Monday, December 17, 2012

ಬಿಲ್ಟ್ ಫಾರ್ ದಿ ಕಿಲ್

.ಪ್ರಕೃತಿಯ ವಿಚಿತ್ರವೇ ಹಾಗೆ,ಇಲ್ಲಿ ಕೊಲ್ಲುವ ಹಾಗು ಕೊಲ್ಲಲ್ಪಡುವ ಜೀವಿಗಳ ಗಾತ್ರ ಮಹತ್ವದ್ದಾಗಿರುವುದಿಲ್ಲ

.ನೋಡಲು ಗಾತ್ರದಲ್ಲಿ ಚಿಕ್ಕವಾಗಿರುವ ಜೀವಿಗಳು ತಮ್ಮ ಗಾತ್ರದ ಎಷ್ಟೋ ಪಟ್ಟು ಹೆಚ್ಚಿನ ಗಾತ್ರದ ಜೀವಿಗಳನ್ನು ಅನಾಯಾಸವಾಗಿ ಕೊಂದು ತಿನ್ನುತ್ತವೆ.ಇಂತಹ ದೃಶ್ಯಗಳನ್ನು ನೋಡಿದಾಗ ಪ್ರಕೃತಿಯ ಮಹಿಮೆಯ ಅರಿವಾಗುತ್ತದೆ

.ಇಂತಹುದೇ ಒಂದು ಸನ್ನಿವೇಷವನ್ನು ಈ ಪೋಸ್ಟ್ ನಲ್ಲಿ ಪ್ರಕಟಿಸಿದ್ದೇನೆ.ಚಿಕ್ಕ ಹಾವೊಂದು ದೈತ್ಯ ಕಪ್ಪೆಯ ಮೇಲೆರಗಿ ಅದನ್ನು ತಿಂದ  ಚಿತ್ರಗಳನ್ನು ದಿನೇಶ್ ತಮ್ಮ ಕ್ಯಾಮರದಲ್ಲಿ ಸೆರೆಹಿಡಿದಿದ್ದಾರೆ.

.ದಿನೇಶ್ ಹಾಗು  ಈ ಸನ್ನಿವೇಶದ ಮಾಹಿತಿ ನೀಡಿದ ಗೆಳೆಯ ಕಾರ್ತಿಕ್ ರವರಿಗೆ ನಮ್ಮ ಬ್ಲಾಗ್ ಪರವಾಗಿ ಧನ್ಯವಾದಗಳು

 
-ಪ್ರಕೃತಿಯನ್ನು ರಕ್ಷಿಸಿ-

Monday, November 19, 2012

ಸೈಕ್ಲೋನ್

.ಇತ್ತೀಚೆಗಷ್ಟೇ ಅಮೇರಿಕಾವನ್ನು ತಲ್ಲಣಗೊಳಿಸಿದ ಸ್ಯಾಂಡಿಯಾಗಿರಬಹುದು.... ಭಾರತದಲ್ಲಿ ಬಾರಿ ಸುದ್ದಿ ಮಾಡಿದ್ದ 'ನೀಲಂ' ಆಗಿರಬಹುದು ಮತ್ತು ಸದ್ಯಕ್ಕೆ ಬಂಗಾಳ ಕೊಲ್ಲಿಯಲ್ಲಿ ಸೈಕ್ಲೋನ್ ಆಗಿ ಜನ್ಮ ತಳೆಯಲು ಸಿದ್ದವಾಗಿರುವ Depression ಆಗಿರಬಹುದು .. ಇಂತಹ  ಪ್ರಕೃತಿಯ ವಿನಾಶಕಾರಿ ಸೈಕ್ಲೋನ್  ಗಳ ಬಗ್ಗೆ ಬರೆಯಬೇಕೆಂದೆನಿಸಿ ಈ ಪೋಸ್ಟ್ ಬರೆದಿದ್ದೇನೆ

.ವಿನಾಶಕಾರಿ ಸೈಕ್ಲೋನ್  ಗಳು ಹೇಗೆ ಜನ್ಮ ತಾಳುತ್ತವೆ ಎಂಬುದೇ ನಮ್ಮಲ್ಲಿ ಹಲವಾರು ಜನಗಳಿಗೆ ಗೊತ್ತಿಲ್ಲ.ಸೈಕ್ಲೋನ್  ಗಳ ಬಗ್ಗೆ ಮಾತನಾಡುವ ನಮಗೆ ಅದು ಹೇಗೆ ಸೃಷ್ಟಿಯಾಗುತ್ತದೆ ಎಂಬುದೇ ಗೊತ್ತಿರುವುದಿಲ್ಲ.ಈ ಪೋಸ್ಟ್ ನಲ್ಲಿ ನಾನು ಸೈಕ್ಲೋನ್  ಗಳು ಹೇಗೆ ಸೃಷ್ಟಿಯಾಗುತ್ತವೆ ಎಂಬುದರ ಬಗ್ಗೆ ಬರೆದಿದ್ದೇನೆ

.ಸಾಮಾನ್ಯವಾಗಿ ಸೈಕ್ಲೋನ್  ಗಳ ಹುಟ್ಟಿನ ಹಿಂದೆ ತುಂಬಾ ವಿಜ್ಞ್ಯಾನ ಅಡಗಿದೆ.ಆದರೆ ನಾನು ಇಲ್ಲಿ ತುಂಬಾ ಸರಳವಾಗಿ ಸೈಕ್ಲೋನ್  ಗಳ ಹುಟ್ಟಿನ ಬಗ್ಗೆ ಬರೆದಿದ್ದೇನೆ

.ನಮ್ಮ ದೇಶದಲ್ಲಿ ಸೈಕ್ಲೋನ್  ಗಳ ಅರ್ಭಟ ಕಡಿಮೆ ಎಂದೇ ಹೇಳಬೇಕು.ಆದರೆ ಅಮೇರಿಕಾದಂತಹ ದೇಶಗಳಲ್ಲಿ ಸೈಕ್ಲೋನ್  ಎಂದರೆ ಜನರು ನಡುಗುತ್ತಾರೆ.ಅಷ್ಟರ ಮಟ್ಟಿಗೆ ಅಲ್ಲಿ ಸೈಕ್ಲೋನ್  ಗಳು ಅರ್ಭಟಿಸುತ್ತದೆ

.ಸಾಮಾನ್ಯವಾಗಿ ಸೈಕ್ಲೋನ್  ಗಳು ಜನನ ತಾಳುವುದು ಭೂಮದ್ಯ ರೇಖೆಯ ಬಿಸಿ ನೀರಿನ ಸಾಗರಗಳಲ್ಲಿ (Warm Ocean Water- ಬಿಸಿಲಿನಿಂದ ಕಾದ ಸಾಗರಗಳು)

.ಸೈಕ್ಲೋನ್ ಗಳು ಜನ್ಮ ತಾಳಲು ಸಾಗರದ ಉಷ್ಣಾಂಶ 26.5 ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚು ಇರಬೇಕು

.ಈ ಸಾಗರದ ಪ್ರದೇಶಗಳಲ್ಲಿ ಬಿಸಿಯಾದ ತೇವಾಂಶಯುಕ್ತ ಗಾಳಿಯು ನೀರಿನ ಮೇಲ್ಮೈನಿಂದ ಮೇಲಕ್ಕೆ ಚಲಿಸಲಾರಂಭಿಸುತ್ತದೆ

.ಹೀಗೆ ಬಿಸಿಯಾದ ತೇವಾಂಶಯುಕ್ತ ಗಾಳಿಯು ಮೇಲಕ್ಕೆ ಚಲಿಸಿದಾಗ ಕೆಳಗೆ ಕಡಿಮೆ ಗಾಳಿಯ ಒತ್ತಡ  ಪ್ರದೇಶ ನಿರ್ಮಾಣವಾಗುತ್ತದೆ.ಇದನ್ನೇ ನಾವು Low Depression Area ಎಂದು ಕರೆಯುತ್ತೇವೆ

.ಹೀಗೆ  ಕಡಿಮೆ ಗಾಳಿ ಒತ್ತಡ ಉಂಟಾದ ಪ್ರದೇಶಕ್ಕೆ ಅಕ್ಕ ಪಕ್ಕದ ಹೆಚ್ಚಿನ ಒತ್ತಡ ಹೊಂದಿದ ಗಾಳಿಯು  ಪ್ರವೇಶಿಸುತ್ತದೆ

.ಹೀಗೆ ಕಡಿಮೆ ಒತ್ತಡ ಪ್ರದೇಶಕ್ಕೆ ಬಂದ ತಂಪು ಗಾಳಿಯು ಮತ್ತೆ ಬಿಸಿಯಾಗಿ ತೇವಾಂಶದಿಂದ ಕೂಡಿ ಮೇಲೆರಲಾರಂಭಿಸುತ್ತದೆ

.ಹೀಗೆ ಮತ್ತೆ ಮತ್ತೆ ಈ ಪ್ರಕ್ರಿಯೆ ಚಕ್ರೀಯ(Cyclic) ವಿಧಾನದಲ್ಲಿ  ನಡೆಯಲು ಪ್ರಾರಂಭಿಸುತ್ತದೆ

.ಮೇಲಕ್ಕೆ ಹೋದ ತೇವಾಂಶಯುಕ್ತ ಬಿಸಿ ಗಾಳಿ ತಂಪಾಗಿ ಅದರಲ್ಲಿದ್ದ ನೀರು ಮೋಡಗಳಾಗಿ ಪರಿವರ್ತನೆ ಹೊಂದುತ್ತದೆ

.ತನ್ನ ಕಕ್ಷೆಯಲ್ಲಿ ಸುತ್ತುತ್ತಿರುವ ಭೂಮಿಯ ಕೊರಿಯೋಲಿಸ್ (Coriolis) ಪರಿಣಾಮ ಗಾಳಿಯು ಅತ್ಯಂತ ವೇಗವಾಗಿ ಸುರುಳಿ ಸುತುತ್ತಾ ಮೇಲಕ್ಕೆ ಸಾಗುತ್ತದೆ

.ಹೀಗೆ ಇಡೀ ಮೋಡ ಹಾಗು ಗಾಳಿಯ ಸುತ್ತುವಿಕೆ ವ್ಯವಸ್ಥಯು ಬೆಳೆಯುತ್ತಾ ಸಾಗುತ್ತದೆ.ಈ ವ್ಯವಸ್ಥೆಗೆ ಇಂಧನದಂತೆ ಕೆಲಸ ಮಾಡುವುದು ಸಾಗರದ ಉಷ್ಣತೆ ಮತ್ತೆ ನೀರಾವಿ

.ಹೀಗೆ ಉಂಟಾದ ವ್ಯವಸ್ಥೆಯನ್ನು Tropical Depression ಎಂದು ಕರೆಯುತ್ತೇವೆ

.ಈ ವ್ಯವಸ್ಥೆಯಲ್ಲಿನ ಗಾಳಿಯ ವೇಗ 63kmp ಇದ್ದಾಗ ಇದನ್ನು 'Tropical Strom' ಎಂದು ಕರೆಯುತ್ತೇವೆ.ಇದರಲ್ಲಿನ ಗಾಳಿಯ 119kmp  ಇದ್ದಾಗ ಈ ವ್ಯವಸ್ಥೆಯನ್ನು ಅಧಿಕೃತವಾಗಿ  ' Tropical ಸೈಕ್ಲೋನ್' ಎಂದು ಕರೆಯುತ್ತಾರ

.ಹೀಗೆ ಉಂಟಾದ ಸೈಕ್ಲೋನ್  ನೂರರಿಂದ ಸಾವಿರಾರು ಕಿಲೋಮೀಟರ್ ವರೆಗಿನ ವಿಸ್ತೀರ್ಣ ವನ್ನು ಹೊಂದಿರುತ್ತದೆ

.ಕೆಲವೊಮ್ಮೆ ಈ ಸೈಕ್ಲೋನ್  ಗೆ ಬೇರೆಡೆಯ ಗಾಳಿ ಕೂಡ  ಬಂದು ಸೇರಿ ಇದನ್ನು ಇನ್ನಷ್ಟು ಉಗ್ರವಾಗಿ ಮಾರ್ಪಡಿಸುತ್ತದೆ.ಕೇವಲ ಸೈಕ್ಲೋನ್  ನಲ್ಲಿ ಸುತ್ತುತ್ತಿರುವ  ಬಿಸಿ ಗಾಳಿ ಹಾಗು ಬಿಸಿ ಗಾಳಿಯ ಜಾಗಕ್ಕೆ ಮುನ್ನುಗ್ಗುವ ತಂಪು ಗಾಳಿಯ ದೆಸೆಯಿಂದ ಸೈಕ್ಲೋನ್  ನಲ್ಲಿರುವ ಗಾಳಿಯು ಅತ್ಯಂತ ಶಕ್ತಿಯುತವಾಗಿರುತ್ತದೆ

.ಪೂರ್ಣವಾಗಿ ರೂಪುಗೊಂಡ ಸೈಕ್ಲೋನ್  ಸೆಕೆಂಡಿಗೆ 2 ಮಿಲಿಯನ್ ಟನ್ ನಷ್ಟು ಗಾಳಿಯನ್ನು ಮೇಲಕ್ಕೆ pump ಮಾಡುತ್ತದೆ

.ಸೈಕ್ಲೋನ್  ನ ನಡುವಿನ ಭಾಗವನ್ನು 'Eye' ಎಂದು ಕರೆಯುತ್ತೇವೆ.ಈ ಭಾಗವು ತುಂಬಾ ಶಾಂತವಾಗಿರುತ್ತದೆ .ಮತ್ತು ತುಂಬಾ ಕಡಿಮೆ ಗಾಳಿ ಒತ್ತಡದ ಪ್ರದೆಶವಾಗಿರುತ್ತದೆ.ಮೇಲಿನ ಹೆಚ್ಚು ಒತ್ತಡದ ಗಾಳಿ ಈ ಪ್ರದೇಶಕ್ಕೆ ಅಪ್ಪಳಿಸುತ್ತಿರುತ್ತದೆ

.ಹೀಗೆ ಉಂಟಾದ ಸೈಕ್ಲೋನ್  ಗಳು ತೀರಕ್ಕೆ ಅಪ್ಪಳಿಸಿದಾಗ ಆ ಪ್ರದೇಶದಲ್ಲಿ ಅತ್ಯಂತ ಹೆಚ್ಚು ಮಳೆ ಸುರಿಸುತ್ತದೆ ಹಾಗು ಅತ್ಯಂತ ವೇಗದ ಗಾಳಿಯಿಂದ ಕೂಡಿರುತ್ತದೆ

.ಸಾಮಾನ್ಯವಾಗಿ ಸೈಕ್ಲೋನ್  ಗಳು ತೀರಕ್ಕೆ ಅಪ್ಪಳಿಸಿದಾಗ ಅವುಗಳ ಶಕ್ತಿ ಕಡಿಮೆಯಾಗುತ್ತದೆ.ಏಕೆಂದರೆ ಅವುಗಳಿಗೆ ಇಂಧನವಾಗಿ ಕೆಲಸ ಮಾಡುವ ಸಾಗರದ ಉಷ್ಣತೆ ಹಾಗು ನೀರಾವಿ ಸಿಗದೇ ಇರುವುದರಿಂದ

.ಹೀಗೆ ಶಕ್ತಿಗುಂದಿ ಸಂಪೂರ್ಣವಾಗಿ ಸಾಯುವ ಮೊದಲು ಸೈಕ್ಲೋನ್  ಹಲವು ನಷ್ಟವನ್ನು ಉಂಟು ಮಾಡಿರುತ್ತದೆ

.ಸೈಕ್ಲೋನ್  ನಲ್ಲಿ ಇರುವ ಗಾಳಿಯ ವೇಗದ ಆಧಾರದಲ್ಲಿ ಅದನ್ನು 5 ವರ್ಗವಾಗಿ ವಿಂಗಡಿಸಲಾಗಿದೆ.5 ನೇ ವರ್ಗದ ಸೈಕ್ಲೋನ್  ನಲ್ಲಿನ ಗಾಳಿಯ ವೇಗ ಸುಮಾರು 280 kmph ನಷ್ಟಿರುತ್ತದೆ

.ಹೀಗೆ ಪ್ರಕೃತಿಯ ವಿಶಿಷ್ಟ ಶಕ್ತಿ ಸೈಕ್ಲೋನ್  ಜನ್ಮ ತಾಳಿ,ತನ್ನ ಪ್ರಭಾವವನ್ನು ಬೀರಿ ನಾಶ ಹೊಂದುತ್ತದೆ 

.ಹಾಗಾದರೆ  Hurricane,Typhoon ಗಳೆಂದರೇನು ಎಂಬ ಸಂಶಯ ನಿಮ್ಮ ಮನಸ್ಸಿನಲ್ಲಿ ಮೂಡಬಹುದು.ಇದಕ್ಕೆ ಉತ್ತರ ತುಂಬಾ ಸರಳ

.ಸಾಗರದಲ್ಲಿ ನಡೆಯುವ ಈ ಪ್ರಕ್ರಿಯೆಯನ್ನೇ ಬೇರೆ ಬೇರೆ ಜಾಗದಲ್ಲಿ ಈ ಎಲ್ಲಾ ಹೆಸರುಗಳಿಂದ ಕರೆಯುತ್ತಾರೆ,ಉದಾಹರಣೆಗೆ ಅಟ್ಲಾಂಟಿಕ್ ಹಾಗು ಪಶ್ಚಿಮ  ಪೆಸಿಫಿಕ್ ಸಾಗರದಲ್ಲಿ ಇದನ್ನು Typhoon ಎಂದೂ,ಪೂರ್ವ ಪೆಸಿಫಿಕ್ ಸಾಗರದಲ್ಲಿ Hurricane ಎಂದೂ,ದಕ್ಷಿಣ ಪೆಸಿಫಿಕ್,ಹಿಂದೂ ಮಹಾ ಸಾಗರ ಹಾಗು ಬಂಗಾಳ ಕೊಲ್ಲಿಯಲ್ಲಿ ಇದನ್ನು ಸೈಕ್ಲೋನ್ ಎಂದು ಕರೆಯುತ್ತಾರೆ

.ಇವುಗಳು ಹುಟ್ಟುವ ವಿಧಾನ ಒಂದೇ ಇದ್ದು ಗುಣ ಲಕ್ಷಣಗಳಲ್ಲಿ ವ್ಯತ್ಯಾಸವಿರುತ್ತದೆ  

.Tornados ಗಳು ಹುಟ್ಟುವುದು ಸೈಕ್ಲೋನ್ ಅಥವಾ Hurricane ಗಳಿಂದ .ಸೈಕ್ಲೋನ್ ಗಳಲ್ಲಿ   ಉಂಟಾಗುವ ಕಣಗಳ ಸುತ್ತುವಿಕೆಯಿಂದಾಗಿ Tornado ಗಳು ಜೀವ ತಾಳುತ್ತವೆ.ಇವು ತಮ್ಮ ಪಥದಲ್ಲಿ ಸಿಗುವ ಎಲ್ಲವನ್ನೂ ನಾಶ ಮಾಡುತ್ತವೆ

.ಹೀಗೆ ಪ್ರಕೃತಿಯ ವಿನಾಶಕಾರಿ ಶಕ್ತಿ ಸೈಕ್ಲೋನ್ ಗಳ ಬಗ್ಗೆ ಅದಷ್ಟು ಸರಳವಾಗಿ ತಿಳಿಸಲು ಇಲ್ಲಿ ಪ್ರಯತ್ನಿಸಿದ್ದೇನೆ.ಇನ್ನೊಮ್ಮೆ ಸೈಕ್ಲೋನ್ ಎಂದು ಕೇಳಿದಾಗ ಅದರ ಸೃಷ್ಟಿ ಬಗ್ಗೆ ನೀವು ತಿಳಿದಿರುವವರಂತಾಗಿರಬೇಕು..........

.ಸೈಕ್ಲೋನ್ ಗಳಲ್ಲಿ ಬೀಸುವ ಗಾಳಿಯ ವೇಗದ ಮೇಲೆ ಮಾಡಲಾದ ವಿಧಗಳು 
  
-ಪ್ರಕೃತಿಯನ್ನು ರಕ್ಷಿಸಿ- 

Thursday, November 1, 2012

ನಡು ರಾತ್ರಿಯ ಹಂತಕ

.ಶೃಂಗೇರಿ ಬಳಿಯ ಒಂದು ಹಳ್ಳಿಗೆ ಇತ್ತೀಚಿಗೆ ಒಬ್ಬ ನಡು ರಾತ್ರಿಯ ಹಂತಕ ಭೇಟಿ ನೀಡಿದ್ದ

.ಕಾಡಿನಿಂದ ಆಹಾರ ಅರೆಸುತ್ತಾ ಬಂದಿದ್ದ ಈ ಹಂತಕನ ಕಣ್ಣಿಗೆ ಬಿದ್ದಿದ್ದು ಒಂದು ಅಮಾಯಕ ನಾಯಿ

.ಈ ನಾಯಿ ಒಂದು ಅತ್ಯುತ್ತಮ್ಮ ಭೇಟೆ ನಾಯಿ.ಅದರ ಮನೆಯವರಿಗೆ ಅದರ ಮೇಲೆ ಅತ್ಯಂತ ಪ್ರೀತಿ

.ದುರದೃಷ್ಟವಶಾತ್ ಆ ನಾಯಿಯನ್ನು ಅವರು ಅಂದು ರಾತ್ರಿ ಕಟ್ಟಿ ಹಾಕಿ ಮಲಗಿದ್ದರು.ಹಂತಕನ ದಾರಿಯೂ ಅಂದು ಆ ನಾಯಿ ಇದ್ದ ಮನೆಯ ಹತ್ತಿರಕ್ಕೆ ಬಂದಿತ್ತು

.ಕಟ್ಟಿ ಹಾಕಿದ್ದರಿಂದ ತಪ್ಪಿಸಿಕೊಳ್ಳಲಾಗದ ಆ ನಾಯಿ ಹಂತಕನ ಆಕ್ರಮಣಕ್ಕೆ ಬಲಿಯಾಯ್ತು

.ಇತ್ತೀಚಿನ ದಿನಗಳಲ್ಲಿ ಮಾನವ-ಕಾಡು ಪ್ರಾಣಿಗಳ ಸಂಘರ್ಷ ಹೆಚ್ಚುತ್ತಲೇ ಇದೆ.ಕೆಲವೊಮ್ಮೆ ಈ ಸಂಘರ್ಷದಲ್ಲಿ ಬಲಿಯಾಗುವುದು ಇಂತಹ ಅಮಾಯಕ ಪ್ರಾಣಿಗಳು 

.ಆದರೇ ನಾವಿಲ್ಲಿ ನೆನಪಿಡಬೇಕಾದ ಅಂಶವೆಂದರೆ ಇಂತಹ ಕಾಡು ಪ್ರಾಣಿಗಳು ನಾಡಿಗೆ ಬಂದು ಇಲ್ಲಿನ ಪ್ರಾಣಿಗಳ ಮೇಲೆ ಮುಗಿ ಬೀಳಲು ಕಾರಣಕರ್ತರು ಯಾರು??? ನಾವೇ ಅಲ್ಲವೇ....

.ಈ ನಾಯಿಯನ್ನು ಬಲಿ ತೆಗೆದುಕೊಂಡದ್ದು ಚಿರತೆ  ( ಇದನ್ನೇ ಮಲೆನಾಡಿನಲ್ಲಿ  ಕುರ್ಕ ಎಂದು ಕರೆಯುತ್ತಾರೆ) ಚಿರತೆಯನ್ನೇ ಹೋಲುವ ಇವು ಗಾತ್ರದಲ್ಲಿ ಚಿರತೆಗಳಿಗಿಂತ ಗಾತ್ರದಲ್ಲಿ ಚಿಕ್ಕವಿರುತ್ತವೆ

(.ವಿಶೇಷ ಸೂಚನೆ- ನಾನಿಲ್ಲಿ ಪೋಸ್ಟ್ ಮಾಡಿರುವ ಚಿತ್ರಗಳು ನಿಮ್ಮ ಮನಸ್ಸಿಗೆ ಘಾಸಿಯನ್ನು ಉಂಟುಮಾಡಬಹುದು. ಚಿಕ್ಕ ಮಕ್ಕಳು ಹಾಗು ಮಹಿಳೆಯರು ಈ ಚಿತ್ರವನ್ನು ನೋಡದಿರುವುದು ಒಳಿತು)
.ಹಂತಕನ ಆಕ್ರಮಣಕ್ಕೆ ಬಲಿಯಾದ ನಾಯಿ

(ಮೂಲ ಚಿತ್ರದ ಬಣ್ಣವನ್ನು ಎಡಿಟ್ ಮಾಡಲಾಗಿದೆ)

 .ಹಂತಕನ ಹೆಜ್ಜೆ ಗುರುತುಗಳು
-ಕಾಡು ಉಳಿಸಿ-ಕಾಡು ಪ್ರಾಣಿಗಳನ್ನು ರಕ್ಷಿಸಿ-

Wednesday, October 10, 2012

ಡೆಲಿಯಾ ಹೂವುಗಳು

.ಹರಿಹರಪುರದ ಸಮೀಪವಿರುವ ಅಬಂಳಿಕೆಯ ಶ್ರೀಮತಿ ರುಕ್ಮಿಣಿ ಕೃಷ್ಣಪ್ಪನವರ ಆಸಕ್ತಿಯ ಫಲವಾಗಿ ಅವರ ಮನೆಯ ೧೫*೨೦ ಅಡಿಯ ಪುಟಾಣಿ ಅಂಗಳ ಡೆಲಿಯಾ ಹೂಗಳ ವನವಾಗಿದೆ

.ಮನೆಯಂಗಳದಲ್ಲಿ ಪ್ಲಾಸ್ಟಿಕ್‌ ಚೀಲಗಳಲ್ಲಿ ಗೊಬ್ಬರ ಮಣ್ಣು ತುಂಬಿ, ಬೇಸಿಗೆಯಲ್ಲಿ ಜೊಪಾನವಾಗಿ ಕಾಪಾಡಿಟ್ಟ ಗೆಡ್ಡೆಗಳನ್ನು ನೆಟ್ಟು, ಆಧಾರ ನೀಡಿ ಬೆಳೆಸಿದ ""ಡೆಲಿಯಾ''  ಆಡು ಭಾಷೆಯಲ್ಲಿ "ಕಮಲ''ವಾಗಿದೆ.

.ಅವರ ಚಿಕ್ಕ  ಮಗಳು ಅವುಗಳನ್ನು ಗುರುತಿಸುತ್ತಾಳೆ. ರಾಕ್ಷಸ ಕಮಲ, ನಾಚಿಕೆ ಕಮಲ, ಲಿಲ್ಲ್ಲಿಪುಟ್‌ ಕಮಲ, ದಾಸ ಕಮಲ, ಈರುಳ್ಳಿ ಕಮಲ, ಜೇನು ಗೂಡು ಕಮಲ, ಹಳದಿ ಕಡ್ಡಿ ಕಮಲ, ಗೊರಟೆ ಕಮಲ, ಬೀಟ್ರೂಟ್‌ ಕಮಲ, ಕೋಳಿ ಜುಟ್ಟು ಕಮಲ, ಬಿಳಿಗೊಂಡೆ, ಹಳದಿ ಗೊಂಡೆ, ನೀಲಿ ಗೊಂಡೆ ಕಮಲಗಳೆಂದು ಪಟಪಟನೆ ಹೆಸರಿಸುತ್ತಾಳೆ

.ದಾರಿಯಲ್ಲಿ ಸಾಗುವ ಪ್ರಯಾಣಿಕರು ವಾಹನ ನಿಲ್ಲಿಸಿ, ಭೇಟಿ ನೀಡಿ ಹೂಗಳ ಅಂದ ಸವಿಯುವುದು  ಸಾಮಾನ್ಯವಾಗಿದೆ. ಕೃತಕ ಹೂಗಳನ್ನು ತಂದು ಜೊಡಿಸಿಡುವ ಈ ಕಾಲದಲ್ಲಿ, ಚಿಕ್ಕದಾದ ನಮ್ಮ ಜಾಗದಲ್ಲಿ, ನಾವೇ ಬೆಳೆದ ಗಿಡಗಳು ಹೂ ಬಿಟ್ಟಾಗ ಸಿಗುವ ಆನಂದ ಹಣ ಕೊಟ್ಟು ಪಡಯಲು ಅಸಾಧ್ಯವೆನ್ನುತ್ತಾರೆ

.ಮಲೆನಾಡಿನ ಹಳ್ಳಿಯ ಮೂಲೆಯಲ್ಲಿ ೩೮ಕ್ಕೂ ಹೆಚ್ಚು ವಿಧಗಳ ಡೆಲಿಯಾ ಹೂಗಳ ಲೋಕ ಸೃಷ್ಟಿಸಿದ ಇವರ ಪ್ರಯತ್ನಕ್ಕೆ  ನಮ್ಮದೊಂದು ಚಿಕ್ಕ ಸಲಾಂ..


ಮಾಹಿತಿ  ಮತ್ತು ಛಾಯಾಚಿತ್ರ: ದಿನೇಶ್‌ ಜಮ್ಮಟಿಗೆ

Tuesday, September 4, 2012

ಭಾರತದ ನ್ಯಾಷನಲ್ ಪಾರ್ಕ್ ಗಳ ಹೆಮ್ಮೆಯ ಹುಲಿಗಳು

.ನಿಮಗೆ ಗೊತ್ತಿರಬಹುದು,ಈಗ ಪ್ರಪಂಚದಲ್ಲಿ ಇರುವ ಹುಲಿಗಳ ಸಂಖ್ಯೆಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಹುಲಿಗಳಿರುವುದು ಭಾರತದಲ್ಲಿ

.ಭಾರತದಲ್ಲಿ 98 ನ್ಯಾಷನಲ್ ಪಾರ್ಕ್ ಗಳು ಇದ್ದರೂ ಕೂಡ ಎಲ್ಲಾ ನ್ಯಾಷನಲ್ ಪಾರ್ಕ್ ಗಳಲ್ಲೂ ಹುಲಿಗಳಿಲ್ಲ.ಹುಲಿಗಳು ಹೆಚ್ಚಿರುವ ಕೆಲವು ನ್ಯಾಷನಲ್ ಪಾರ್ಕ್ ಗಳೆಂದರೆ Bandhavgarh ನ್ಯಾಷನಲ್ ಪಾರ್ಕ್ ,ಬಂಡೀಪುರ ಹಾಗು ನಾಗರ ಹೊಳೆ ನ್ಯಾಷನಲ್ ಪಾರ್ಕ್ ,ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ ,ರಣತಂಬೂರ್ ನ್ಯಾಷನಲ್ ಪಾರ್ಕ್ ,ಸುಂದರ್ ಬನ್ಸ್ ನ್ಯಾಷನಲ್ ಪಾರ್ಕ್

.ಈ ನ್ಯಾಷನಲ್ ಪಾರ್ಕ್ ಗಳಲ್ಲಿ ಇರುವ ಕೆಲವು ಹುಲಿಗಳ ಬಗ್ಗೆ ಇಂದು ಬರೆದಿದ್ದೇನೆ.ಈ ಹುಲಿಗಳು ಶಕ್ತಿಶಾಲಿ,ಚಾಣಾಕ್ಷ ಹಾಗು ತಮ್ಮ ನಡವಳಿಕೆಗಳಲ್ಲಿ ಇತರೆ ಹುಲಿಗಳನ್ನು ಮೀರಿಸಿದವು.ಆದ್ದರಿಂದಲೇ ಇವುಗಳು ನಮ್ಮ ದೇಶದ ನ್ಯಾಷನಲ್ ಪಾರ್ಕ್ ನ ಹೆಮ್ಮೆಯ ಹುಲಿಗಳು

.ಬನ್ನಿ ಹಾಗಾದರೆ...ಈ ಹೆಮ್ಮೆಯ ಹುಲಿಗಳ ಬಗ್ಗೆ ತಿಳಿಯೋಣ 

1) ಸೀತಾ 
.ಇವಳು  ಇದ್ದದ್ದು  Bandhavgarh ನ್ಯಾಷನಲ್ ಪಾರ್ಕ್ ನಲ್ಲಿ 

.ಮಚಲಿಯ ನಂತರ ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಬಾರಿ ಫೋಟೋಗ್ರಫಿ ಗೆ ಒಳಪಟ್ಟ ಸುಂದರಿ ಇವಳು

  
.ತನ್ನ ಜೀವಿತಾವದಿಯಲ್ಲಿ 14 ಮರಿಗಳಿಗೆ ಜನ್ಮ ನೀಡಿದ್ದಾಳೆ,ಅವುಗಳನ್ನು ಬೆಳೆಸಿದ್ದಾಳೆ,ಇವುಗಳಲ್ಲಿ 12 ಹುಲಿಗಳು ಬೆಳೆದು ತಮ್ಮ Territory ಸ್ಥಾಪಿಸಿಕೊಂಡಿವೆ 

.ಇವಳು 1996 ರಲ್ಲಿ ತನ್ನ 17 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಳು

.ಇವಳ ಜೀವನದ ಬಗ್ಗೆ ಹಲವಾರು ಡಾಕ್ಯುಮೆಂಟರಿಗಳು ಲಭ್ಯವಿದೆ

 
2)ಚಾರ್ಜರ್ 
.ಬಲಾಡ್ಯ ಚಾರ್ಜರ್ ಇದದ್ದು  Bandhavgarh ನ್ಯಾಷನಲ್ ಪಾರ್ಕ್ ನಲ್ಲಿ

.ಇವನ ಹೆಸರೇ ಹೇಳುವಂತೆ ಇವನೊಬ್ಬ ಮುಂಗೋಪಿ, ಬಹಳ ಬಲಿಷ್ಟ ರಾಯಲ್ ಬೆಂಗಾಲ್ ಹುಲಿ ಇವನು 


.ಯಾವುದೇ ಇತರ ಹುಲಿಗಳು ಇವನ ವಿರುದ್ದ ಹೋರಾಡಿ ಗೆದ್ದ ಉದಾಹರಣೆಗಳಿಲ್ಲ

.ತನ್ನ Territory ಆನೆಗಳ ಮೇಲೆ ದಾಳಿ ಮಾಡಿ ಅವುಗಳನ್ನೇ ಕೊಂದ ಭೂಪ ಇವನು 

.ಇವನು ಸಿತಾಳ ಎರಡು ಮರಿಗಳಿಗೆ ತಂದೆಯಾಗಿದ್ದನು 


.2000 ನೇ ಇಸವಿಯಲ್ಲಿ ಇವನು ಮರಣ ಹೊಂದಿದನು 


3)ಮಚಲಿ 
.ಇವಳ ಬಗ್ಗೆ ನಿಮಗೆ  ಹೆಚ್ಚು ಹೇಳುವ ಅಗತ್ಯ ಇಲ್ಲ.ಇವಳ ಬಗ್ಗೆ ನಾನಾಗಲೇ ಒಂದು ಸುದೀರ್ಘ ಪೋಸ್ಟ್ ಬರೆದಿದ್ದೇನೆ 

.ಇವಳ ಮನೆ ರಣತಂಬೂರ್ ನ್ಯಾಷನಲ್ ಪಾರ್ಕ್

.ಇವಳನ್ನು Lady of the Lake ಎಂದೂ ಕೂಡ ಕರೆಯುತ್ತಾರೆ 


.ಸುಮಾರು 9 ಕ್ಕೂ ಹೆಚ್ಚು ಮರಿಗಳಿಗೆ ಜನ್ಮ ನೀಡಿದ್ದಾಳೆ 

.ಮೊಸಳೆಗಳ ವಿರುದ್ದವೇ ಹೋರಾಡಿ ಗೆಲ್ಲುವ ಇವಳ ಶಕ್ತಿ ಅಸಮಾನ್ಯ 

.ಕೋರೆ ಹಲ್ಲು ಕಳೆದುಕೊಂಡೇ ತನ್ನ ಕೊನೆಯ ಮೂರು ಮರಿಗಳನ್ನು ಯಶಸ್ವಿಯಾಗಿ ಸಾಕುತ್ತಾಳೆ ಈ ರಾಣಿ 


.ಈಗಲೂ ರಣತಂಬೂರ್ ನ ಕಾಡುಗಳಲ್ಲಿ ಘರ್ಜಿಸುತ್ತಾ ತನ್ನ ಕೊನೆಯ ದಿನಗಳನ್ನು ಏಣಿಸುತ್ತಿದ್ದಾಳೆ ಮಚಲಿ 


4)T 28 or ಸ್ಟಾರ್ ಮೇಲ್
.ರಣತಂಬೂರ್ ನ ಸದ್ಯದ ಡಾನ್ ಈ ನಮ್ಮ T 28 

.ಸರಿ ಸುಮಾರು 280 ಕೆಜಿ ಗಿಂತಲೂ ಅಧಿಕ ತೂಗುವ ಬಲಾಡ್ಯ ಇವನು 


.ಸುಮಾರು 10 ಕ್ಕೂ ಹೆಚ್ಚು ಮರಿಗಳಿಗೆ ತಂದೆಯಾಗಿದ್ದಾನೆ T 28

.ಸದ್ಯಕ್ಕೆ ರಣತಂಬೂರ್ ನ ಕಾಡಿನಲ್ಲಿ ಘರ್ಜಿಸುತ್ತಾ ರಾಜ್ಯಭಾರ ಮಾಡುತ್ತಿದ್ದಾನೆ 5) Khali 
 .ನೀವು WWE ನೋಡುವವರಾದರೆ  ನಿಮಗೆ ಈ ಹೆಸರು ಚಿರಪರಿಚಿತವಾಗಿರುತ್ತದೆ .ಅದರಲ್ಲಿ ಬರುವ ದ್ಯತ್ಯ ದೇಹದ ಖಲಿಯಷ್ಟೇ ಬಲಿಷ್ಟನಾಗಿದ್ದಾನೆ ಈ ನಮ್ಮ ಜಿಮ್ ಕಾರ್ಬೆಟ್ ನ ಖಲಿ

.ಇವನು ಅಂತಿಂತಹ ದೈತ್ಯ ಅಲ್ಲ.ಬರೋಬ್ಬರಿ 340 ಕೆಜಿಗಿಂತಲೂ ಅಧಿಕ ತೂಗುವ ಶಕ್ತಿಶಾಲಿ 

.ಇವನ ಹೆಜ್ಜೆ ಗುರುತುಗಳು ಆನೆಯ ಹೆಜ್ಜೆ ಗುರುತಿನಷ್ಟು ದೊಡ್ಡದಾಗಿದೆ ಎಂದು ಪಾರ್ಕ್ ನ ಅಧಿಕಾರಿಗಳು ಹೇಳುತ್ತಾರೆ 


.ಇವನು ಒಮ್ಮೆ ಘರ್ಜಿಸಿದರೆ ಕಾರ್ಬೆಟ್ ಪಾರ್ಕ್ ತಲ್ಲಣಗೊಳ್ಳುತ್ತದೆ

.ಈ ಹಿರೋನಾ Territory ಯಲ್ಲಿ ನಾಲಕ್ಕು ಸುಂದರಿಯರು ವಾಸಿಸುತ್ತಿದ್ದಾರೆ 

.ಇವನ Territory ಗೆ ನುಗ್ಗಿದ ಹಲವು ಹುಲಿಗಳ ಬದುಕನ್ನೇ ಚಿಂದಿ ಚಿತ್ರಾನ್ನ ಮಾಡಿದ್ದಾನೆ ಈ ಖಲಿ ಮಹಾಶಯ 


.2011 ರಲ್ಲಿ ಒಮ್ಮೆ ಪಾರ್ಕ್ ನಿಂದ ಕಣ್ಮರೆಯಾಗಿದ್ದ ಇವನ ಬಗ್ಗೆ  ಸಧ್ಯದ ವಿವರಗಳು ನಮಗೆ ಲಭ್ಯವಾಗಿಲ್ಲ 

.ಇವಿಷ್ಟು ನಮ್ಮ ದೇಶದಲ್ಲಿ ಇದ್ದ,ಇರುವ ಶಕ್ತಿಶಾಲಿ ಹೆಮ್ಮೆಯ ಹುಲಿಗಳು.ಇಂತಹ ಹುಲಿಗಳು ಪಾರ್ಕ್ ನಲ್ಲಿ ಇರುವುದರಿಂದ ಮುಂದಿನ ಪೀಳಿಗೆಯ ಹುಲಿಗಳು ಹೆಚ್ಚು ಬಲಿಷ್ಟವಾಗಲು ಅನುಕೂಲಕರವಾಗುತ್ತದೆ.ಬದಲಾಗುತ್ತಿರುವ ಪರಿಸರದಲ್ಲಿ ಈ ಬಲಿಷ್ಟತೆ ಬದುಕುಳಿಯಲು ಪ್ರಮುಖ ಪಾತ್ರ ವಹಿಸುತ್ತದೆ

.ಕೊನೆಯಲ್ಲಿ ಈ ಎಲ್ಲಾ ಹೆಮ್ಮೆಯ ಹುಲಿಗಳಿಗೆ ನಮ್ಮ ಕಡೆಯಿಂದ  Hats Off  


-ಪ್ರಕೃತಿಯನ್ನು ರಕ್ಷಿಸಿ-


Monday, August 27, 2012

-ವಿಶ್ವದ ದೈತ್ಯಾಕಾರದ ಗುಹೆ-


ಹೆಸರು-Hang Sơn Đoòng (Mountain River Cave)

ಇರುವ ಸ್ಥಳ-Quảng Bình Province,ವಿಯೆಟ್ನಾಂ 

ಆಳ-150m / 490ft

ಅಗಲ-9,000m / 30,000ft

ಕಂಡು ಹಿಡಿದವರು-Hồ-Khanh in 1991

ವಿಶೇಷತೆ-ಈ ಗುಹೆಯಲ್ಲಿ ಹರಿಯುವ ನದಿ

.ವಿಶ್ವದ ಈ ದೊಡ್ಡ ದೈತ್ಯ ಗುಹೆಯ ಸುಂದರ ಚಿತ್ರಗಳು 

.Courtesy- Google Images and National Geographic 
.ಇನ್ನೂ ಈ ತರಹದ ಅದೆಷ್ಟು ವಿಸ್ಮಯಗಳನ್ನು ಹೊಂದಿದೆಯೋ ನಮ್ಮ ಭೂಮಿ....

 .ಈ ಮಾಹಿತಿಯನ್ನು ನಮಗೆ mail ಮಡಿದ ವಿಕ್ರಮ್ ಜೋಯಿಸ್,ಶಿವಮೊಗ್ಗ ರವರಿಗೆ ಧನ್ಯವಾದಗಳು

-ಪ್ರಕೃತಿಯನ್ನು ರಕ್ಷಿಸಿ-