Monday, November 19, 2012

ಸೈಕ್ಲೋನ್

.ಇತ್ತೀಚೆಗಷ್ಟೇ ಅಮೇರಿಕಾವನ್ನು ತಲ್ಲಣಗೊಳಿಸಿದ ಸ್ಯಾಂಡಿಯಾಗಿರಬಹುದು.... ಭಾರತದಲ್ಲಿ ಬಾರಿ ಸುದ್ದಿ ಮಾಡಿದ್ದ 'ನೀಲಂ' ಆಗಿರಬಹುದು ಮತ್ತು ಸದ್ಯಕ್ಕೆ ಬಂಗಾಳ ಕೊಲ್ಲಿಯಲ್ಲಿ ಸೈಕ್ಲೋನ್ ಆಗಿ ಜನ್ಮ ತಳೆಯಲು ಸಿದ್ದವಾಗಿರುವ Depression ಆಗಿರಬಹುದು .. ಇಂತಹ  ಪ್ರಕೃತಿಯ ವಿನಾಶಕಾರಿ ಸೈಕ್ಲೋನ್  ಗಳ ಬಗ್ಗೆ ಬರೆಯಬೇಕೆಂದೆನಿಸಿ ಈ ಪೋಸ್ಟ್ ಬರೆದಿದ್ದೇನೆ

.ವಿನಾಶಕಾರಿ ಸೈಕ್ಲೋನ್  ಗಳು ಹೇಗೆ ಜನ್ಮ ತಾಳುತ್ತವೆ ಎಂಬುದೇ ನಮ್ಮಲ್ಲಿ ಹಲವಾರು ಜನಗಳಿಗೆ ಗೊತ್ತಿಲ್ಲ.ಸೈಕ್ಲೋನ್  ಗಳ ಬಗ್ಗೆ ಮಾತನಾಡುವ ನಮಗೆ ಅದು ಹೇಗೆ ಸೃಷ್ಟಿಯಾಗುತ್ತದೆ ಎಂಬುದೇ ಗೊತ್ತಿರುವುದಿಲ್ಲ.ಈ ಪೋಸ್ಟ್ ನಲ್ಲಿ ನಾನು ಸೈಕ್ಲೋನ್  ಗಳು ಹೇಗೆ ಸೃಷ್ಟಿಯಾಗುತ್ತವೆ ಎಂಬುದರ ಬಗ್ಗೆ ಬರೆದಿದ್ದೇನೆ

.ಸಾಮಾನ್ಯವಾಗಿ ಸೈಕ್ಲೋನ್  ಗಳ ಹುಟ್ಟಿನ ಹಿಂದೆ ತುಂಬಾ ವಿಜ್ಞ್ಯಾನ ಅಡಗಿದೆ.ಆದರೆ ನಾನು ಇಲ್ಲಿ ತುಂಬಾ ಸರಳವಾಗಿ ಸೈಕ್ಲೋನ್  ಗಳ ಹುಟ್ಟಿನ ಬಗ್ಗೆ ಬರೆದಿದ್ದೇನೆ

.ನಮ್ಮ ದೇಶದಲ್ಲಿ ಸೈಕ್ಲೋನ್  ಗಳ ಅರ್ಭಟ ಕಡಿಮೆ ಎಂದೇ ಹೇಳಬೇಕು.ಆದರೆ ಅಮೇರಿಕಾದಂತಹ ದೇಶಗಳಲ್ಲಿ ಸೈಕ್ಲೋನ್  ಎಂದರೆ ಜನರು ನಡುಗುತ್ತಾರೆ.ಅಷ್ಟರ ಮಟ್ಟಿಗೆ ಅಲ್ಲಿ ಸೈಕ್ಲೋನ್  ಗಳು ಅರ್ಭಟಿಸುತ್ತದೆ

.ಸಾಮಾನ್ಯವಾಗಿ ಸೈಕ್ಲೋನ್  ಗಳು ಜನನ ತಾಳುವುದು ಭೂಮದ್ಯ ರೇಖೆಯ ಬಿಸಿ ನೀರಿನ ಸಾಗರಗಳಲ್ಲಿ (Warm Ocean Water- ಬಿಸಿಲಿನಿಂದ ಕಾದ ಸಾಗರಗಳು)

.ಸೈಕ್ಲೋನ್ ಗಳು ಜನ್ಮ ತಾಳಲು ಸಾಗರದ ಉಷ್ಣಾಂಶ 26.5 ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚು ಇರಬೇಕು

.ಈ ಸಾಗರದ ಪ್ರದೇಶಗಳಲ್ಲಿ ಬಿಸಿಯಾದ ತೇವಾಂಶಯುಕ್ತ ಗಾಳಿಯು ನೀರಿನ ಮೇಲ್ಮೈನಿಂದ ಮೇಲಕ್ಕೆ ಚಲಿಸಲಾರಂಭಿಸುತ್ತದೆ

.ಹೀಗೆ ಬಿಸಿಯಾದ ತೇವಾಂಶಯುಕ್ತ ಗಾಳಿಯು ಮೇಲಕ್ಕೆ ಚಲಿಸಿದಾಗ ಕೆಳಗೆ ಕಡಿಮೆ ಗಾಳಿಯ ಒತ್ತಡ  ಪ್ರದೇಶ ನಿರ್ಮಾಣವಾಗುತ್ತದೆ.ಇದನ್ನೇ ನಾವು Low Depression Area ಎಂದು ಕರೆಯುತ್ತೇವೆ

.ಹೀಗೆ  ಕಡಿಮೆ ಗಾಳಿ ಒತ್ತಡ ಉಂಟಾದ ಪ್ರದೇಶಕ್ಕೆ ಅಕ್ಕ ಪಕ್ಕದ ಹೆಚ್ಚಿನ ಒತ್ತಡ ಹೊಂದಿದ ಗಾಳಿಯು  ಪ್ರವೇಶಿಸುತ್ತದೆ

.ಹೀಗೆ ಕಡಿಮೆ ಒತ್ತಡ ಪ್ರದೇಶಕ್ಕೆ ಬಂದ ತಂಪು ಗಾಳಿಯು ಮತ್ತೆ ಬಿಸಿಯಾಗಿ ತೇವಾಂಶದಿಂದ ಕೂಡಿ ಮೇಲೆರಲಾರಂಭಿಸುತ್ತದೆ

.ಹೀಗೆ ಮತ್ತೆ ಮತ್ತೆ ಈ ಪ್ರಕ್ರಿಯೆ ಚಕ್ರೀಯ(Cyclic) ವಿಧಾನದಲ್ಲಿ  ನಡೆಯಲು ಪ್ರಾರಂಭಿಸುತ್ತದೆ

.ಮೇಲಕ್ಕೆ ಹೋದ ತೇವಾಂಶಯುಕ್ತ ಬಿಸಿ ಗಾಳಿ ತಂಪಾಗಿ ಅದರಲ್ಲಿದ್ದ ನೀರು ಮೋಡಗಳಾಗಿ ಪರಿವರ್ತನೆ ಹೊಂದುತ್ತದೆ

.ತನ್ನ ಕಕ್ಷೆಯಲ್ಲಿ ಸುತ್ತುತ್ತಿರುವ ಭೂಮಿಯ ಕೊರಿಯೋಲಿಸ್ (Coriolis) ಪರಿಣಾಮ ಗಾಳಿಯು ಅತ್ಯಂತ ವೇಗವಾಗಿ ಸುರುಳಿ ಸುತುತ್ತಾ ಮೇಲಕ್ಕೆ ಸಾಗುತ್ತದೆ

.ಹೀಗೆ ಇಡೀ ಮೋಡ ಹಾಗು ಗಾಳಿಯ ಸುತ್ತುವಿಕೆ ವ್ಯವಸ್ಥಯು ಬೆಳೆಯುತ್ತಾ ಸಾಗುತ್ತದೆ.ಈ ವ್ಯವಸ್ಥೆಗೆ ಇಂಧನದಂತೆ ಕೆಲಸ ಮಾಡುವುದು ಸಾಗರದ ಉಷ್ಣತೆ ಮತ್ತೆ ನೀರಾವಿ

.ಹೀಗೆ ಉಂಟಾದ ವ್ಯವಸ್ಥೆಯನ್ನು Tropical Depression ಎಂದು ಕರೆಯುತ್ತೇವೆ

.ಈ ವ್ಯವಸ್ಥೆಯಲ್ಲಿನ ಗಾಳಿಯ ವೇಗ 63kmp ಇದ್ದಾಗ ಇದನ್ನು 'Tropical Strom' ಎಂದು ಕರೆಯುತ್ತೇವೆ.ಇದರಲ್ಲಿನ ಗಾಳಿಯ 119kmp  ಇದ್ದಾಗ ಈ ವ್ಯವಸ್ಥೆಯನ್ನು ಅಧಿಕೃತವಾಗಿ  ' Tropical ಸೈಕ್ಲೋನ್' ಎಂದು ಕರೆಯುತ್ತಾರ

.ಹೀಗೆ ಉಂಟಾದ ಸೈಕ್ಲೋನ್  ನೂರರಿಂದ ಸಾವಿರಾರು ಕಿಲೋಮೀಟರ್ ವರೆಗಿನ ವಿಸ್ತೀರ್ಣ ವನ್ನು ಹೊಂದಿರುತ್ತದೆ

.ಕೆಲವೊಮ್ಮೆ ಈ ಸೈಕ್ಲೋನ್  ಗೆ ಬೇರೆಡೆಯ ಗಾಳಿ ಕೂಡ  ಬಂದು ಸೇರಿ ಇದನ್ನು ಇನ್ನಷ್ಟು ಉಗ್ರವಾಗಿ ಮಾರ್ಪಡಿಸುತ್ತದೆ.ಕೇವಲ ಸೈಕ್ಲೋನ್  ನಲ್ಲಿ ಸುತ್ತುತ್ತಿರುವ  ಬಿಸಿ ಗಾಳಿ ಹಾಗು ಬಿಸಿ ಗಾಳಿಯ ಜಾಗಕ್ಕೆ ಮುನ್ನುಗ್ಗುವ ತಂಪು ಗಾಳಿಯ ದೆಸೆಯಿಂದ ಸೈಕ್ಲೋನ್  ನಲ್ಲಿರುವ ಗಾಳಿಯು ಅತ್ಯಂತ ಶಕ್ತಿಯುತವಾಗಿರುತ್ತದೆ

.ಪೂರ್ಣವಾಗಿ ರೂಪುಗೊಂಡ ಸೈಕ್ಲೋನ್  ಸೆಕೆಂಡಿಗೆ 2 ಮಿಲಿಯನ್ ಟನ್ ನಷ್ಟು ಗಾಳಿಯನ್ನು ಮೇಲಕ್ಕೆ pump ಮಾಡುತ್ತದೆ

.ಸೈಕ್ಲೋನ್  ನ ನಡುವಿನ ಭಾಗವನ್ನು 'Eye' ಎಂದು ಕರೆಯುತ್ತೇವೆ.ಈ ಭಾಗವು ತುಂಬಾ ಶಾಂತವಾಗಿರುತ್ತದೆ .ಮತ್ತು ತುಂಬಾ ಕಡಿಮೆ ಗಾಳಿ ಒತ್ತಡದ ಪ್ರದೆಶವಾಗಿರುತ್ತದೆ.ಮೇಲಿನ ಹೆಚ್ಚು ಒತ್ತಡದ ಗಾಳಿ ಈ ಪ್ರದೇಶಕ್ಕೆ ಅಪ್ಪಳಿಸುತ್ತಿರುತ್ತದೆ

.ಹೀಗೆ ಉಂಟಾದ ಸೈಕ್ಲೋನ್  ಗಳು ತೀರಕ್ಕೆ ಅಪ್ಪಳಿಸಿದಾಗ ಆ ಪ್ರದೇಶದಲ್ಲಿ ಅತ್ಯಂತ ಹೆಚ್ಚು ಮಳೆ ಸುರಿಸುತ್ತದೆ ಹಾಗು ಅತ್ಯಂತ ವೇಗದ ಗಾಳಿಯಿಂದ ಕೂಡಿರುತ್ತದೆ

.ಸಾಮಾನ್ಯವಾಗಿ ಸೈಕ್ಲೋನ್  ಗಳು ತೀರಕ್ಕೆ ಅಪ್ಪಳಿಸಿದಾಗ ಅವುಗಳ ಶಕ್ತಿ ಕಡಿಮೆಯಾಗುತ್ತದೆ.ಏಕೆಂದರೆ ಅವುಗಳಿಗೆ ಇಂಧನವಾಗಿ ಕೆಲಸ ಮಾಡುವ ಸಾಗರದ ಉಷ್ಣತೆ ಹಾಗು ನೀರಾವಿ ಸಿಗದೇ ಇರುವುದರಿಂದ

.ಹೀಗೆ ಶಕ್ತಿಗುಂದಿ ಸಂಪೂರ್ಣವಾಗಿ ಸಾಯುವ ಮೊದಲು ಸೈಕ್ಲೋನ್  ಹಲವು ನಷ್ಟವನ್ನು ಉಂಟು ಮಾಡಿರುತ್ತದೆ

.ಸೈಕ್ಲೋನ್  ನಲ್ಲಿ ಇರುವ ಗಾಳಿಯ ವೇಗದ ಆಧಾರದಲ್ಲಿ ಅದನ್ನು 5 ವರ್ಗವಾಗಿ ವಿಂಗಡಿಸಲಾಗಿದೆ.5 ನೇ ವರ್ಗದ ಸೈಕ್ಲೋನ್  ನಲ್ಲಿನ ಗಾಳಿಯ ವೇಗ ಸುಮಾರು 280 kmph ನಷ್ಟಿರುತ್ತದೆ

.ಹೀಗೆ ಪ್ರಕೃತಿಯ ವಿಶಿಷ್ಟ ಶಕ್ತಿ ಸೈಕ್ಲೋನ್  ಜನ್ಮ ತಾಳಿ,ತನ್ನ ಪ್ರಭಾವವನ್ನು ಬೀರಿ ನಾಶ ಹೊಂದುತ್ತದೆ 

.ಹಾಗಾದರೆ  Hurricane,Typhoon ಗಳೆಂದರೇನು ಎಂಬ ಸಂಶಯ ನಿಮ್ಮ ಮನಸ್ಸಿನಲ್ಲಿ ಮೂಡಬಹುದು.ಇದಕ್ಕೆ ಉತ್ತರ ತುಂಬಾ ಸರಳ

.ಸಾಗರದಲ್ಲಿ ನಡೆಯುವ ಈ ಪ್ರಕ್ರಿಯೆಯನ್ನೇ ಬೇರೆ ಬೇರೆ ಜಾಗದಲ್ಲಿ ಈ ಎಲ್ಲಾ ಹೆಸರುಗಳಿಂದ ಕರೆಯುತ್ತಾರೆ,ಉದಾಹರಣೆಗೆ ಅಟ್ಲಾಂಟಿಕ್ ಹಾಗು ಪಶ್ಚಿಮ  ಪೆಸಿಫಿಕ್ ಸಾಗರದಲ್ಲಿ ಇದನ್ನು Typhoon ಎಂದೂ,ಪೂರ್ವ ಪೆಸಿಫಿಕ್ ಸಾಗರದಲ್ಲಿ Hurricane ಎಂದೂ,ದಕ್ಷಿಣ ಪೆಸಿಫಿಕ್,ಹಿಂದೂ ಮಹಾ ಸಾಗರ ಹಾಗು ಬಂಗಾಳ ಕೊಲ್ಲಿಯಲ್ಲಿ ಇದನ್ನು ಸೈಕ್ಲೋನ್ ಎಂದು ಕರೆಯುತ್ತಾರೆ

.ಇವುಗಳು ಹುಟ್ಟುವ ವಿಧಾನ ಒಂದೇ ಇದ್ದು ಗುಣ ಲಕ್ಷಣಗಳಲ್ಲಿ ವ್ಯತ್ಯಾಸವಿರುತ್ತದೆ  

.Tornados ಗಳು ಹುಟ್ಟುವುದು ಸೈಕ್ಲೋನ್ ಅಥವಾ Hurricane ಗಳಿಂದ .ಸೈಕ್ಲೋನ್ ಗಳಲ್ಲಿ   ಉಂಟಾಗುವ ಕಣಗಳ ಸುತ್ತುವಿಕೆಯಿಂದಾಗಿ Tornado ಗಳು ಜೀವ ತಾಳುತ್ತವೆ.ಇವು ತಮ್ಮ ಪಥದಲ್ಲಿ ಸಿಗುವ ಎಲ್ಲವನ್ನೂ ನಾಶ ಮಾಡುತ್ತವೆ

.ಹೀಗೆ ಪ್ರಕೃತಿಯ ವಿನಾಶಕಾರಿ ಶಕ್ತಿ ಸೈಕ್ಲೋನ್ ಗಳ ಬಗ್ಗೆ ಅದಷ್ಟು ಸರಳವಾಗಿ ತಿಳಿಸಲು ಇಲ್ಲಿ ಪ್ರಯತ್ನಿಸಿದ್ದೇನೆ.ಇನ್ನೊಮ್ಮೆ ಸೈಕ್ಲೋನ್ ಎಂದು ಕೇಳಿದಾಗ ಅದರ ಸೃಷ್ಟಿ ಬಗ್ಗೆ ನೀವು ತಿಳಿದಿರುವವರಂತಾಗಿರಬೇಕು..........

.ಸೈಕ್ಲೋನ್ ಗಳಲ್ಲಿ ಬೀಸುವ ಗಾಳಿಯ ವೇಗದ ಮೇಲೆ ಮಾಡಲಾದ ವಿಧಗಳು 
  
-ಪ್ರಕೃತಿಯನ್ನು ರಕ್ಷಿಸಿ-