-ತುಂಗೆಯ ನೋವು-
.ನಾನು ಇಂದು ನಿಮಗೆ ಹೇಳಲು ಹೊರಟಿರುವುದು ತುಂಗೆಯ ತಟದಲ್ಲಿ ಬೇಕಾ ಬಿಟ್ಟಿ ನಡೆಯುತ್ತಿರುವ ಮರಳು ದಂಧೆಯ ಬಗ್ಗೆ
.ಪ್ರತೀ ವರ್ಷ ಮಲೆನಾಡಿನಲ್ಲಿ ಮಳೆಗಾಲ ಮುಗಿದ ಮೇಲೆ ತುಂಗೆಯ ದಡದಲ್ಲಿ ಮರಳು ವ್ಯವಹಾರ ಕಾಮನ್.ಕೆಲವೆಡೆ ಸಕ್ರಮವಾಗಿ,ಕೆಲವೆಡೆ ಅಕ್ರಮವಾಗಿ ಈ ವ್ಯವಹಾರ ನಡೆಯುತ್ತದೆ
.ಈ ಸಾರಿ ಮರಳಿಗೆ ಬಹಳ ಭೇಡಿಕೆ ಇದ್ದು,ಬೆಂಗಳೂರು ನಗರದಲ್ಲಿ ಲೋಡ್ ಒಂದಕ್ಕೆ 15 ,000 ಕ್ಕೂ ಹೆಚ್ಚು ಹಣ ನೀಡಲಾಗುತ್ತಿದೆ
.ಯಾವಾಗ ಮರಳಿಗೆ ಇಷ್ಟೊಂದು ಬೆಲೆ ಬಂತೂ ಆಗ ಇಲ್ಲಿನ ಕೆಲವು ಮರಳು ವ್ಯವಹಾರ ಮಾಡುವವರು ಕಂಡುಕೊಂಡ ಕೆಟ್ಟ ಉಪಾಯವೇ ಹಿಟಾಚಿ ಬಳಸಿ ಕೇವಲ ದಡದಲ್ಲಿ ಅಲ್ಲದೆ ನದಿಯ ಒಳಗಿನಿಂದಲೂ ಮರಳು ಎತ್ತುವ ಕೆಟ್ಟ ಪದ್ಧತಿ
.ಈ ತರಹ ನದಿಯ ಒಳಗಿನಿಂದ ಹಸಿ ಮರಳು ಎತ್ತುವುದು ಕಾನೂನು ಬಾಹೀರ.ಆದರೂ ಈ ತರಹದ ಕೆಟ್ಟ ಪದ್ಧತಿ ಎಗ್ಗಿಲ್ಲದೆ ನಡೆದಿತ್ತು,ಇದಕ್ಕೇ ಕಾರಣ ನಾನು ಬಿಡಿಸಿ ಹೇಳಬೇಕಾಗಿಲ್ಲ
.ಈ ತರಹದ ಪದ್ದತಿಯಿಂದ ತುಂಗೆಗೆ ದೊಡ್ಡ ಮಟ್ಟದ ಅಪಾಯ ಎದುರಾಗುತ್ತಿದೆ,ನದಿ ಪಾತ್ರವೇ ಬದಲಾಗುತ್ತಿದೆ,ಭೇಸಿಗೆಯಲ್ಲೂ ಮೈದುಂಬಿ ಹರಿಯುತ್ತಿದ್ದ ತುಂಗೆ ಇಂದು ಬರಡಾಗುತ್ತಿದ್ದಾಳೆ,ಜಲಚರಗಳು ಇದರಿಂದ ಸಾಯುತ್ತಿವೆ.ಒಟ್ಟಿನಲ್ಲಿ ತುಂಗೆಗೆ ಇದು ಬಹು ದೊಡ್ಡ ಅಪಾಯವನ್ನು ಮುಂದಿನ ದಿನಗಳಲ್ಲಿ ತಂದೊಡ್ಡುವುದು ನಿಶ್ಚಿತ
.ಇದರ ವಿರುದ್ದ ಕೆಲವು ಊರಿನ ಜನ(ತುಂಗೆ ದಡದಲ್ಲಿರುವ) ಪ್ರತಿಭಟನೆ ಮಾಡಿ ಇದನ್ನು ನಿಲ್ಲಿಸಿದರೆ,ಕೆಲವು ಊರಿನ ಜನ ಜಾಣ ಮೂಕರಾಗಿದ್ದಾರೆ
.ಇದು ನಮ್ಮ ಊರಿನಲ್ಲೂ ನಡೆದಿತ್ತು,ಇದರ ವಿರುದ್ದ ಯಾರೂ ದನಿ ಎತ್ತಿರಲಿಲ್ಲ,ಕೊನೆಗೊಂದು ದಿನ ನಾನು,ದಿನೆಶಣ್ಣ ಹಾಗು ನಮ್ಮ ಪಟಾಲಂ ಇದರ ವಿರುದ್ದ ತಿರುಗಿ ಬಿದ್ದೆವು.ನಮ್ಮ ಗಲಾಟೆಯ ನಂತರ ಈ ಪದ್ದತಿಯನ್ನು ನಿಲ್ಲಿಸಲಾಯಿತು
.ಲಾಭದ ಆಸೆಗಾಗಿ ಪ್ರಕೃತಿದತ್ತವಾದ ನದಿ,ಕಾಡು,ವನ್ಯ ಜೀವಿಗಳ ನಾಶ ಎಷ್ಟು ಹೀನ ಕೃತ್ಯವಲ್ಲವೇ....??ಅದನ್ನು ನೋಡಿಯೂ ನಮಗೇಕೆ ಎಂದು ಸುಮ್ಮನಿರುವುದು ಅದಕ್ಕಿಂತಲೂ ಘೋರ ಕೃತ್ಯ....ಹಿಟಾಚಿ ಬಳಸಿ ನದಿ ಒಳಗಿಂದ ನೀರೆತ್ತಿದ್ದರ ಪರಿಣಾಮ ತುಂಗೆಯ ಚಿತ್ರಣ ಬದಲಾದ ಕೆಲವು ಇಮೇಜ್ ಗಳನ್ನು ಇಲ್ಲಿ ಹಾಕಿದ್ದೇನೆ
.ನೀವೂ ನೋಡಿ ತುಂಗೆಯ ನೋವನ್ನು
.ನಾನು ಕಪ್ಪು ಗೆರೆಯಲ್ಲಿ ಗುರುತಿಸಿರುವವರೆಗೆ ಮರಳಿತ್ತು ಮೊದಲು.ಈಗ ನೋಡಿ ಮರಳು ನದಿ ಹೇಗೆ ದಡದೆಡೆಗೆ ಸೆಳೆಯಲ್ಪಟ್ಟಿದೆ ಎಂದು
.ನದಿಯ ಒಳಗಿನಿದ ಹಸಿ ಮರಳು ಎತ್ತಿದೆಡೆ ಇಳಿದು ಪರೀಕ್ಷೆ ಮಾಡುತ್ತಿರುವ ನಮ್ಮ ಪಟಾಲಂ
.ಮರಳು ಸಾಗಿಸುವ ಲಾರಿಯ ಗುರುತು
.ನೋಡಿದ್ದೀರಾ ಅಲ್ಲವ ತುಂಗೆ ಅನುಭವಿಸುತ್ತಿರುವ ನೋವನ್ನು....ಇನ್ನಾದರೂ ಜನರು ಇಂತಹ ಅಕ್ರಮಗಳ ವಿರುದ್ದ ತಿರುಗಿಬೀಳಬೇಕಿದೆ.ಇಲ್ಲವಾದಲ್ಲಿ ಲಕ್ಷಾಂತರ ಜನರ ದಾಹವನ್ನು ನೀಗಿಸುವ ತುಂಗೆ ಸಂಪೂರ್ಣ ಬರಿದಾಗುವುದರಲ್ಲಿ ಸಂದೇಹವಿಲ್ಲ
-ಪ್ರಕೃತಿಯನ್ನು ರಕ್ಷಿಸಿ-

ಇಂಥ ಹೀನ ಕೃತ್ಯಗಳಿಗೆಲ್ಲ ಸ್ವಾರ್ಥವೇ ಮುಖ್ಯ ಕಾರಣ ರಘು ಸರ್... ಕಷ್ಟಪಟ್ಟು ದುಡಿಯದೆ ಸುಲಭದ ದಾರಿಯಲ್ಲಿ ಬಹಳ ಬೇಗ ಹಣ ಮಾಡಬೇಕೆಂಬುದೇ ಇವರ ಉದ್ದೇಶ, ತಾನು ತನ್ನ ವಂಶ ಬದುಕಿ ಬಾಳಿದರೆ ಸಾಕು ಅನ್ನೋಂಥ ಮನೋಭಾವ...... ಇದರ ಕಡೆ ಸಂಬಂಧಪಟ್ಟ ನಿಸ್ವಾರ್ಥ ಅಧಿಕಾರಿಗಳು ಗಮನಹರಿಸಿದರೆ ಒಳಿತು..... ಅಥವಾ ಈಗಾಗಲೇ ಗಮನಹರಿಸಿಯೂ ಸುಮ್ಮನಿದ್ದರೆ ಅವರ ವೃತ್ತಿಗೆ ಅವರು ದ್ರೋಹ ಮಾಡಿದಂತಾಗುತ್ತದೆ....
ReplyDeleteನಮ್ಮ ಜನಗಳು ಇಂಥ ಹೀನ ಕೃತ್ಯದ ವಿರುದ್ದ ಧ್ವನಿ ಎತ್ತಬೇಕಿದೆ.ಜನ ಶಕ್ತಿಯ ಮುಂದೆ ಇಂತಹ ಆಟಗಳು ನಡೆಯುವುದಿಲ್ಲ.ಅಧಿಕಾರಿಗಳನ್ನು ನಂಬಿ ಕುಳಿತರೆ ದೇವರೇ ಗತಿ ಅಲ್ವಾ
ReplyDeleteThe present System is in non-repairable condition, it can't be controlled by Law, it can't be controlled by Protests etc..etc,, it can only be controlled by the ‘conscience’ of the Person (either these ‘Gangsters’ or the Responsible Officials of the Govt.) who is willing to commit these type of illegal, anti-social, anti-nature & unethical things.
ReplyDeleteHats Off Raghanna, keep the good work....
absolutely rit.thank u 4 ur comment raganna
ReplyDelete