-ಹುಲಿಯ ಹಿಂದೆ-
.'ಹುಲಿ' ಹೆಸರಿನಲ್ಲೇ ಏನೋ ಒಂದು ಶಕ್ತಿ.ಹೌದು ಪ್ರಕೃತಿಯ ಬಲಿಷ್ಟ,ಅತಿ ಸುಂದರ ಜೀವಿ ಹುಲಿ
.ಇಂದು ನಾವು ಒಂದು,ಎರಡು ಎಂದು ಎಣಿಕೆ ಮಾಡುವ 'ಹುಲಿಗಳು' 1900 ಹಾಗು ಅದಕ್ಕಿಂತಲೂ ಹಿಂದಿನ ಸಮಯದಲ್ಲಿ ಭಾರತದ ಕಾಡುಗಳನ್ನು ಆಳುತ್ತಿದ್ದ 'ಚಕ್ರವರ್ತಿಗಳು'.ಇಂತಹ 'ಹುಲಿಗಳ' ಹಿಂದೆ ಈ ಪೋಸ್ಟ್
.ಬೆಕ್ಕಿನ ಜಾತಿಯ ಪ್ರಾಣಿಗಳಲ್ಲಿ 'ಹುಲಿ' ಅತ್ಯಂತ ದೊಡ್ಡ ಪ್ರಾಣಿ

.ಆಹಾರ ಸರಪಳಿಯಲ್ಲಿ ಮೇಲ್ವರ್ಗದ ಸ್ಥಾನ ಪಡೆದಿರುವ ಹುಲಿಯ ವ್ಯಜ್ಯ್ನಾನಿಕ ಹೆಸರು 'Panthera tigris'


.ಮುಖ್ಯವಾಗಿ 5 ಜಾತಿಯ ಹುಲಿಗಳನ್ನು ಪ್ರಪಂಚದಲ್ಲಿ ಗುರುತಿಸಲಾಗಿದೆ


.ಹುಲಿಗಳ native 'ಏಷಿಯಾ' ಖಂಡ


.ಹುಲಿಗಳ ಗುಂಪನ್ನು 'streak' ಎಂದು ಕರೆಯುತ್ತಾರೆ


.ಹುಲಿಗಳು ಮಾಡುವ ಶಬ್ದವನ್ನು 'growl' ಎಂದು ಕರೆಯುತ್ತಾರೆ


.ವನ್ಯ ಹುಲಿಗಳ ಜೀವಿತಾವದಿ 10 ರಿಂದ 15 ವರ್ಷಗಳು.ಮೃಗಾಲಯದಲ್ಲಿ ವಾಸಿಸುವ ಹುಲಿಗಳು 20 ವರ್ಷಗಳವರೆಗೆ ಬದುಕಬಲ್ಲವು


.ಹುಲಿಗಳನ್ನು 'umbrella ಜಾತಿಯ ಪ್ರಾಣಿಗಳು' ಎನ್ನುತ್ತಾರೆ.ಅಂದರೆ ಹುಲಿಗಳನ್ನು ಉಳಿಸಬೇಕಾದರೆ ಅದರ ವಾಸ ಸ್ಥಾನ,ಹಾಗು ಅದರ ಆಹಾರದ ಪ್ರಾಣಿಗಳನ್ನು ಉಳಿಸಲೇ ಬೇಕು

.ಹುಲಿಗಳ 'ಪಂಜ' ಅತ್ಯಂತ ಬಲಶಾಲಿ.ಹುಲಿ ಪಂಜದಲ್ಲಿ ಮಾನವನ ತಲೆಗೆ ಹೊಡೆಯಿತೆಂದರೆ ತಲೆಯೇ 2 ಹೊಳಾಗುವಷ್ಟು ಶಕ್ತಿ ಆ ಹೊಡೆತದಲ್ಲಿರುತ್ತದೆ

.ಹುಲಿಗಳು 'ಹಗಲು ಬೇಟೆಯಾಡುವ' (ಹಗಲು ಹೊತ್ತಿನಲ್ಲಿ ಬೇಟೆಯಾಡುವ) ಪ್ರಾಣಿಗಳು.ಸೂರ್ಯ ಮುಳುಗುವ ಹೊತ್ತಿನಲ್ಲಿ ಅವು ಹೆಚ್ಚು ಕಾರ್ಯಪ್ರವೃತವಾಗಿರುತ್ತವೆ 


.ಹುಲಿಗಳಿಗೆ ನೀರೆಂದರೆ ಪಂಚ ಪ್ರಾಣ.ಅದೇ ಚಿರತೆ ನೀರನ್ನು ಇಷ್ಟ ಪಡುವುದಿಲ್ಲ


.ಸಾಧಾರಣವಾಗಿ ಹುಲಿಗಳು 300 kg ,11 ಅಡಿಗಳವರೆಗೂ ಬೆಳೆಯಬಲ್ಲವು

.ಹುಲಿಗಳಲ್ಲೇ ಅತ್ಯಂತ ಬಲಿಷ್ಟವಾದ ಹುಲಿಗಳ ಜಾತಿ 'Siberian'.ದಾಖಲಾದ ಅತಿ ಬಲಿಷ್ಟ ಹುಲಿ ಇದೇ ಜಾತಿಗೆ ಸೇರಿದ್ದು.ಅದು 465 kg ತೂಗುತ್ತಿತ್ತು

.ಎರಡನೇ ಅತ್ಯಂತ ಬಲಿಷ್ಟ ಹುಲಿಗಳ ಜಾತಿ Bengal tiger .ಇವು 380 ಪೌಂಡ್ ತೂಗಬಲ್ಲವು


.ಸಣ್ಣ ಗಾತ್ರದ ಹುಲಿಗಳ ಜಾತಿ 'Sumatran' ಇವು 250 ಪೌಂಡ್ ತೂಗಬಲ್ಲವು


.ಹುಲಿಯ ಜೊಲ್ಲು antiseptic ತರಹ ಕೆಲಸ ಮಾಡುತ್ತದೆ.ಅವುಗಳು ಗಾಯವನ್ನು ಈ ತಂತ್ರದ ಮೂಲಕ ವಾಸಿ ಮಾಡಿಕೊಳ್ಳುತ್ತದೆ


.ಒಂದು ಬೆಳೆದ ಹುಲಿಯ territory 100 square ಮೈಲಿಗಳನ್ನು ಒಳಗೊಂಡಿರುತ್ತದೆ.ಅಂದರೆ ಒಂದು ಹುಲಿಯನ್ನು ರಕ್ಷಿಸಿದರೆ 100 square ಮೈಲಿ ಉಳಿಸಿದಂತೆ


.ಹುಲಿಗಳು ತಮ್ಮ territory ಯನ್ನು urine ನ ಮೂಲಕ mark ಮಾಡಿರುತ್ತವೆ.ಈ urine ವಾಸನೆ ಇನ್ನೊಂದು ಹುಲಿಗೆ ತನ್ನ ಪ್ರದೇಶವನ್ನು ಅತಿಕ್ರಮಣ ಮಾಡದಂತೆ ಎಚ್ಚರಿಕೆ 

.ಒಂದು ಗಂಡು ಹುಲಿಯ tettitory ಯನ್ನು ಹಲವು ಹೆಣ್ಣು ಹುಲಿಗಳು ಅತಿಕ್ರಮಿಸಿಕೊಂಡಿರುತ್ತವೆ

.ಒಂದು ಹುಲಿ ಒಂದು ಊಟದಲ್ಲಿ 60 ಪೌಂಡ್ ಮಾಂಸವನ್ನು ತಿನ್ನಬಲ್ಲದು


.ಹುಲಿ ಹಿಡಿದ ಬೇಟೆಯನೆಲ್ಲಾ ಒಮ್ಮೆಲೇ ತಿಂದು ಮುಗಿಸುವುದಿಲ್ಲ.ಆ ಕಳೇಬರವನ್ನು ನಂತರದ ಊಟಕ್ಕಾಗಿ ಮುಚ್ಚಿಡುತ್ತದೆ


. ಮಾನವನ ಕೈ ಬೆರಳಚ್ಚು ತರಹ ಹುಲಿಗಳ ಪಟ್ಟೆಯಲ್ಲಿ ವ್ಯತ್ಯಾಸವಿರುತ್ತದೆ.ಹೆಚ್ಚಿನ ಹುಲಿಗಳಿಗೆ 100 ಕ್ಕಿಂತಲೂ ಹೆಚ್ಚು ಪಟ್ಟೆಗಳಿರುತ್ತದೆ


.ಸಾಧಾರಣವಾಗಿ ಹುಲಿಗಳು 2 ರಿಂದ 3 ದಿನಗಳ ವರೆಗೆ ಊಟವಿಲ್ಲದೆ ಇರಬಲ್ಲವು


.ನಿಮಗೆ ಗೊತ್ತಿರಬಹುದು ಮನೆಯಲ್ಲಿ ಸಾಕಿದ ಬೆಕ್ಕುಗಳು ದಿನಕ್ಕೆ 18 ಘಂಟೆಗಳ ಕಾಲ ನಿದ್ರಿಸುತ್ತದೆ.ಹಾಗೆ ನಮ್ಮ ಹುಲಿರಾಯ ಕೂಡ ದಿನಕ್ಕೆ 18 ಘಂಟೆ ನಿದ್ರಿಸುತ್ತಾನೆ


.ಹುಲಿಗಳ ಕೇಳುವಿಕೆಯ ಶಕ್ತಿ ಅತ್ಯದ್ಭುತ.ಒಂದು ಸಣ್ಣ ಕಡ್ಡಿಯ ಮುರಿಯುವಿಕೆಯನ್ನು ಸಹ ಅತ್ಯಂತ ಸ್ಪಷ್ಟವಾಗಿ ಕೇಳಿಸಿಕೊಳ್ಳಬಲ್ಲವು 


.ಆದರೆ ಹುಲಿಗಳಿಗೆ ವಾಸನೆ ಗ್ರಹಿಕೆ ಶಕ್ತಿ ಕಡಿಮೆ


.ಇನ್ನು ಹುಲಿಯ ನಡಿಗೆ.ನೀವು ಕಾಡಿನಲ್ಲಿ (ಹುಲಿ ಇರುವ ಕಾಡು?)ನಲ್ಲಿ ನಡೆದು ಹೋಗುತ್ತಿರಬೇಕಾದರೆ ಒಂದು ಸಣ್ಣ ಸುಳಿವನ್ನು ಸಹ ನೀಡದೆ ನಿಮ್ಮ ಎದುರು ಪ್ರತ್ಯಕ್ಷವಾಗುವ ಚಕ್ಯತೆಯ ನಡಿಗೆ ಹುಲಿಗಳದ್ದು


.ಈಜಾಡುವುದು ಎಂದರೆ ನಮ್ಮ ಹುಲಿ ಮಹಾಶಯರಿಗೆ ಎಲ್ಲಿಲ್ಲದ ಪ್ರೀತಿ


.ತಮ್ಮ 3 ನೇ ವಯಸ್ಸಿಗೇನೆ ಹುಲಿಗಳು ಲೈಂಗಿಕ ಪ್ರಬುದ್ದತೆಯನ್ನು ಹೊಂದುತ್ತವೆ


.ಹೆಣ್ಣು ಹುಲಿ ಸಾಮಾನ್ಯವಾಗಿ 2 ರಿಂದ 3 ಮರಿಗಳಿಗೆ ಜನ್ಮ ನೀಡುತ್ತಾಳೆ.ಆ ಮರಿಗಳಿಗೆ ಬದುಕುವ ಎಲ್ಲಾ ತರದ ಶಿಕ್ಷಣವನ್ನು ಇವಳೇ ನೋಡಿಕೊಳ್ಳುತ್ತಾಳೆ.ಇವಳು ಮರಿಗೆ ಬದುಕಲು ಕಲಿಯುವ ಪಾಟವನ್ನು ಹೇಳಿಕೊಡುವಾಗ ಆ ದೃಶ್ಯವನ್ನು ಕಣ್ಣಾರೆ ಕಂಡಾಗ ನಮಗೆ ಗೊತ್ತಾಗುತ್ತದೆ ಪ್ರಕೃತಿ ಹೇಗೆ ತನ್ನ ಸೃಷ್ಟಿಯಲ್ಲಿ ಎಂತೆಂತಹ ವಿಚಿತ್ರಗಳನ್ನು ಇಟ್ಟಿದೆ ಎಂದು

.ಹುಲಿಗಳ ಮರಿಗಳನ್ನು 'cubs'ಎಂದು ಕರೆಯುತ್ತಾರೆ

.ಹುಟ್ಟಿದಾಗ ಮರಿಗಳಿಗೆ ಕಣ್ಣು ಕಾಣುವುದಿಲ್ಲ.ನಂತರ ಅದು ಸರಿಯಾಗುತ್ತದೆ


.ದಿನವೊಂದಕ್ಕೆ 100 ಗ್ರಾಂ ನಷ್ಟು ಮರಿಗಳು ಬೆಳೆಯಬಲ್ಲವು


.ಮರಿಗಳು ಸ್ವಾತಂತ್ರವಾಗಿ ಬೇಟೆಯಾಡಲು ಕನಿಷ್ಟ 18 ತಿಂಗಳು ಬೇಕು


.ಸಾಮಾನ್ಯವಾಗಿ 2 ರಿಂದ 3 ವರ್ಷಗಳ ವರೆಗೆ ಮರಿಗಳು ತಾಯಿಯ ಜೊತೆಯಲ್ಲೇ ಇರುತ್ತದೆ


.ಹಂದಿ,ಜಿಂಕೆ,ಕಾಡೆಮ್ಮೆ,ಮೊಲಗಳು ಹುಲಿಗಳ ಕೆಲವು ಆಹಾರಗಳು


.ಸಾಧಾರಣವಾಗಿ ಬಿಳಿಯ ಹುಲಿಗಳನ್ನು ನೀವು ಮೃಗಾಲಯದಲ್ಲಿ ನೋಡಿರಬಹುದು.ಇದು mutation ನಿಂದ ಆಗುವ ಒಂದು ಸೃಷ್ಟಿ.ಚಿರತೆಯಲ್ಲೂ ಸಹ ಕಪ್ಪು ಚಿರತೆಗಳು ಕಾಣ ಬರುತ್ತವೆ


.ರಾತ್ರಿಯ ಸಮಯದಲ್ಲಿ ಇವುಗಳ ದೃಷ್ಟಿಯ ಶಕ್ತಿ ಮನುಷ್ಯನ ದೃಷ್ಟಿ ಶಕ್ತಿಗಿಂತ 6 ಪಟ್ಟು ಹೆಚ್ಚು


.ಹುಲಿಗಳ ಹಲ್ಲುಗಳ ಸಂಖ್ಯೆ ಸಾಮಾನ್ಯವಾಗಿ 30 .ಇವುಗಳು ಬಲವಾದ ಕೋರೆ ಹಲ್ಲುಗಳಿಂದ ಬೇಟೆಯ ಕುತ್ತಿಗೆಗೆ ಬಾಯಿ ಹಾಕಿ ಅವುಗಳನ್ನು ಕೊಲ್ಲುತ್ತವೆ


.ಯಾವಾಗ ಹುಲಿಗಳಿಗೆ ಕಾಡಿನಲ್ಲಿ ಆಹಾರ ಸಿಗುವುದಿಲ್ಲವೋ ಆಗ ಅವು ನಾಡಿನತ್ತ ಮುಖ ಮಾಡಿ ದನ ಕರುಗಳನ್ನು ಬೇಟೆಯಾಡುತ್ತವೆ.ಈ ಸಮಯದಲ್ಲೇ ಅವುಗಳು ಕೆಲವೊಮ್ಮೆ ಮನುಷ್ಯರನ್ನು ತಿನ್ನುವ 'ನರ ಭಕ್ಷಕ'ಗಳಾಗಿ ಪರಿವರ್ತನೆ ಹೊಂದುವುದು



.ಇನ್ನೂ ಕೆಲವೊಮ್ಮೆ ಅವುಗಳಿಗೆ ಮಾನವನು ಮಾಡಿದ ಗಾಯಗಳಿಂದಾಗಿ,ಅಥವಾ ಕಾಡು ಪ್ರಾಣಿಗಳ ಜೊತೆ ಕಾದಾಟದಿಂದಾದ ಗಾಯಗಳಿಂದ ಬೇಟೆಯಾಡಲು ಸಾಧ್ಯವಾಗದಿದ್ದಾಗ ಅವುಗಳು ನರಭಕ್ಷಕಗಳಾಗಿ ಮಾರ್ಪಡುತ್ತವೆ (ಈ ನರಭಕ್ಷಕ ಹುಲಿಗಳ ಬಗ್ಗೆ ಮುಂದಿನ ದಿನಗಳಲ್ಲಿ ನಿಮಗೆ ಹೆಚ್ಚು ಮಾಹಿತಿ ನೀಡುತ್ತೇನೆ)

.ಪ್ರಕೃತಿಯ ಇಂತಹ ಬಲಿಷ್ಟ ಜೀವಿಗಳಿಗೂ ಇಂದು ಬದುಕು ದುಸ್ತರವಾಗಿದೆ.ಒಂದಾನೊಂದು ಕಾಲದಲ್ಲಿ ಕಾಡನ್ನು ಆಳುತ್ತಿದ್ದ ಈ ಚಕ್ರವರ್ತಿಗಳು ಇಂದು ಈ ಭೂಮಿಯಿಂದಲೇ ಕಣ್ಮರೆಯಾಗುತ್ತಿದೆ


.ಒಂದು,ಎರಡು ಅಂತ ಏಣಿಸಿ ಭಾರತದಲ್ಲಿ 1400 ಹುಲಿಗಳಿವೆ ಎಂದು ಹೇಳುವಂತಹ ಹೀನಾಯ ಪರಿಸ್ತಿತಿಯನ್ನು ಮಾನವ ಇಂದು ನಿರ್ಮಿಸಿದ್ದಾನೆ

 .ಹುಲಿಗಳ ಚರ್ಮ,ಉಗುರುಗಳೇ ಅವುಗಳ ಜೀವಕ್ಕೆ ಕುತ್ತು ತರಿಸಿ ಇಂದು ಅವುಗಳನ್ನು ಈ ಪರಿಸ್ತಿತಿಗೆ ತಂದು ನಿಲ್ಲಿಸಿವೆ

.ಅರಣ್ಯ ನಾಶ,ಹುಲಿಗಳ ಆಹಾರದ ಪ್ರಾಣಿಗಳ ಕೊರತೆ,ಮನುಷ್ಯನ ಮನೋರಂಜನೆಗೆ ಬೇಟೆ ಎನ್ನುವ ಹುಚ್ಚು ತೆವಲು ಗಳಿಂದಾಗಿ ಇಂದು ಹುಲಿ ಇತಿಹಾಸದ ಪುಟ ಸೇರುವುದರಲ್ಲಿದೆ


.ಒಂದು ಹೆಣ್ಣು ತಾಯಿ ಹುಲಿ ಅದರ ಮರಿಗಳಿಗೆ ಜನ್ಮ ನೀಡಿದ ಮೇಲೆ ಸತ್ತರೆ ಆ ಮರಿಗಳು ಅಕ್ಷರಶಃ ತತ್ತರಿಸಿ ಹೋಗುತ್ತವೆ.ತಾಯಿಯಿಲ್ಲದೆ ಬೇಟೆಯ ಶಿಕ್ಷಣವನ್ನು ಕಲಿಯಲಾಗದ ಇವು ಉಪವಾಸದಿಂದಲೇ ಸಾಯುತ್ತವೆ


.ಇಂದು ಹುಲಿಗಳನ್ನು ಉಳಿಸಲು ಎಲ್ಲಿಲ್ಲದ ಪ್ರಯತ್ನದ ನಡುವೆಯೂ ಹುಲಿಗಳು ಅಸ್ವಾಭಾವಿಕವಾಗಿ ಸಾಯುತ್ತಿರುವುದನ್ನು ನೋಡಿದರೆ ಈ ಹಾಳು,ಪಾಪಿ ಮನುಷ್ಯರು ಖಂಡಿತ ಹುಲಿಗಳನ್ನು ಇತಿಹಾಸದ ಪುಟಗಳಲ್ಲಿ ಸೇರಿಸುವ ದಿನಗಳು ಹೆಚ್ಚಿಗೆ ದೂರವಿಲ್ಲ .ಇದು ಅರಗಿಸಿಕೊಳ್ಳಲಾಗದ ಕಹಿ ಸತ್ಯ


.ನಾಳೆ ನಿಮ್ಮ ಮಕ್ಕಳು ಈ ಪೋಸ್ಟ್ ನೋಡಿ ಇದು ಯಾವ ಪ್ರಾಣಿ ಎಂದು ಕೇಳಿದರೂ ಆಶ್ಚರ್ಯ ಪಡಬೇಕಾಗಿಲ್ಲ 


.ಪ್ರಕೃತಿಯ ಅದ್ಭುತ ಸೃಷ್ಟಿ ಒಂದು ಹೀಗೆ ಭೂಮಿಯಿಂದಲೇ ಕಣ್ಮರೆಯಾಗುತ್ತಿರುವುದನ್ನು ನೋಡಿದರೆ ಒಂದು ಕ್ಷಣ ಕಣ್ಣಂಚಿನಲ್ಲಿ ನೀರು ಬಂದು ಹೋಗುತ್ತದೆ (ನಿಮಗೆ ಬಂತೋ ಇಲ್ಲವೋ ಗೊತ್ತಿಲ್ಲ,ನಾನಂತೂ ಈ ಲೈನ್ ಬರೆಯುವಾಗ ಕಣ್ಣಿರಿಟ್ಟಿದ್ದೇನೆ)


.ನಿನ್ನನ್ನು ಈ ಪರಿಸ್ತಿತಿಗೆ ತಂದ ಮನುಷ್ಯರ ಜಾತಿಯೇ ನಾನು ಆಗಿರುವುದರಿಂದ ನಿನ್ನಲ್ಲಿ ಕ್ಷಮೆಯನ್ನು ಕೇಳುತ್ತೇನೆ..


ಓ ಹುಲಿರಾಯ ನಮ್ಮನ್ನು ಬಿಟ್ಟು ಹೋಗದಿರು..................

 


Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....