-ಕೂತೂಹಲಕಾರಿ ಕರಡಿಗಳು-


.ಕರಡಿಗಳು ಪ್ರಕೃತಿಯ ಸುಂದರ ಹಾಗು ಅಷ್ಟೇ ಕೂತೂಹಲಕಾರಿ ಜೀವಿಗಳು

.ಸಸ್ತನಿ ವರ್ಗಕ್ಕೆ ಸೇರಿದ ಇವುಗಳ ಕುಟುಂಬ Ursidae

.ಇವುಗಳು ಸಸ್ಯಾಹಾರಿಗಳೂ ಹೌದು,ಮಾಂಸಾಹಾರಿಗಳೂ ಹೌದು.ಕರಡಿಗಳು 'Omnivore' ವರ್ಗಕ್ಕೆ ಸೇರಿದ ಪ್ರಾಣಿಗಳು

.ಉತ್ತರ ಗೋಳಾರ್ದ,ದಕ್ಷಿಣ ಗೋಳಾರ್ದ.ಉತ್ತರ ಅಮೇರಿಕಾ,ದಕ್ಷಿಣ ಅಮೇರಿಕಾ ,ಯುರೋಪ್ ,ಏಷಿಯಾ ಖಂಡಗಳಲ್ಲಿ ಇವುಗಳು ಕಂಡು ಬರುತ್ತದೆ

.ಕಪ್ಪು,ಕಂದು,ಬಿಳಿ ಬಣ್ಣಗಳಲ್ಲಿ ಕಂಡುಬರುವ ಇವುಗಳ ಗಾತ್ರವು ಅತ್ಯಂತ ದೊಡ್ದದಾಗಿರುತ್ತವೆ ಹಾಗು ಇವುಗಳು ಬಲಿಷ್ಟ ಪ್ರಾಣಿಗಳು

.ಹಗಲು ಹಾಗು ರಾತ್ರಿ ಎರಡೂ ಸಮಯದಲ್ಲೂ ಕಾರ್ಯಾಚರಣೆ ಮಾಡಬಲ್ಲವು

.ಪ್ರಪಂಚದಲ್ಲಿ ಒಟ್ಟು 8 ಜಾತಿಯ ಕರಡಿಗಳು ಕಂಡು ಬರುತ್ತವೆ

.ಕಾಡು,ಗುಡ್ಡ,ಹಿಮ ಪ್ರದೇಶಗಳು ಇವುಗಳ ವಾಸ ಸ್ಥಾನಗಳು

.ಧ್ರುವ ಕರಡಿಗಳು (polar bears ) ಹಾಗು ಕಂದು ಕರಡಿಗಳು (brown bears ) 750 kilograms ವರೆಗೆ ತೂಗಬಲ್ಲವು

.ಅತ್ಯಂತ ಚಿಕ್ಕ ಕರಡಿಗಳೆಂದರೆ ನಮ್ಮ ಖಂಡದಲ್ಲಿ ಕಂಡುಬರುವ Sun Bear ಗಳು .ಇವು ಕೇವಲ 45 kg (Females) ತೂಗುತ್ತವೆ

.ಗಂಟೆಗೆ 30 ಮೈಲಿಗಳವರೆಗೆ ಚಲಿಸಬಲ್ಲವು (brown bear)

.ಗಂಡು ಕರಡಿಯನ್ನು boar ಅಥವಾ he-bear ಎಂದು ಕರೆಯುತ್ತಾರೆ

.ಹೆಣ್ಣು ಕರಡಿಯನ್ನು sow ಅಥವಾ she-bear ಎಂದು ಕರೆಯುತ್ತಾರೆ

.ಕರಡಿಗಳ ಗುಂಪನ್ನು sleuth ಅಥವಾ sloth ಎಂದು ಕರೆಯುತ್ತಾರೆ

.ಕರಡಿಗಳು 25 ವರ್ಷಗಳವರೆಗೆ ಬದುಕಬಲ್ಲವು

.ಕಂದು ಕರಡಿಗಳು (Brown bears) ಅತ್ಯಂತ ಶಕ್ತಿಶಾಲಿಗಳಾಗಿದ್ದು ಮನುಷ್ಯನು ಮುಂದೆ ಹೋದರೆ ಸಿಗಿದು ಹಾಕಬಲ್ಲವು

.ಕರಡಿಗಳು ಹಲವು ಬಗೆಯ ಧ್ವನಿ ಹೊರಡಿಸಬಲ್ಲವು.ಅವುಗಳನ್ನುMoaning,Barking,Huffing,Growling,Roaring ಎಂದು ಕರೆಯುತ್ತಾರೆ

.ಮರ ಏರುವುದರಲ್ಲಿ ಕರಡಿಗಳು Experts .ಸಾಧಾರಣವಾಗಿ ಕಾಡಿನ ಕರಡಿಗಳು ಹಣ್ಣು ,ಗಿಡ,ಜೇನು ಮುಂತಾದವುಗಳನ್ನು ತಿಂದರೆ ಧ್ರುವ ಪ್ರದೇಶದದಲ್ಲಿನ ಕರಡಿಗಳು ಮೀನು ಹಾಗು ಇತರೆ ಸಣ್ಣ ಪುಟ್ಟ ಪ್ರಾಣಿಗಳನ್ನು ತಿಂದು ಬದುಕುತ್ತವೆ

.ಹುಲಿಗಳು ಹಾಗು ಕರಡಿಗಳು ಪರಸ್ಪರ ವ್ಯರಿಗಳು.ಕೆಲವೊಮ್ಮೆ ಇವುಗಳ ನಡುವೆ ಭೀಕರ ಕಾಳಗ ನಡೆಯುವುದೂ ಉಂಟು

.ಕರಡಿಗಳ ವಾಸನೆ ಗ್ರಹಿಕೆ ಶಕ್ತಿ ಅದ್ಭುತ.ಮೂಗು ಹರಿಯುವಂತೆ ಆಹಾರಕ್ಕಾಗಿ ವಾಸನೆಯನ್ನು ಗ್ರಹಿಸುತ್ತ ಚಲಿಸಬಲ್ಲವು

.ಇನ್ನು ಕರಡಿಗಳಿಗೆ ತಾಳ್ಮೆ ಕಡಿಮೆ.ಅತ್ಯಂತ ಬೇಗ ಕೊಪಗೊಳ್ಳುತ್ತವೆ.ಕೋಪ ಬಂದಾಗ ಅವುಗಳು ಅಕ್ಷರಶಃ ಸ್ತೀಮಿತವನ್ನೇ ಕಳೆದುಕೊಂಡು ಹೊರಾಡಬಲ್ಲವು

.5 ರಿಂದ 7 ನೇ ವಯಸ್ಸಿಗೆ ಲೈಂಗಿಕ ಪ್ರಬುದ್ದತೆಯನ್ನು ಹೊಂದುತ್ತವೆ

.ಹೆಣ್ಣು ಕರಡಿಗಳು ಸಾಧಾರಣವಾಗಿ 1 ರಿಂದ 4 ಮರಿಗಳಿಗೆ ಜನ್ಮವನ್ನು ಕೊಡುತ್ತದೆ.ಮರಿಗಳು ಪೂರ್ತಿ ಪಳಗುವವರೆಗೂ ತಾಯಿ ಸಮೀಪವೇ ಇರುತ್ತವೆ

.ಧ್ರುವ ಪ್ರದೇಶದ ಕರಡಿಗಳು ಚಳಿಗಾಲದಲ್ಲಿ 4 ರಿಂದ 5 ತಿಂಗಳುಗಳ ಕಾಲ hibernate ಆಗಿರುತ್ತವೆ.ಈ ಸಮಯದಲ್ಲಿ ಅವು ದೀರ್ಘ ನಿದ್ರೆಯಲಿದ್ದು ಚಳಿಗಾಲ ಮುಗಿದ ಮೇಲೆ ಹೊರಬರುತ್ತವೆ

.ಸಾಧಾರಣವಾಗಿ ಇವು ಮನುಷ್ಯರ ತಂಟೆಗೆ ಹೋಗುವುದಿಲ್ಲ .ಆದರೆ ಕೆಲವೊಮ್ಮೆ ಇವು ಮನುಷ್ಯರ ಮೇಲೆ ಮಾರಣಾಂತಿಕ ಹಲ್ಲೆ ಮಾಡುವುದುಂಟು.ಇದಕ್ಕೆ ಬೇರೆ ಬೇರೆ ಕಾರಣಗಳನ್ನು ವಿಜ್ಞಾನಿಗಳು ನೀಡುತ್ತಾರೆ

.'ಕರಡಿಗಳಿಗೂ ಈಗ ಉಳಿಗಾಲವಿಲ್ಲ' -ಪ್ರಕೃತಿಯ ಸುಂದರ ಹಾಗು ಕುತೂಹಲಕಾರಿ ಕರಡಿಗಳು ಇಂದು ಅಪಾಯದಂಚಿನಲ್ಲಿವೆ.6 ಜಾತಿಯ ಕರಡಿಗಳನ್ನು ಅಪಾಯದಂಚಿನಲ್ಲಿರುವ ಪ್ರಾಣಿಗಳು ಎಂದು IUCN ಗುರುತಿಸಿದೆ

.ಇವುಗಳ ದೇಹಗಳ ಭಾಗಗಳಿಗಾಗಿ ಇವುಗಳನ್ನು ಬೇಟೆಯಾಡಿ ಕೊಲ್ಲಲಾಗುತ್ತಿದೆ

.ಒಂದಾನೊಂದು ಕಾಲದಲ್ಲಿ ನಮ್ಮ ಊರುಗಳಲ್ಲಿ ಈ ಕರಡಿಗಳನ್ನು ಕರೆದುಕೊಂಡು ಕೆಲವರು ಬರುತ್ತಿದ್ದರು .ನಾವಾಗ ಚಿಕ್ಕ ಮಕ್ಕಳು .ಕರಡಿಗಳ ಮೇಲೆ ಮೇಲೆ ಕೂರಿಸಿದರೆ ಹೆದರಿಕೆ ಹೋಗುತ್ತದೆ ಎಂದು ನಂಬಿಕೆ.ಈಗ ಮನುಷ್ಯನಿಂದಲೇ ಅವುಗಳಿಗೆ ಭಯ ಹೆಚ್ಚಾಗಿ ಅವುಗಳ ಕಾಣುವಿಕೆಯೇ ಅಪರೂಪವಾಗಿದೆ

.ಕರಡಿಗಳನ್ನು ಇಂದು ನಾವು ಉಳಿಸಿಕೊಳ್ಳಬೇಕಿದೆ.ಇಲ್ಲವಾದಲ್ಲಿ ಪ್ರಕೃತಿಯ ಒಂದು ಅದ್ಭುತ ಜೀವಿಯನ್ನು ಬರೀ ಚಿತ್ರಗಳಲ್ಲಿ ನೋಡಬೇಕಾದ ದಿನ ಬಂದೀತು...

 image courtesy -www.public-domain-image.com
-ಪ್ರಕೃತಿಯನ್ನು ಉಳಿಸಿ-

Comments

Post a Comment

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....