''ಹಸಿರು'' ಸ್ವಾಮೀಜಿ

.ನಿಮಗೆ ಹಿಂದಿನ ಪೋಸ್ಟ್ ನಲ್ಲಿ ಶಿವನಹಳ್ಳಿ ಎಂಬ ಒಂದು ಹಳ್ಳಿಯ ಬಗ್ಗೆ ಹೇಳಿದ್ದೆ.ಇಂದು ನೀವು ಶಿವನಹಳ್ಳಿಗೆ ಭೇಟಿ ನೀಡಿದರೆ ಸುಮಾರು 80  ಎಕರೆಯಷ್ಟು  ಹಬ್ಬಿರುವ ಸುಂದರವಾದ ಅರಣ್ಯವನ್ನು ನೋಡಬಹುದು

.ಅಲ್ಲಿ ಕೇವಲ ಅರಣ್ಯ ಇದ್ದಿದ್ದರೆ ನಾನು ಇಲ್ಲಿ ಈ ಪೋಸ್ಟ್ ಬರೆಯುವ ಪ್ರಮೇಯ ಬರುತ್ತಿರಲಿಲ್ಲ

.ಆಶ್ಚರ್ಯಕರ ಸಂಗತಿ ಎಂದರೆ ಈ ಅರಣ್ಯವನ್ನು ಸೃಷ್ಟಿಸಿ ಪೋಷಿಸಿದ್ದು ಒಬ್ಬರು ಸ್ವಾಮೀಜಿ.ಹೌದು ಇವರು ಅಕ್ಷರಶಃ ''ಹಸಿರು'' ಸ್ವಾಮೀಜಿ.ಅಗಾದ ಪ್ರಕೃತಿ ಪ್ರೇಮವನ್ನು ಹೊಂದಿರುವ ಇವರು ಬೇರಾರೂ ಅಲ್ಲ..ಅವರೇ ನಮ್ಮ ನೆಚ್ಚಿನ 'ವಿಷ್ಣುಮಯಾನಂದರು'
.ವಿಷ್ಣುಮಯಾನಂದರ ಪರಿಚಯವನ್ನು ಈ ಹಿಂದಿನ ಪೋಸ್ಟ್ ನಲ್ಲಿ ನಿಮಗೆ ಮಾಡಿಕೊಟ್ಟಿದ್ದೇನೆ.ಕಾಡು,ವನ್ಯ ಪ್ರಾಣಿಗಳು ಎಂದರೆ ಇವರಿಗೆ ಅಗಾದವಾದ ಪ್ರೀತಿ,ಬಹುಷಃ ಪ್ರಕೃತಿ ಬಗೆಗಿನ ಈ ಸೆಳೆತವೇ ಅವರನ್ನು ಈ ಸಾಧನೆ ಮಾಡಲು ಪ್ರೇರೆಪಿಸಿದ್ದು ಇರಬೇಕು

.ಒಂದು ಸಮೃದ್ದವಾದ ಅರಣ್ಯವನ್ನು ನಾಶ ಮಾಡಲು ಮಾನವನಿಗೆ ಕೇವಲ ಕೆಲವು ಸಮಯ ಸಾಕು.ಆದರೆ ಒಂದು ಸಮೃದ್ದವಾದ ಅರಣ್ಯ ಬೆಳೆಸುವುದು ಒಂದು ಸಾಧನೆಯೇ ಸರಿ 

.ಅರಣ್ಯವನ್ನು ಬೆಳೆಸುವುದು ಸುಲಭದ ಮಾತಲ್ಲ.ಅದಕ್ಕೆ ಅಗಾದವಾದ ಪರಿಶ್ರಮ ಬೇಕು,ಸುಮ್ಮನೆ ಒಂದಷ್ಟು ಜಾಗದಲ್ಲಿ ಒಂದಷ್ಟು ಗಿಡಗಳನ್ನು ನೆಟ್ಟು ಬಂದರೆ ಅರಣ್ಯ ಬೆಳೆಯುವುದಿಲ್ಲ.ಅದನ್ನು ಸರಿಯಾಗಿ ಪೋಷಿಸುವುದು ಅತ್ಯಂತ ಮಹತ್ವದ್ದಾಗಿರುತ್ತದೆ .ಈ ಕೆಲಸವನ್ನು ನಮ್ಮ ಸ್ವಾಮೀಜಿ ಅತ್ಯಂತ ಶೃದ್ದೆಯಿಂದ ಮಾಡಿದ್ದಾರೆ.ಆದ್ದರಿಂದಲೇ ಇಂದು ಶಿವನಹಳ್ಳಿಯಲ್ಲಿ ಸಮೃದ್ದವಾದ ನೂರಾರು ಎಕರೆ ಅರಣ್ಯ ತಲೆ ಎತ್ತಿರುವುದು

.ಅದು 1986 ರ ಸಮಯ ರಾಮಕೃಷ್ಣ ಮಿಶನ್ ,ದುಸ್ಥಿತಿಯಲ್ಲಿದ್ದ ಶಿವನಹಳ್ಳಿಯ ಸರ್ಕಾರಿ ಶಾಲೆಯನ್ನು ತೆಗೆದುಕೊಂಡು ಅಲ್ಲಿನ ಮಕ್ಕಳಿಗೆ ವಿಧ್ಯಾಭ್ಯಾಸ ನೀಡುವ ಮಹಾತ್ ಯೋಜನೆಯನ್ನು ಕೈಗೆತ್ತುಕೊಂಡಿತು.ಸ್ವಾಮೀಜಿ ಎದುರು ಆಗ ಹಲವಾರು ಸವಾಲುಗಳಿದ್ದವು.ಆದರೆ ಅಲ್ಲಿನ ಕೆಲವು ಜನರ ಸಹಾಯದಿಂದ ಎಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿ ಯಶಸ್ಸನ್ನು ಕಂಡಿದ್ದಾರೆ.ಇದರ ಫಲವಾಗಿಯೇ 1986 ರಲ್ಲಿ ಆ ಶಾಲೆಯಲ್ಲಿ 70 ರಷ್ಟು ಇದ್ದ ಮಕ್ಕಳ ಸಂಖ್ಯೆ ಇಂದು 300 ದಾಟಿದೆ

.ಕೇವಲ ಅಲ್ಲಿನ ಮಕ್ಕಳಿಗೆ ವಿಧ್ಯಾಭ್ಯಾಸ ನೀಡುವುದಲ್ಲದೆ ಸ್ವಾಮೀಜಿ ಕೈಗೊಂಡ ಇನ್ನೊಂದು ಅದ್ಭುತ ಕಾರ್ಯವೇ ಅರಣ್ಯ ಬೆಳೆಸುವುದು. ಒಂದಷ್ಟು ಖಾಲಿ ಜಾಗದಲ್ಲಿ ಗಿಡಗಳನ್ನು ನೆಟ್ಟು ಪೋಷಿಸಲು ಶುರು ಮಾಡಿದ ಇವರ ಕೆಲಸ ಇಂದು ಹೆಮ್ಮರವಾಗಿ ಬೆಳೆದಿದೆ

.ಇಲ್ಲಿನ ಅರಣ್ಯದಲ್ಲಿ ಸುಮಾರು 150 ಕ್ಕೂ ಅಧಿಕ ಬಗೆಯ ಮರಗಳಿವೆ ಮತ್ತು 120 ಕ್ಕೂ ಅಧಿಕ ಬಗೆಯ ಔಷಧೀಯ ಸಸ್ಯಗಳಿವೆ

.ಸ್ವಾಮೀಜಿ ಈ ಗಿಡಗಳನ್ನು  ಕಲೆಹಾಕಲು ಅತ್ಯಂತ ಕಷ್ಟ ಪಟ್ಟಿದ್ದಾರೆ.ಇದಕ್ಕಾಗಿ ಅವರು ರಾಜ್ಯದ ಹಲವಾರು ಜಿಲ್ಲೆಗಳನ್ನು ಸುತ್ತಿದ್ದಾರೆ

.ಸ್ವಾಮೀಜಿಯವರ ಈ ಅರಣ್ಯ ಲೋಕದಲ್ಲಿ 175 ಕ್ಕೂ ಹೆಚ್ಚು ಬಗೆಯ ಪಕ್ಷಿಗಳು ತಮ್ಮ ಕಲರವವನ್ನು ಮಾಡುತ್ತಿದ್ದಾವೆ

.ಸ್ವಾಮೀಜಿ ಇಷ್ಟು ಅರಣ್ಯವನ್ನು ಬೆಳೆಸಿ ಸುಮ್ಮನೆ ಕೂತಿಲ್ಲ.ಮುಂದಿನ ಅವರ ಯೋಜನೆಯಲ್ಲಿ ಸುಮಾರು 120 ಎಕರೆ ಅರಣ್ಯ ಬೆಳೆಸುವ ಯೋಚನೆ ಇದೆ.ಈ 120 ಎಕರೆಯಲ್ಲಿ ಸುಮಾರು 20,000 ಗಿಡಗಳನ್ನು ಬೆಳೆಸುವ ಗುರಿ ಹೊಂದಲಾಗಿದೆ

.ಚಿಟ್ಟೆಗಳ ಉದ್ಯಾನವನ ಹಾಗು ಔಷಧಿ ಸಸ್ಯಗಳ ಜ್ಞಾನವನ ವನ್ನು ನಿರ್ಮಿಸುವ ಗುರಿ ಹೊಂದಿದ್ದಾರೆ ಸ್ವಾಮೀಜಿ

.ನೀವೂ ಕೂಡ ಇಲ್ಲಿಗೆ ಪ್ರತೀ ತಿಂಗಳ ಮೂರನೇ ಭಾನುವಾರದಂದು ಭೇಟಿ ನೀಡಬಹುದು.ನಿಮಗೆ ಅಲ್ಲಿ ಆಹಾರ ಹಾಗು ಇತರೆ ಸೌಲಭ್ಯಗಳನ್ನು ಶ್ರಮದವರೇ ನೀಡುತ್ತಾರೆ.ಆದರೇ ನೀವು ಅಲ್ಲಿಗೆ ಮೊಬೈಲ್ ,ಪ್ಲಾಸ್ಟಿಕ್ ಬಾಟಲ್ ಹಾಗು ಪ್ಲಾಸ್ಟಿಕ್ ಬ್ಯಾಗ್ ಗಳನ್ನು ಕೊಂಡೊಯ್ಯುವಂತಿಲ್ಲ

.ಪ್ರಕೃತಿ ಪ್ರೇಮವೆಂದರೆ ಕೇವಲ ಪ್ರಕೃತಿಯನ್ನು ಉಳಿಸುವುದೊಂದೇ ಅಲ್ಲದೇ ಪ್ರಕೃತಿಯನ್ನು ಬೆಳೆಸುವುದೂ ಕೂಡ ಆಗಿದೆ .ಈ ಮಾತನ್ನು ವಿಷ್ಣುಮಯಾನಂದರನ್ನು ನೋಡಿ ತಿಳಿಯಬಹುದು.ಅದಕ್ಕೆ ನಾನು ಇವರನ್ನು ''ಹಸಿರು'' ಸ್ವಾಮೀಜಿ ಎಂದು ಕರೆದದ್ದು

.ತನ್ನ ಸ್ವಾರ್ಥಕ್ಕಾಗಿ ಅಮೂಲ್ಯವಾದ ಅರಣ್ಯವನ್ನು  ನಾಶ ಮಾಡುತ್ತಿರುವ ಜನರೇ ಹೆಚ್ಚಿರುವ ಈ ಕಾಲದಲ್ಲಿ ಅರಣ್ಯವನ್ನು ಬೆಳೆಸಿ ಉಳಿಸುತ್ತಿರುವ ವಿಷ್ಣುಮಯಾನಂದರಿಗೆ ನಮ್ಮ ಬ್ಲಾಗ್ ನಿಂದ ''Hands Off''
.''ಪ್ರಕೃತಿ  ಸೇವೆಯೇ ಪರಮಾತ್ಮನ ಸೇವೆ'' ಎನ್ನುವ ಇಂತವರ ಸಂಖ್ಯೆ ಹೆಚ್ಚಲಿ.ಅರಣ್ಯಗಳು ಹೆಚ್ಚು ಹೆಚ್ಚು ಬೆಳೆದು ವನ್ಯ ಪ್ರಾಣಿಗಳು ನೆಮ್ಮದಿಯಿಂದ ಬದುಕಿ ಬಾಳಲಿ ಎಂದು ಆಶಿಸೋಣ 

(Article Courtesy-DNA) 

.ಸದ್ಯದಲ್ಲೇ ಈ ಸುಂದರ ಅರಣ್ಯದ ಚಿತ್ರಗಳನ್ನು ಬ್ಲಾಗ್ ನಲ್ಲಿ ಅಪ್ಲೋಡ್ ಮಾಡಲಾಗುವುದು 

-ಪ್ರಕೃತಿಯನ್ನು ಬೆಳೆಸಿ,ಉಳಿಸಿ-

Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....