Saturday, June 18, 2011

-ಡೆಡ್ಲಿ ಬೈಟ್-
.ಕಿಂಗ್ ಕೋಬ್ರ is back ಇನ್ action

.ಈ ಬಾರಿ ನಮ್ಮ ಕಿಂಗ್ ನ ಭೇಟೆ ಒಂದು ಉಡ (Monitor Lizard)

.ಕಿಂಗ್ ನ ಡೆಡ್ಲಿ ಬೈಟ್ ನ ಡೆಡ್ಲಿ ಇಮೇಜ್ n ಸ್ಟೋರಿ ಈ ಪೋಸ್ಟ್ ನಲ್ಲಿ

.ಒಂದು ದಿನ ನಾನು ಸಂಜೆ  ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರಬೇಕಾದರೆ ನನಗೊಂದು ಕರೆ ಬಂತು.ಕರೆ ಮಾಡಿದ ನನ್ನ ಸ್ನೇಹಿತ ಕಿಂಗ್ (ಕಿಂಗ್ ಕೊಬ್ರ) visit ಬಗ್ಗೆ ಮಾಹಿತಿ ನೀಡಿದ

.ತಕ್ಷಣ ನಾನು ಸಾಧ್ಯವಾದಷ್ಟು ಬೇಗ ಕಿಂಗ್ ಬಂದ ಸ್ಥಳದಲ್ಲಿದ್ದೆ.ಈ ಬಾರಿ ನನ್ನ ಕುತೂಹಲ ಇಮ್ಮಡಿಯಾಗಲು ಕಾರಣ ಕಿಂಗ್ ಈ ಬಾರಿ ಒಂದು ಮಧ್ಯಮ ವಯಸ್ಸಿನ ಉಡದ ಮೇಲೆ attack ಮಾಡಿದ್ದ

.ನಾನು ಸ್ಥಳ ತಲುಪುವುದರಲ್ಲಿ ಕಿಂಗ್  ಜನರ ಗಲಾಟೆಯಿಂದ ತನ್ನ ಊಟವನ್ನು ಅರ್ಧ ಜೀವ ಮಾಡಿ ಹೊರಟು ಹೋಗಿದ್ದ 

.ಉಡ ಬಿದ್ದ ಜಾಗದಲ್ಲೇ ಅರ್ಧ ಜೀವವಾಗಿ ಬಿದ್ದಿತ್ತು

.ಕಿಂಗ್ ತನ್ನ ಊಟಕ್ಕೆ ಮತ್ತೆ ಹಿಂತಿರುಗುವ ಸಾಧ್ಯತೆ ಕಡಿಮೆ ಇತ್ತು.ಆದರೂ ನಾನು ಮತ್ತು ನನ್ನ ಕೆಲವು ಸ್ನೇಹಿತರು ಸ್ವಲ್ಪ ಹೊತ್ತು ಅಲ್ಲಿ ಶಬ್ದ ಮಾಡದೆ ಕಿಂಗ್ ಗಾಗಿ ಕಾದು ಕುಳಿತೆವು

.ಸೂರ್ಯ ಮುಳುಗುವ ಸಮಯವಾಗುತಿತ್ತು.ಇನ್ನು ಕಿಂಗ್ ಬರುವುದಿಲ್ಲ ಎಂದುಕೊಂಡು ನಾವು ದಿನೇಶಣ್ಣರನ್ನು  ಭೇಟಿಯಾಗಲು ಹೊರಟೆವು

.ನಾವು ಹೊರಟು ಹೋದ ಬಳಿಕ ಆ ಜಾಗದಲ್ಲಿ ಒಬ್ಬರು ಹಿರಿಯರು ಕುಳಿತು ಹಾವು ಬರುತ್ತದೆಯೇ ಎಂದು ನೋಡುತ್ತಿದ್ದರು

.ಇದಾದ ಅರ್ಧ ಗಂಟೆ ಬಳಿಕ ಮತ್ತೆ ನಮಗೆ ಕರೆ ಬಂತು ಕಿಂಗ್ ಮತ್ತೆ ಬಂದಿದೆ ಎಂದು 

.ಅದಾಗಲೇ ಕತ್ತಲೆಯಾಗಿತ್ತು.ಮತ್ತೆ ನಾವು ದಿನೇಶಣ್ಣರ ಜೊತೆ ಸ್ಥಳಕ್ಕೆ ಹೋದಾಗ ಉಡ ಅಲ್ಲಿರಲಿಲ್ಲ,ಕಿಂಗ್ ನಾವು ಅಲ್ಲಿಂದ ಹೊರಡುತ್ತಲೂ ತನ್ನ ಭೇಟೆ ಬಳಿ ಬಂದು ಅದನ್ನು ಪಕ್ಕದಲ್ಲೇ ಇದ್ದ ಕಾಡಿನ ಕಡೆ ಎಳೆದುಕೊಂಡು ಹೋಗಿತ್ತು.ಈ ಎಲ್ಲಾ ಘಟನೆಯನ್ನು ಅಲ್ಲಿದ ಆ ಹಿರಿಯ ವ್ಯಕ್ತಿ ನಮಗೆ ತಿಳಿಸಿದರು

.ಹೀಗೆ ಕಿಂಗ್ ಅಂದು ಉಡದಂತಹ ಪ್ರಾಣಿ ಮೇಲೆ ಡೆಡ್ಲಿಯಾಗಿ attack ಮಾಡಿದ್ದ







Image Courtesy-Dinesh.j.k

-ಪ್ರಕೃತಿಯನ್ನು ಉಳಿಸಿ-