Posts

Showing posts from October, 2012

ಡೆಲಿಯಾ ಹೂವುಗಳು

Image
.ಹರಿಹರಪುರದ ಸಮೀಪವಿರುವ ಅಬಂಳಿಕೆಯ ಶ್ರೀಮತಿ ರುಕ್ಮಿಣಿ ಕೃಷ್ಣಪ್ಪನವರ ಆಸಕ್ತಿಯ ಫಲವಾಗಿ ಅವರ ಮನೆಯ ೧೫*೨೦ ಅಡಿಯ ಪುಟಾಣಿ ಅಂಗಳ ಡೆಲಿಯಾ ಹೂಗಳ ವನವಾಗಿದೆ .ಮನೆಯಂಗಳದಲ್ಲಿ ಪ್ಲಾಸ್ಟಿಕ್‌ ಚೀಲಗಳಲ್ಲಿ ಗೊಬ್ಬರ ಮಣ್ಣು ತುಂಬಿ, ಬೇಸಿಗೆಯಲ್ಲಿ ಜೊಪಾನವಾಗಿ ಕಾಪಾಡಿಟ್ಟ ಗೆಡ್ಡೆಗಳನ್ನು ನೆಟ್ಟು, ಆಧಾರ ನೀಡಿ ಬೆಳೆಸಿದ ""ಡೆಲಿಯಾ''  ಆಡು ಭಾಷೆಯಲ್ಲಿ "ಕಮಲ''ವಾಗಿದೆ. .ಅವರ ಚಿಕ್ಕ  ಮಗಳು ಅವುಗಳನ್ನು ಗುರುತಿಸುತ್ತಾಳೆ. ರಾಕ್ಷಸ ಕಮಲ, ನಾಚಿಕೆ ಕಮಲ, ಲಿಲ್ಲ್ಲಿಪುಟ್‌ ಕಮಲ, ದಾಸ ಕಮಲ, ಈರುಳ್ಳಿ ಕಮಲ, ಜೇನು ಗೂಡು ಕಮಲ, ಹಳದಿ ಕಡ್ಡಿ ಕಮಲ, ಗೊರಟೆ ಕಮಲ, ಬೀಟ್ರೂಟ್‌ ಕಮಲ, ಕೋಳಿ ಜುಟ್ಟು ಕಮಲ, ಬಿಳಿಗೊಂಡೆ, ಹಳದಿ ಗೊಂಡೆ, ನೀಲಿ ಗೊಂಡೆ ಕಮಲಗಳೆಂದು ಪಟಪಟನೆ ಹೆಸರಿಸುತ್ತಾಳೆ .ದಾರಿಯಲ್ಲಿ ಸಾಗುವ ಪ್ರಯಾಣಿಕರು ವಾಹನ ನಿಲ್ಲಿಸಿ, ಭೇಟಿ ನೀಡಿ ಹೂಗಳ ಅಂದ ಸವಿಯುವುದು  ಸಾಮಾನ್ಯವಾಗಿದೆ. ಕೃತಕ ಹೂಗಳನ್ನು ತಂದು ಜೊಡಿಸಿಡುವ ಈ ಕಾಲದಲ್ಲಿ, ಚಿಕ್ಕದಾದ ನಮ್ಮ ಜಾಗದಲ್ಲಿ, ನಾವೇ ಬೆಳೆದ ಗಿಡಗಳು ಹೂ ಬಿಟ್ಟಾಗ ಸಿಗುವ ಆನಂದ ಹಣ ಕೊಟ್ಟು ಪಡಯಲು ಅಸಾಧ್ಯವೆನ್ನುತ್ತಾರೆ .ಮಲೆನಾಡಿನ ಹಳ್ಳಿಯ ಮೂಲೆಯಲ್ಲಿ ೩೮ಕ್ಕೂ ಹೆಚ್ಚು ವಿಧಗಳ ಡೆಲಿಯಾ ಹೂಗಳ ಲೋಕ ಸೃಷ್ಟಿಸಿದ ಇವರ ಪ್ರಯತ್ನಕ್ಕೆ  ನಮ್ಮದೊಂದು ಚಿಕ್ಕ ಸಲಾಂ.. ಮಾಹಿತಿ  ಮತ್ತು ಛಾಯಾಚಿತ್ರ: ದಿನೇಶ್‌ ಜಮ್ಮಟಿಗೆ