Posts

Image
''ಮಚಲಿ -ರಣತಂಬೂರ್ ನ ರಾಣಿ -Lady Of The Lake'' .ಮಚಲಿ- ರಣತಂಬೂರ್ ನ್ಯಾಷನಲ್ ಪಾರ್ಕ್ ನ ಹೆಮ್ಮೆಯ ಹೆಣ್ಣು ಹುಲಿ  .ರಣತಂಬೂರ್ ನ ಸುಂದರ ಪ್ರಕೃತಿಯಲ್ಲಿ ಇರುವ ಕೋಟೆಯ ಸುತ್ತ ಮುತ್ತಲಿನ ಪ್ರದೇಶವನ್ನು ತನ್ನ territory ಯನ್ನಾಗಿಸಿಕೊಂಡಿದ್ದ ಮಚಲಿ ಹುಟ್ಟಿದ್ದು 1997 ನೇ ಇಸವಿಯಲ್ಲಿ  .ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಬಾರಿ  ಕ್ಯಾಮರಾ ಕಣ್ಣುಗಳಲ್ಲಿ ಚಿತ್ರೀಕೃತಗೊಂಡ ಹುಲಿ ನಮ್ಮ ಮಚಲಿ  .ಮಚಲಿಯ ತಾಯಿಯ ಹೆಸರೂ ಕೂಡ  ಮಚಲಿ.ಆದರೆ ಕೆಲವು ಗೊಂದಲಗಳಿಂದ ತಾಯಿಯ ಹೆಸರನ್ನೇ ಇವಳಿಗೂ ಇಡಲಾಯಿತು .ಮೊದಲ ಬಾರಿಗೆ 'Tiger Queen' ಎಂಬ ಡಾಕ್ಯುಮೆಂಟರಿಯ ಮೂಲಖ ಇವಳನ್ನು ಜಗತ್ತಿಗೆ ಪರಿಚಯಿಸಿದ್ದು ನಲ್ಲ ಮುತ್ತು .ಮಚಲಿಯ ವಿಶೇಷತೆ ಅವಳ ಎಡ ಕೆನ್ನೆಯ ಮೇಲಿರುವ ವಿಶೇಷ  ಗುರುತು .ಮಚಲಿಯ territory ಸುಂದರ ಹಾಗು ಜೀವ ವೈವಿದ್ಯತೆಗಳಿಂದ ಕೂಡಿದ ಪ್ರದೇಶ.ಹಲವು ಸಸ್ಯಾಹಾರಿ ಪ್ರಾಣಿಗಳು,ಮೊಸಳೆಗಳು ಇವಳ territory ಯಲ್ಲಿದೆ  .ಇವಳ territory ಯಲ್ಲಿ ಮನುಷ್ಯರ ಪ್ರವೇಶವೂ ಹೆಚ್ಚು.ಪ್ರವಾಸಿಗರ ಜೊತೆಗೆ ಇವಳ territory ಯಲ್ಲಿರುವ ಗಣೇಶನ ದೇವಾಲಕ್ಕೆ ವರ್ಷದಲ್ಲಿ ಮೂರು ದಿನ 5,00,000 ಭಕ್ತಾದಿಗಳು ಆಗಮಿಸುತ್ತಾರೆ.ಆದರೆ ಇವುಗಳಿಂದ ಮಚಲಿ ವಿಚಲಿತವಾಗುವುದಿಲ್ಲ.ಅವಳಿಗೆ ಇದು ಅಭ್ಯಾಸವಾಗಿ ಬಿಟ್ಟಿದೆ  .ಮಚಲಿ ಹುಟ್ಟಿ ಬೆಳೆದು ದೊಡ್ಡವಳಾದ ನಂತರ ಅವಳ ಅಮ್ಮನನ್ನೇ ಸೋಲಿಸಿ ಅಮ್ಮನ territory ಯನ್ನು...
Image
-ಬಿಸಿಲ ದಗೆಗೆ ಬೇಯುತ್ತಿದೆ ಜೀವ ಸಂಕುಲ- .ಅಬ್ಬಾ....ಏನು ಸೆಖೆ ರೀ ಈ ವರ್ಷ...ಹಿಂದೆಂದೂ ನೋಡಿರಲಿಲ್ಲ ಇಂತಹ ಸೆಖೆ ಯನ್ನು.... ಇಂಥ ಮಾತುಗಳು ಈಗ ಸರ್ವೆ ಸಾಮಾನ್ಯವಾಗಿದೆ.ಇಡೀ ಜೀವ ಸಂಕುಲವೇ ಈ ಬಾರಿಯ ಬಿರು ಭೇಸಿಗೆಗೆ ತತ್ತರಿಸಿಹೋಗಿದೆ .ಭಾರತದ ಹಲವು ಪ್ರದೇಶಗಳಲ್ಲಿ ಭೇಸಿಗೆ ಈ ಬಾರಿ ತನ್ನ ರುದ್ರರೂಪವನ್ನು ತೋರಿಸಿದೆ.ಕರ್ನಾಟಕದಲ್ಲಂತೂ ಬರ ಪರಿಸ್ಥಿತಿ ತಲೆದೂರಿದೆ .ಸಾಧಾರಣವಾಗಿ ಉತ್ತರ ಕರ್ನಾಟಕದಲ್ಲಿ ಹಾಗು ಕರಾವಳಿ ಜಿಲ್ಲೆಗಳಲ್ಲಿ  ಯಾವಾಗಲು ಹೆಚ್ಚಿನ  ತಾಪಮಾನವಿರುತ್ತದೆ.ಆದರೆ ಈ ಬಾರಿ ಆ ತಾಪಮಾನವನ್ನೂ ಮೀರಿ ಉಷ್ಣಾಂಶ ದಾಖಲಾಗುತ್ತಿದೆ .ಇನ್ನು ಮಲೆನಾಡಿನಲ್ಲಿ ಮಿತಿ ಮೀರಿದ ಉಷ್ಣಾಂಶ ಇಲ್ಲಿನ ಜನರ ಬದುಕಿನ ಮೇಲೆ ನೇರ ಪರಿಣಾಮವನ್ನು ಬೀರಲಾರಂಭಿಸಿದೆ .ಇಂತಹ ಹೆಚ್ಚಿನ ಉಷ್ಣಾಂಶವನ್ನು ನಾನು ಕೂಡ ಈ ಹಿಂದೆ ನೋಡಿರಲಿಲ್ಲ.ಶುಭ್ರ ನೀಲಿ ಆಕಾಶದಲ್ಲಿ ಮಧ್ಯಾನ್ಹದ ನಂತರ ಮೋಡಗಳು ಕಾಣುತ್ತವೆಯಾದರೂ ಅವುಗಳ ಮಳೆಯಾಗಿ ಪರಿವರ್ತನೆಗೊಳುತ್ತಿಲ್ಲ .ಎಲ್ಲೊ ಒಂದೆರಡು ಕಡೆ ಮಳೆ ಬಂದರೂ ಕೂಡ ಮಳೆ ಬಂದು ಹೋದ ನಂತರದ ದಿನಗಳಲ್ಲಿ ತಾಪಮಾನ ಅತ್ಯಧಿಕವಾಗಿರುತ್ತದೆ  .ಮಲೆನಾಡಿನ ಜೀವ ನದಿ ತುಂಗೆಯಂತೂ ಬಳಲಿ ಬೆಂಡಾಗಿ ಹೋಗಿದ್ದಾಳೆ.ಹೆಚ್ಚಿನ ಕಡೆಯಲ್ಲಿ ಅವಳನ್ನು ನದಿ ಎಂದು ಕರೆಯಲು ಸಹ ಆಗದ ಸ್ಥಿತಿಯಲ್ಲಿದ್ದಾಳೆ .ಇನ್ನು ಉದ್ಯಾನನಗರಿ ಎಂದು ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆಯುತ್ತಿರುವ ಮರಗಳ ಮಾರಣ ಹೋಮದಿಂದ ಉಷ್ಣಾಂ...
Image
-ಮೋಡಗಳು- .ಬಿರು ಭೇಸಿಗೆಯ ಈ ಸಮಯದಲ್ಲಿ ಕೆಲವು ಕಡೆ ಮಳೆ ಸುರಿಯಲಾರಂಭಿಸಿದೆ .ಹಲವೆಡೆ ಈಗ ವಾತಾವರಣದಲ್ಲಿ  ಮಧ್ಯಾಹ್ನದವರೆಗೆ ಸುಡು ಬಿಸಿಲಿರುವ ಶುಭ್ರ  ಆಕಾಶ,ಆನಂತರ  ನಿಧಾನವಾಗಿ ಹಲವು ಬಗೆಯ ಮೋಡಗಳು ಕಾಣಲಾರಂಭಿಸುತ್ತವೆ.ವಿಚಿತ್ರ ವಿಚಿತ್ರ ಅಕಾರದ ಮೋಡಗಳು ಒಂದಾಗುವುದು,ದೂರವಾಗುವುದು,ಬಿಳಿಯ ಮೋಡಗಳು ಕಪ್ಪು ಬಣ್ಣಕ್ಕೆ ತಿರುಗುವುದು ಇಂತಹ ಹಲವಾರು ಪ್ರಕ್ರಿಯೆಗಳು ನಡೆಯುತ್ತಿರುತ್ತದೆ  .ನಾನು ಹಲವಾರು ಬಾರಿ ಈ ಮೋಡಗಳ ಆಟವನ್ನು ನೋಡಿ enjoy ಮಾಡುತ್ತಿದ್ದೆ.ಈ ಮೋಡಗಳು ಹುಟ್ಟುವುದು ಅವುಗಳಿಂದ ಮಳೆ ಸುರಿಯುವುದು,ಗುಡುಗು,ಮಿಂಚು ಇವುಗಳ ಬಗ್ಗೆ ತಿಳಿಯಬೇಕೆಂದು ಮನವು ಹಂಬಲಿಸುತ್ತಿತ್ತು .ಹೀಗೆ ಒಂದು ದಿನ ಮೋಡಗಳ ಬಗ್ಗೆ ವಿವರವಿರುವ ಒಂದು ಡಾಕ್ಯುಮೆಂಟರಿ ನೋಡಿದೆ.ಅದರಲ್ಲಿ ಮೋಡದ ಹಲವು ಬಗೆಗಳು ಹಾಗು ಮಿಂಚು ಗುಡುಗುಗಳ ಹುಟ್ಟುವಿಕೆಯ ಬಗ್ಗೆ ವಿವರಗಳಿದ್ದವು .ಇನ್ನೇನು ಎರಡು ತಿಂಗಳಲ್ಲಿ ರಾಜ್ಯಕ್ಕೆ ಮಾನ್ಸೂನ್ ಆಗಮನವಾಗುತ್ತದೆ.ಆಗ ಮೋಡಗಳ ಬಗ್ಗೆ ತಿಳಿಯುವವರಿಗೆ  ಒಳ್ಳೆಯ ಕಾಲ.ಆದ್ದರಿಂದಲೇ ನನಗೆ ತಿಳಿದ ಮೋಡಗಳ ವಿವರಗಳನ್ನು ಇಲ್ಲಿ ಪೋಸ್ಟ್ ಮಾಡಿದ್ದೇನೆ .ಮೋಡಗಳಲ್ಲಿ ಹಲವಾರು ಬಗೆಗಳಿವೆ.ನಾನು ಇಲ್ಲಿ ಹೇಳಹೊರಟಿರುವುದು ಮುಖ್ಯವಾದ 5 ಬಗೆಯ ಮೋಡಗಳನ್ನು .ಈ 5 ಬಗೆಯ ಮೋಡಗಳು 1) CUMULUS .ಈ ಬಗೆಯ ಮೋಡಗಳನ್ನು ಬಿಸಿಲಿನ ದಿನಗಳಲ್ಲಿ ನೋಡಬಹುದು.ಭೂಮಿಯಿಂದ ಸುಮಾರು 2000 ದಿಂದ 3000 ಅಡಿ ಎತ್ತರದಲ್ಲಿ CUM...

-TIGER DYNASTY..... ಸರಿಸ್ಕಾದಲ್ಲಿ ಮತ್ತೆ ಘರ್ಜಿಸುವುದೇ ಹುಲಿ ಸಂತತಿ....??!!-

Image
.2005 ನೇ ಇಸವಿ.. ರಾಜಸ್ತಾನದ ಸರಿಸ್ಕಾ  ನ್ಯಾಷನಲ್ ಪಾರ್ಕ ನಲ್ಲಿ ಹುಲಿಗಳ ಸುಳಿವಿಲ್ಲ..ಹಿಂದಿನ ವರ್ಷ ಸುಮಾರು  15 ರಷ್ಟಿದ್ದ ಹುಲಿಗಳು ಈಗ ಒಂದೂ ಇಲ್ಲ... ಸರಿಸ್ಕಾ ಈಗ  ಹುಲಿಗಳ್ಳಿಲ್ಲದ ಕಾಡು.. .ಕಳ್ಳ ಭೇಟೆ,ಅಪಘಾತ ಇಲ್ಲಿನ ಎಲ್ಲಾ ಹುಲಿಗಳನ್ನು ಬಲಿ ತೆಗೆದುಕೊಂಡಿತ್ತು   .ತಕ್ಷಣ ಕಾರ್ಯಪ್ರವೃತರಾದ ಅರಣ್ಯ ಸಿಬ್ಬಂದಿ ಹಾಗು ವಿಜ್ಞಾನಿಗಳು ಸರಿಸ್ಕಾ ದಲ್ಲಿ ಮತ್ತೆ ಹುಲಿಗಳ ಘರ್ಜನೆ ಕೇಳಿಸಲು ಟೊಂಕ ಕಟ್ಟಿ ನಿಂತರು  .ಸರಿಸ್ಕಾ ರಾಷ್ಟ್ರೀಯ ಉದ್ಯಾನವನ ಒಂದು ಸುಂದರವಾದ ಪ್ರದೇಶ.ಇದು ರಾಷ್ಟ್ರೀಯ ಉದ್ಯಾನವನ ಆಗಿದ್ದರೂ ಕೂಡ ಸುಮಾರು 50000 ಜನರು ಇನ್ನೂ ಇಲ್ಲಿ ವಾಸಿಸುತ್ತಿದ್ದಾರೆ.ಸರ್ಕಾರ ಅವರಿಗೆ ಪಾರ್ಕಿನ ಹೊರಗಡೆ ಬದುಕು ಕಟ್ಟಿಕೊಡಲು ಮುಂದಾದಾಗ ಹಲವರು ಒಪ್ಪಲಿಲ್ಲ..ಕೆಲವರು ಒಪ್ಪಿ ಹೊರ ಹೋಗಿದ್ದಾರೆ .ಈಗ ನಮ್ಮ ಅರಣ್ಯ ಇಲಾಖೆ ಹಾಗು ಹುಲಿ ರಕ್ಷಣೆಗೆ ಸಂಭದಿಸಿದ ಇಲಾಖೆಗಳು ಸರಿಸ್ಕಾದಲ್ಲಿ ಮತ್ತೆ ಹುಲಿ ಸಂತತಿಯನ್ನು ಬೆಳೆಸಲು ನಿರ್ಧರಿಸಿ ಇಲ್ಲಿಂದ 140 ಕಿಲೋಮೀಟರ್ ದೂರದ ರಣತಂಬೂರ್ ನ್ಯಾಷನಲ್ ಪಾರ್ಕನಿಂದ ಹುಲಿಗಳನ್ನು ಸರಿಸ್ಕಾ ಗೆ ತಂದು ಬಿಡಲು ನಿರ್ಧರಿಸಿ ಅದರ ಪ್ರಕಾರ ಕಾರ್ಯಪ್ರವೃತರಾಗಿದ್ದಾರೆ  .ಈ ಎಲ್ಲಾ ಪ್ರಯತ್ನಗಳ ಫಲವಾಗಿ 2010 ರಲ್ಲಿ ಸರಿಸ್ಕಾಗೆ  ಒಟ್ಟು ಎರಡು ಗಂಡು ಹುಲಿಗಳು ಹಾಗು 3 ಹೆಣ್ಣು ಹುಲಿಗಳನ್ನು ತಂದು ಬಿಡಲಾಯಿತು .ಹೀಗೆ ತಂದು ಬಿಟ್ಟ ಹುಲಿಗಳಲ್ಲಿ ನಾನು ಇಂದು...
Image
-Your Attention Please........ಇದು 'ದೀಪ ಆರಿಸುವ ಸಮಯ'- .ಇದೇನಿದು ವಿಚಿತ್ರ ಟೈಟಲ್ ಎಂದುಕೊಂಡಿರಾ?? ಹೌದು ಪ್ರತೀ ವರ್ಷದಂತೆ ಈ ವರ್ಷವೂ 'EARTH HOUR' ಕಾರ್ಯಕ್ರಮವು ಇದೇ ಮಾರ್ಚ್ 31 ರಂದು ಮರುಕಳಿಸಲಿದೆ  .ಇದರ ಬಗ್ಗೆ ನಿಮಗೆ ಗೊತ್ತಿರಬಹುದು,ಆದರೂ ಮತ್ತೊಮ್ಮೆ ಹೇಳುತ್ತೇನೆ ಕೇಳಿ... .2007 ರಿಂದ ಆರಂಭವಾದ ಈ ಒಂದು ಪರಿಸರ ಸ್ನೇಹಿ ಕಾರ್ಯಕ್ರಮದಲ್ಲಿ ಹಲವಾರು ದೇಶಗಳು,ಸಂಘ ಸಂಸ್ಥೆ ಗಳು ಕೈ ಜೋಡಿಸುತ್ತವೆ. ಪ್ರತೀ ವರ್ಷದ ಮಾರ್ಚ್ 31  ರಂದು ರಾತ್ರಿ 8.30 ರಿಂದ 9.30 ರವರೆಗೆ ವಿದ್ಯುತ್ ದೀಪಗಳನ್ನು ಆರಿಸುವ ಮೂಲಕ ಈ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ .ಭೂಮಿಯ ವಾತಾವರಣದ ಮೇಲೆ ಆಗುತ್ತಿರುವ ಬದಲಾವಣೆಯ ವಿರುದ್ದ ಕೈ ಜೋಡಿಸಲು ಇಡೀ ವಿಶ್ವದ ಜನರು ಈ ಕಾರ್ಯಕ್ರಮದ ಮೂಲಕ ಪಣ ತೊಡುತ್ತಾರೆ.ಹಿಂದಿನ ವರ್ಷ ಸುಮಾರು 5,1200 ನಗರಗಳು ಹಾಗು 135 ದೇಶಗಳು ಈ EARTH HOUR ನಲ್ಲಿ ಪಾಲ್ಗೊಂಡು ಒಂದು ಗಂಟೆಗಳ ಕಾಲ ಕತ್ತಲಲ್ಲಿ ಕಾಲ ಕಳೆದಿದ್ದವು  .ಈ ಬಾರಿ ಇದನ್ನು ಇನ್ನೂ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮದ ಸಂಘಟಕರು ಪ್ರಯತ್ನ ಪಡುತ್ತಿದ್ದಾರೆ  .ಬನ್ನಿ...ಈ ಒಂದು ಪರಿಸರ ಸ್ನೇಹಿ ಕಾರ್ಯದಲ್ಲಿ ನಿಮ್ಮ ಕೈ ಜೋಡಿಸಿ .ನೀವು ಮಾಡಬೇಕಾಗಿರುವುದು ಇಷ್ಟೆ... ಮಾರ್ಚ್ 31 ರಂದು ರಾತ್ರಿ 8.30 ರಿಂದ 9.30 ರವರೆಗೆ ನಿಮ್ಮ ಮನೆಯ ವಿದ್ಯುತ್ ದೀಪಗಳನ್ನು ಆರಿಸಿ.... ನಿಮ್ಮ ಪರಿಚಯಸ್ಥರಿಗೂ ತಿಳಿಸಿ  -...
Image
-ಸಾಮ್ರಾಟ್ ಸಚಿನ್-   ಉಪ್ಪಿಗಿಂತ ರುಚಿ ಬೇರೆ ಇಲ್ಲ..... ನಿನಗ್ಯಾರೂ ಸರಿ ಸಾಟಿ ಇಲ್ಲ.... ನೀನು ಹುಟ್ಟಿದ ಮೇಲೇನೆ ಹೊಸ ದಾಖಲೆಗಳು ಹುಟ್ಟಿದವು.... ನೀನು ಕಣ್ಬಿಟ್ಟ ಮೇಲೇನೇ ಕ್ರಿಕೆಟ್ ಲೋಕವೇ ಕಂಗೊಳಿಸಿದ್ದು..... ನೀನು ಇಲ್ಲದೇ ಕ್ರಿಕೆಟ್ ಇಲ್ಲ....ನಿನಿದ್ರೆ ಎಲ್ಲಾ.... ನೀನು ಬ್ಯಾಟ್ ಹಿಡದ ಮೇಲೇನೆ 'ರನ್' ಪ್ರವಾಹ ಹರಿದಿದ್ದು ನೀನು ಬೆಳೆದ ಮೇಲೇನೆ ಕ್ರಿಕೆಟ್ ಗೊಬ್ಬ 'ದೇವರು' ಹುಟ್ಟಿದ್ದು ನೀನು ಇಲ್ಲದೇ ಏನಿಲ್ಲ...ನೀನಿದ್ರೆ ಎಲ್ಲಾ...... ......ಓ ಕ್ರಿಕೆಟ್ ಲೋಕದ ಸಾಮ್ರಾಟನೇ......ನಿನ್ನ ಸಾಧನೆ ಅಮೋಘ...... ...ಎಂದೆಂದೂ ಮಿನುಗುತ್ತಿರು....ಕ್ರಿಕೆಟ್ ಲೋಕವನ್ನು ಬೆಳೆಗುತ್ತಿರು...'ಓ ನಮ್ಮ ಪ್ರೀತಿಯ ಮಿನುಗು ತಾರೆಯೇ'.....
Image
-ಆಗಸದಲ್ಲೊಂದು ಅಪರೂಪ- .ಎಂಟು ವರ್ಷಗಳ ನಂತರ ಆಗಸದಲ್ಲೊಂದು ಅಪರೂಪದ ಘಟನೆ ಜರುಗುತ್ತಿದೆ .ಅದೇನೆಂದು ಕೇಳಿದಿರಾ?..ನೀವು ಈಗಾಗಲೇ ಗಮನಿಸಿರಬಹುದು.5 ಹೊಳೆಯುವ ಗ್ರಹಗಳು ಆಗಸದಲ್ಲಿ  ಕಾಣುತ್ತಿರುವುದು .ಅಪರೂಪಕ್ಕೆ ಜರುಗುವ ಈ ಘಟನೆಯನ್ನು ನೋಡುವ ಭಾಗ್ಯ ಈಗ ನಮ್ಮದಾಗಿದೆ .ಫೆಬ್ರವರಿ 28 ರಿಂದ ಮಾರ್ಚ್ 7 ರವರೆಗೆ ಈ ವಿಸ್ಮಯವನ್ನು ನೀವು ಆಗಸದಲ್ಲಿ ಕಾಣಬಹುದಾಗಿದೆ.ಈ ವಿಸ್ಮಯವನ್ನು ನೋಡಲು ಯಾವುದೇ ವಿಶೇಷ ಸಾಧನದ ಅವಶ್ಯಕತೆ ಇಲ್ಲ .ಸೂರ್ಯಾಸ್ತದ ಒಂದು ಗಂಟೆಯ ನಂತರ ಬುಧ,ಶುಕ್ರ,ಗುರು ಗ್ರಹಗಳನ್ನು ಕಾಣಬಹುದಾಗಿದೆ.ಬುಧ ಗ್ರಹವನ್ನು ನೋಡುವುದು ಸ್ವಲ್ಪ ಕಷ್ಟ.ಆದರೆ ಹೊಳೆಯುವ ಶುಕ್ರ ಹಾಗು ಗುರು ಗ್ರಹಗಳನ್ನು ಸುಲಭವಾಗಿ ಗುರುತಿಸಬಹುದು.ಅತ್ಯಂತ ಹೊಳೆಯುವ ಗ್ರಹವೇ ಶುಕ್ರ.ಶುಕ್ರನಂತೆಯೇ ಇರುವ ಆದರೆ ಶುಕ್ರನಷ್ಟು ಪ್ರಕಾಶಿಸದ ಗ್ರಹವೇ ಗುರು..ಇವೆರಡು ಗ್ರಹಗಳನ್ನು ರಾತ್ರಿ 9 ಗಂಟೆಯ ವರೆಗೂ ನೋಡಬಹುದು .ಸುಮಾರು 9 ಗಂಟೆಯ ನಂತರ ಮಂಗಳ ಗ್ರಹವನ್ನು ಸ್ಪಷ್ಟವಾಗಿ ಗುರುತಿಸಬಹುದು.ಆಗಸದ ಪೂರ್ವದಲ್ಲಿ ಕೆಂಪಾಗಿ ಕಾಣುವ ಮಂಗಳ ಗ್ರಹ ಮಧ್ಯ ರಾತ್ರಿಯವರೆಗೂ ಗೋಚರಿಸುತ್ತಿರುತ್ತದೆ.ಸರಿ ಸುಮಾರು ಮಧ್ಯ ರಾತ್ರಿಯ ಹೊತ್ತಿಗೆ ಪೂರ್ವದಲ್ಲಿ ನಕ್ಷತ್ರದಂತೆ ಹೊಳೆಯುವ ಹಳದಿ ಗ್ರಹವೊಂದು ಗೋಚರಿಸುತ್ತದೆ ಇದೇ ಶನಿ ಗ್ರಹ .ಹೀಗೆ 5 ಗ್ರಹಗಳನ್ನು ಈ ಸಂದರ್ಭದಲ್ಲಿ ನೋಡಿ ಕಣ್ಣು ತುಂಬಿಕೊಳ್ಳಬಹುದು .ಬಹಳ ಅಪರೂಪಕ್ಕೆ ನಡೆಯುವ ಈ ಸುಂದರ ವಿಸ್ಮಯವನ್ನು Miss ಮಾಡಿ...