Wednesday, February 23, 2011

-ಸ್ಪೆಷಲ್ ಹೂವುಗಳು-
.ದಿನೇಶ್ J .K ಅವರು ತೆಗೆದ ಸ್ಪೆಷಲ್ ಹೂವುಗಳ ಕೆಲವು ಸುಂದರ ಚಿತ್ರಗಳು ಈ ಪೋಸ್ಟ್ನಲ್ಲಿ

1 .ಮುತ್ತುಗ-FOREST  FIRE
.ಬೆಂಕಿಯ ಜ್ವಾಲೆಯನ್ನು ಹೋಲುತ್ತದೆ ಈ ಹೂವು.ಈ ಹೂವನ್ನು ಕಾಡಿನಲ್ಲಿ ನೋಡಿದಾಗ ಒಮ್ಮೆನಾವು ಕಾಡಿಗೆ ಬೆಂಕಿ ಬಿದ್ದಿದೆಯೇನೂ ಎಂದುಕೊಳ್ಳಬೇಕು.ಇದರ ಮಕರಂದವನ್ನು ಕಾಗೆ ಕೂಡ ಕುಡಿಯುತ್ತದೆ2 .ಮಾವು-MANGO
.ಇದು ಮಾವು ಹೂವು ಬಿಡುವ ಸಮಯ.ಈ ಹೂವಿನ ಸುವಾಸೆನೆಯೇ ಅದ್ಭುತ

3 .ಬಿದಿರು-BAMBOO.ಬಿದಿರು ಸಾಯುವ ಸಮಯದಲ್ಲಿ ಹೂವು ಬಿಡುತ್ತದೆ.ಬಿದಿರು ಹೂವು ಬಿಟ್ಟರೆ ಬರಗಾಲ ಎಂಬ ಮೂಡನಂಭಿಕೆ ಜನರಲ್ಲಿದೆ.ಅವೆಲ್ಲ ಮೂಡನಂಭಿಕೆ ಸುಳ್ಳು.ಬಿದಿರು ಹೂವು ಬಿಟ್ಟ ಸಂದರ್ಭದಲ್ಲಿ ಅದಕ್ಕೆ ಬೆಂಕಿ ತಗುಲಬಾರದು,ಏಕೆಂದರೆ ಆ ಹೂವಿನಲ್ಲಿ ಅಕ್ಕಿಯಂತಹ ಬೀಜವಿದ್ದು ಮಳೆ ಬಂದಾಗ ಇದು ಬಿದಿರಿನ ಸಂತಾನ ಹೆಚ್ಚಲು ಮೂಲ.ಅಕಸ್ಮಾತ್ ಬಿದಿರಿಗೆ ಬೆಂಕಿ ಬಿದ್ದರೆ ಅದು ಬಿದಿರಿನ ಸಂತಾನವನ್ನೇ ನಾಶ ಮಾಡುತ್ತದೆ.ಅದ್ದರಿಂದ ಬಿದಿರು ಹೂವು ಬಿಟ್ಟಾಗ ಅದಕ್ಕೆ ಬೆಂಕಿ ಬೀಳದಂತೆ ಎಚ್ಚರ ವಹಿಸಬೇಕು

.Image Courtesy-Dinesh.j.k

-ಪ್ರಕೃತಿಯನ್ನು ರಕ್ಷಿಸಿ-

Sunday, February 20, 2011

-ತುಂಗೆಯ ನೋವು-
.ನಾನು ಇಂದು ನಿಮಗೆ ಹೇಳಲು ಹೊರಟಿರುವುದು ತುಂಗೆಯ ತಟದಲ್ಲಿ ಬೇಕಾ ಬಿಟ್ಟಿ ನಡೆಯುತ್ತಿರುವ ಮರಳು ದಂಧೆಯ ಬಗ್ಗೆ

.ಪ್ರತೀ ವರ್ಷ ಮಲೆನಾಡಿನಲ್ಲಿ ಮಳೆಗಾಲ ಮುಗಿದ ಮೇಲೆ ತುಂಗೆಯ ದಡದಲ್ಲಿ ಮರಳು ವ್ಯವಹಾರ ಕಾಮನ್.ಕೆಲವೆಡೆ ಸಕ್ರಮವಾಗಿ,ಕೆಲವೆಡೆ ಅಕ್ರಮವಾಗಿ ಈ ವ್ಯವಹಾರ ನಡೆಯುತ್ತದೆ


.ಈ ಸಾರಿ ಮರಳಿಗೆ ಬಹಳ ಭೇಡಿಕೆ ಇದ್ದು,ಬೆಂಗಳೂರು ನಗರದಲ್ಲಿ ಲೋಡ್ ಒಂದಕ್ಕೆ 15 ,000 ಕ್ಕೂ ಹೆಚ್ಚು ಹಣ ನೀಡಲಾಗುತ್ತಿದೆ


.ಯಾವಾಗ ಮರಳಿಗೆ ಇಷ್ಟೊಂದು ಬೆಲೆ ಬಂತೂ ಆಗ ಇಲ್ಲಿನ ಕೆಲವು ಮರಳು ವ್ಯವಹಾರ ಮಾಡುವವರು ಕಂಡುಕೊಂಡ ಕೆಟ್ಟ ಉಪಾಯವೇ ಹಿಟಾಚಿ ಬಳಸಿ ಕೇವಲ ದಡದಲ್ಲಿ ಅಲ್ಲದೆ ನದಿಯ ಒಳಗಿನಿಂದಲೂ ಮರಳು ಎತ್ತುವ ಕೆಟ್ಟ ಪದ್ಧತಿ


.ಈ ತರಹ ನದಿಯ ಒಳಗಿನಿಂದ ಹಸಿ ಮರಳು ಎತ್ತುವುದು ಕಾನೂನು ಬಾಹೀರ.ಆದರೂ ಈ ತರಹದ ಕೆಟ್ಟ ಪದ್ಧತಿ ಎಗ್ಗಿಲ್ಲದೆ ನಡೆದಿತ್ತು,ಇದಕ್ಕೇ ಕಾರಣ ನಾನು ಬಿಡಿಸಿ ಹೇಳಬೇಕಾಗಿಲ್ಲ


.ಈ ತರಹದ ಪದ್ದತಿಯಿಂದ ತುಂಗೆಗೆ ದೊಡ್ಡ ಮಟ್ಟದ ಅಪಾಯ ಎದುರಾಗುತ್ತಿದೆ,ನದಿ ಪಾತ್ರವೇ ಬದಲಾಗುತ್ತಿದೆ,ಭೇಸಿಗೆಯಲ್ಲೂ ಮೈದುಂಬಿ ಹರಿಯುತ್ತಿದ್ದ ತುಂಗೆ ಇಂದು ಬರಡಾಗುತ್ತಿದ್ದಾಳೆ,ಜಲಚರಗಳು ಇದರಿಂದ ಸಾಯುತ್ತಿವೆ.ಒಟ್ಟಿನಲ್ಲಿ ತುಂಗೆಗೆ ಇದು ಬಹು ದೊಡ್ಡ ಅಪಾಯವನ್ನು ಮುಂದಿನ ದಿನಗಳಲ್ಲಿ ತಂದೊಡ್ಡುವುದು ನಿಶ್ಚಿತ


.ಇದರ ವಿರುದ್ದ ಕೆಲವು ಊರಿನ ಜನ(ತುಂಗೆ ದಡದಲ್ಲಿರುವ) ಪ್ರತಿಭಟನೆ ಮಾಡಿ ಇದನ್ನು ನಿಲ್ಲಿಸಿದರೆ,ಕೆಲವು ಊರಿನ ಜನ ಜಾಣ ಮೂಕರಾಗಿದ್ದಾರೆ


.ಇದು ನಮ್ಮ ಊರಿನಲ್ಲೂ ನಡೆದಿತ್ತು,ಇದರ ವಿರುದ್ದ ಯಾರೂ ದನಿ ಎತ್ತಿರಲಿಲ್ಲ,ಕೊನೆಗೊಂದು ದಿನ ನಾನು,ದಿನೆಶಣ್ಣ ಹಾಗು ನಮ್ಮ ಪಟಾಲಂ ಇದರ ವಿರುದ್ದ ತಿರುಗಿ ಬಿದ್ದೆವು.ನಮ್ಮ ಗಲಾಟೆಯ ನಂತರ ಈ ಪದ್ದತಿಯನ್ನು ನಿಲ್ಲಿಸಲಾಯಿತು


.ಲಾಭದ ಆಸೆಗಾಗಿ ಪ್ರಕೃತಿದತ್ತವಾದ ನದಿ,ಕಾಡು,ವನ್ಯ ಜೀವಿಗಳ ನಾಶ ಎಷ್ಟು ಹೀನ ಕೃತ್ಯವಲ್ಲವೇ....??ಅದನ್ನು ನೋಡಿಯೂ ನಮಗೇಕೆ ಎಂದು ಸುಮ್ಮನಿರುವುದು ಅದಕ್ಕಿಂತಲೂ ಘೋರ ಕೃತ್ಯ....ಹಿಟಾಚಿ ಬಳಸಿ ನದಿ ಒಳಗಿಂದ ನೀರೆತ್ತಿದ್ದರ ಪರಿಣಾಮ ತುಂಗೆಯ ಚಿತ್ರಣ ಬದಲಾದ ಕೆಲವು ಇಮೇಜ್ ಗಳನ್ನು ಇಲ್ಲಿ ಹಾಕಿದ್ದೇನೆ


.ನೀವೂ ನೋಡಿ ತುಂಗೆಯ ನೋವನ್ನು
.ನಾನು ಕಪ್ಪು ಗೆರೆಯಲ್ಲಿ ಗುರುತಿಸಿರುವವರೆಗೆ ಮರಳಿತ್ತು ಮೊದಲು.ಈಗ ನೋಡಿ ಮರಳು ನದಿ ಹೇಗೆ ದಡದೆಡೆಗೆ ಸೆಳೆಯಲ್ಪಟ್ಟಿದೆ ಎಂದು


.ನದಿಯ ಒಳಗಿನಿದ ಹಸಿ ಮರಳು ಎತ್ತಿದೆಡೆ ಇಳಿದು ಪರೀಕ್ಷೆ ಮಾಡುತ್ತಿರುವ ನಮ್ಮ ಪಟಾಲಂ


.ಮರಳು ಸಾಗಿಸುವ ಲಾರಿಯ ಗುರುತು

.ನೋಡಿದ್ದೀರಾ ಅಲ್ಲವ ತುಂಗೆ ಅನುಭವಿಸುತ್ತಿರುವ ನೋವನ್ನು....ಇನ್ನಾದರೂ ಜನರು ಇಂತಹ ಅಕ್ರಮಗಳ ವಿರುದ್ದ ತಿರುಗಿಬೀಳಬೇಕಿದೆ.ಇಲ್ಲವಾದಲ್ಲಿ ಲಕ್ಷಾಂತರ ಜನರ ದಾಹವನ್ನು ನೀಗಿಸುವ ತುಂಗೆ ಸಂಪೂರ್ಣ ಬರಿದಾಗುವುದರಲ್ಲಿ ಸಂದೇಹವಿಲ್ಲ


-ಪ್ರಕೃತಿಯನ್ನು ರಕ್ಷಿಸಿ-

Friday, February 18, 2011

-RAGAT PARADISE ನಲ್ಲಿ ಇಲ್ಲಿಯವರೆಗೆ-
.ಈವರೆಗೆ ನನ್ನ ಬ್ಲಾಗ್ ನಲ್ಲಿ ಪ್ರಕಟಿಸಲಾದ ಎಲ್ಲಾ ಲೇಖನಗಳ ಸಮಗ್ರ ಪಟ್ಟಿ ಈ ಪೋಸ್ಟ್ ನಲ್ಲಿ

.So ನೀವು ಮಿಸ್ ಮಾಡಿಕೊಂಡ ಪೋಸ್ಟ್ ಗಳಿಗೆ ಈ ಪೋಸ್ಟ್ ನಲ್ಲಿದೆ ದಾರಿ

.29 ಜೂನ್ 2010 ರಿಂದ ಫೆಬ್ರವರಿ 16,2011 ರರ ವರೆಗಿನ ಎಲ್ಲ ಪೋಸ್ಟ್ ಗಳು ಕೆಳಗಿನ ಪಟ್ಟಿಯಲ್ಲಿವೆ

.ಇವಿಷ್ಟು RAGAT PARADISE ನಲ್ಲಿ ಪ್ರಕಟವಾದ ಮೊದಲ 100 ಪೋಸ್ಟ್ ಗಳ ಪಟ್ಟಿ .ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಕೃತಿ ವಿಷಯಗಳನ್ನು ನಿಮಾಗಾಗಿ ಇಲ್ಲಿ ಪ್ರಕಟಿಸುತ್ತೇನೆ.keep visiting this blog for more updates.Thank you 1 and all


RAGHU
-RAGAT PARADISE-

-SAVE NATURE-

Wednesday, February 16, 2011

-ಪ್ರಕೃತಿ PARADISE ನಲ್ಲಿ ಶತಕ-
.ಪ್ರಿಯ ಓದುಗ ಮಿತ್ರರೇ ನಿಮ್ಮ ಈ ಪ್ರಕೃತಿಯ RAGAT PARADISE ಗೆ ಈಗ 100 ಪೋಸ್ಟ್ ಗಳನ್ನು ಹೊಂದಿದ ಗರಿ

.ನನ್ನ ಈ ಬ್ಲಾಗ್ನಲ್ಲಿ ಕೆಲವೇ ತಿಂಗಳುಗಳ ಅವದಿಯಲ್ಲಿ 100 ಪೋಸ್ಟ್ ಬರೆದಿದ್ದೇನೆ ಎಂದರೆ ನನಗೆ ಒಮ್ಮೆಲೇ ಆಶ್ಚರ್ಯವಾಗುತ್ತೆ

.ಮೊದಲು ಬರೆಯಲು ಕುಳಿತಾಗ ವಿಷಯಗಳಿಗಾಗಿ ತಡವಡಿಸುತ್ತಿದ್ದೆ,ಕೇವಲ ಪ್ರಕೃತಿ ಬಗ್ಗೆ ಮಾತ್ರ ಲೇಖನವನ್ನು ಬರೆದು ಬ್ಲಾಗ್ Update ಮಾಡುವುದು ನನಗೆ ಮೊದಲು ಸುಲಭದ ಮಾತಾಗಿರಲಿಲ್ಲ .ಆದರೆ ಆ ಪ್ರಕೃತಿ ಮಾತೆಯೇ ನನ್ನ ಮನಸ್ಸಿನಲ್ಲಿ ವಿಷಯಗಳನ್ನು ಕರುಣಿಸಿ ಇಲ್ಲಿಯವರೆಗೆ ಪೋಸ್ಟ್ ಬರೆಯಲು ಸಹಕರಿಸಿದ್ದಾಳೆ ಎಂಬುದು ನನ್ನ ನಂಬಿಕೆ

.ಇದರ ಜೊತೆಗೆ ಈ ನನ್ನ ಬ್ಲಾಗ್ ಎಂಬ ಕಾಡಿನಲ್ಲಿ ಪೋಸ್ಟ್ ಎಂಬ ಮರಗಳಿಗೆ Comment ಎಂಬ ನೀರನ್ನು ಹಾಕಿ ಬೆಳಸಿದ್ದು ನೀವು..ನನ್ನ ಪ್ರಿಯ ಓದುಗ ಮಿತ್ರರು.ನಿಮ್ಮ ಅಭಿಮಾನಕ್ಕೆ ನಾನೆಂದೂ ಚಿರಋಣಿ

.ಹಾಗೆ ನೋಡಿದರೆ ನನ್ನ ಬ್ಲಾಗ್ ಪೋಸ್ಟ್ ಗಳಿಗೆ Comment ಗಳು ಕಡಿಮೆ ಎಂದೇ ಹೇಳಬಹುದು.ಇದಕ್ಕೆ ಜನರಿಗೆ ಪ್ರಕೃತಿಯ ಮೇಲೆ ಆಸಕ್ತಿ ಕಡಿಮೆ ಅಥವಾ ನಾನು ಬರೆಯುವ ಶ್ಯಲಿ ಅವರಿಗೆ ಹಿಡಿಸದೆ ಇದ್ದಿರಬಹುದು,ಬಟ್ ಅವುಗಳಿಗೆ ನಾನೆಂದು ತಲೆ ಕೆಡಿಸಿಕೊಂಡಿಲ್ಲ.ನನ್ನ ಬ್ಲಾಗ್ ಪೋಸ್ಟ್ ಓದುವ ಪ್ರಕೃತಿ ಬಗ್ಗೆ ಆಸಕ್ತಿ ಇಲ್ಲದ ಜನರಿಗೆ atleast ಅದನ್ನು ಓದಿದ ಮೇಲೆ ಪ್ರಕೃತಿ ಮೇಲೆ ಸ್ವಲ್ಪವಾದರೂ ಆಸಕ್ತಿ ,ಪ್ರೀತಿ ಮೂಡಿದರೆ ನನ್ನ ಪ್ರಯತ್ನ ಸಾರ್ಥಕ

.'I am not the best,But i am not like the rest' ಈ ವಾಕ್ಯವನ್ನು ನಂಬಿರುವವನು ನಾನು.so ನನ್ನ ಬ್ಲಾಗ್ ಕೊಡ ಅಷ್ಟೇ different ಆಗಿರಬೇಕೆಂಬುದೇ ನನ್ನ ಆಸೆ.ಇದು ಕೆಲವರಿಗೆ ಇಷ್ಟ ಆಗಬಹುದು,ಇಷ್ಟ ಆಗದೆಯೂ ಇರಬಹುದು .ಈ ಇಷ್ಟ ಪಡುವ ಜನರೇ ಈ ಬ್ಲಾಗಿನ ಆಸ್ತಿ ,ಅವರಿಗಾಗಿ i am always here

.ನನ್ನ ಬ್ಲಾಗಿನ ಓದುಗ ಮಿತ್ರರಿಗೂ,ಹೊಸ ಓದುಗರಿಗೆ ನನ್ನ ಪೋಸ್ಟ್ ಪರಿಚಯಿಸುವ ಕನ್ನಡ ಬ್ಲಾಗರ್ಸ್ ತಂಡಕ್ಕೆ ನನ್ನ ಹೃತ್ಪೂರ್ವಕ ವಂದನೆಗಳು 

.ನಿಮ್ಮ ಪ್ರೀತಿ ಪ್ರಕೃತಿಯ ಮೇಲೆ ಹಾಗು ನನ್ನ ಬ್ಲಾಗಿನ ಮೇಲೆ ಸದಾ ಇರಲೆಂದು ಆಶಿಸುತ್ತೇನೆ.........
ಇಂತಿ ನಿಮ್ಮ ಗೆಳೆಯ-ರಾಘು
.ವಿ ಸೂ-ಇಲ್ಲಿಯವರೆಗೆ RAGAT PARADISE ನಲ್ಲಿ ಪ್ರಕಟವಾದ ಎಲ್ಲಾ ಪೋಸ್ಟ್ ಗಳನ್ನು ಮುಂದಿನ ಪೋಸ್ಟ್ ನಲ್ಲಿ ಪಟ್ಟಿ ಮಾಡಿ ನಿಮ್ಮ ಮುಂದೆ ತರುತ್ತೇನೆ.ಅಲ್ಲಿಯವರೆಗೆ stay cool ......tc

-ಪ್ರಕೃತಿಯನ್ನು ರಕ್ಷಿಸಿ-

Tuesday, February 15, 2011

-ವಾರೆ ವಾ ವಿದೇಶಿಯರೇ...-
.ಇಂದು ಸಂಜೆ ನಾನು ಕಂಡ ಒಂದು ಕುತೂಹಲಕಾರಿ ಘಟನೆ ಬಗ್ಗೆ ಈ ಪೋಸ್ಟ್ ನಲ್ಲಿ ಬರೆದಿದ್ದೇನೆ

.ನಾನು ಇಂದು ಸಂಜೆ ನಮ್ಮೂರಿನ ನದಿಯ ಸಮೀಪ ನಡೆದು ಹೋಗುತ್ತಿರಬೇಕಾದರೆ ಒಂದು ಆಶ್ಚರ್ಯಕರ ಸಂಗತಿ ನೋಡಿದೆ.ಇಬ್ಬರು ವಿದೇಶಿಯರು ನದಿಯ ಸುತ್ತ ಮುತ್ತಲಿನ ಜಾಗದಲ್ಲಿ ಜನರು ಎಸದಿದ್ದ ಪ್ಲಾಸ್ಟಿಕ್,ಕಸ,ಕಡ್ಡಿಗಳನ್ನು ತೆಗುಯುತ್ತಿದರು

.ಅವರ ಬಳಿ ಹೋಗಿ ವಿಚಾರಿಸಿದಾಗ ಅವರು ಹೇಳಿದ ಮಾತು ಕೇಳಿ ಒಂದು ಕ್ಷಣ ನಾನೇ ದಂಗಾಗಿ ಹೋದೆ

.''ನಿಮ್ಮ ಊರು ಎಷ್ಟು ಸುಂದರವಾಗಿದೆ,ಇಂತಹ ಸ್ಥಳದಲ್ಲಿ ಕಸ,ಕಡ್ಡಿ,ಪ್ಲಾಸ್ಟಿಕ್ ಗಳು ಹೆಚ್ಚಾದರೆ ಅದು ಪರಿಸರಕ್ಕೂ ಹಾಗು ಜನರಿಗೂ ತೊಂದರೆಯಾಗುತ್ತದೆ,ಆದ್ದರಿಂದ ನಮ್ಮ ಕೈಲಾದಷ್ಟು ಕಸಗಳನ್ನು ತೆಗೆದು ಶುದ್ದ ಮಾಡುತ್ತಿದ್ದೇವೆ ಎಂದು'' ಇಬ್ಬರು ವಿದೇಶಿಯರು ಹೇಳಿದ ಮಾತಿದು

.ನಮ್ಮ ಊರಿಗೆ ಬರುವ ಪ್ರವಾಸಿಗರು ನದಿಯ ಅಕ್ಕ ಪಕ್ಕದ ಜಾಗದಲ್ಲಿ ಹಲವಾರು ಪ್ಲಾಸ್ಟಿಕ್ ಕಸ ಗಳನ್ನು ಎಸೆದಿರುತ್ತಾರೆ.ದಿನ ನಿತ್ಯ ಕಣ್ಣಿಗೆ ಆ ಕಸಗಳು ಕಂಡರೂ ಯಾರೂ ಅದನ್ನು ತೆಗೆಯಲು ಮನಸ್ಸು ಮಾಡುತ್ತಿರಲಿಲ್ಲ.ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಆ ಕಸಗಳನ್ನು ನೋಡಿದರೂ ತೆಗೆಯಲು ನನ್ನ ಹತ್ತಿರ ಸಾಧ್ಯವಾಗಿರಲಿಲ್ಲ

.ಅಂತಹದರಲ್ಲಿ ಬೇರೆ ಯಾವುದೂ ದೇಶದಿಂದ ಬಂದವರು ಇಲ್ಲಿನ ಕಸ ನೋಡಿ ಅದನ್ನು ತೆಗೆದು ಪರಿಸರ ಶುದ್ದಿ ಮಾಡಿದ್ದು ನಿಜವಾಗಿಯೂ ಅದ್ಭುತವೇ ಸರಿ.ಅವರ ಕೆಲಸ ನೋಡಿ ಉತ್ಸಾಹಗೊಂಡ ನಾನು ನಮ್ಮ ಹುಡುಗರು ಅವರ ಜೊತೆ ಕೈಜೋಡಿಸಿ ಅಲ್ಲಿದ್ದ ಕಸವನೆಲ್ಲಾ ಒಟ್ಟು ಮಾಡಿ ಬೆಂಕಿ ಕೊಟ್ಟೆವು.ಸುತ್ತಲೂ ಗಲೀಜಗಿದ್ದ ಜಾಗ ವಿದೇಶಿ-ಸ್ವದೇಶಿ ಕಾರ್ಯಾಚರಣೆಯ ದೆಸೆಯಿಂದ ಶುದ್ದವಾಗಿತ್ತು

.ನಮ್ಮ ದೇಶದ ಸುಂದರ ಪ್ರಕೃತಿಯ ಬೆಲೆ ನಮಗೆ ಗೊತ್ತಾಗುವುದಿಲ್ಲ,ಪರಿಸರವನ್ನು ಹಾಳು ಮಾಡುವುದು,ಹಾಳಾದ ಪರಿಸರವನ್ನು ಶುದ್ದ ಮಾಡದೆ ಇರುವುದು.ಬೇರೆ ದೇಶದ ಜನ ಇಲ್ಲಿನ ಪರಿಸರದ ಬಗ್ಗೆ ಕಾಳಜಿ ತೋರಿಸುವ ಇಂತಹ ಉದಾಹರಣೆ ನೋಡಿದರೆ ಒಂದು ಕ್ಷಣ ನಮ್ಮ ಜನಗಳ ಬಗ್ಗೆ ಭೇಸರ ಮೂಡುತ್ತದೆ.ಇಂತಹ ಘಟನೆಗಳಿಂದಾದರೂ ಜನ ಎಚ್ಚೆತ್ತು ಪರಿಸರ ರಕ್ಷಣೆಯಲ್ಲಿ ಕೈಜೋಡಿಸಿದರೆ ಅದು ನಿಜವಾಗಿಯೂ ನಮ್ಮ ದೇಶದ ಸೌಭಾಗ್ಯವೇ ಸರಿ

.ನಮ್ಮ ಪರಿಸರದ ಬಗ್ಗೆ ಕಾಳಜಿ ತೂರಿದ ಆ ಇಬ್ಬರು ವಿದೇಶಿಯರಿಗೆ ನನ್ನದೊಂದು ಸಲಾಂ...

.ಈ ಸ್ವದೇಶಿ-ವಿದೇಶಿ ಕಾರ್ಯಾಚರಣೆಯ ಕೆಲವು ಇಮೇಜ್ ಗಳು ನಿಮಗಾಗಿ... 

 .ಇವರೇ ಆ ಇಬ್ಬರು ವಿದೇಶಿಯರು


 ಸ್ವದೇಶಿ-ವಿದೇಶಿ ಕಾರ್ಯಾಚರಣೆಯ ಟೀಂ (ನಾನು ಈ ಚಿತ್ರವನ್ನು ತೆಗೆಯುತ್ತಿದ್ದೆ)

-ಪ್ರಕೃತಿಯನ್ನು ರಕ್ಷಿಸಿ-

Monday, February 14, 2011

-ಅಪರೂಪದ ಅಥಿತಿ-
.ಹಲವು ದಿನದ ನಂತರ i am back with ಅಪರೂಪದ ಅಥಿತಿ

.ಬಹಳ ವಿರಳ ಜಾತಿಯ ಬಾವಲಿಯೊಂದು ಇತ್ತೀಚಿಗೆ ದಿನೆಶಣ್ಣರ ಮನೆ ಸಮೀಪ ಕಂಡುಬಂದಿತ್ತು .ಯಾವುದೂ ಕಾರಣದಿಂದ ಚೈತನ್ಯ ಕಳೆದುಕೊಂಡಿದ್ದ ಇದನ್ನು ನಾವು ಒಂದು ಮರದ ಪೊಟರೆಯಲ್ಲಿಟ್ಟು ಅದರ ಕೆಲವು ಚಿತ್ರಗಳನ್ನು ತೆಗೆದೆವು

.ನಂತರದಲ್ಲಿ ಚೇತರಿಕೊಂಡ ಅದನ್ನು ಮರಳಿ ಅದು ಸಿಕ್ಕಿದ ಸ್ಥಳದ ಸಮೀಪವೊಂದರ ಮರದಲ್ಲಿ ಬಿಟ್ಟುಬಂದೆವು

.ಈ ಅಪರೂಪದ ಅಥಿತಿಯ ಕೆಲವು ಸುಂದರ ಇಮೇಜ್ ಗಳು ನಿಮಗಾಗಿ........

Image Coutsy-Dinesh.j.k

-ಪ್ರಕೃತಿಯನ್ನು ರಕ್ಷಿಸಿ-