-ನಂದಿಯ ಮೇಲೆ ಮಂಜಿನ ನರ್ತನ - .ಸಾಧಾರಣವಾಗಿ ನಾವೆಲ್ಲಾ ನಂದಿ ಬೆಟ್ಟವನ್ನು ನೋಡಿರುತ್ತೇವೆ.ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿದಿರುತ್ತೇವೆ .ಅಕಸ್ಮಾತ್ ನೀವು ನಂದಿ ಬೆಟ್ಟಕ್ಕೆ ಹೋದಾಗ ಅಲ್ಲಿ ಮಳೆ ಬರುವ ಸೂಚನೆಗಳಿದ್ದರೆ ನೀವು ಪುಣ್ಯವಂತರು.ಏಕೆಂದರೆ ಮಳೆ ಹಾಗು ಗಾಳಿಯ ಆರ್ಭಟದ ಸಮಯದಲ್ಲಿ ನಂದಿ ಬೆಟ್ಟದ ಪ್ರಕೃತಿಯನ್ನು ಸವಿಯುವ ಮಜವೇ ಬೇರೆ... .ನಾನು ಇಂದು ಇಲ್ಲಿ ಪೋಸ್ಟ್ ಮಾಡಲು ಹೊರಟಿರುವ ಚಿತ್ರಗಳೂ ಕೂಡ ನಂದಿ ಬೆಟ್ಟದ ಮೇಲೆ ಮುಂಜಾನೆಯ ಮಂಜು ಕವಿದಿರುವಾಗ ತೆಗೆದಿರುವ ಸುಂದರ ಚಿತ್ರಗಳು .ಈ ಚಿತ್ರಗಳನ್ನೂ ತೆಗೆದಿದ್ದು ನನ್ನ ಸಹೋದರ ಸುಮಂತ್.. ಚಳಿಗಾಲದ ಒಂದು ಮುಂಜಾನೆ ನಂದಿ ಬೆಟ್ಟಕ್ಕೆ ಅವನು ಭೇಟಿ ನೀಡಿದಾಗ ಅವನ ಕಣ್ಣೇ ನಂಬಲಾರದ ಒಂದು ಸುಂದರ ಲೋಕ ಅಲ್ಲಿ ತೆರೆದುಕೊಂಡಿತ್ತು .So ನಂದಿ ಬೆಟ್ಟದ ಮೇಲೆ ಮಂಜಿನ ನರ್ತನದ ಸುಂದರ ಚಿತ್ರಗಳು ನಿಮ್ಮ ಕಣ್ಣು ತಣಿಸಲು...... -ಪ್ರಕೃತಿಯನ್ನು ರಕ್ಷಿಸಿ-
Posts
- Get link
- X
- Other Apps
By
ragat paradise
-
-ಮಾಕಲಿದುರ್ಗ TREK- ನಾವು ಅಂದುಕೊಂಡತೆ ಎಲ್ಲಾ ಸಮಯಗಳಲ್ಲೂ ನಡೆಯುವುದಿಲ್ಲ.ನಾವು ಹೊರಡುವ ಎಲ್ಲಾ Trekking ಗಳು Success ಆಗುವುದಿಲ್ಲ.ಹಾಗೆಯೇ ಈಗ ನಾನು ಬರೆಯಲು ಹೊರಟಿರುವ Trekking ಕತೆ ಕೂಡ Success ಆಗದೆ ಒಂದು Flop Show ಕತೆ .ಇದೇಕೆ ನಾನು ಯಶಸ್ವಿಯಾಗದ Trekking ಕತೆ ಬರೆದಿದ್ದೇನೆ ಎಂದು ನೀವು ಕೇಳಬಹುದು.ಆದರೆ ಇದು Flop Show ಆದರೂ ಕೂಡ ಇದರಿಂದ ಪಡೆದ ಅನುಭವಗಳು ಮರೆಯಲಾರದವು .ಬೆಂಗಳೂರಿಗೆ ನಾನು ಬಂದಾಗ ಇಲ್ಲಿನ ಸ್ನೇಹಿತರ ಜೊತೆ Weekend ಗಳಲ್ಲಿ ಸಾಧ್ಯವಾದ ಪ್ರಕೃತಿ ರಮಣೀಯತೆಯಿಂದ ಕೂಡಿರುವ ಪ್ರದೇಶಗಳಿಗೆ ಭೇಟಿ ಕೊಡುತ್ತೇನೆ.ಈ ಸಾರಿಯೂ ಅಷ್ಟೇ ಡಿಸೆಂಬರ್ ತಿಂಗಳ ಒಂದು ಶನಿವಾರ ಯಾವ ಪ್ರದೇಶಕ್ಕೆ ಹೋಗಬಹುದೆಂದು ಅಂತರ್ಜಾಲದಲ್ಲಿ ಹುಡುಕಾಡುತ್ತಿದ್ದಾಗ ನಮಗೆ ಸಿಕ್ಕ ಸ್ಥಳವೇ ಮಾಕಲಿದುರ್ಗ .ಬೆಂಗಳೂರಿನಿಂದ 50km ದೂರದಲ್ಲಿರುವ ಮಾಕಲಿದುರ್ಗ Trekking ಮಾಡಲು ಒಂದು ಸುಂದರ ಸ್ಥಳ.ಬೆಟ್ಟದ ಮೇಲೆ ಒಂದು ಕೋಟೆ ಇದೆ.1350mts ಎತ್ತರದಲ್ಲಿರುವ ಇದನ್ನು ಹತ್ತಿ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಆನಂದಿಸಬಹುದು ಎಂಬುದನ್ನು ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯಿಂದ ತಿಳಿದುಕೊಂಡು ಅಲ್ಲಿಗೆ ಹೊರಡಲು ನಿರ್ಧರಿಸಿ ಮಧ್ಯಾನದ ಹೊತ್ತಿಗೆ ನಮ್ಮ (ನಾನು,ರಾಜು,ಸುಮಂತ್) ಸ್ನೇಹಿತನೊಬ್ಬನ (ರಾಜೇಶ್) ಮನೆಗೆ ಹೊರೆಟೆವು .ನಾವು ಅಂತರ್ಜಾಲದಲ್ಲಿ ಮಾಕಲಿದುರ್ಗದ ಬಗ್ಗೆ ಮಾಹಿತಿ ಹುಡುಕುತ್ತಿರಬೇಕಾದರೆ ಒಂದುಕಡೆ ಮಾಕಲಿದುರ್ಗವ...
- Get link
- X
- Other Apps
By
ragat paradise
-
-ಹಕ್ಕಿಯಂತೆ ಹಾಡುವ ಕಪ್ಪೆಗಳು- .ಇತ್ತೀಚೆಗೆ ಸಂಶೋದಕರು ಹಕ್ಕಿಯಂತೆ ಹಾಡುವ ಕಪ್ಪೆಯ ಜಾತಿಗಳನ್ನು ಉತ್ತರ ವಿಯೆಟ್ನಾಂ ನ ಕಾಡುಗಳಲ್ಲಿ ಕಂಡುಹಿಡಿದಿದ್ದಾರೆ .ಎತ್ತರವಾದ ಮರಗಳಲ್ಲಿ ವಾಸಿಸುವ ಇವುಗಳಿಗೆ Quang's tree frog ಎಂದು ನಾಮಕರಣ ಮಾಡಿದ್ದಾರೆ ಗಂಡು Quang's tree ಕಪ್ಪೆ Photo by: Jodi J. L. Rowley/Australian Museum. ಹೆಣ್ಣು Quang's tree ಕಪ್ಪೆ . Photo by: Jodi J. L. Rowley/Australian Museum. (info-mongabay.com ) .ಈ ಕಪ್ಪೆ ಹೇಗೆ ಹಕ್ಕಿಯಂತೆ ಕೂಗಬಹುದು ಎಂಬ ಕುತೂಹಲವಿದೆಯೇ?? ಹಾಗಿದ್ದರೆ ಇಲ್ಲಿ ಕ್ಲಿಕ್ ಮಾಡಿ -ಪ್ರಕೃತಿಯನ್ನು ಉಳಿಸಿ-
- Get link
- X
- Other Apps
By
ragat paradise
-
-ವನ್ಯ ಜೀವಿಗಳು- .ಕಳೆದ ಹಲವು ದಿನಗಳಿಂದ ಬ್ಲಾಗ್ ನಲ್ಲಿ ಪೋಸ್ಟ್ ಬರೆಯಲು ಆಗಿರಲಿಲ್ಲ.ಈ ವಿಚಾರವಾಗಿ ಕ್ಷಮೆ ಇರಲಿ .ರಾಜ್ಯದ ಪ್ರತಿಷ್ಟಿತ ಅರಣ್ಯವೊಂದರಲ್ಲಿ ನನ್ನ ಸ್ನೇಹಿತರೊಬ್ಬರು ತೆಗೆದ ಕೆಲವು 'ವನ್ಯ ಜೀವಿಗಳ' ಸುಂದರ ಚಿತ್ರಗಳೊಂದಿಗೆ ಮತ್ತೆ ಮರಳಿ ಬಂದಿದ್ದೇನೆ .ಘೋಷಣೆ-ಈ ಚಿತ್ರಗಳನ್ನು ತೆಗೆಯುವ ಸಮಯದಲ್ಲಿ ವನ್ಯ ಜೀವಿಗಳಿಗೆ ಯಾವುದೇ ರೀತಿಯ ತೊಂದರೆಯಾಗಿರುವುದಿಲ್ಲ.ವನ್ಯ ಜೀವಿಗಳಿಗೆ ತೊಂದರೆಯಾಗದಂತೆ ಈ ಚಿತ್ರಗಳನ್ನು ತೆಗೆಯಲಾಗಿದೆ .ಚಿತ್ರ ಕೃಪೆ-ದಾಮೋದರ್ -ಪ್ರಕೃತಿಯನ್ನು ರಕ್ಷಿಸಿ-