Posts

Showing posts from July, 2012

ಬನ್ನೇರುಘಟ್ಟದ ಆನೆಗಳ ಜಾಡಿನಲ್ಲಿ

Image
.ನಿಮಗೆಲ್ಲಾ ಗೊತ್ತಿರಬಹುದು,ಇತ್ತೀಚೆಗಷ್ಟೇ ಬನ್ನೇರುಘಟ್ಟ ದಲ್ಲಿ ಪ್ರವಾಸ ಹೋಗಿ ಆನೆ ದಾಳಿಯಿಂದ  ಒಬ್ಬರು ಟೆಕ್ಕಿ ಪ್ರಾಣ ಕಳೆದುಕೊಂಡರು .ಈ ಘಟನೆ ನೆನೆದಾಗ ಬನ್ನೇರುಘಟ್ಟದಲ್ಲಿ ಇರುವ ಆನೆಗಳು ಹಾಗು ಒಮ್ಮೆ ನಾವು ಈ ಆನೆಗಳ ಜಾಡಿನಲ್ಲಿ ಚಾರಣಕ್ಕೆ ತೆರಳಿದ ಘಟನೆಯನ್ನು ಬ್ಲಾಗ್ ನಲ್ಲಿ ಪೋಸ್ಟ್ ಮಾಡಬಹುದು ಎಂಬ ಯೋಚನೆ ಬಂದಿತು .ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಅಷ್ಟೇನೂ ದೊಡ್ದದಲ್ಲದ ಒಂದು ವನ್ಯ ಜೀವಿಗಳಿಂದ ಕೂಡಿದ ಪ್ರದೇಶ .ಸುಮಾರು 25,000 ಎಕರೆ (ಸರಿ ಸುಮಾರು 104.27 ಕಿಲೋಮೀಟರ್) ಯಷ್ಟು ವಿಸ್ತೀರ್ಣ ಹೊಂದಿರುವ ಇದು ಆ ನೆಗಳ ನೆಲೆಬೀಡು .ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ನ ಮಿತಿಯಲ್ಲಿ ಕೇವಲ ವನ್ಯ ಜೀವಿಗಳಲ್ಲದೆ ಹಲವು ಹಳ್ಳಿಗಳೂ ಹಾಗು ಅಲ್ಲಿ ವಾಸಿಸುವ ಜನಸಾಮಾನ್ಯರ ಹೊಲ ಗದ್ದೆಗಳೂ ಇವೆ.ಇದು ಮಾನವ ಹಾಗು ಆನೆಗಳ ನಡುವಿನ ತಿಕ್ಕಾಟಕ್ಕೆ ಪ್ರಮುಖ ಕಾರಣ .ನಮಗೆಲ್ಲಾ ಗೊತ್ತಿರುವಂತೆ ಆನೆಗಳು ಕೇವಲ ಒಂದೇ ಪ್ರದೇಶದಲ್ಲಿ ವಾಸಿಸುವ ಪ್ರಾಣಿಗಳಲ್ಲ,ಬದಲಾಗಿ ಆಹಾರ ಮತ್ತು ನೀರಿನ ಹುಡುಕಾಟದಲ್ಲಿ  ನಿರಂತರವಾಗಿ ಚಲನೆಯಲ್ಲಿರುತ್ತವೆ .ಪ್ರಮುಖವಾಗಿ ಬನ್ನೇರುಘಟ್ಟದ ಈ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಹೊಲಗಳಲ್ಲಿ ಹೆಚ್ಚಾಗಿ ರಾಗಿ ಬೆಳೆಯುತ್ತಾರೆ,ಈ ರಾಗಿಯ ಕುಡಿಯಲ್ಲಿ ಇರುವ ಪ್ರೋಟೀನ್ ಯುಕ್ತ ಅಂಶವು ಆನೆಗಳಿಗೆ ಬಹಳ ಪ್ರಿಯ.ಕಾಲ ಕಾಲದಿಂದ ಅವುಗಳ ವಂಶವಾಹಿನಿಯಲ್ಲೇ ಈ ಗುಣಗಳು ಸಾಗಿ ಪ್ರತಿಯೊಂದು ಆನೆಯೂ ಈ ರಾಗಿಯ ಚಿಗುರನ್ನು ತುಂಬಾ ಇಷ್ಟ

ಪ್ರಕೃತಿಯನ್ನು ರಕ್ಷಿಸಿ

Image
.ಇತ್ತೀಚಿಗೆ ಒಂದು ಚಾರಣಕ್ಕೆ ತೆರಳಿದಾಗ ಅಲ್ಲಿ ಕೆಲವೆಡೆ ಅರಣ್ಯ ಇಲಾಖೆಯವರು ಬರೆಸಿದ್ದ ಪ್ರಕೃತಿಯ ಬಗೆಗಿನ ಸ್ಲೋಗನ್ ಗಳು ನನ್ನ ಗಮನವನ್ನು ಸೆಳೆದವು.ಆ ಸುಂದರ ಸ್ಲೋಗನ್ ಗಳ ಚಿತ್ರವನ್ನು ತೆಗೆದು ಇಂದಿನ ಪೋಸ್ಟ್ ನಲ್ಲಿ ಪ್ರಕಟಿಸಿದ್ದೇನೆ -ಪ್ರಕೃತಿಯನ್ನು ರಕ್ಷಿಸಿ-

ಚಿರಾಪುಂಜಿ,ಮಳೆ ನಾಡು

Image
.ಚಿರಾಪುಂಜಿ-ಭಾರತದಲ್ಲೇ ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶ.ಪ್ರಪಂಚದಲ್ಲೇ ಎರಡನೆಯ ಅತ್ಯಂತ ತೆವ (ಒದ್ದೆ) ಪ್ರದೇಶ .ಮೇಘಾಲಯದ ಈಸ್ಟ್ ಖಾಸಿ ಹಿಲ್ ಜಿಲ್ಲೆಯಲ್ಲಿದೆ ಈ ಮಳೆಯ ನಾಡು .ಇದೇ ಜಿಲ್ಲೆಯಲ್ಲಿ ಬರುವ Mawsynram ಎಂಬುವ ಪ್ರದೇಶ ಸದ್ಯಕ್ಕೆ ಪ್ರಪಂಚದ ಮೊದಲ ಅತ್ಯಂತ ತೇವ ಪ್ರದೇಶ  .ಚಿರಾಪುಂಜಿಯ ನೈಜ ಹೆಸರು ಸೊಹ್ರ.ಇದುಶಿಲಾಂಗ್ ನಿಂದ 65km ದೂರದಲ್ಲಿದೆ .ಚಿರಾಪುಂಜಿ ಎಂದರೆ 'ಕಿತ್ತಳೆಗಳ ನಾಡು' ಎಂದು .ಚಿರಾಪುಂಜಿ ಸಮುದ್ರ ಮಟ್ಟದಿಂದ 4500 ಅಡಿ ಎತ್ತರದಲ್ಲಿದೆ .ಚಿರಾಪುಂಜಿಯ ಕಣಿವೆಗಳು ಹಲವು ಸ್ಥಳೀಯ ಪ್ರಭೇದದ ಗಿಡ ಮರಗಳ ಆಶ್ರಯ ಸ್ಥಾನವಾಗಿದೆ.ಮೇಘಾಲಯದ ಉಪ ಉಷ್ಣ ವಲಯದ ಕಾಡುಗಳು ಈ ಕಣಿವೆಗಳಲ್ಲಿ ಕಂಡುಬರುತ್ತದೆ .ಇಲ್ಲಿ ಬೀಳುವ ವಾರ್ಷಿಕ ಮಳೆಯ ಸರಾಸರಿ ಪ್ರಮಾಣ -11,777 ಮಿಲಿಮೀಟರ್ , Mawsynram ನಲ್ಲಿ ಬೀಳುವ ಮಳೆಯ ಪ್ರಮಾಣ 11,873 ಮಿಲಿಮೀಟರ್ .ಚಿರಾಪುಂಜಿಯು  ನೈರುತ್ಯ ಹಾಗು ಈಶಾನ್ಯ ಮಾನ್ಸೂನ್  ಮಾರುತಗಳೆರಡರ ಪ್ರಭಾವಕ್ಕೆ ಒಳಗಾಗಿರುವುದರಿಂದ ಇಲ್ಲಿ ಒಂದೇ ಮಾನ್ಸೂನ್ ಋತುವಿರುತ್ತದೆ .ಚಳಿಗಾಲದಲ್ಲಿ ಬ್ರಹ್ಮ ಪುತ್ರ ಕಣಿವೆಗಳಿಂದ ಬೀಸುವ ಈಶಾನ್ಯ ಮಾರುತಗಳು ಇಲ್ಲಿ ಮಳೆಯನ್ನು ಸುರಿಸುತ್ತವೆ .ಸದಾ ಕೂಲ್ ಕೂಲ್ ಆಗಿ ಇರುವ ಇಲ್ಲಿನ ವಾರ್ಷಿಕ ಸರಾಸರಿ ಉಷ್ಣಾಂಶ 17.3 °C .ಜನವರಿ ತಿಂಗಳಲ್ಲಿ 11.5 °C ರಷ್ಟು ಉಷ್ಣಾಂಶವಿದ್ದರೆ ಜುಲೈನಲ್ಲಿ 20.6 °C ನಷ್ಟು ಉಷ್ಣಾಂಶವಿರುತ್ತದೆ .ಚಿರಾಪುಂಜಿ ಸದ್ಯಕ್ಕೆ ಎರಡು