Thursday, January 13, 2011

-ಮನುಷ್ಯರಾ ಸ್ವಾಮಿ ಇವರು...?-
.ನೋಡಿ ಸ್ವಾಮಿ ಕ್ರೂರ ಮನುಷ್ಯನ ಅಟ್ಟಹಾಸವನ್ನು ...

.ಫರಿಧಾಭಾದ್ ನಲ್ಲಿ ಊರಿಗೆ ಬಂದ ಚಿರತೆಯನ್ನು ಹೇಗೆ ಹೊಡೆದು ಸಾಯಿಸಿದ್ದಾರೆ ಅಂತ

.Image Courtesy - faridabadmetro.com


.Image Courtesy-faridabadmetro.com

.ಥೂ ಕ್ರೂರ ಮನುಷ್ಯರು.........


-ಕಾಡು ಪ್ರಾಣಿಗಳನ್ನು ಉಳಿಸಿ-

-ಪ್ರಕೃತಿಯನ್ನು ರಕ್ಷಿಸಿ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

 .ಹಾವುಗಳು ಈ ಪದ ಕೇಳಿದರೆ ಬೆಚ್ಚಿ ಬೀಳುವ ಜನರು ಹೆಚ್ಚು ನಮ್ಮ ದೇಶದಲ್ಲಿ

.ವರದಿಯೊಂದರ ಪ್ರಕಾರ ನಮ್ಮ ದೇಶದಲ್ಲಿ ಪ್ರತಿ ವರ್ಷಕ್ಕೆ ಸರಿ ಸುಮಾರು 
2 ,5೦,೦೦೦ ಜನಗಳು ಹಾವುಗಳಿಂದ ಕಡಿತಕ್ಕೊಳಗಾಗುತ್ತಾರೆ.ಇದರಲ್ಲಿ 5೦,೦೦೦ ಜನರು ಪ್ರಾಣ ಕಳೆದುಕೊಳ್ಳುತ್ತಾರೆ 

.ಈ ಮಾಹಿತಿಯನ್ನು ನಾನು ಹಾವುಗಳ ಬಗ್ಗೆ ನಿಮ್ಮಲ್ಲಿ ಹೆದರಿಕೆಯನ್ನು ಹುಟ್ಟು ಹಾಕಲು ಹೇಳುತ್ತಿಲ್ಲ

.ನಮ್ಮ ದೇಶದಲ್ಲಿ ಹೆಚ್ಚಿನ ಜನರಿಗೆ ಇರುವ ಒಂದು ಭಾವನೆ ಎಂದರೆ ಹಾವುಗಳು ಎಂದರೆ ಕಚ್ಚಿ ಸಾಯಿಸುವ ಜೀವಿಗಳು ಎಂದು.ಈ ವಿಚಾರ ತಪ್ಪು.ಭಾರತದಲ್ಲಿ ಇರುವ ಹಲವಾರು ಹಾವುಗಳ ಜಾತಿಯಲ್ಲಿ ಕಂಡುಬರುವ ವಿಷಪೂರಿತ ಹಾವುಗಳ ಬಗ್ಗೆ ನನ್ನ ಇಂದಿನ ಪೋಸ್ಟ್

.ನೀವು ಈ ವಿಷಯ ಕೇಳಿದರೆ ಆಶ್ಚರ್ಯ ಪಡುತ್ತಿರಿ....ಭಾರತದಲ್ಲಿ ಇರುವ ವಿಷಪೂರಿತ ಹಾವುಗಳ ಜಾತಿ ಎಷ್ಟು ಗೊತ್ತೇ ? ಕೇವಲ 4

.ಹೌದು ನಮ್ಮ ದೇಶದಲ್ಲಿ ಈ 4 ಜಾತಿಯ ಹಾವುಗಳು ಮಾತ್ರ ವಿಷಪೂರಿತ.ಈ 4 ಜಾತಿಯ ಹಾವು ಕಚ್ಚಿದರೆ ಮಾತ್ರ ಮನುಷ್ಯ ಸಾಯುತ್ತನೆಯೇ ಹೊರತು (ಅಗತ್ಯ ಚಿಕೆತ್ಸೆ ಕೊಡಿಸದಿದ್ದಾಗ ) ಬೇರೆ ಎಲ್ಲಾ ಹಾವುಗಳು ವಿಷರಹಿತ

.ಈ 4 ಜಾತಿಯ ಹಾವುಗಳು ಯಾವುವೆಂದರೆ
1 .King Cobra ಅಥವಾ ಕಾಳಿಂಗ
2 .Cobra ಅಥವಾ ನಾಗರ ಹಾವು
3 .Viper ಅಥವಾ ಕನ್ನಡಿ ಹಾವು ಅಥವಾ ಕೊಳಕು ಮಂಡಲ
4 .Common krait ಅಥವಾ ಕಡಂಬಳ ಅಥವಾ ಕಟ್ಟು ಹಾವು


-King Cobra ಅಥವಾ ಕಾಳಿಂಗ -

.ಸಾಮಾನ್ಯವಾಗಿ ಪಶ್ಚಿಮ ಘಟ್ಟದ ತಂಪು ಪ್ರದೇಶಗಳಲ್ಲಿ ಇವು ಕಂಡು ಬರುತ್ತವೆ

.ನಾಗರ ಹಾವಿಗಿಂತ ಉದ್ದ ಬೆಳೆಯುವ ಇವುಗಳನ್ನು ಗುರುತು ಹಿಡಿಯುವುದು ಸುಲಭ

.ಹಗಲು ಹೊತ್ತು ಸಂಚರಿಸುವ ಇವುಗಳು ಜನ ವಸತಿ ಪ್ರದೇಶದ ಬಳಿ ಬರುವುದು ವಿರಳ

.ಇದರ ವಿಷಕ್ಕೆ ಔಷದಿ ಇಲ್ಲ .ಇದರ ಕಡಿತಕ್ಕೆ ಒಳಗಾಗಿ ಸಾಯುವವರ ಸಂಖ್ಯೆ ಬಹಳ ಕಡಿಮೆ

-Cobra ಅಥವಾ ನಾಗರ ಹಾವು-

.ಸಾಮಾನ್ಯವಾಗಿ ನಮ್ಮೆಲ್ಲರಿಗೂ ಚಿರ ಪರಿಚಿತ ಹಾವು ಇದು

.ಭಾರತದೆಲ್ಲೆಡೆ ಕಂಡು ಬರುತ್ತವೆ.ಹಗಲು ಹೊತ್ತಿನ ಜೀವಿಗಳಾದ ಇವುಗಳ ಚಲನೆ ನಿಧಾನ

.ಇದರ ವಿಷಕ್ಕೆ ಔಷದಿ ಲಭ್ಯವಿದೆ


-Viper ಅಥವಾ ಕನ್ನಡಿ ಹಾವು ಅಥವಾ ಕೊಳಕು ಮಂಡಲ -
 (Image Courtesy-sarah-care.com)

 .ರಾತ್ರಿ ಹೊತ್ತು ಮಾತ್ರ ಕಾರ್ಯ ಪ್ರವೃತ್ತ ವಾಗುವ ಈ ಹಾವು ಜನ ವಸತಿಯ ಸ್ಥಳಗಳಲ್ಲೊ ಕಂಡು ಬರುತ್ತವೆ

.ಗದ್ದೆ ,ತೋಟಗಳಲ್ಲಿ ಇಲಿ ಮತ್ತಿತರ ಚಿಕ್ಕ ಪ್ರಾಣಿಗಳನ್ನು ಭೇಟೆಯಾಡಲು ಹೊಂಚು ಹಾಕಿ ಕುಳಿತಿರುತ್ತದೆ

.ಇವುಗಳ ಮೈ ಮೇಲೆ ಕನ್ನಡಿ ಆಕಾರದ ಪಟ್ಟೆಗಳು ಕಂಡು ಬರುವುದರಿಂದ ಇವನ್ನು ಕನ್ನಡಿ ಹಾವು ಎನ್ನುತ್ತಾರೆ

.ತಲೆಯು ತ್ರಿಕೂನಾಕಾರದಲ್ಲಿರುತ್ತದೆ

.ಮೈ ಮೇಲೆ ಈ ಹಾವಿನ ತರಹದಲ್ಲೇ ಅಕಾರ ಇರುವ ಆದರೆ ತಲೆ ಮಾತ್ರ ತ್ರಿಕೂನಾಕಾರದಲ್ಲಿರದ  ವಿಷರಹಿತ ಹಾವುಗಳನ್ನು ಕೆಲವರು ಕನ್ನಡಿ ಹಾವೆಂದು ತಪ್ಪು ತಿಳಿದು ಸಾಯಿಸುತ್ತಾರೆ

.ಭಾರತದಲ್ಲಿ viper ಜಾತಿಯ ವಿಷಪೂರಿತ ಹಾವುಗಳಲ್ಲಿ Russell's Viper ಹಾಗು Saw Scaled Viper ಗಳು ಪ್ರಮುಖವಾದವು .ಸಾಮಾನ್ಯವಾಗಿ ಎರಡರ ತಲೆಯೂ ತ್ರಿಕೂನಕಾರದಲ್ಲಿದ್ದು ಮೈಮೇಲಿನ ಅಕಾರ ವ್ಯತ್ಯಾಸವಿರುತ್ತದೆ 

.ಹೆಸರೇ ಹೇಳುವಂತೆ Saw Scaled Viper ಗಳ ಮೈ Scales ಗಳಿಂದ ಕೂಡಿರುತ್ತವೆ

.ಇದರ ವಿಷ ಅಪಾಯಕಾರಿಯಾಗಿದ್ದು kidney ವ್ಯಪಲ್ಯ ತಂದೊಡ್ಡುತ್ತದೆ

-Common krait ಅಥವಾ ಕಡಂಬಳ ಅಥವಾ ಕಟ್ಟು ಹಾವು -
(Image Courtesy-sarah-care.com) 

.ಕಪ್ಪು ಬಣ್ಣದ ಮೈ ಮೇಲೆ ತೆಳ್ಳಗಿನ band ಗಳು ಕಂಡು ಬರುತ್ತವೆ

.5 ಅಡಿವರೆಗೆ ಬೆಳೆಯಬಲ್ಲವು

.viper ನಂತೆಯೇ ಇವೂ ಕೂಡ ರಾತ್ರಿ ಹೊತ್ತು ಮಾತ್ರ ಕಾರ್ಯ ಪ್ರವೃತ್ತವಾಗುವ ಜೀವಿಗಳು

.ಕಾಡು,ಹುಲ್ಲುಗಾವಲು,ಗದ್ದೆ,ತೋಟ ಗಳ ಹತ್ತಿರ ಬೇಟೆಯಾಡಲು ಹೊಂಚು ಹಾಕಿ ಕುಳಿತಿರುತ್ತವೆ

.ನೋಡಲು ಈ ಹಾವಿನ ತರಹವೇ ಇರುವ ಇನ್ನೊಂದು ಹಾವು banded wolf snake ಅಥವಾ ಕಟ್ಟು ತೋಳ ಹಾವು.ಈ ಕಟ್ಟು ತೋಳ ಹಾವು ವಿಷ ರಹಿತ ಹಾವಾಗಿದ್ದು ವಿಷ ಪೂರಿತ krait ಹಾವುಗಳಿಗಿರುವಂತೆ ಮೈ ಮೇಲೆ ದಪ್ಪ band ಇದ್ದು ತಲೆ ಚಪ್ಪಟೆಯಾಗಿರುತ್ತದೆ

.krait ನ ವಿಷ ಅತ್ಯಂತ ಅಪಾಯಕಾರಿ.ಇದು ಕಚ್ಚಿದಾಗ ನೋವು ಗೊತ್ತಾಗುವುದಿಲ್ಲ ಹಾಗಾಗಿಯೇ ಇದು ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಸಾವುಗಳಿಗೆ ಕಾರಣವಾಗಿದೆ


.ಮೇಲೆ ತಿಳಿಸಿರುವ 4 ಜಾತಿಯ ಹಾವುಗಳು ಮಾತ್ರ ನಮ್ಮ ದೇಶದಲ್ಲಿ ಕಂಡು ಬರುವ ವಿಷ ಪೂರಿತ ಹಾವುಗಳು

.ಈ ವಿಷಪೂರಿತ ಹಾವುಗಳು ಕೂಡ ಯಾರಿಗೂ ಸುಮ್ಮನೆ ಸುಮ್ಮನೆ ಕಚ್ಚುವುದಿಲ್ಲ 
ನಾವು ಅಚಾನಕ್ಕಾಗಿ ಅವುಗಳನ್ನು ತುಳಿದಾಗ ಅಥವಾ ಬೇಕೆಂದೇ ಹಿಂಸೆ ಮಾಡಿದಾಗ ಮಾತ್ರ ಅವುಗಳ ಪ್ರಾಣ ಉಳಿಸಿಕೊಳ್ಳಲು ಅವು ಆಕ್ರಮಣಕ್ಕಿಳಿಯುತ್ತವೆ

.ನಾವು ನಮ್ಮ ಜಾಗ್ರತೆಯಲ್ಲಿದ್ದರೆ ಹಾವುಗಳಿಂದ ಕಡಿತಕ್ಕೊಳಗಾಗುವ ಸಂದರ್ಭವೇ ಬರುವುದಿಲ್ಲ

.ಅಕಸ್ಮಾತ್ ಈ ಹಾವುಗಳು ದಾರಿ ತಪ್ಪಿ ನಿಮ್ಮ ಮನೆಯ ಸುತ್ತ ಮುತ್ತ ಕಾಣಿಸಿಕೊಂಡರೆ ನೀವು ಹೆದರಿ ಹಿಂಸೆ ಮಾಡದೆ ಉರಗ ರಕ್ಷಕರನ್ನು ಸಂಪರ್ಕಿಸಿ ಅವುಗಳನ್ನು ಸುರಕ್ಷಿತ ಪ್ರದೇಶಕ್ಕೆ ಬಿಡಿಸಿ

.ಕೆಲವೊಮ್ಮೆ ಎಷ್ಟೋ ವಿಷ ರಹಿತ ಹಾವುಗಳನ್ನು ಜನ ವಿಷಪೂರಿತವೆಂದು ತಿಳಿದು ಹೊಡೆದು ಕೊಲ್ಲುತ್ತಾರೆ.ನಿಜಾಂಶ ಗೊತ್ತಿರುವ ನಾವುಗಳು ಅವರಿಗೆ ತಿಳಿ ಹೇಳಿ ಹಾವುಗಳನ್ನು ರಕ್ಷಿಸಬೇಕಿದೆ

.ಪ್ರಕೃತಿ ವಿಷರಹಿತ ಹಾವುಗಳಿಗೂ,ವಿಷ ಪೂರಿತ ಹಾವುಗಳಿಗೂ ತಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳಲು ಅವುಗಳದ್ದೇ ಆದ ಒಂದು ರಕ್ಷಣಾ ತಂತ್ರ ವನ್ನು ಕರುಣಿಸಿರುತ್ತದೆ.ಯಾವಾಗ ತಮ್ಮ ಪ್ರಾಣಕ್ಕೆ ಸಂಚಕಾರ ಬಂದಿದೆ ಅಂತ ಅನ್ನಿಸಿದಾಗ ಮಾತ್ರ ಅವು ಆ ರಕ್ಷಣಾ ತಂತ್ರ ವನ್ನು ಬಳಸಿಕೊಳ್ಳುತ್ತವೆ

.ಆದರೆ ಮಾನವ ಎಂಬ ವಿಷಪೂರಿತ ಜೀವಿ ಎಲ್ಲ ಸಂದರ್ಭದಲ್ಲೂ ವಿಷವನ್ನು ಕಕ್ಕುತ್ತಲೇ ಇರುತ್ತಾನೆ........

-ಹಾವುಗಳನ್ನು ರಕ್ಷಿಸಿ -

-ಪ್ರಕೃತಿಯನ್ನು ಉಳಿಸಿ-