Posts

ಭಾರತದ ನ್ಯಾಷನಲ್ ಪಾರ್ಕ್ ಗಳ ಹೆಮ್ಮೆಯ ಹುಲಿಗಳು

Image
.ನಿಮಗೆ ಗೊತ್ತಿರಬಹುದು,ಈಗ ಪ್ರಪಂಚದಲ್ಲಿ ಇರುವ ಹುಲಿಗಳ ಸಂಖ್ಯೆಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಹುಲಿಗಳಿರುವುದು ಭಾರತದಲ್ಲಿ .ಭಾರತದಲ್ಲಿ 98 ನ್ಯಾಷನಲ್ ಪಾರ್ಕ್ ಗಳು ಇದ್ದರೂ ಕೂಡ ಎಲ್ಲಾ ನ್ಯಾಷನಲ್ ಪಾರ್ಕ್ ಗಳಲ್ಲೂ ಹುಲಿಗಳಿಲ್ಲ.ಹುಲಿಗಳು ಹೆಚ್ಚಿರುವ ಕೆಲವು ನ್ಯಾಷನಲ್ ಪಾರ್ಕ್ ಗಳೆಂದರೆ Bandhavgarh ನ್ಯಾಷನಲ್ ಪಾರ್ಕ್ ,ಬಂಡೀಪುರ ಹಾಗು ನಾಗರ ಹೊಳೆ ನ್ಯಾಷನಲ್ ಪಾರ್ಕ್ ,ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ ,ರಣತಂಬೂರ್ ನ್ಯಾಷನಲ್ ಪಾರ್ಕ್ ,ಸುಂದರ್ ಬನ್ಸ್ ನ್ಯಾಷನಲ್ ಪಾರ್ಕ್ .ಈ ನ್ಯಾಷನಲ್ ಪಾರ್ಕ್ ಗಳಲ್ಲಿ ಇರುವ ಕೆಲವು ಹುಲಿಗಳ ಬಗ್ಗೆ ಇಂದು ಬರೆದಿದ್ದೇನೆ.ಈ ಹುಲಿಗಳು ಶಕ್ತಿಶಾಲಿ,ಚಾಣಾಕ್ಷ ಹಾಗು ತಮ್ಮ ನಡವಳಿಕೆಗಳಲ್ಲಿ ಇತರೆ ಹುಲಿಗಳನ್ನು ಮೀರಿಸಿದವು.ಆದ್ದರಿಂದಲೇ ಇವುಗಳು ನಮ್ಮ ದೇಶದ ನ್ಯಾಷನಲ್ ಪಾರ್ಕ್ ನ ಹೆಮ್ಮೆಯ ಹುಲಿಗಳು .ಬನ್ನಿ ಹಾಗಾದರೆ...ಈ ಹೆಮ್ಮೆಯ ಹುಲಿಗಳ ಬಗ್ಗೆ ತಿಳಿಯೋಣ  1) ಸೀತಾ  .ಇವಳು  ಇದ್ದದ್ದು  Bandhavgarh ನ್ಯಾಷನಲ್ ಪಾರ್ಕ್ ನಲ್ಲಿ  .ಮಚಲಿಯ ನಂತರ ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಬಾರಿ ಫೋಟೋಗ್ರಫಿ ಗೆ ಒಳಪಟ್ಟ ಸುಂದರಿ ಇವಳು     .ತನ್ನ ಜೀವಿತಾವದಿಯಲ್ಲಿ 14 ಮರಿಗಳಿಗೆ ಜನ್ಮ ನೀಡಿದ್ದಾಳೆ,ಅವುಗಳನ್ನು ಬೆಳೆಸಿದ್ದಾಳೆ,ಇವುಗಳಲ್ಲಿ 12 ಹುಲಿಗಳು ಬೆಳೆದು ತಮ್ಮ Territory ಸ್ಥಾಪಿಸಿಕೊಂಡಿವೆ  .ಇವಳು 1996 ರಲ್ಲಿ ತನ್ನ 17 ನೇ ವಯಸ್ಸಿನಲ್ಲ...

-ವಿಶ್ವದ ದೈತ್ಯಾಕಾರದ ಗುಹೆ-

Image
ಹೆಸರು-Hang Sơn Đoòng (Mountain River Cave) ಇರುವ ಸ್ಥಳ-Quảng Bình Province,ವಿಯೆಟ್ನಾಂ  ಆಳ-150m / 490ft ಅಗಲ- 9,000m / 30,000ft ಕಂಡು ಹಿಡಿದವರು-Hồ-Khanh in 1991 ವಿಶೇಷತೆ-ಈ ಗುಹೆಯಲ್ಲಿ ಹರಿಯುವ ನದಿ .ವಿಶ್ವದ ಈ ದೊಡ್ಡ ದೈತ್ಯ ಗುಹೆಯ ಸುಂದರ ಚಿತ್ರಗಳು  .Courtesy- Google Images and National Geographic  .ಇ ನ್ನೂ ಈ ತರಹದ ಅದೆಷ್ಟು ವಿಸ್ಮಯಗಳನ್ನು ಹೊಂದಿದೆಯೋ ನಮ್ಮ ಭೂಮಿ ....   .ಈ ಮಾಹಿತಿಯನ್ನು ನಮಗೆ mail ಮಡಿದ ವಿಕ್ರಮ್ ಜೋಯಿಸ್,ಶಿವಮೊಗ್ಗ ರವರಿಗೆ ಧನ್ಯವಾದಗಳು -ಪ್ರಕೃತಿಯನ್ನು ರಕ್ಷಿಸಿ-

''ಹಸಿರು'' ಸ್ವಾಮೀಜಿ

Image
.ನಿಮಗೆ ಹಿಂದಿನ ಪೋಸ್ಟ್ ನಲ್ಲಿ ಶಿವನಹಳ್ಳಿ ಎಂಬ ಒಂದು ಹಳ್ಳಿಯ ಬಗ್ಗೆ ಹೇಳಿದ್ದೆ.ಇಂದು ನೀವು ಶಿವನಹಳ್ಳಿಗೆ ಭೇಟಿ ನೀಡಿದರೆ ಸುಮಾರು 80  ಎಕರೆಯಷ್ಟು  ಹಬ್ಬಿರುವ ಸುಂದರವಾದ ಅರಣ್ಯವನ್ನು ನೋಡಬಹುದು .ಅಲ್ಲಿ ಕೇವಲ ಅರಣ್ಯ ಇದ್ದಿದ್ದರೆ ನಾನು ಇಲ್ಲಿ ಈ ಪೋಸ್ಟ್ ಬರೆಯುವ ಪ್ರಮೇಯ ಬರುತ್ತಿರಲಿಲ್ಲ .ಆಶ್ಚರ್ಯಕರ ಸಂಗತಿ ಎಂದರೆ ಈ ಅರಣ್ಯವನ್ನು ಸೃಷ್ಟಿಸಿ ಪೋಷಿಸಿದ್ದು ಒಬ್ಬರು ಸ್ವಾಮೀಜಿ.ಹೌದು ಇವರು ಅಕ್ಷರಶಃ ''ಹಸಿರು'' ಸ್ವಾಮೀಜಿ.ಅಗಾದ ಪ್ರಕೃತಿ ಪ್ರೇಮವನ್ನು ಹೊಂದಿರುವ ಇವರು ಬೇರಾರೂ ಅಲ್ಲ..ಅವರೇ ನಮ್ಮ ನೆಚ್ಚಿನ 'ವಿಷ್ಣುಮಯಾನಂದರು' .ವಿಷ್ಣುಮಯಾನಂದರ ಪರಿಚಯವನ್ನು ಈ ಹಿಂದಿನ ಪೋಸ್ಟ್ ನಲ್ಲಿ ನಿಮಗೆ ಮಾಡಿಕೊಟ್ಟಿದ್ದೇನೆ.ಕಾಡು,ವನ್ಯ ಪ್ರಾಣಿಗಳು ಎಂದರೆ ಇವರಿಗೆ ಅಗಾದವಾದ ಪ್ರೀತಿ,ಬಹುಷಃ ಪ್ರಕೃತಿ ಬಗೆಗಿನ ಈ ಸೆಳೆತವೇ ಅವರನ್ನು ಈ ಸಾಧನೆ ಮಾಡಲು ಪ್ರೇರೆಪಿಸಿದ್ದು ಇರಬೇಕು .ಒಂದು ಸಮೃದ್ದವಾದ ಅರಣ್ಯವನ್ನು ನಾಶ ಮಾಡಲು ಮಾನವನಿಗೆ ಕೇವಲ ಕೆಲವು ಸಮಯ ಸಾಕು.ಆದರೆ ಒಂದು ಸಮೃದ್ದವಾದ ಅರಣ್ಯ ಬೆಳೆಸುವುದು ಒಂದು ಸಾಧನೆಯೇ ಸರಿ  .ಅರಣ್ಯವನ್ನು ಬೆಳೆಸುವುದು ಸುಲಭದ ಮಾತಲ್ಲ.ಅದಕ್ಕೆ ಅಗಾದವಾದ ಪರಿಶ್ರಮ ಬೇಕು,ಸುಮ್ಮನೆ ಒಂದಷ್ಟು ಜಾಗದಲ್ಲಿ ಒಂದಷ್ಟು ಗಿಡಗಳನ್ನು ನೆಟ್ಟು ಬಂದರೆ ಅರಣ್ಯ ಬೆಳೆಯುವುದಿಲ್ಲ.ಅದನ್ನು ಸರಿಯಾಗಿ ಪೋಷಿಸುವುದು ಅತ್ಯಂತ ಮಹತ್ವದ್ದಾಗಿರುತ್ತದೆ .ಈ ಕೆಲಸವನ್ನು ನಮ್ಮ ಸ್ವಾಮೀಜಿ ಅತ್ಯಂತ ...

ಬನ್ನೇರುಘಟ್ಟದ ಆನೆಗಳ ಜಾಡಿನಲ್ಲಿ

Image
.ನಿಮಗೆಲ್ಲಾ ಗೊತ್ತಿರಬಹುದು,ಇತ್ತೀಚೆಗಷ್ಟೇ ಬನ್ನೇರುಘಟ್ಟ ದಲ್ಲಿ ಪ್ರವಾಸ ಹೋಗಿ ಆನೆ ದಾಳಿಯಿಂದ  ಒಬ್ಬರು ಟೆಕ್ಕಿ ಪ್ರಾಣ ಕಳೆದುಕೊಂಡರು .ಈ ಘಟನೆ ನೆನೆದಾಗ ಬನ್ನೇರುಘಟ್ಟದಲ್ಲಿ ಇರುವ ಆನೆಗಳು ಹಾಗು ಒಮ್ಮೆ ನಾವು ಈ ಆನೆಗಳ ಜಾಡಿನಲ್ಲಿ ಚಾರಣಕ್ಕೆ ತೆರಳಿದ ಘಟನೆಯನ್ನು ಬ್ಲಾಗ್ ನಲ್ಲಿ ಪೋಸ್ಟ್ ಮಾಡಬಹುದು ಎಂಬ ಯೋಚನೆ ಬಂದಿತು .ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಅಷ್ಟೇನೂ ದೊಡ್ದದಲ್ಲದ ಒಂದು ವನ್ಯ ಜೀವಿಗಳಿಂದ ಕೂಡಿದ ಪ್ರದೇಶ .ಸುಮಾರು 25,000 ಎಕರೆ (ಸರಿ ಸುಮಾರು 104.27 ಕಿಲೋಮೀಟರ್) ಯಷ್ಟು ವಿಸ್ತೀರ್ಣ ಹೊಂದಿರುವ ಇದು ಆ ನೆಗಳ ನೆಲೆಬೀಡು .ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ನ ಮಿತಿಯಲ್ಲಿ ಕೇವಲ ವನ್ಯ ಜೀವಿಗಳಲ್ಲದೆ ಹಲವು ಹಳ್ಳಿಗಳೂ ಹಾಗು ಅಲ್ಲಿ ವಾಸಿಸುವ ಜನಸಾಮಾನ್ಯರ ಹೊಲ ಗದ್ದೆಗಳೂ ಇವೆ.ಇದು ಮಾನವ ಹಾಗು ಆನೆಗಳ ನಡುವಿನ ತಿಕ್ಕಾಟಕ್ಕೆ ಪ್ರಮುಖ ಕಾರಣ .ನಮಗೆಲ್ಲಾ ಗೊತ್ತಿರುವಂತೆ ಆನೆಗಳು ಕೇವಲ ಒಂದೇ ಪ್ರದೇಶದಲ್ಲಿ ವಾಸಿಸುವ ಪ್ರಾಣಿಗಳಲ್ಲ,ಬದಲಾಗಿ ಆಹಾರ ಮತ್ತು ನೀರಿನ ಹುಡುಕಾಟದಲ್ಲಿ  ನಿರಂತರವಾಗಿ ಚಲನೆಯಲ್ಲಿರುತ್ತವೆ .ಪ್ರಮುಖವಾಗಿ ಬನ್ನೇರುಘಟ್ಟದ ಈ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಹೊಲಗಳಲ್ಲಿ ಹೆಚ್ಚಾಗಿ ರಾಗಿ ಬೆಳೆಯುತ್ತಾರೆ,ಈ ರಾಗಿಯ ಕುಡಿಯಲ್ಲಿ ಇರುವ ಪ್ರೋಟೀನ್ ಯುಕ್ತ ಅಂಶವು ಆನೆಗಳಿಗೆ ಬಹಳ ಪ್ರಿಯ.ಕಾಲ ಕಾಲದಿಂದ ಅವುಗಳ ವಂಶವಾಹಿನಿಯಲ್ಲೇ ಈ ಗುಣಗಳು ಸಾಗಿ ಪ್ರತಿಯೊಂದು ಆನೆಯೂ ಈ ರಾಗಿಯ ಚಿಗುರನ್ನು ತು...