Thursday, June 16, 2011

-ಟಾರ್ಗೆಟ್ ಪ್ರಕೃತಿ-
-ಮೈಸೂರಿನಲ್ಲಿ ಕಾಡಾನೆಗಳ ದಾಂಧಲೆ-
-ಖಾಸಗಿ ಲಾಬಿಗೆ ಬಲಿಯಾಗುತ್ತಿದೆ ಹುಲಿ ಸಂರಕ್ಷಿತ ಪ್ರದೇಶ-
-ಬಂಡೀಪುರ ಅಭಯಾರಣ್ಯದಲ್ಲಿ ತಲೆಯೆತ್ತಲಿವೆ 10 ರೆಸಾರ್ಟ್ ಗಳು-
-ಪಶ್ಚಿಮ ಘಟ್ಟದ 10 ಪ್ರದೇಶಗಳನ್ನು ಯುನೆಸ್ಕೋ ಪಟ್ಟಿಗೆ ಸೇರಿಸದಿರಲು ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಮನವಿ-
ಇಂತಹ ಹತ್ತು ಹಲವು ಹೆಡ್ ಲೈನ್ ಗಳನ್ನು ಇತ್ತೀಚಿನ ಕನ್ನಡ ಪತ್ರಿಕೆಗಳಲ್ಲಿ ನೀವು ನೋಡಿರಬಹುದು

.ಪ್ರಕೃತಿಯ ಮೇಲೆ ನಮ್ಮನಾಳುವ ದೊರೆಗಳಿಗೆ ಕಾಳಜಿ ಎಷ್ಟು ಎಂದು ಇದರಿಂದ ಸ್ಪಷ್ಟವಾಗಿ ಅರ್ಥವಾಗುತ್ತದೆ

.ನಾನು ಇಲ್ಲಿ ಯಾವುದೇ ಒಂದು ಸರ್ಕಾರವನ್ನು  ಟಾರ್ಗೆಟ್ ಮಾಡಿ ಮಾತನಾಡುತ್ತಿಲ್ಲ.ಪ್ರಕೃತಿ ಮೇಲೆ ಹಲ್ಲೆ ಮಾಡುವ ಯಾರಾದರೂ ಸರಿ ಅವರ ವಿರುದ್ದ ದನಿ ಎತ್ತಬೇಕಾಗುವುದು ಪ್ರಕೃತಿಯಿಂದ ಬದುಕುವ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ

.ಇತ್ತೀಚಿಗೆ ನಾನು ರಾಜ್ಯದ ಪ್ರತಿಷ್ಟಿತ ಅಭಯಾರಣ್ಯಕ್ಕೆ ಭೇಟಿ ನೀಡಿದ್ದೆ.ವನ್ಯ ಪ್ರಾಣಿಗಳನ್ನು ಉಳಿಸಿಕೊಳ್ಳಲು ಅಲ್ಲಿನ ವ್ಯವಸ್ಥೆ, ಸಫಾರಿ ಗಳ ಅಬ್ಬರ,ರೆಸಾರ್ಟ್ ಗಳ ಲೋಕ.ನಿಜವಾಗಿಯೂ ಹೇಳಬೇಕೆಂದರೆ ನಾನು ಅಭಯಾರಣ್ಯ ದಲ್ಲಿ ಇದ್ದೇನೆಯೇ ಎಂಬ ಅನುಮಾನ ಬಂದಿತ್ತು

.ಪ್ರವಾಸೋದ್ಯಮದ ಹೆಸರಿನಲ್ಲಿ ವನ್ಯ ಜೀವಿಗಳು ಅನುಭವಿಸುತ್ತಿರುವ ತೊಂದರೆಗಳು ಯಾರಿಗೂ ತಿಳಿಯುತ್ತಿಲ್ಲ

.ಅಭಯಾರಣ್ಯಗಳು,ರಕ್ಷಿತಾರಣ್ಯಗಳು ಇಂದು ದುಡ್ಡಿದ್ದವರ ತೆವಲು ತೀರಿಸಿಕೊಳ್ಳುವ ಪ್ರದೇಶಗಳಾಗಿರುವುದು ನಿಜಕ್ಕೂ ದುರಾದೃಷ್ಟಕರ

.ಆನೆ ಕಾರಿಡಾರ್ ಗಳ ಪರಿಸ್ಥಿತಿ ನೋಡಿದರೆ ನಿಜಕ್ಕೂ ಮನಸ್ಸಿಗೆ ಭೇಸರ ಉಂಟಾಗುತ್ತದೆ.ಎಲ್ಲೊ ಒಂದೆರಡು ಕಡೆ ಆನೆಗಳು ನಾಡಿಗೆ ನುಗ್ಗಿ ಬೆಳೆ ನಾಶ ಮಾಡಿದರೆ ಒಪ್ಪಬಹುದಿತ್ತು .ಆದರೆ ಕೆಲ ವರ್ಷಗಳಿಂದೀಚೆಗೆ ಆನೆಗಳು ನಾಡಿಗೆ ನುಗ್ಗಿದ ಘಟನೆಗಳು ಎಷ್ಟು ಎಂದು ಲೆಕ್ಕ ಹಾಕಿದರೆ ನಿಜಕ್ಕೂ ಗಾಬರಿಯಾಗುತ್ತದೆ

.ಕೇವಲ ಆನೆಗಳಲ್ಲ,ಚಿರತೆ,ಹುಲಿ ಗಳಂತಹ ಜೀವಿಗಳು ಕೂಡ ನಾಡಿಗೆ ದಾಳಿಯಿಡುತ್ತಿರುವುದು ನಿಜಕ್ಕೂ ಆಘಾತಕಾರಿ


.ಕಾಡಿನ ಪರಿಸರ ಒಂದು ಸಂಕೀರ್ಣ ಪರಿಸರ,ಅಲ್ಲಿನ ಆಹಾರ ಸರಪಳಿಗಳು ಕೂಡ ಅಷ್ಟೇ ಸಂಕೀರ್ಣ.ಮನುಷ್ಯ ಮಾತ್ರರಿಗೆ ಊಹಿಸಲಾಗದ ಅತೀ ಸೂಕ್ಷ್ಮ ವಿಚಾರಗಳು ಆ ಪರಿಸರದಲ್ಲಿರುತ್ತದೆ.ವನ್ಯ ಜೀವಿಗಳು ತಮ್ಮದೇ ಆದ ಸೂಕ್ಷ್ಮತೆಗಳನ್ನೂ ಹೊಂದಿರುತ್ತದೆ.ಇಂತಹ ಸೂಕ್ಷ ಪರಿಸರ ಎಂದೂ ಮನುಷ್ಯರ ಪ್ರವೇಶವನ್ನು ಸಹಿಸುವುದಿಲ್ಲ,ನಿಮ್ಮ ಊರಿಗೆ ಆನೆ,ಹುಲಿ ಬಂದರೆ ನೀವು ಹೇಗೆ ಗಾಬರಿ ಬೀಳುತ್ತಿರೋ,ನಿಮಗೆ ಹೇಗೆ ಅವುಗಳ ಪ್ರವೇಶ ನಾಡಿಗೆ ಬೇಕಾಗಿಲ್ಲವೂ ಹಾಗೆ ಅವುಗಳಿಗೂ ಕೂಡ ಅವುಗಳ ಜಾಗದಲ್ಲಿ ನಿಮ್ಮ ಪ್ರವೇಶ ಹಿಡಿಸುವುದಿಲ್ಲ.ಅವುಗಳ ನಡುವೆ ಮನುಷ್ಯನ ಪ್ರವೇಶವಾದಾಗ ಅಲ್ಲಿನ ಪರಿಸರದ ಸೂಕ್ಷ್ಮತೆ ನಾಶವಾಗುತ್ತದೆ,ಆಹಾರ ಸರಪಳಿ ಏರು,ಪೇರು ಉಂಟಾಗಿ ಪ್ರಾಣಿಗಳ ಆಹಾರ ವ್ಯವಸ್ಥೆಗೆ ದಕ್ಕೆ ಉಂಟಾಗುತ್ತದೆ.ಒಟ್ಟಿನಲ್ಲಿ ಸೂಕ್ಷ್ಮ ಪರಿಸರ ಮಾನವನಿಂದ ನಾಶವಾಗುತ್ತಾ ಸಾಗುತ್ತದೆ


.ಇಂತಹ ಸೂಕ್ಷ್ಮ ವಿಚಾರ 'ದೊಡ್ಡ,ದೊಡ್ಡ ದೊರೆಗಳಿಗೆ
ಯಾಕೆ ಅರ್ಥವಾಗುತ್ತಿಲ್ಲ?ಅರ್ಥವಾದರೂ ಕೂಡ ಯಾಕೆ ಇವರುಗಳು ಅದನ್ನು ಸಂರಕ್ಷಿಸುವ ಮನಸ್ಸು ಮಾಡುತ್ತಿಲ್ಲ?


.ಅಭಯಾರಣ್ಯ ಎಂದು ಘೋಷಿಸಿದ ಮೇಲೆ ಅಲ್ಲಿ ಮನುಷ್ಯರ ಚಟುವಟಿಕೆಗಳಿಗೆ ಅವಕಾಶ ಕೊಡುವುದಾದರೂ ಏತಕ್ಕೆ ? ಸಫಾರಿ ಹೆಸರಿನಲ್ಲಿ ವನ್ಯ ಜೀವಿಗಳ ಸೂಕ್ಷ್ಮ ಪರಿಸರದಲ್ಲಿ ಮನುಷ್ಯ ಮದ್ಯ ಪ್ರವೇಶಿಸುವುದು ಎಷ್ಟು ಸರಿ? ಕೇವಲ ಪ್ರವಾಸೋದ್ಯದ ಹಣದಿಂದಲೇ ಕಾಡನ್ನು ರಕ್ಷಿಸಬೇಕಾದ ಅನಿವಾರ್ಯತೆ ಬಂದೊದಗಿದೆಯೇ?


.ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶಗಳನ್ನು ಯುನೆಸ್ಕೋ ಪಟ್ಟಿಗೆ ಸೇರಿಸದಂತೆ ಯೋಚನೆ ಮಾಡುತ್ತಾರೆ  ಅಂದರೆ ನೀವೇ ಯೋಚಿಸಿ? ಇವರ ಪರಿಸರ ಪ್ರೇಮ ಎಂತಹದ್ದು ಎಂದು ??


.ಇವರುಗಳಿಗೆ ಪರಿಸರದ ಮೇಲೆ ಕಾಳಜಿ ಇದ್ದರೂ ಕೂಡ ಅದಕ್ಕೆ 'ಕೆಲವು ಲಾಬಿ' ಬಿಡಬೇಕಲ್ಲಾ...! ಲಾಬಿಗಳಿಗೆ ಮಣಿಯಲೇ ಇವರುಗಳ ಕೈಗೆ ನಾವು ಅಧಿಕಾರ ಕೊಟ್ಟಿದ್ದು!!


.ಒಟ್ಟಿನಲ್ಲಿ 'ದೊರೆ'ಗಳಿಗೇ ಆಗಲಿ 'ಉದ್ಯಮಿಗಳಿಗೇ' ಆಗಲಿ ಪರಿಸರದ ಕಾಳಜಿ ಅಗತ್ಯವಿಲ್ಲ.ಇವರುಗಳ ಆಸೆ ತೀರಲು ಇವರು ಟಾರ್ಗೆಟ್ ಮಾಡುತ್ತಿರುವುದು 'ಪ್ರಕೃತಿ ಮಾತೆಯನ್ನು'


.ಈ 'ಟಾರ್ಗೆಟ್ ಪ್ರಕೃತಿ'ಗೂ ಒಂದು ಮಿತಿ ಇದೆ..ಅದು ಮೀರಿದಾಗ ಪ್ರಕೃತಿಯ counter attack ಅನ್ನು ತಡೆಯುವ ಶಕ್ತಿ ಇವರಲ್ಲಿ ಯಾರಿಗಾದರೂ ಇದೆಯೇ??


.ಇನ್ನಾದರೂ ಇವರುಗಳಿಗೆ ಬುದ್ದಿ ಬಂದು ಈ ಟಾರ್ಗೆಟ್ ಪ್ರಕೃತಿ ಯನ್ನು ನಿಲ್ಲಿಸಿದರೆ ಲೋಕಕ್ಕೆ ಒಳಿತು


-ಪ್ರಕೃತಿಯನ್ನು ರಕ್ಷಿಸಿ-