತ್ಯಂತ ಉದ್ದದ ಅನಕೊಂಡ ಹಾವು,ಮಾಂಸಾಹಾರಿ piranha ಮೀನುಗಳಿಗೆ Amazon ನದಿ ತವರು ಮನೆ

.ಮಳೆಗಾಲದಲ್ಲಿ ನದಿಯ ಆಳ 130 ಅಡಿಗಿಂತಲೂ ಹೆಚ್ಚಿರುತ್ತದೆ.ನವೆಂಬರ್ ನಿಂದ ನದಿಯ ನೀರಿನ ಪ್ರಮಾಣ ಹೆಚ್ಚತೊಡಗಿ ಜೂನ್ ವರೆಗೂ ಅತ್ಯಂತ ಹೆಚ್ಚಿನ ನೀರು ಹರಿಯುತ್ತದೆ

.ಸಾಧಾರಣ ದಿನಗಳಲ್ಲಿ ನದಿ ನೀರಿನ ವೇಗ ಪ್ರತೀ ಘಂಟೆಗೆ 2.5 ಕಿಲೋಮೀಟರು.ಮಳೆಗಾಲದಲ್ಲಿ 5 km /hour

.200 ಕ್ಕೂ ಹೆಚ್ಚಿನ ಉಪನದಿಗಳು Amazon ನದಿಗೆ ಸೇರುತ್ತವೆ

.ಬೋಟೊ ಎಂದು ಕರೆಯಲ್ಪಡುವ Amazon ನದಿ ಡಾಲ್ಫಿನ್ ಜಗತ್ತಿನ ಅತಿ ದೊಡ್ಡ ನದಿ ಡಾಲ್ಫಿನ್

.catfish ಮೀನುಗಳಿಗೆ ಆವಾಸ ಸ್ಥಾನ ಈ Amazon ನದಿ

.ಪ್ರಪಂಚದ ಅತ್ಯಂತ ದೊಡ್ಡದಾದ ಸಿಹಿ ನೀರಿನ ಮೀನು ಇರುವುದು ಈ ನದಿಯಲ್ಲೇ.ಇದನ್ನು ಸ್ಥಳೀಯವಾಗಿ Pirarucu ಎಂದು ಕರೆಯುತ್ತಾರೆ.ಇದರ ವ್ಯಜ್ನಾನಿಕ ಹೆಸರು Arapaima gigas

.ವರ್ಷದಲ್ಲಿ ಯಾವಾಗಲು ಸರಾಸರಿ 27 c ಉಷ್ಣಾಂಶವಿರುತ್ತದೆ

.ಇದರ ಸುತ್ತಮುತ್ತಲಿನ ಪ್ರದೇಶದಲ್ಲಿ ಬೀಸುವ ಗಾಳಿಯಲ್ಲಿ ಹೆಚ್ಚಿನ ಪ್ರಮಾಣದ ನೀರಿನಂಶವಿರುತ್ತದೆ

.ಈ ನದಿಯ,ಹಾಗು ಇದರ ಸುತ್ತಮುತ್ತಲಿನ ಪ್ರದೇಶದ ಅದೆಷ್ಟೋ ವ್ಯಶಿಷ್ಟ್ಯಗಳು ಇನ್ನೂ ನಮಗೆ ತಿಳಿದಿಲ್ಲ

.ಹುಡುಕುತ್ತಾ ಹೋದಷ್ಟು ಅದ್ಭುತಗಳನ್ನು ತನ್ನಲ್ಲಿ ಇಟ್ಟುಕೊಂಡಿರುವ Amazon ನಿಜಕ್ಕೂ ಒಂದು ಗ್ರೇಟ್ ನದಿ

.Amazon ನದಿಗೆ Amazon ನದಿಯೇ ಸರಿಸಾಟಿ

.ಇದನ್ನು ಓದಿದ ಮೇಲೆ ಈ ನದಿಯ ಬಗ್ಗೆ ಒಂದು ಚಿತ್ರ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದೆಂದು ಭಾವಿಸುತ್ತೇನೆ

.ಎಷ್ಟು ಅನೇಕ ಬಗೆಯ ಅದ್ಭುತಗಳನ್ನು ಪ್ರಕೃತಿ ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ.ಅಲ್ಲವೇ.....

.ನಾನು,ನನ್ನದು,ನಾನೇ ಎಲ್ಲಾ ಎಂದು ಹಾರಾಡುವ ಮನುಷ್ಯನು ಇಂತಹ ಅದ್ಭುತಗಳ ಮುಂದೆ ಏನೇನೂ ಅಲ್ಲ

.ಹುಟ್ಟಿದ ಮೇಲೆ ಓದು,ಕೆಲಸ ಮಾಡು,ಮದುವೆ ಆಗು,ಒಂದಷ್ಟು ಜನಸಂಖ್ಯೆ ಜಾಸ್ತಿ ಮಾಡು,ಕೊನೆಗೊಂದು ದಿನ ಸಾಯಿ.ಇಷ್ಟೇ ಜೀವನದ ನಡುವೆ ಇಂತಹ ಪ್ರಕೃತಿಯ ಎಷ್ಟೋ ಅದ್ಭುತಗಳು ನಮ್ಮನ್ನು ಆ ಪ್ರಕೃತಿಯತ್ತ  ಸೆಳೆದು ಜೀವನದಲ್ಲಿ ಏನೋ ಒಂದು ರೀತಿಯ ಒಳ್ಳೆಯ ಬದಲಾವಣೆಯನ್ನು ತರುತ್ತದೆ ಎಂಬುದು ನನ್ನ ವಯಕ್ತಿಕ ಅಭಿಪ್ರಾಯ

.ನಿಜವಾಗಿಯೂ ಆ ಮಹಾತಾಯಿ ಪ್ರಕೃತಿಗೆ ನನ್ನ ಕೋಟಿ,ಕೋಟಿ ನಮನ.......

-ಪ್ರಕೃತಿಯನ್ನು ರಕ್ಷಿಸಿ-