-ನಂದಿಯ ಮೇಲೆ ಮಂಜಿನ ನರ್ತನ - .ಸಾಧಾರಣವಾಗಿ ನಾವೆಲ್ಲಾ ನಂದಿ ಬೆಟ್ಟವನ್ನು ನೋಡಿರುತ್ತೇವೆ.ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿದಿರುತ್ತೇವೆ .ಅಕಸ್ಮಾತ್ ನೀವು ನಂದಿ ಬೆಟ್ಟಕ್ಕೆ ಹೋದಾಗ ಅಲ್ಲಿ ಮಳೆ ಬರುವ ಸೂಚನೆಗಳಿದ್ದರೆ ನೀವು ಪುಣ್ಯವಂತರು.ಏಕೆಂದರೆ ಮಳೆ ಹಾಗು ಗಾಳಿಯ ಆರ್ಭಟದ ಸಮಯದಲ್ಲಿ ನಂದಿ ಬೆಟ್ಟದ ಪ್ರಕೃತಿಯನ್ನು ಸವಿಯುವ ಮಜವೇ ಬೇರೆ... .ನಾನು ಇಂದು ಇಲ್ಲಿ ಪೋಸ್ಟ್ ಮಾಡಲು ಹೊರಟಿರುವ ಚಿತ್ರಗಳೂ ಕೂಡ ನಂದಿ ಬೆಟ್ಟದ ಮೇಲೆ ಮುಂಜಾನೆಯ ಮಂಜು ಕವಿದಿರುವಾಗ ತೆಗೆದಿರುವ ಸುಂದರ ಚಿತ್ರಗಳು .ಈ ಚಿತ್ರಗಳನ್ನೂ ತೆಗೆದಿದ್ದು ನನ್ನ ಸಹೋದರ ಸುಮಂತ್.. ಚಳಿಗಾಲದ ಒಂದು ಮುಂಜಾನೆ ನಂದಿ ಬೆಟ್ಟಕ್ಕೆ ಅವನು ಭೇಟಿ ನೀಡಿದಾಗ ಅವನ ಕಣ್ಣೇ ನಂಬಲಾರದ ಒಂದು ಸುಂದರ ಲೋಕ ಅಲ್ಲಿ ತೆರೆದುಕೊಂಡಿತ್ತು .So ನಂದಿ ಬೆಟ್ಟದ ಮೇಲೆ ಮಂಜಿನ ನರ್ತನದ ಸುಂದರ ಚಿತ್ರಗಳು ನಿಮ್ಮ ಕಣ್ಣು ತಣಿಸಲು...... -ಪ್ರಕೃತಿಯನ್ನು ರಕ್ಷಿಸಿ-
Posts
Showing posts from February, 2012