Posts

ನೋಕಿಯಾದಿಂದ 108MP ಕ್ಯಾಮರಾ ಫೋನ್

Image
ನೋಕಿಯಾದ ಬ್ರಾಂಡ್ ಪರವಾನಗಿದಾರರಾದ ಎಚ್‌ಎಂಡಿ ಗ್ಲೋಬಲ್ 2020 ರ ತ್ರೈ ಮಾಸಿಕದಲ್ಲಿ ಪ್ರಮುಖ ನೋಕಿಯಾ 9.3 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಕೆಲಸ ಮಾಡುತ್ತಿದೆ  ಇತ್ತೀಚಿನ ಅಪ್‌ಡೇಟ್‌ನಲ್ಲಿ, ನೋಕಿಯಾ ಪವರ್ ಯೂಸರ್ ವರದಿಯ ಪ್ರಕಾರ ಫೋನ್‌ನಲ್ಲಿ 108 ಎಂಪಿ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 64 ಎಂಪಿ ಪ್ರಾಥಮಿಕ ಸೆನ್ಸಾರ್ ಒಳಗೊಂಡಿರುವ ಪೆಂಟಾ-ಲೆನ್ಸ್ ಹಿಂಬದಿ ಕ್ಯಾಮೆರಾ ಸೆಟಪ್ ಅನ್ನು ಈ ಫೋನ್ ಹೊಂದಿದೆ ಎಂದು ಹೇಳಲಾಗಿದೆ  ಅಲ್ಲದೆ, ಫೋನ್ ಕ್ಯೂಎಚ್‌ಡಿ + ಡಿಸ್ಪ್ಲೇ ಮತ್ತು ಫ್ಲ್ಯಾಗ್‌ಶಿಪ್-ಗ್ರೇಡ್ ಇಂಟರ್ನಲ್‌ಗಳನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ

ದೇಶದಲ್ಲಿ ಎಷ್ಟು COVID-19 ಪರೀಕ್ಷೆ ನಡೆದಿದೆ? ICMR ವರದಿ

Image
ಏಪ್ರಿಲ್ 13 ರಂದು ICMR 9pm ಗಂಟೆಯ ಬುಲೆಟಿನ್ ಪ್ರಕಾರ ದೇಶದಲ್ಲಿ 2,02,551 ವ್ಯಕ್ತಿಗಳಿಂದ ಒಟ್ಟು 2,17,554 ಮಾದರಿಗಳನ್ನು ಪರೀಕ್ಷಿಸಲಾಗಿದೆ ಮತ್ತು ಭಾರತದಲ್ಲಿ 9,341 ವ್ಯಕ್ತಿಗಳು COVID-19 ಸಕಾರಾತ್ಮಕವೆಂದು ಪಡಿಸಲಾಗಿದೆ. ಏಪ್ರಿಲ್ 14 ರಂದು ಬೆಳಿಗ್ಗೆ 10 ರ ಹೊತ್ತಿಗೆ ರಾಜ್ಯವಾರು ಸಂಖ್ಯೆಗಳು ಇಲ್ಲಿವೆ ಆಂಧ್ರಪ್ರದೇಶ 8,755 ಮಾದರಿಗಳನ್ನು ಪರೀಕ್ಷಿಸಿದೆ.  ರಾಜ್ಯದಲ್ಲಿ 439 ಸಕಾರಾತ್ಮಕ ಪ್ರಕರಣಗಳು, 7 ಸಾವುಗಳು ಮತ್ತು 12 ಜನರು ಚೇತರಿಸಿಕೊಂಡಿದ್ದಾರೆ ಕೇರಳ ಇದುವರೆಗೆ 15,683 ಮಾದರಿಗಳನ್ನು ಪರೀಕ್ಷಿಸಿದ್ದು, 378 ಸಕಾರಾತ್ಮಕ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ 3 ಸಾವುಗಳು ದಾಖಲಾಗಿದ್ದರೆ, 198 ಜನರು ಚೇತರಿಸಿಕೊಂಡಿದ್ದಾರೆ. ಕರ್ನಾಟಕವು 11,472 ಮಾದರಿಗಳನ್ನು ಸಂಗ್ರಹಿಸಿದ್ದು, 247 ಸಕಾರಾತ್ಮಕ ಪ್ರಕರಣಗಳು ದಾಖಲಾಗಿವೆ.ರಾಜ್ಯದಲ್ಲಿ 8 ಸಾವುಗಳು ದಾಖಲಾಗಿದ್ದರೆ, 59 ಜನರು ಚೇತರಿಸಿಕೊಂಡಿದ್ದಾರೆ. ಮಹಾರಾಷ್ಟ್ರವು 43,199 ಮಾದರಿಗಳನ್ನು ಪರೀಕ್ಷಿಸಿದ್ದು, 2,334 ಪರೀಕ್ಷೆಗಳು ಸಕಾರಾತ್ಮಕವಾಗಿವೆ.  ರಾಜ್ಯದಲ್ಲಿ 160 COVID-19 ಸಾವುಗಳು ದಾಖಲಾಗಿದ್ದರೆ, 229 ಜನರು ಚೇತರಿಸಿಕೊಂಡಿದ್ದಾರೆ.

ನಾಳೆ ಪ್ರಧಾನಿಯವರ ಮಾತು

Image
ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಬೆಳಿಗ್ಗೆ 10 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಿಯವರ ಕಚೇರಿ ತಿಳಿಸಿದೆ.  ಕರೋನವೈರಸ್ ಹರಡುವುದನ್ನು ತಡೆಯುವ 21 ದಿನಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್ ನಾಳೆ, ಏಪ್ರಿಲ್ 14 ಕ್ಕೆ ಕೊನೆಗೊಳ್ಳುತ್ತದೆ ಮತ್ತು ಪ್ರಧಾನಮಂತ್ರಿ ಅದರ ಸಂಭವನೀಯ ವಿಸ್ತರಣೆಯ ಬಗ್ಗೆ ಮಾತನಾಡುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ. "ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 14, 2020 ರಂದು ಬೆಳಿಗ್ಗೆ 10 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ”ಎಂದು ಪಿಎಂಒ ಇಂಡಿಯಾ ಟ್ವೀಟ್ ಮಾಡಿದೆ ಮುಂದಿನ ಲಾಕ್ ಡೌನ್ ಕ್ರಮಗಳು ಏನು? ಜನರಿಗೆ ನಾಳೆ ಯಾವ ಸಂದೇಶ ನೀಡಲಿದ್ದಾರೆ ಎನ್ನುವ ಕುತೂಹಲ ಇದೀಗ ಎಲ್ಲರಲ್ಲಿ ಮೂಡಿದೆ

ಪ್ಲೇ ಸ್ಟೋರ್ ನಲ್ಲಿ ಟಿಕ್ ಟಾಕ್ ನ ಮೈಲಿಗಲ್ಲು

Image
ಟಿಕ್ ಟಾಕ್ ಇದೀಗ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. 2020 ರ ಫೆಬ್ರವರಿಯಲ್ಲಿ ಟಿಕ್‌ಟಾಕ್ ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ 1 ಬಿಲಿಯನ್ ಡೌನ್‌ಲೋಡ್‌ಗಳನ್ನು ದಾಟಿತ್ತು.  ಕಿರು ವೀಡಿಯೊ ಅಪ್ಲಿಕೇಶನ್ ಈಗ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮಾತ್ರ 1 ಬಿಲಿಯನ್ ಸ್ಥಾಪನೆಗಳನ್ನು ಕಂಡಿದೆ.  ಲಾಕ್‌ಡೌನ್‌ನಿಂದಾಗಿ ಟಿಕ್‌ಟಾಕ್ ಪ್ರಸಿದ್ಧಗೊಳ್ಳುತ್ತಿದೆ, ಮತ್ತು ಇದು ಅಪ್ಲಿಕೇಶನ್‌ಗ ನ ಪ್ರಮುಖ ಮೈಲಿಗಲ್ಲುಗಳಿಗೆ ಕಾರಣವಾಗುತ್ತಿದೆ  ಪ್ಲೇ ಸ್ಟೋರ್‌ನಲ್ಲಿ 1 ಬಿಲಿಯನ್ ಇನ್‌ಸ್ಟಾಲ್‌ಗಳನ್ನು ದಾಟಿದ ಟಿಕ್‌ಟಾಕ್ ಅನ್ನು ಮೊದಲು ಆಂಡ್ರಾಯ್ಡ್ ಪೊಲೀಸ್ ಗುರುತಿಸಿದೆ.  ಆಪ್ ಸ್ಟೋರ್‌ನಲ್ಲಿನ ಡೌನ್ ಲೋಡ್ ಸಂಖ್ಯೆಯನ್ನು ಆಪಲ್ ಬಹಿರಂಗಪಡಿಸುವುದಿಲ್ಲ, ಆದರೆ ಟಿಕ್‌ಟಾಕ್ ಪ್ರಸ್ತುತ ಮನರಂಜನಾ ಅಪ್ಲಿಕೇಶನ್‌ಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ.  ಟಿಕ್‌ಟಾಕ್ ವಾಟ್ಸಾಪ್ ಮತ್ತು ಫೇಸ್‌ಬುಕ್‌ಗಳನ್ನು ಸೋಲಿಸಿ ಜಾಗತಿಕವಾಗಿ ಹೆಚ್ಚು ಡೌನ್‌ಲೋಡ್ ಮಾಡಲಾದ ಗೇಮ್-ಅಲ್ಲದ ಅಪ್ಲಿಕೇಶನ್ ಆಗಿ ಮಾರ್ಪಟ್ಟಿದೆ.  ಕಳೆದ ತಿಂಗಳು, ಇದು 115.2 ಮಿಲಿಯನ್ ಡೌನ್ ಲೋಡ್ ನೊಂದಿಗೆ ತನ್ನ ಪ್ರಚಂಡ ಯಾತ್ರೆಯನ್ನು ಮುಂದುವರಿಸಿದೆ ಎಂದು ಸೆನ್ಸರ್ ಟವರ್ ವರದಿ ಮಾಡಿದೆ.

"ಕೊರಲ್ ಬ್ಲೀಚಿಂಗ್"

Image
ಹೀಗೆ ಅಂತರ್ಜಾಲದಲ್ಲಿ ಸುತ್ತುವಾಗ ನಾನು ನೋಡಿದ ಒಂದು ಚಿತ್ರ ಮನಸ್ಸಿಗೆ ಬಹಳ ಬೇಸರವನ್ನು ತಂದೊಡ್ಡಿತು.ಈ ಬಗ್ಗೆ ಒಂದಷ್ಟು ಬರೆಯಬೇಕೆನ್ನಿಸಿ ಬರೆದಿದ್ದೇನೆ ಮೇಲೆ ಇರುವ ಚಿತ್ರ 2017 ರಲ್ಲಿ ನಡೆದ (ಈಗಲೂ ನಡೆಯುತ್ತಿರುವ )ಕೊರಲ್ ಬ್ಲೀಚಿಂಗ್ ಎಂಬ ಕೊರಲ್ ಗಳ ದಾರುಣ ಕತೆಯ ಬಗ್ಗೆ ನೀವೆಲ್ಲಾ ಎನ್ ಜಿ ಸಿ ಅನಿಮಲ್ ಪ್ಲಾನೆಟ್ ಚಾನೆಲ್ ಗಳಲ್ಲಿ ಸಮುದ್ರಗಳಲ್ಲಿ ಇರುವ ಅತ್ಯಂತ ಬಣ್ಣ ಬಣ್ಣಗಳಿಂದ ಕುಡಿದ ಹವಳದ ಬಂಡೆಗಳನ್ನು ನೋಡಿರಬಹುದು.ಇವುಗಳೇ ಕೊರಲ್ ರೀಫ್. ಈ ಕೊರಲ್ ರೀಫ್ ಇರುವಲ್ಲಿ ಸಾವಿರಾರು ಜಾತಿಯ ಕಣ್ಮನ ತಣಿಸುವ ಜೀವಿಗಳು ವಾಸಿಸುತ್ತವೆ. ಏನಿದು ಕೊರಲ್ ರೀಫ್ ?? ಸಮುದ್ರಗಳಲ್ಲಿ ವಾಸಿಸುವ ಜೀವಿ. ಪ್ರತೀ ಕೊರಲ್ ಕೂಡ ಹಲವಾರು ಪಾಲಿಪ್ ಎಂದು ಕರೆಯಲ್ಪಡುವ ಜೀವಿಗಳಿಂದ ಮಾಡಲ್ಪಟ್ಟದ್ದಾಗಿರುತ್ತದೆ. ಈ ಪಾಲಿಪ್ ಗಳು calcium carbonate ಸ್ರವಿಸಿ ರಕ್ಷಣೆಗೆ ಶೆಲ್ ಗಳನ್ನು ನಿರ್ಮಿಸಿ ದಿಬ್ಬಗಳ ಆಕಾರ ನೀಡಿರುತ್ತದೆ ( ಕೊರಲ್ ಗಳಲ್ಲಿ ಮತ್ತೆ ಹಲವು ಬಗೆಗಳಿವೆ) ಈ ಕೊರಲ್ ಗಳಲ್ಲಿ ವಾಸಿಸುವ zooxanthellae ಎಂಬ ಆಲ್ಗೆಯಿಂದ ಕೂಡಾ ಇವು ಆಹಾರವನ್ನು ಪಡೆಯುತ್ತವೆ.ಸಮುದ್ರದ ಭಾಗದ ಕೇವಲ 1 ಪ್ರತಿಶತ ಇದ್ದರೂ ಕೂಡಾ ಇಡೀ ಸಾಗರ ಪರಿಸರ ವ್ಯವಸ್ಥೆಯ 25 ಪ್ರತಿಶತ ಜೀವಿಗಳು ಈ ಕೊರಲ್ ರೀಫ್ ಗಳಲ್ಲಿ ಕಂಡುಬರುತ್ತದೆ. ಇದಕ್ಕಾಗಿಯೇ ಇವುಗಳನ್ನು ಸಾಗರದ ಮಳೆಕಾಡು ಎನ್ನಬಹುದು     ಏನಿದು ಬ್ಲೀಚಿಂಗ್ ...

ಅಬ್ಬಬ್ಬಾ ಇದೆಂತಹಾ ಸೆಖೆ....

ಅಬ್ಬಬ್ಬಾ ಇದೆಂತಾ ಸೆಖೆ..ಹಿಂದೆಂದಿಗಿಂತಲೂ ಸಹಿಸಲಸಾಧ್ಯವಾದ ಸೆಖೆ..ಎಂತಾ ಬಿಸಿಲು..ಒಂದು ಮಳೆಯಾದರೂ ಬರಬಾರದೇ...! ಹೀಗೆ ಮಾತನಾಡುತ್ತಾ ಇದೇ ಸಮಯದಲ್ಲಿ ಕರೆಂಟ್ ತೆಗುವುವವರಿಗೆ ಒಂದಷ್ಟು ಹಿಡಿ ಶಾಪ ಹಾಕುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ .ಇಂತಹ ಮಾತುಗಳನ್ನು ಕೇಳಿದಾಗ ನನಗನ್ನಿಸುವುದು ಜನಗಳು ಸಮ್ಮನೆ ಸೆಖೆ ,ಮಳೆ ಎನ್ನುತ್ತಾರೆಯೇ ವಿನಃ ಇಂತಹ ಹವಾಮಾನ ವೈಪರೀತ್ಯದ ಮೂಲಗಳ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲವಲ್ಲವೆಂದು  .ಹೌದು ಬೇಸಿಗೆ ಬಂತೆಂದರೆ ಇಂತಹ ಮಾತುಗಳನ್ನು ನಾವು ಕೇಳುವುದು ಸಹಜವೇ..ಅದರಲ್ಲಿ ವಿಶೇಷವೇನು ಇಲ್ಲ ಬಿಡಿ ಅನ್ನುತ್ತಿರಾ... ಇದೆ ಖಂಡಿತವಾಗಿಯೂ ವಿಶೇಷವಿದೆ .ಇತ್ತೀಚಿನ ವರ್ಷಗಳ ಬೇಸಿಗೆಗಳು ಹಿಂದೆಂದಿಗಿಂತಲೂ ಹೆಚ್ಚು ಉಷ್ಣತೆಯನ್ನು ಹೊಂದುತ್ತಿರುವುದಲ್ಲದೇ ಸಹಿಸಲು ಅಸಾಧ್ಯವಾದ ಪರಿಸ್ಥಿತಿಯನ್ನು ತಂದಿರುವುದರಲ್ಲಿ ಸಂಶಯವಿಲ್ಲ .ನೀವೀ ಲೇಖನವನ್ನು ಆಫೀಸ್ ನ ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತು ಓದುತ್ತಿರುವುದಾದರೆ ನಾನು ಹೇಳಿದ ಮಾತು 'ಹೌದಾ' ಎಂದೆನಿಸಬಹುದು .ಆದರೆ ಸ್ವಲ್ಪ ಹೊರ ಬಂದು ಬಿಸಿಲಿಗೆ ಮೈ ಒಡ್ಡಿ ನಿಂತುಕೊಳ್ಳಿ...ನಾನು ಹೇಳುತ್ತಿರುವ ಉರಿ ಭೇಸಿಗೆಯ ಅನುಭವ ಕೆಲವೇ ನಿಮಿಷಗಳಲ್ಲಿ ನಿಮಗೆ ಉಂಟಾಗುತ್ತದೆ .ನಮ್ಮ ಶಿವಮೊಗ್ಗದಲ್ಲೇ ಒಂದು ವಾರದ ಹಿಂದೆ ದಾಖಲಾದ 40 ಡಿಗ್ರೀ ಉಷ್ಣಾಂಶ ಇಲ್ಲಿಯವರನ್ನು ಒಮ್ಮೆ ತಬ್ಬಿಬ್ಬು ಮಾಡಿದ್ದು ಸುಳ್ಳಲ್ಲ .ನೀವು ಮಲೆನಾಡಿ...

ಫ್ಲೈಯಿಂಗ್ ಸ್ನೇಕ್

Image
.ಪ್ರಿಯ ಓದುಗ ಮಿತ್ರರೇ ಹಲವು ತಿಂಗಳುಗಳ ಬಳಿಕ i am back with ಫ್ಲೈಯಿಂಗ್ ಸ್ನೇಕ್ .ಈ ಹಾವನ್ನು ನೀವು ಸಾಧಾರಣವಾಗಿ ನೋಡಿರುತ್ತಿರಾ. ಹಳ್ಳಿ,ಕೆಲವೊಮ್ಮೆ ನಗರ ಪ್ರದೇಶಗಳಲ್ಲೂ ಇದು ಕಂಡುಬರುತ್ತದೆ.ಮರದ ಮೇಲೆ ವಾಸ ಮಾಡುವ ಈ ಹಾವು ಕೀಟ ಮತ್ತು ಕಪ್ಪೆಗಳನ್ನು ತಿಂದು ಬದುಕುತ್ತವೆ  .ಮಲೆನಾಡಿನ ಭಾಗದ ಜನರು ಈ ಹಾವನ್ನು ಹಾರುಂಬೆ ಹಾವು ಎಂದು ಕರೆಯುತ್ತಾರೆ.ಇದರ ಬಗೆಯ ಕತೆಗಳು ನಂಬಿಕೆಗಳು ತೀರಾ ಉತ್ಪ್ರೇಕ್ಷೆ ಎನ್ನಿಸುವಷ್ಟರ ಮಟ್ಟಿಗೆ ಇದೆ .ಈ ಹಾವು ಸಾಧಾರಣವಾಗಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಕೆಲವೊಮ್ಮೆ ಗಾಳಿಯಲ್ಲಿ ಹಾರುವುದರಿಂದ  (Gliding)  ಇದರ ಬಗ್ಗೆ ವಿಶೇಷ ಕತೆಗಳು ಸೃಷ್ಟಿಯಾಗಿವೆ.ಈ ಹಾವಿನ ವಿಷ ಅದು ಕೇವಲ ತನ್ನ ಬಲಿಪ್ರಾಣಿಗಳ ಮೇಲೆ ಪರಿಣಾಮ ಬೀರುತ್ತದೆಯೇ ಹೊರತು ಮನುಷ್ಯರಿಗೆ ಇದರ ವಿಷದಿಂದ ಯಾವ ತೊಂದರೆಯೂ ಸಂಭವಿಸುವುದಿಲ್ಲ  .ಹಲವರ ಪ್ರಕಾರ ಇದು ವಿಷಯುಕ್ತ ಹಾವಾಗಿದ್ದು,ಇದು ತಲೆಯ ಮಧ್ಯ ಭಾಗಕ್ಕೆ ಕಚ್ಚುತ್ತದೆ,ಸಾವು ಸಂಭವಿಸುತ್ತದೆ ಎಂದು ನಂಬಿದ್ದಾರೆ. ಜನರ ಈ ನಂಬಿಕೆಯಿಂದ ಈ ಹಾವನ್ನು ಸಾಧಾರಣವಾಗಿ ಕಂಡಲ್ಲಿ ಸಾಯಿಸಲಾಗುತ್ತದೆ ಜನರ ಮನಸ್ಸಿನಲ್ಲಿರುವ ಈ ಸುಳ್ಳು ನಂಬಿಕೆಗಳು ಈ ಹಾವಿಗೆ ಮಾರಕವಾಗಿರುವುದು ನಿಜಕ್ಕೂ ದುರಾದೃಷ್ಟಕರ .ಹಲವು ಕಡೆ ನಾನು ನೋಡಿದ್ದೀನಿ ಈ ಹಾವನ್ನು ವಿಷಜಂತು ಎಂದು ಎಂದು ಹೊಡೆದು ಕೊಲ್ಲುವುದನ್ನು.ಆ ಸಂಧರ್ಭಗಳಲ್ಲಿ ಅವರಿಗೆ ಎಷ್ಟೇ ಹೇ...

ಹುಲಿ ಬಂತು ಹುಲಿ

Image
. 'ಏನ್ರೀ ನಿಮ್ಮೂರಲ್ಲಿ ಹುಲಿ ಕಾಟ ಅಂತೆ.... ಯಾರು ತಂದು ಬಿಟ್ಟಿದ್ದು ಮಾರಾಯ್ರೆ ಈ ಹುಲಿಗಳನ್ನ...ಇದೊಂದು ಕಾಟ ಇರ್ಲಿಲ್ಲ ಈಗ ಇದೂ ಶುರುವಾಗಿದೆ'  ಹರಿಹರಪುರದ ಪೇಟೆಯಲ್ಲಿ ಮಿತ್ರ ದಿನೇಶ್ ರವರ ಅಂಗಡಿಯಲ್ಲಿ ಕುಳಿತು ಚಹಾ ಹೀರುತ್ತಿರುವಾಗ ಧಿಡೀರನೆ ಬಿದ್ದ ಈ ಪದಗಳು ಒಮ್ಮೆ ನಮ್ಮಲ್ಲಿ ಮಿಂಚಿನ ಸಂಚಲನವನ್ನುಂಟು ಮಾಡಿದವು . ಹಾಗೆ ನೋಡಿದರೆ ಮಲೆನಾಡಿನ ಜನರಿಗೆ ಹಿಂದಿನಿಂದಲೂ ಬದುಕಿನ ಒಂದು ಭಾಗವೇ ಆಗಿರುವ 'ಕುರ್ಕ' ದ ಬಗ್ಗೆ ಜನರು ಮಾತನಾಡಿಕೊಳ್ಳುವುದು ಸಾಧಾರಣವಾಗಿ ನಾವು ಕೇಳಿರುತ್ತೇವೆ  (ಚಿರತೆಗೆ ಇಲ್ಲಿನ ಜನರು 'ಕುರ್ಕ' ಎಂದು ಕರೆಯುವುದು..ಆದರೆ ಕುರ್ಕ ಹಾಗು ಚಿರತೆ ಒಂದೇ ಎಂದು ಇಲ್ಲಿ ವಾದ ಮಾಡಿ ಗೆಲ್ಲಲ್ಲು ಸಾಧ್ಯವಿಲ್ಲ ). ಹಾಗೆಂದು ಹುಲಿಯು ಇಲ್ಲಿನ ಜನರಿಗೆ ಪರಿಚಿತ ಇಲ್ಲವೆಂದೇನಲ್ಲ. ಆಗೊಮ್ಮೆ ಈಗೊಮ್ಮೆ ನಮ್ಮ ದನವನ್ನು ಹುಲಿ ಹಿಡಿಯಿತು ಎಂದು ಹೇಳುವುದನ್ನು ಕೇಳಿದ್ದೇನೆ ಆದರೆ ಈ ಮಾತುಗಳು ಕೇಳಿ ಬರುತ್ತಿದ್ದುದು ತುಂಬಾ ದಟ್ಟ ಅರಣ್ಯಗಳ ಹೊರ ಅಂಚಿನಲ್ಲಿ ವಾಸ ಮಾಡುವ ಜನರ ಬಾಯಲ್ಲೇ ಹೊರತು ಮನುಷ್ಯ ತನ್ನ ಪ್ರಾಬಲ್ಯತೆ ಮೆರೆಯುತ್ತಿರುವ ನಗರ ಪ್ರದೇಶಗಳಲ್ಲಿ ಅಲ್ಲ . 2014 ವರ್ಷದ ಕೊನೆಯ ತಿಂಗಳುಗಳು ಅಂದರೆ ನವೆಂಬರ್ ಹಾಗು ಡಿಸೆಂಬರ್ ಹೊತ್ತಿಗೆ ಇದ್ದಕ್ಕಿದ್ದ ಹಾಗೆ ಕೊಪ್ಪ, ಎನ್ ಆರ್ ಪುರ ಹಾಗು ಶೃಂಗೇರಿ ತಾಲೂಕಿನ ಕೆಲ ಊರುಗಳಲ್ಲಿ 'ಹುಲಿ' ತಟ್ಟೆ oದು ಪ್ರತ್ಯಕ್ಷ ಆಗಿ ಬಿಟ್...

ಯಾರು ಈ ಪ್ರಾಣಿ ಹಂತಕರು ???

Image
. ವನ್ಯ ಜೀವಿ ಸಂರಕ್ಷಣೆ ಎಂದು ಒಂದೆಡೆ ಸರ್ಕಾರಗಳು ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ! ಪ್ರಾಣಿ ಪ್ರಿಯರಂತೂ ಸಾಮಾಜಿಕ ಜಾಲತಾಣಗಳಲ್ಲಿ ದಿನಂಪ್ರತಿ ಇದರ ಬಗ್ಗೆ ಚರ್ಚೆಗಳನ್ನು ನಡೆಸುತ್ತಾರೆ ! ನಿಜವಾದ ಕಾಳಜಿ ಇರುವವರು ಬೀದಿಗಿಳಿದು ಹೋರಾಟವನ್ನೂ ಮಾಡುತ್ತಾರೆ !! ಇದರೆಲ್ಲದರ ನಡುವೆಯೇ ಇತ್ತೀಚಿಗೆ ಫೇಸ್ ಬುಕ್ ನಲ್ಲಿ ಅಪ್ಲೋಡ್ ಆದ ಕೆಲವು ಇಮೇಜ್ ಗಳು ನಿಜಕ್ಕೂ ಗಾಬರಿಯನ್ನುಂಟು ಮಾಡಿದವು . ಕೋವಿಗಳನ್ನು ಹಿಡಿದುಕೊಂಡು ಕಾಡಲೆಯುತ್ತಾ, ಮೊಲವೊಂದನ್ನು ಹಿಡಿದು ಪೋಸ್ ಕೊಡುತ್ತಾ ರಾಜಾರೋಷವಾಗಿ 'ವನ್ಯ ಜೀವಿ ಸಂರಕ್ಷಣಾ ಕಾಯ್ದೆ' ಗೆ ಸೆಡ್ಡು ಹೊಡೆದು ತಮ್ಮ ಸಾಹಸವನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ ಆ  'ಮನುಷ್ಯರು???' ನ್ನು ನೋಡಿದ ಯಾವುದೇ ಪ್ರಾಣಿ ಪ್ರಿಯನ ರಕ್ತ ಕುದಿಯದೆಯೇ ಇದ್ದದ್ದಿಲ್ಲ . ಇದನ್ನು ನೋಡಿದ ಕೂಡಲೇ ನಮ್ಮ ಸಾಮಾಜಿಕ ಜಾಲ ತಾಣದ ವನ್ಯ ಜೀವಿ ಸಂರಕ್ಷಕರು ಇವರ ಕಾರ್ಯದ ವಿರುದ್ದ ಮುಗಿಬಿದ್ದರು..ಸಾಧ್ಯವಾದಷ್ಟು ಪೇಜ್ ಗಳಲ್ಲಿ ಅದನ್ನು ಶೇರ್ ಮಾಡಿದರು. ಅವರ 'ಪೋಸ್ಟ್ ಶೇರ್' ಪ್ರಭಾವದಿಂದಲೋ ಏನೋ ಇದು ಅರಣ್ಯ ಇಲಾಖೆಯ ಗಮನಕ್ಕೆ ಹೋಗಿ ಇಂದು ಮೀಡಿಯಾಗಳಲ್ಲಿ ಅದರ ಬಗ್ಗೆ ಪ್ರಸ್ತಾಪವಾಗಿದೆ .ಈ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ವನ್ಯ ಜೀವಿ ಪ್ರಧಾನ ಸಂರಕ್ಷಣಾಧಿಕಾರಿ ವಿನಯ್ ಲೂತ್ರಾರವರು ತಕ್ಷಣವೇ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ವನ್ಯ ಜೀವಿ ಸಂರಕ್ಷಣಾ ಖಾಯಿದೆಯಡ...

ಹೊಸ ಬ್ಲಾಗ್ ????

ಪ್ರಿಯ ಓದುಗ ಮಿತ್ರರೇ ಸರಿಸುಮಾರು ಒಂದು ವರ್ಷದಿಂದ ನಾನು ಬ್ಲಾಗ್ ನಲ್ಲಿ ಯಾವುದೇ ಪೋಸ್ಟ್ ಗಳನ್ನು ಪ್ರಕಟಿಸಿಲ್ಲ. ಯಾವುದೋ technology ಸಮಸ್ಯೆಯಿಂದ ನನ್ನ ಬ್ಲಾಗ್ ನಲ್ಲಿದ್ದ ಎಲ್ಲಾ ಪೋಸ್ಟ್ ಗಳ ಇಮೇಜ್ ಗಳು ಅಳಿಸಿಹೋದವು. ಈ ಬಗ್ಗೆ ಗೂಗಲ್ ನವರನ್ನು ಸಂಪರ್ಕಿಸಿದರೂ ಪ್ರಯೋಜನವಾಗಲಿಲ್ಲ. ಹಾಗಾಗಿ ಕಳೆದ ವರ್ಷ ಹೊಸ ಲೇಖನಗಳನ್ನು ಪ್ರಕಟಿಸಿಲ್ಲ. ಈಗ ಮತ್ತೆ ಬಂದಿದ್ದೇನೆ. ಹೊಸದೊಂದು ಬ್ಲಾಗ್ ಮಾಡಿ ಅಲ್ಲಿ ಹೊಸ ಲೇಖನಗಳನ್ನು ಪ್ರಕಟಿಸುವ ಯೋಚನೆ ನನ್ನಲ್ಲಿದೆ. ಇದಕ್ಕೆ ನಿವೇನನ್ನುತ್ತೀರಿ ? ಹೊಸ ಬ್ಲಾಗ್ ತೆರೆಯಲೋ ಅಥವಾ ಇಲ್ಲೇ ಹೊಸ ಲೇಖನಗಳನ್ನು ಪ್ರಕಟಿಸಲೋ?????? ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿರುವೆ....

ಬಂಡೀಪುರದದಲ್ಲಿ ಹುಲಿಯ ಹಿಂದೆ

Image
.4 ವರ್ಷಗಳಿಗೊಮ್ಮೆ ನಡೆಯುವ ಹುಲಿ ಗಣತಿಗೆ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಅರಣ್ಯ ಇಲಾಖೆಯಿಂದ ಈ ಬಾರಿಯೂ ಕರೆ ಬಂದಿತ್ತು . ಗಣತಿಯಲ್ಲಿ ಪಾಲ್ಗೊಳ್ಳಲು ಕೆಲವು ಸರಳ ವಿಧಾನಗಳನ್ನು ಅನುಸರಿಸಬೇಕಿತ್ತು. ಅದರಂತೆಯೇ ನಾನೂ ಕೂಡ ಹುಲಿ ಗಣತಿಗೆ apply ಮಾಡಿದೆ .ಕೆಲವೇ ದಿನಗಳಲ್ಲಿ ಅರಣ್ಯ ಇಲಾಖೆಯಿಂದ ನಾನು ಹುಲಿ ಗಣತಿಗೆ ಆಯ್ಕೆಯಾಗಿರುವ ಬಗ್ಗೆ ಮೇಲ್ ಬಂತು.ನಾನು ಬನ್ನೇರ್ ಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆಯುವ ಗಣತಿ ಕಾರ್ಯಕ್ಕೆ ಆಯ್ಕೆಯಾಗಿದ್ದೆ .ಆದರೆ ನನಗೆ ಬನ್ನೇರ್ ಘಟ್ಟ ಗಣತಿಯಲ್ಲಿ ಪಾಲ್ಗೊಳ್ಳಲು ಅಷ್ಟಾಗಿ ಮನಸ್ಸಿರಲಿಲ್ಲ ಹಾಗಾಗಿ ಈ ಬಾರಿಯ ಹುಲಿ ಗಣತಿಯಲ್ಲಿ ಪಾಲ್ಗೊಳ್ಳುವುದು ಬೇಡವೆಂದು ತೀರ್ಮಾನಿಸಿದೆ. ಬನ್ನೇರ್ ಘಟ್ಟ ದಲ್ಲಿ ಮಾನವ ಹಾಗು ವನ್ಯ ಜೀವಿಗಳ ಸಂಘರ್ಷ ಜಾಸ್ತಿಯೇ ಇದ್ದು ಅಲ್ಲಿನ ಆನೆಗಳು ಒಂದು ಕ್ಷಣ ನನಗೆ ಭಯ ಉಂಟು ಮಾಡಿದವು ಹಾಗು ಹುಲಿಗಳು ಘರ್ಜಿಸುವ ಕಾಡಿನಲ್ಲಿ ನಡೆಯುವ ಗಣತಿಯಲ್ಲಿ ಪಾಲ್ಗೊಳ್ಳಬೇಕೆಂಬುದು ನನ್ನ ಆಸೆಯಾಗಿತ್ತು .ಈ ಅವದಿಯಲ್ಲಿಯೇ ಬಂಡೀಪುರದಲ್ಲಿ ಹುಲಿಯೊಂದು ಸರಣಿ ಬಲಿ ತೆಗೆದುಕೊಳ್ಳಲು ಶುರು ಮಾಡಿತ್ತು ಹಾಗು ಆ ಬಗ್ಗೆ ನಾನು ಬ್ಲಾಗ್ ನಲ್ಲಿ ಬರೆದಿದ್ದೇನೆ .ಬಂಡೀಪುರದಲ್ಲಿ ಹುಲಿ ಗಣತಿಗೆ ನನಗೆ ಅವಕಾಶ ಮಾಡಿಕೊಡಬೇಕೆಂದು ಕೋರಿ ಅಲ್ಲಿನ ಅಧಿಕಾರಿಗಳಿಗೆ ಮೇಲ್ ಮಾಡಿದೆ. ಅವರು ಈಗಾಗಲೇ ಬಂಡೀಪುರದಲ್ಲಿ ಗಣತಿಗೆ ಪಾಲ್ಗೊಳ್ಳುವ ಸ್ವಯಂಸೇವಕರು ಹೆಚ್ಚಿದ್ದು ಸಾಧ್ಯವಾದರೆ ಅವಕಾಶ ಕಲ್ಪಿಸುವುದಾ...

ರಾಜ ಕಾಳಿಂಗ

Image
ಮಿತ್ರ ರಾಘು .. ಬ್ಲಾಗ್ ನಲ್ಲಿ ಬರೆಯಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದ..  ನಾನು ದಿನೇಶ್ ಜಮ್ಮಟಿಗೆ.. ಕಾಡು ಗುಡ್ಡ  ಸುತ್ತೋದು.. ಹುಳು ಹಪ್ಪಟ್ಟೆ ಚಿತ್ರ ತೆಗೆಯೋದು ನನ್ನ ಇಷ್ಟ... ಮೊನ್ನೆ ನಮ್ಮ ಊರಿನ ಫಾರೆಸ್ಟರ್ ಕರೆ ಮಾಡಿ ತುರ್ತಾಗಿ ಬರಲು ಹೇಳಿದ್ರು .  ಹೋಗಿ ನೋಡಿದಾಗ ಕಾಳಿಂಗ ಊರಿನ ಕುಡಿಯುವ ನೀರಿನ ಪಂಪ್ ಹೌಸ್ ಕೆಳಗಿನ ಬಾವಿಯೊಳಗೆ ಬಿದ್ದಿತ್ತು . ಮುಂದಿನದ್ದು ಅವನನ್ನು ಸುರಕ್ಷಿತವಾಗಿ ರಕ್ಷಿಸುವ ಕಾರ್ಯಾಚರಣೆ . ಆಗುಂಬೆಯಿಂದ ಹಾವು ರಕ್ಷಕ ಅಜಯ್ ಗಿರಿಯ ಆಗಮನ . ಕತ್ತಲೆಯ ಬಾವಿಯೊಳಗೆ ಕಾರ್ಯಾಚರಣೆ . ಆಳದ ಬಾವಿಯಲ್ಲಿನ ರಾಜ ಕಾಳಿಂಗನನ್ನು ಕೈ ಮತ್ತು ಸ್ಟಿಕ್  ಬಳಸಿ , ಹಗ್ಗದೊಂದಿಗೆ ಇಳಿಸಲಾದ ಮರದ ಮೇಲೆ ಸಾಹಸದಿಂದ ಕೂರಿಸಲಾಯಿತು . ಗಾಬರಿ ಮತ್ತು ಥ೦ಡಿಯಾದ ರಾಜ ಕುತೂಹಲದಿಂದ ಮರದ ರೆಂಬೆಯ ಮೇಲೆ ಆಸೀನನಾಗಿದ್ದ . ಬಾವಿಯ ಮೇಲ್ಬಾಗಕ್ಕೆ ಬಂದಾಗ ಅಜಯ್ ರವರ ಸಹಾಯ ಹಸ್ತದೊಂದಿಗೆ ಹೊರ ಲೋಕಕ್ಕೆ ಆಗಮನ . ಜೊತೆಗೆ ಸುತ್ತ ಕುತೂಹಲದಿಂದ ನೆರೆದ ಜನಕ್ಕೆ ಕಾಳಿಂಗ ರಾಜನ ಸ್ವಭಾವ ಮತ್ತು ವಾಸ್ತವ್ಯದ ಪ್ರದೇಶದ ಮಾಹಿತಿಯೊಂದಿಗೆ , ರಕ್ಷಣೆಯ ಬಗ್ಗೆ ಮಾಹಿತಿ . ಹಿಡಿದ ಸ್ಥಳದಿಂದ ಸ್ವಲ್ಪವೇ ದೂರದಲ್ಲಿ ಕಾಳಿಂಗನಿಗೆ ಸ್ವಾತಂತ್ರ್ಯ . ಸ್ವತಂತ್ರನಾದ ಕೂಡಲೇ ಸ್ವಚಂಧವಾಗಿ ತುಂಗಾ ನದಿಯಲ್ಲಿ ವಿಹಾರ . ನನಗೆ ಕೆಲವು ಚಿತ್ರಗಳೊಂದಿಗೆ , ಊರಿಗೆ ಬಂದ ರಾಜನನ್ನು ಮರಳಿ ಅವನ ಸಾಮ್ರಾಜ್ಯಕ್ಕೆ ಕಳುಹಿಸಿದ ಸಂತೃಪ್ತಿ...

ಬಂಡೀಪುರದ ನರಭಕ್ಷಕ..!!!

Image
.ಪ್ರಿಯ ಪ್ರಕೃತಿ ಪ್ರಿಯ ಮಿತ್ರರೇ ಮೊದಲನೆಯದಾಗಿ ಹಲವು ತಿಂಗಳುಗಳಿಂದ ಬ್ಲಾಗ್ ಪೋಸ್ಟ್ ಬರೆಯದೆ ಇರುವುದಕ್ಕಾಗಿ ಕ್ಷಮೆ ಇರಲಿ (ಚಿತ್ರ ಕೃಪೆ-ವಿಜಯವಾಣಿ) (ಈ ಹುಲಿಗೆ ಸಂಭಂದಪಟ್ಟ updates ಗಳನ್ನು ಪೋಸ್ಟ್ ನ ಕೊನೆಯಲ್ಲಿ ಮಾಡಲಾಗಿದೆ ) ಬಂಡೀಪುರದ ನರಭಕ್ಷಕ...!! ಕಳೆದ ಒಂದು ವಾರದಿಂದ ದಿನಪತ್ರಿಕೆಗಳಲ್ಲಿ ನೀವು ಈ ವಿಷಯವನ್ನು ಗಮನಿಸಿರಬಹುದು. ನವೆಂಬರ್ 27 ರ ಬುಧವಾರದಂದು ಬಂಡೀಪುರ ರಾಷ್ಟ್ರೀಯ ಉದ್ಯಾನದ ಹೊರ ಪ್ರದೇಶದಲ್ಲಿ ಬಸವರಾಜು ಎಂಬುವವರ ಮೇಲೆ ದಾಳಿ ನಡೆಸಿ ಅವರ ಸಾವಿಗೆ ಕಾರಣವಾದ ಹುಲಿಯೊಂದರ ಬಗ್ಗೆ ಸುದ್ದಿಯನ್ನು ನೀವು ಕೇಳಿರಬಹುದು  .ಇದಾದ ಕೇವಲ 2 ದಿನಗಳ ನಂತರ ಉದ್ಯಾನವನದ 100 ಮೀಟರ್ ಹೊರ ಪ್ರದೇಶದಲ್ಲಿ ಜೇನು ಕುರುಬ ಜನಾಂಗದ ಚೆಲುವ ಎಂಬುವವರ ಮೇಲೆ ಹುಲಿಯೊಂದು ದಾಳಿ ನಡೆಸಿ ಕೊಂದು ಹಾಕಿದೆ .ಈ ಮೇಲಿನ ಎರಡೂ ಘಟನೆಗಳಲ್ಲೂ ಕೂಡ ಹುಲಿ ಕೊಂದ ದೇಹವನ್ನು ತಿನ್ನದೇ ಬಿಟ್ಟು ಹೋಗಿದೆ.ಮೊದಲೇ ಘಟನೆಯಲ್ಲಿ ಹುಲಿ ಬಸವರಾಜುರವರ ತಲೆಗೆ ಗಾಯ ಮಾಡಿದ್ದು ದೇಹದ ಯಾವುದೇ ಭಾಗವನ್ನು ತಿನ್ನದೇ ಬಿಟ್ಟು ಹೋಗಿದೆ.ಎರಡನೇ ಘಟನೆಯಲ್ಲಿ ಹುಲಿ ಚೆಲುವರ ಮೇಲೆ ದಾಳಿ ನಡೆಸಿದಾಗ ಅವರ ಜೊತೆಯಲ್ಲಿ ಇದ್ದ ಅವರ ಸ್ನೇಹಿತ ಚಿಕ್ಕ ತಮ್ಮ ಬಳಿ ಇದ್ದ ಕತ್ತಿಯೊಂದಿಗೆ ಹುಲಿಯನ್ನು ಹಿಂಬಾಲಿಸಿದ್ದಾರೆ  .ಆಗ ಹುಲಿ ಚೆಲುವವ ದೇಹವನ್ನು ಬಿಟ್ಟು ಇವರ ಮೇಲೆ ದಾಳಿಗೆ ಮುಂದಾಗಿದ್ದು ಅವರು ಅದರಿಂದ ತಪ್ಪಿಸಿಕೊಂಡಿದ್ದಾರೆ. ಈ ಘ...