Thursday, June 30, 2011

-ಮಸ್ತಿ AT ಊಟಿ-
.ನೀವು ನನ್ನ ಬ್ಲಾಗಿಗೆ ಇದೇ ಮೊದಲು ವಿಸಿಟ್ ಮಾಡಿದ್ದರೆ ನಾನು ಬರೆದ 'ಹಸಿರು ಹಾದಿಯ ಹುಚ್ಚು ಪ್ರಯಾಣ'ಪೋಸ್ಟ್ ಅನ್ನು ಓದಲು ಮರೆಯದಿರಿ .ಆ ಪೋಸ್ಟ್ ಓದಿದ ಮೇಲೆ ನಿಮಗೆ ನಮ್ಮ ಪ್ರವಾಸಗಳ ಕತೆ ಹೇಗಿರುತ್ತದೆ ಎಂಬ ಬಗ್ಗೆ ಒಂದು ಐಡಿಯಾ ಬರುತ್ತದೆ
 
.
ಈ ಬಾರಿ ನಮ್ಮ ಹುಚ್ಚು ಪ್ರಯಾಣ ಹೊರಟಿದ್ದು ಊಟಿಯ ಕಡೆ
 
.
ಮಾಮೂಲಿಯಂತೆ ಹೊರಡುವ ಕಡೆ ದಿನದವರೆಗೆ ಟ್ರಿಪ್ fix ಆಗಿರಲಿಲ್ಲ
 
.
ಇದೇ ತಿಂಗಳ 11 ನೇ ತಾರೀಖು,ಶನಿವಾರ ಊಟಿಗೆ ಹೋಗುವುದೆಂದು decide ಮಾಡಿದ್ದರೂ ಶುಕ್ರವಾರ ಮಧ್ಯಾನ್ಹದವರೆಗೆ confirm ಆಗಿರಲ್ಲಿಲ್ಲ.ಕಾರಣ vehicle arrangement ಆಗಿರಲಿಲ್ಲ

.ನಮ್ಮ ಅಣ್ಣನ ಒಂದು ಮಾರುತಿ 800 ಕಾರ್ ಇತ್ತಾದರೂ ಅದು ಊಟಿ ತಲುಪುತ್ತದೆ ಎಂಬ ನಂಬಿಕೆ ಯಾರಲ್ಲೂ ಇರಲಿಲ್ಲ 

.ಅಂತೂ ಕೊನೆಗೆ jai ಎಂದು ಅದರಲ್ಲೇ ಊಟಿಗೆ ಹೋಗುವುದೆಂದು ತೀರ್ಮಾನಿಸಿ,ಶುಕ್ರವಾರ ರಾತ್ರಿ ನಾನು,ಆದಿ (ನಮ್ಮ ಚಿಕ್ಕಮ್ಮನ ಮಗ) ಸುಬ್ಬು ಹಾಗು ಕಾರ್ತಿಕ್ (ನನ್ನ ಸ್ನೇಹಿತರು) ಬೆಂಗಳೂರಿಗೆ ಹೊರೆಟೆವು.ಅಲ್ಲಿ ನನ್ನ ತಮ್ಮಂದಿರಾದ ರಾಜು ಹಾಗು ಸುಮಂತ್ ನಮ್ಮನ್ನು join ಆಗುವವರಿದ್ದರು 

.ನಮ್ಮ ಪ್ಲಾನ್ ಪ್ರಕಾರ ಶನಿವಾರ ಬೆಳೆಗ್ಗೆ 7 ಘಂಟೆಗೆ ನಾವು ಬೆಂಗಳೂರು ಬಿಡಬೇಕಿತ್ತು.ಆದರೆ ನಾವು ಬೆಂಗಳೂರು ತಲುಪಿದ್ದೇ ಬೆಳೆಗ್ಗೆ 7 ಘಂಟೆಗೆ 

.ನಾವು ನಮ್ಮ relation ಮನೆಗೆ ಹೋಗಿ ರೆಡಿಯಾಗುವಾಗ 9 ಘಂಟೆ.ಕಾರು ನಮ್ಮ ಅಣ್ಣನ ಮನೆಯಲ್ಲಿತ್ತು.ಅವನ ಮನೆಗೆ ಹೋದಾಗ ಸಮಯ ಆಗಲೇ ಹತ್ತು.ನಮ್ಮ ವಾಹನ ಮಾರುತಿ 800 ನ ಒಂದು ಕಿರುಪರಿಚಯ ನಿಮಗೆ ಮಾಡಿಕೊಡಲೇಬೇಕು 

.ಬಹಳ ಹಳೆಯ ಗಾಡಿ ಈ ಮಾರುತಿ 800 ,ಡ್ರೈವರ್ ಬದಿಯ ವೈಪರ್ ಇರಲಿಲ್ಲ,ಹಿಂಬಾಗದ ಒಂದು ಟೈರ್ ಈಗಲೂ ಆಗಲೂ ಅನ್ನುತ್ತಿತ್ತು.ಒಟ್ಟಿನಲ್ಲಿ ಈ ಗಾಡಿಯಲ್ಲಿ ನಾವು ಊಟಿಗೆ ಹೋಗಿ ಬರುತ್ತೇವೆ ಎನ್ನುವುದೇ ಅನುಮಾನವಾಗಿತ್ತು

.ಅಂತೂ ಆ ಗಾಡಿಗೆ ಪ್ರಾಥಮಿಕ ಚಿಕಿತ್ಸೆ ಮಾಡಿದ ಬಳಿಕ ಸುಮಾರು 10.50 ರ ಸಮಯಕ್ಕೆ ನಮ್ಮ 6 ಜನರನ್ನೊಳಗೊಂಡ ಸವಾರಿ ಬೆಂಗಳೂರು ಬಿಟ್ಟಿತ್ತು 

.ನಮ್ಮ 800 ಕುದುರೆಯ ಸಾರತಿ ಕಾರ್ತಿಕ್.ಡ್ರೈವಿಂಗ್ ನಲ್ಲಿ ಪಂಟರ್ 

.ನಮ್ಮ ಕುದುರೆಯೇನೂ (maruthi 800)ಅದ್ಭುತವಾಗೇ ಓಡುತಿತ್ತು ಆದರೆ ವೈಪರ್ ಸಮಸ್ಯೆ ಹಾಗು ಒಮ್ಮೆ ಅದನ್ನು ಡಾಕ್ಟರ್ (ಗ್ಯಾರೇಜ್) ಹತ್ರ ಪರೀಕ್ಷಿಸಿದರೆ ಒಳಿತು ಎಂದುಕೊಂಡು ರಾಮನಗರದ ಒಂದು ಗ್ಯಾರೇಜ್ ನಲ್ಲಿ ಬಿಟ್ಟೆವು 

.ಆ ಗ್ಯಾರೇಜ್ ನವರು ಕೆಲವು ಪ್ರಮುಖ ಸಮಸ್ಯೆ ಸರಿ ಮಾಡಿ 1 ಘಂಟೆಗೆ ಗಾಡಿ ನಮ್ಮ ಬಳಿ ಬಿಟ್ಟರು.ಆದರೂ ವೈಪರ್ ಮಾತ್ರ ಇರಲಿಲ್ಲ.ಊಟಿಯ ಕಡೆ ಮಳೆ ಹಾಗು ವಿಪರೀತ ಮಂಜು ಇರುವ ಕಾರಣ ವೈಪರ್ ಇಲ್ಲದೇ ಹೋಗುವುದು ದೊಡ್ಡ ಸಮಸ್ಯೆಯಾಗಿತ್ತು.ಆದರೆ ಇದರ ಬಗ್ಗೆ ತಲೆಕೆಡಿಸಿಕೊಳ್ಳಲು ಈಗ ಸಮಯವಿರಲಿಲ್ಲ.ಸೂರ್ಯ ಅದಾಗಲೇ ನೆತ್ತಿಯ ಮೇಲೆ ಬಂದಿದ್ದ.ನಾವು ಆದಷ್ಟು ಬೇಗ ಊಟಿ ತಲುಪಬೇಕಾಗಿತ್ತು 

.ಊಟಿಗೆ ಹೋಗುವ ಮಾರ್ಗದ ಬಗ್ಗೆ ನಿಮಗೆ ಹೇಳಲೇಬೇಕು.ಊಟಿಗಿಂತಲೂ ನಿಮಗೆ ಹೆಚ್ಚಿನ ಮಜಾ ಸಿಗುವುದು ಊಟಿಗೆ ಹೋಗುವ ರಸ್ತೆಗಳಲ್ಲಿ.ಬೆಂಗಳೂರಿನಿಂದ ಸುಮಾರು 290 km ದೂರದಲ್ಲಿದೆ ಊಟಿ.ಮೈಸೂರಿನಿಂದ ನಂಜನಗೂಡು,ಗುಂಡ್ಲುಪೇಟೆ ಮಾರ್ಗವಾಗಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ ತಲುಪಲು 87 km ಕ್ರಮಿಸಬೇಕು(NH 212).ಗುಂಡ್ಲುಪೇಟೆಯಿಂದ ಒಂದು ರಸ್ತೆ NH 212 ಮೂಲಕ ಸುಲ್ತಾನ್ ಬತೇರಿ ತಲುಪಿ ಅಲ್ಲಿಂದ ಕ್ಯಾಲಿಕಟ್ ತಲುಪುತ್ತದೆ.ಇನ್ನೊಂದು ರಸ್ತೆ NH 67 ನಿಂದ ಊಟಿಗೆ ತಲುಪುತ್ತದೆ.ಬಂಡೀಪುರದ ನಂತರ ನೀವು ಪ್ರಕೃತಿಯ ಸೌ೦ದರ್ಯವನ್ನು ಊಟಿಯವರೆಗೂ ಸವಿಯಬಹುದು.ಬಂಡೀಪುರದಿಂದ ಮುಂದೆ 12 km ಕ್ರಮಿಸಿದರೆ ತೆಪ್ಪಕಾಡು ಎಂಬ ಪ್ರದೇಶವಿದೆ.ಇದು ತಮಿಳುನಾಡು ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಮದುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿದೆ.ಇಲ್ಲಿಂದ ಊಟಿ ತಲುಪಲು ನೀವು ಎರಡು ಮಾರ್ಗಗಳಿವೆ.ನೀವು ಸ್ವಲ್ಪ ಸಾಹಸ ಪ್ರವೃತಿಯವರಾಗಿದ್ದಾರೆ ಮಾಸಿನಗುಡಿ ರಸ್ತೆಯ ಮೂಲಕ ಪ್ರಯಾಣ ಮುಂದುವರೆಸಬಹುದು.ಈ ರಸ್ತೆಯಲ್ಲಿ ಹೋದರೆ km ಉಳಿಯುತ್ತದೆ.(ತೆಪ್ಪನಕಾಡಿನಿಂದ ಮಾಸಿನಗುಡಿ ಮೂಲಕ ಊಟಿಗೆ ಕೇವಲ 36 km) ಈ ರಸ್ತೆಯಲ್ಲಿ ರುದ್ರರಮಣೀಯ ಪ್ರಕೃತಿ ಜೊತೆ 36 ಹೇರ್ಪಿನ್ ತರಹದ ತಿರುವುಗಳು ಇರುವುದರಿಂದ ಪ್ರಯಾಣ ಸ್ವಲ್ಪ ಕಷ್ಟ.ಇನ್ನೊಂದು ರಸ್ತೆ ತೆಪ್ಪಕಾಡುವಿನಿಂದ ಹೊರಟು ಗುಡಲೂರು   ಮಾರ್ಗವಾಗಿ ಊಟಿ ತಲುಪುತ್ತದೆ(ಈ ರಸ್ತೆಯಲ್ಲಿ ತೆಪ್ಪಕಾಡುವಿನಿಂದ ಊಟಿಗೆ 84 km )ಸಾಧಾರಣವಾಗಿ ಈ ರಸ್ತೆಯ ಮೂಲಕವೇ ಎಲ್ಲಾ ವಾಹನಗಳು ಊಟಿ ತಲುಪುವುದು.ಈ ರಸ್ತೆಯಲ್ಲಿ ಪ್ರಕೃತಿ ಸೌಂದರ್ಯಕ್ಕೆನೂ ಕಡಿಮೆ ಇಲ್ಲ.ಗುಡಲೂರಿನ ನಂತರ ತಿರುವು ಮುರುವು ರಸ್ತೆಯಲ್ಲಿ ಊಟಿಯನ್ನು ಹತ್ತಬೇಕು

.ನಾವು ಮೈಸೂರಿನಲ್ಲಿ ಊಟ ಮುಗಿಸಿ ಬಂಡೀಪುರ ತಲುಪುವಾಗ ಸಮಯ ಅದಾಗಲೇ 5.30 ಆಗಿತ್ತು

.ಬೆಳೆಗ್ಗೆಯಿಂದ ಅಲ್ಲಿಯವರೆಗಿನ ಆಯಾಸವನ್ನು ಬಂಡೀಪುರ ಕಾಡು ಮರೆಸಿತ್ತು.ಜಿಂಕೆ,ಕಾಡು ಹಂದಿ,ಕಾಡುಕೋಣ,ನವಿಲು  ಮುಂತಾದ ಹಲವಾರು ಪ್ರಾಣಿಗಳು ನಮ್ಮ ಕಣ್ಣಿಗೆ ಬಿದ್ದವು


 .ಲಂಗೂರ್ ಒಂದು ರಸ್ತೆಯ ಮೇಲೆ ಹೋಗುವ ಬರುವವರನ್ನು ನೋಡುತ್ತಾ ಕುಳಿತಿತ್ತು 

.ಬಂಡೀಪುರ ಉದ್ಯಾನವದ ವ್ಯಾಪ್ತಿ ಮುಗಿಯುತಿದ್ದಂತೆ ಕರ್ನಾಟಕ-ತಮಿಳುನಾಡು border ಬರುತ್ತದೆ.ಇಲ್ಲಿ ಒಂದು ಚೆಕ್ ಪೋಸ್ಟ್ ನಂತರದ ಕಾಡು ಮದುಮಲೈ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಗೆ ಬರುತ್ತದೆ.ಈ ರಸ್ತೆಯಲ್ಲಿ ಸಾಗುವಾಗ ನಾವು ಮರಿಯ ಜೊತೆ ಇದ್ದ ಒಂದು ಕಾಡಾನೆ ರಸ್ತೆ ಬದಿಯಲ್ಲಿ ನಿಂತಿರುವುದನ್ನು ನೋಡಿದೆವು.ಇದರ ಜೊತೆಗೆ ಸಾಕಿದ ಹಲವಾರು ಆನೆಗಳು ನಮಗೆ ತೆಪ್ಪಕಾಡುವಿನಲ್ಲಿ ಕಂಡುಬಂದವು 


.ನಾನು ಮೊದಲೇ ಹೇಳಿದಂತೆ ತೆಪ್ಪಕಾಡುವಿನಿಂದ ಊಟಿಗೆ ಎರಡು ಮಾರ್ಗಗಳಿವೆ.ನಾವು ಇದರಲ್ಲಿ ಆರಿಸಿಕೊಂಡದ್ದು ಗುಡಲೂರು ಮೂಲಕ ಊಟಿ ತಲುಪುವ ರಸ್ತೆಯನ್ನು.ಏಕೆಂದರೆ ಮಾಸಿನಗುಡಿ ರಸ್ತೆಯಲ್ಲಿ ನಮ್ಮ ಕುದುರೆ ಸಾಗುವುದು ಕಷ್ಟಸಾಧ್ಯವಾಗಿತ್ತು 

.ತೆಪ್ಪಕಾಡು ಬಿಟ್ಟ ಕೆಲವೇ ಕ್ಷಣಗಳಲ್ಲಿ ನಮಗೆ ಮಳೆರಾಯನ ಸ್ವಾಗತ ದೊರೆಯಿತು.ವೈಪರ್ ಕೂಡ ಇಲ್ಲ.ಅಂತೂ ನಮ್ಮ ಪಂಟರ್ ಸಾಹಸ ಮಾಡಿ ಕುದುರೆ ಓಡಿಸುತ್ತಿದ್ದ 

.ಇಲ್ಲಿಂದ ಮುಂದೆ ಮಳೆ ನಿರಂತರವಾಗಿ ಸುರಿಯುತ್ತಲೇ ಇತ್ತು .ನಮ್ಮ ಕಾರ್ತಿಕ್ ಕಾರು ಓಡಿಸುತ್ತಲೇ ಡೈಲಾಗ್ ಡೆಲಿವರಿ ಮಾಡುತಿದ್ದ.ಕಾರ್ತಿಕ್,ರಾಜು ಹಾಗು ಆದಿ ಇವರ ನಡುವಿನ ಮಾತುಗಳನ್ನೂ ಕೇಳಿ ನಕ್ಕೂ ನಕ್ಕೂ ಸಾಕಾಗಿತ್ತು.ಒಟ್ಟಿನಲ್ಲಿ ಇವರು ಕೊಟ್ಟ Entertainment ನಿಜವಾಗಿಯೂ unforgettable 

.ನಾವು ಗುಡಲೂರು ತಲುಪುವಾಗ ಅದಾಗಲೇ ಕತ್ತಲಾಗಿತ್ತು.ಇಲ್ಲಿಂದ ಮುಂದೆ ತಿರುವುಗಳು ಶುರುವಾದವು.ಈ ತಿರುವುಗಳಲ್ಲಿ ನಮ್ಮ ಕುದುರೆ ಉಸ್ಸಪ್ಪಾ ಎಂದು ಹತ್ತುತ್ತಿತ್ತು.ವಾಹನಗಳ ಸಾಲೇ ಊಟಿಯಾ ಕಡೆ ಹೊರಟಿತ್ತು.ನಿಧಾನವಾಗಿ ಮುಗಿಲೆತ್ತರದ ಪೈನ್ ಮರಗಳ ಸಾಲು ಮನತಣಿಸುತ್ತಿತ್ತು.ಪೈನ್ ಮರಗಳ ನಡುವಿನಿಂದ ಚಂದಾಮಾಮ ಕಣ್ಣ ಮುಚ್ಚಾಲೆಯಾಡುತ್ತಿದ್ದ .ಈ ರಸ್ತೆ up ಆದ ಕಾರಣ ಎಷ್ಟೇ ಚಲಿಸಿದರೂ km ಕಡಿಮೆಯಾಗುತ್ತಿರಲಿಲ್ಲ.ಆಗೆಲ್ಲಾ ನಮ್ಮ ಕಾರ್ತಿಕ್ ಇದು ಭೂತಚೇಷ್ಟೆ ಅಂತ ಗೊಣಗುತಿದ್ದ

.ಈ ತಿರುವುಗಳಲ್ಲಿ ಕೂಡ ಒಂದು ಕಡೆ ಟ್ರಾಫಿಕ್ ಜಾಮ್ ಆಗಿತ್ತು.ಊಟಿಯಿಂದ ಸಾಲುಗಟ್ಟಲೆ ವಾಹನಗಳು ಕೆಳಗಿಳಿಯುತ್ತಿದ್ದವು.ಅವುಗಳು ರಾತ್ರಿ ಒಂಬತ್ತು ಘಂಟೆ ಒಳಗೆ ಬಂಡೀಪುರ ತಲುಪುವ ಉದ್ದೇಶದಿಂದ ಮುನ್ನುಗ್ಗುತ್ತಿದ್ದವು

.ಈ ಜಾಮ್ ಮಧ್ಯೆ ಗಾಡಿ ನಿಲ್ಲಿಸಿದಾಗ ನಮ್ಮ ಮುಂದೆ ಇದ್ದ ಆಟೋ ಒಂದರ ಇಬ್ಬರು ಕನ್ನಡಿಗರು ಮಾತನಾಡಲು ಸಿಕ್ಕಿದರು .ಅವರು ಊಟಿಯಲ್ಲೇ work ಮಾಡುತಿದ್ದದ್ದು.ಅವರು ಮಾಸಿನಗುಡಿ ರಸ್ತೆಯ ಕೆಲವು ಭಯಾನಕ ಅನುಭವಗಳನ್ನು ನಮ್ಮ ಮುಂದೆ ಹಂಚಿಕೊಂಡರು 
 
.ತಿರುವುಗಳು ದಾಟಿದ ಮೇಲೆ ಅಲ್ಲೊಂದು ಕಡೆ ಕಾರನ್ನು ಸ್ವಲ್ಪ ಹೊತ್ತು ನಿಲ್ಲಿಸಿದೆವು.ಈ ಹೊತ್ತಿಗಾಗಲೇ ಭಯಂಕರ ಚಳಿ ನಮ್ಮನ್ನು ಗಡ.ಗಡ ಮಾಡಲು ಶುರುಮಾಡಿತ್ತು.ಟೀ ಎಸ್ಟೆಟ್ ಗಳು ಕ್ಷೀಣ ಬೆಳಕಿನಲ್ಲಿ ಕಂಗೊಳಿಸುತ್ತಿದ್ದವು.10 ನಿಮಿಷದ ನಂತರ ಹೊರಟ ನಮಗೆ ಎಷ್ಟು ಚಲಿಸಿದರೂ ಊಟಿ ಬರುತ್ತಿಲ್ಲ ಎಂದೆನಿಸಿತು.ನಮಗೆ ಆಶ್ಚರ್ಯ,ಈ ತಮಿಳುನಾಡಿನವರಿಗೆ ಸರಿಯಾಗಿ km ಅಳೆಯಲು ಬರುವುದಿಲ್ಲವೇನೂ ಅಂದುಕೊಂಡೆವು.ಅಂತೂ ರಾತ್ರಿ 9.30 ರ ಹೊತ್ತಿಗೆ ಊಟಿ ತಲುಪಿದೆವು 

.ನಾವು ಊಟಿಗೆ ಹೋದಾಗ ಇಡೀ ಊಟಿಗೆ ಊಟಿಯೇ ಹೊದ್ದು ಮಲಗಿತ್ತು.ನಮಗೆ ಹೊಟ್ಟೆ ಚುರುಗುಡುತಿತ್ತು,ಜೊತೆಗೆ ಕಿತ್ತು ತಿನ್ನುವ ಚಳಿ ಬೇರೆ.ಅಲ್ಲಿ ಗಾಡಿಗೆ ಪೆಟ್ರೋಲ್ ಹಾಕಿಸಿ ಒಂದು ರೂಂ ಬುಕ್ ಮಾಡಿ ಯಾವುದಾದರೂ ಹೋಟೆಲ್ ತೆರೆದಿರುತ್ತವೆಯೇ ಎಂದು ನೋಡಲು ಮತ್ತೆ ಪೇಟೆ ಕಡೆ ಬಂದೆವು.ಎಲ್ಲಾ ಬಂದ್,ಕೊನೆಗೆ ನಮ್ಮ ಪರಿಸ್ಥಿತಿ ನೋಡಿದ ಅಲ್ಲೊಂದು ಅರ್ಧ ತೆರೆದಿದ್ದ ಹೋಟೆಲ್ ನವರು ನಮಗೆ ರೋಟಿ ಮಾಡಿ ಕೊಟ್ಟರು.ಬದುಕಿದೆಯಾ ಬಡಜೀವ ಎಂದುಕೊಂಡು ಮತ್ತೆ ರೂಂನತ್ತ ಬಂದೆವು 

.ಈ ರೂಂ ಗೆ ಕಾಲಿಡುತ್ತಲೇ ನಾವೇನು ನೆಲದ ಮೇಲೆ ನಿಂತಿದ್ದೇವೋ ಅಥವಾ ಐಸ್ ನ ಮೇಲೆಯೂ ಎಂದು ಗಾಬರಿಯಾಯಿತು.ಅಷ್ಟು ತಂಡಿಯಾಗಿತ್ತು ಆ ನೆಲ.ಇನ್ನು ನೀರನ್ನಂತೂ ಮುಟ್ಟುವ ಹಾಗಿಲ್ಲ.ಅಷ್ಟು ಕೊರೆಯುತ್ತಿತ್ತು 

.ರೋಟಿ ತಿಂದು ಹರಟೆ ಹೊಡೆದು ಮಲಗುವಾಗ ಸಮಯ ಅದಾಗಲೇ 11 ಮೀರಿತ್ತು 

.ಸೋಮವಾರವೇ ರಾಜು ಮಾತು ಸುಮಂತ್ officeಗೆ ಹೋಗಬೇಕ್ಕಾಗಿದ್ದರಿಂದ ನಾವು ಭಾನುವಾರವೇ ಊಟಿ ಬಿಡಬೇಕಾಗಿತ್ತು.ಆದರಿಂದ ಭಾನುವಾರ ಬೆಳೆಗ್ಗೆ ಬೇಗ ಎದ್ದು ಊಟಿಯಲ್ಲಿನ places cover ಮಾಡುವುದೆಂದು decide ಮಾಡಿ ಮಲಗಿದೆವು

.ಊಟಿಯ ಚಳಿಗೆ ನಾವು ಎದದ್ದೇ ಬೆಳಗ್ಗೆ 7 ಘಂಟೆಗೆ.ಏಳಲು ಮನಸ್ಸೇ ಆಗುತ್ತಿಲ್ಲ.ಅಷ್ಟು ಚಳಿ.ಅಂತೂ ತೂಕಡಿಸುತ್ತಾ ರೆಡಿಯಾದಾಗ ಸಮಯ ಎಂಟಾಗಿತ್ತು.ಹೋಟೆಲ್ ಒಂದರಲ್ಲಿ ಬಿಸಿ ಬಿಸಿ ಪೂರಿ ಸವಿದು,ಒಂದು ಕಡಕ್ ಕಾಫಿ ಕುಡಿದು ಕಾರು ಹತ್ತಿದೆವು

.ನಮಗೆ ಬೆಳಗಾದರೂ ಊಟಿಗೆ ಇನ್ನೂ ಬೆಳಕಾಗಿರಲಿಲ್ಲ.ಮಂಜು,ಮೂಡದ ನಡುವೆ ಊಟಿ ಹೊದ್ದು ಮಲಗಿದಂತಿತ್ತು 

.ನಾವು ಮಧ್ಯಾನ್ಹ 2 ರ ಹೊತ್ತಿಗೆಲ್ಲಾ ಊಟಿ ಬಿಡಬೇಕಾಗಿತ್ತು.ಏಕೆಂದರೆ ರಾತ್ರಿ 9 ರ ನಂತರ ಬಂಡೀಪುರ ಅರಣ್ಯದಲ್ಲಿ ಪ್ರವೇಶವಿರಲಿಲ್ಲ.ಅದೂ ಅಲ್ಲದೆ ನಮ್ಮ ಕುದುರೆ ಈವರೆಗೆ ಎಲ್ಲೋ ಕೈ ಕೊಟ್ಟಿರಲಿಲ್ಲ ಅಕಸ್ಮಾತ್ ಕೈ ಕೊಟ್ಟರೆ ನಮ್ಮ ಕತೆ ಕಷ್ಟವಾಗುತಿತ್ತು

.ಊಟಿಯ ಬಳಿಯ ಪ್ರೇಕ್ಷಣೀಯ ಸ್ಥಳಗನ್ನು ಮುಗಿಸಿಕೊಂಡು ದೊಡ್ಡ ಬೆಟ್ಟ ಎಂಬ ಸ್ಥಳಕ್ಕೆ ಹೋದೆವು.ಊಟಿಯಲ್ಲಿ ಇದ್ದಂತೆ ಇಲ್ಲಿಯೂ ಜನ ಜಾತ್ರೆ.ನಾವೇನು ದೇವಸ್ಥಾನಕ್ಕೆ ಬಂದಿದ್ದೇವೇಯೇ ಎಂದು ಅನುಮಾನ ಶುರುವಾಯ್ತು.ಈ ದೊಡ್ಡ ಬೆಟ್ಟ ದಲ್ಲಿ ಸುತ್ತಮುತ್ತಲಿನ ಪ್ರದೇಶಗಳನ್ನು ನೋಡಲು ಒಂದು ಟೆಲಿಸ್ಕೋಪ್ ಮಾದರಿಯ ಗೋಪುರ ಕಟ್ಟಿದ್ದಾರೆ .ಇಲ್ಲಿಂದ ಊಟಿಯ ಸೌಂದರ್ಯವನ್ನು ಸವಿಯಬಹುದು.ಆದರೆ ಬೆಳಕು ಹಾಗು ಮಂಜಿನಾಟ ನಡೆಯುತ್ತಿದ್ದ ಕಾರಣ ಕಣ್ಣು ಹಾಯಿಸಿದಷ್ಟೂ mist ಕಾಣುತ್ತಿತ್ತೇ ವಿನಃ ಬೇರೊಂದು ಗೋಚರಿಸುತ್ತಿರಲಿಲ್ಲ .ನಮಗೆ ಸಮಯದ ಅಭಾವ ಇದ್ದ ಕಾರಣ ಕೊಟ್ಟಗಿರಿ ಎಂಬ ಇನ್ನೊಂದು ಸ್ಥಳಕ್ಕೆ ಹೋಗಲಾಗಲಿಲ್ಲ.ನಾವು ಮತ್ತೆ ಊಟಿ ಗೆ ಬಂದು botanical garden ಗೆ ಭೇಟಿ ಕೊಟ್ಟು ಊಟಿ ಬಿಟ್ಟಾಗ ಸಮಯ 1 ಘಂಟೆ 

.ನಾವು ಊಟಿಗೆ ಬಂದ ದಾರಿಯಲ್ಲೇ ಪುನಃ ತೆರಳಲು ನಿರ್ಧರಿಸಿದೆವು.ಊಟಿ ಬಿಟ್ಟ ಸ್ವಲ್ಪ ಸಮಯಕ್ಕೆ ಒಂದು dam ನ ಹಿನ್ನಿರಿನ ಪ್ರದೇಶ ಸಿಕ್ಕಿತು.ಇಲ್ಲಿ ಇಳಿದು ತುಂಬಾ enjoy ಮಾಡಿದೆವು.ಅಲ್ಲೇ ಇದ್ದ ಜೋಳ ತಿಂದು ಊಟಿ ಬಿಡುವಾಗ ಸಮಯ 2.

 .ಮಾರ್ಗ ಮಧ್ಯೆ ಶೂಟಿಂಗ್ ಸ್ಪಾಟ್ ಎಂಬ ಸ್ಥಳವೊಂದಿದೆ.ಇಲ್ಲಿ ಕೆಲ ಹೊತ್ತು ಕಾಲ ಕಳೆದೆವು 
 .ಸಿಕ್ಕ ಸ್ವಲ್ಪ ಸಮಯದಲ್ಲೇ ಊಟಿಯಲ್ಲಿ ಬಹಳ ಮಸ್ತಿ ಮಾಡಿದೆವು


.ಊಟಿಯ ಚಳಿಯ ಪ್ರಭಾವಕ್ಕೆ ಮನಸ್ಸಿಗೆ ಜೋಮು ಹಿಡಿದಂತಾಗಿತ್ತು.ಊಟಿಯಿಂದ ಗುಡಲೂರಿಗೆ ಹೋಗುವ ಮಾರ್ಗದ ಮಧ್ಯದ ತಿರುವುಗಳಲ್ಲಿನ ಪ್ರಕೃತಿ ಸೌಂದರ್ಯವನ್ನು ಹಿಂದಿನ ದಿನ miss ಮಾಡಿಕೊಂಡಿದ್ದೆವು.ಆದರೆ ಈ ದಿನ full enjoy ಮಾಡಿದೆವು 
.ಅದಾಗಲೇ ಮಳೆ ಮತ್ತೆ ಸಣ್ಣಗೆ ಶುರುವಾಗಿತ್ತು.ಸಂಜೆ 4 ಕ್ಕೆ ನಾವು ಗುಡಲೂರಿಗೆ ಬಂದೆವು.ಹೊಟ್ಟೆ ಹಸಿಯುತ್ತಿತ್ತು.ಅಲ್ಲಿ ಒಂದು ಹೋಟೆಲ್ ನಲ್ಲಿ ಬಾಳೆ ಎಲೆ ಊಟ ಮಾಡಿದೆವು.ವಾವ್ ಅದ್ಭುತ ಊಟವದು.ಹೊಟ್ಟೆ ಬಿರಿಯುವ ಹಾಗೆ ತಿಂದೆವು.ಮನಸ್ಸು ಮತ್ತೆ fresh up ಆಗಿತ್ತು 

.ಈ ನಡುವೆ ನಮ್ಮ ಆದಿ ಹಾಗು ಕಾರ್ತಿಕ್ ನ ಮಾತುಗಳು ಮಳೆಗಿಂತಾ ಜೋರಾಗಿ ಸುರಿಯುತ್ತಿದ್ದವು

.5.30 ಕ್ಕೆಲ್ಲಾ ನಾವು ಮದುಮಲೈ ಉದ್ಯಾನವನದಲ್ಲಿದ್ದೆವು.ಇಲ್ಲಿ ಮತ್ತೆ ಹಲವಾರು ಕಾಡಾನೆಗಳು ದಾರಿಯಲ್ಲಿ ಎದುರಾದವು.ಕಾಡುಕೋಣಗಳ ಗುಂಪೊಂದು ದೂರದ ಕಾಡಿನಲ್ಲಿ ಮೇಯುತ್ತಿದ್ದವು.ಈ ನಡುವೆ ಎರಡು ಆನೆಗಳು ರಸ್ತೆ ಪಕ್ಕ ನಿಂತಿದ್ದವು,ಅವುಗಳ ಬಳಿ ಸಾಗುತ್ತಿದ್ದಂತೆ ನಮ್ಮ ಹುಡುಗರು ಅದರ ಚಿತ್ರ ತೆಗೆಯಲು ಕಾರು ನಿಲ್ಲಿಸಲು ಹೇಳಿದರು.ನಾನು ಆನೆಗಳ ಸಹವಾಸ ಬೇಡ ಎಂದೆ.ಅವರು ಕೇಳಲಿಲ್ಲ.ಕಾರನ್ನು ನಿಲ್ಲಿಸಿ.ಒಳಗಿನಿಂದಲೇ ಅದರ ಚಿತ್ರ ತೆಗೆಯುತ್ತಿದ್ದರು.ಈ ಹೊತ್ತಿಗೆ ನಮ್ಮನ್ನು ನೋಡಿದ ಆನೆ ಒಂದು ಹೆಜ್ಜೆ ಮುಂದೆ ಇಟ್ಟಿತು.ತಕ್ಷಣ ಕಾರ್ತಿಕ್ ಗಾಡಿ move ಮಾಡಲು ಯತ್ನಿಸುತ್ತಾನೆ.ಗಾಡಿ ಗೇರ್ ಗೆ ಬಿಳುತ್ತಿಲ್ಲ.ಒಮ್ಮೆಲೆ ಎಲ್ಲರ ಪ್ರಾಣ ಬಾಯಿಗೆ ಬಂದಂತಾಯಿತು.ಒಂದೆರಡು ಕ್ಷಣಗಳ ನಂತರ ನಮ್ಮ ಅದೃಷ್ಟ, ಆನೆ ಮುಂದುವರೆಯಲಿಲ್ಲ.ನಮ್ಮ ಗಾಡಿ ಮುಂದುವರೆಯಿತು 

 .ಮುಂದೊಂದು ಕಡೆ ಕಾಡುಕೋಣಗಳ ಹಿಂಡು ರಾಜಾರೋಷವಾಗಿ ಮೆಯುತ್ತಿರುವುದು ಕಂಡು ಬಂತು 
  .ಸುಮಾರು 5.45 ರ ಸಮಯಕ್ಕೆ ನಾವು ಕರ್ನಾಟಕಕ್ಕೇ ಪ್ರವೇಶಿದೆವು

.ಬಂಡೀಪುರದಲ್ಲಿ ಕಾಡು ಹಂದಿಯೊಂದು ತನ್ನ ಹತ್ತು ಹಲವು ಮರಿಗಳ ಜೊತೆ ಆಹಾರ ಅರಸುತ್ತ ಅಲೆಯುತ್ತಿತ್ತು.ಜಿಂಕೆಗಳ ದೊಡ್ಡ ಹಿಂಡು ಅಲ್ಲೇ ಇದ್ದ ಒಂದು ಕೆರೆಯ ಬಳಿ ನೀರು ಕುಡಿಯುತ್ತಿದ್ದವು

.ನಾವು ಗುಂಡ್ಲುಪೇಟೆ ಹತ್ತಿರದ ಹಿಮವದ್ ಸ್ವಾಮಿ ಬೆಟ್ಟ ಕ್ಕೆ ಹೋಗಬೇಕೆಂದುಕೊಂಡಿದ್ದೆವು.ಆದರೆ ಅದಾಗಲೇ ಸಮಯ 6 ಆಗಿದ್ದರಿಂದ ಅಲ್ಲಿಗೆ ಹೋಗದಿರುವುದೇ ಒಳಿತು ಎಂದು ಅಲ್ಲಿನ ಸ್ಥಳಿಯರು ಹೇಳಿದರು.So ಅಲ್ಲಿಗೆ ಹೋಗುವ ನಿರ್ಧಾರ ಕೈಬಿಟ್ಟು ಬೆಂಗಳೂರಿನತ್ತ ಹೊರಟೆವು.ಗುಂಡ್ಲುಪೇಟೆಯಿಂದ ಮುಂದೆ ಸ್ವಲ್ಪ ದೂರದಲ್ಲಿ ಕಾರು ನಿಲ್ಲಿಸಿ ಅರ್ಧ ಘಂಟೆ ಹರಟೆ ಹೊಡೆದು ಮತ್ತೆ ಪ್ರಯಾಣ ಮುಂದುವರೆಸಿದೆವು

.ಆಶ್ಚರ್ಯವೆಂದರೆ ನಾವು ಯಾರೂ ಕಾರಿನಲ್ಲಿ ನಿದ್ರೆ ಮಾಡಲಿಲ್ಲ.ಮಾತು ಮಾತು ಮಾತು...ಸಮಯ ಕಳೆದದ್ದೇ ಗೊತ್ತಾಗಲಿಲ್ಲ

.ಸುಮಾರು 10,30 ರ ಸಮಯಕ್ಕೆ ಊಟ ಮಾಡಿ ಕಾರು ಹತ್ತಿದ ನಾವು ನಡು ರಾತ್ರಿ 12.30 ಕ್ಕೆ ಬೆಂಗಳೂರಿನ ನಮ್ಮ relation ಮನೆಯ ಎದುರು ಕಾರು ನಿಲ್ಲಿಸಿ ನಮ್ಮ ಧೀರ್ಘ ಪ್ರಯಾಣಕ್ಕೆ ಅಂತ್ಯ ಹಾಡಿದೆವು

.ಅದ್ಭುತ ವಿಷಯವೆಂದರೆ ಮರು ದಿನ ಬೆಳಗ್ಗೆ ಎದ್ದು ಕಾರಿನ ಬಳಿಗೆ ಬಂದಾಗ ನಮಗೆ ಆಶ್ಚರ್ಯ..ನಮ್ಮ ಕುದುರೆಯ ಒಂದು ಟೈರ್ ಪಂಚರ್ ಆಗಿತ್ತು..ನಮ್ಮ ಪ್ರಯಾಣದುದಕ್ಕೂ ಕೈಕೊಡದ ನಮ್ಮ ಕುದುರೆ ಈಗ ಕೆಟ್ಟು ನಿಂತಿತ್ತು 

.ನಿಜವಾಗಿಯೂ ಈ success full ಪ್ರಯಾಣದ credit ನಮ್ಮ ಕುದುರೆ ಹಾಗು ಅದನ್ನು ಓಡಿಸಿದ ಪಂಟರ್ ಕಾರ್ತಿಕ್ ಗೆ ಸಲ್ಲಬೇಕು.ಜೊತೆಗೆ ಪ್ರಯಾಣದುದ್ದಕ್ಕೂ ನಮ್ಮನ್ನು Entertain ಮಾಡಿದ ನಮ್ಮ ಆದಿಗೂ ನಮ್ಮ ಧನ್ಯವಾದಗಳು

.ಹೀಗೆ short and sweet ಊಟಿ ಪ್ರವಾಸ ಮರೆಯಲಾಗದ ನೆನಪುಗಳೊಂದಿಗೆ ಮುಗಿದಿತ್ತು.ಮಾಸಿನಗುಡಿ ರಸ್ತೆ ಹಾಗು ಕೆಲವು ಸ್ಥಳ ಮಿಸ್ ಮಾಡಿಕೊಂಡೆವಾದರೂ ಮಸ್ತಿ ಮೂಜನ್ನೇನೂ ಮಿಸ್ ಮಾಡಿಕೊಳ್ಳಲಿಲ್ಲ

-ನಮ್ಮ ಮಸ್ತಿ AT ಊಟಿ  ಟೀಂ-


-ಪ್ರಕೃತಿಯನ್ನು ಉಳಿಸಿ-
.