Posts

Showing posts with the label tiger bandipur

ಬಂಡೀಪುರದ ನರಭಕ್ಷಕ..!!!

Image
.ಪ್ರಿಯ ಪ್ರಕೃತಿ ಪ್ರಿಯ ಮಿತ್ರರೇ ಮೊದಲನೆಯದಾಗಿ ಹಲವು ತಿಂಗಳುಗಳಿಂದ ಬ್ಲಾಗ್ ಪೋಸ್ಟ್ ಬರೆಯದೆ ಇರುವುದಕ್ಕಾಗಿ ಕ್ಷಮೆ ಇರಲಿ (ಚಿತ್ರ ಕೃಪೆ-ವಿಜಯವಾಣಿ) (ಈ ಹುಲಿಗೆ ಸಂಭಂದಪಟ್ಟ updates ಗಳನ್ನು ಪೋಸ್ಟ್ ನ ಕೊನೆಯಲ್ಲಿ ಮಾಡಲಾಗಿದೆ ) ಬಂಡೀಪುರದ ನರಭಕ್ಷಕ...!! ಕಳೆದ ಒಂದು ವಾರದಿಂದ ದಿನಪತ್ರಿಕೆಗಳಲ್ಲಿ ನೀವು ಈ ವಿಷಯವನ್ನು ಗಮನಿಸಿರಬಹುದು. ನವೆಂಬರ್ 27 ರ ಬುಧವಾರದಂದು ಬಂಡೀಪುರ ರಾಷ್ಟ್ರೀಯ ಉದ್ಯಾನದ ಹೊರ ಪ್ರದೇಶದಲ್ಲಿ ಬಸವರಾಜು ಎಂಬುವವರ ಮೇಲೆ ದಾಳಿ ನಡೆಸಿ ಅವರ ಸಾವಿಗೆ ಕಾರಣವಾದ ಹುಲಿಯೊಂದರ ಬಗ್ಗೆ ಸುದ್ದಿಯನ್ನು ನೀವು ಕೇಳಿರಬಹುದು  .ಇದಾದ ಕೇವಲ 2 ದಿನಗಳ ನಂತರ ಉದ್ಯಾನವನದ 100 ಮೀಟರ್ ಹೊರ ಪ್ರದೇಶದಲ್ಲಿ ಜೇನು ಕುರುಬ ಜನಾಂಗದ ಚೆಲುವ ಎಂಬುವವರ ಮೇಲೆ ಹುಲಿಯೊಂದು ದಾಳಿ ನಡೆಸಿ ಕೊಂದು ಹಾಕಿದೆ .ಈ ಮೇಲಿನ ಎರಡೂ ಘಟನೆಗಳಲ್ಲೂ ಕೂಡ ಹುಲಿ ಕೊಂದ ದೇಹವನ್ನು ತಿನ್ನದೇ ಬಿಟ್ಟು ಹೋಗಿದೆ.ಮೊದಲೇ ಘಟನೆಯಲ್ಲಿ ಹುಲಿ ಬಸವರಾಜುರವರ ತಲೆಗೆ ಗಾಯ ಮಾಡಿದ್ದು ದೇಹದ ಯಾವುದೇ ಭಾಗವನ್ನು ತಿನ್ನದೇ ಬಿಟ್ಟು ಹೋಗಿದೆ.ಎರಡನೇ ಘಟನೆಯಲ್ಲಿ ಹುಲಿ ಚೆಲುವರ ಮೇಲೆ ದಾಳಿ ನಡೆಸಿದಾಗ ಅವರ ಜೊತೆಯಲ್ಲಿ ಇದ್ದ ಅವರ ಸ್ನೇಹಿತ ಚಿಕ್ಕ ತಮ್ಮ ಬಳಿ ಇದ್ದ ಕತ್ತಿಯೊಂದಿಗೆ ಹುಲಿಯನ್ನು ಹಿಂಬಾಲಿಸಿದ್ದಾರೆ  .ಆಗ ಹುಲಿ ಚೆಲುವವ ದೇಹವನ್ನು ಬಿಟ್ಟು ಇವರ ಮೇಲೆ ದಾಳಿಗೆ ಮುಂದಾಗಿದ್ದು ಅವರು ಅದರಿಂದ ತಪ್ಪಿಸಿಕೊಂಡಿದ್ದಾರೆ. ಈ ಘ...