Monday, August 30, 2010

- ಸ್ನೇಕ್ ಶ್ಯಾಮ್ -


.ಇವರ ಪೂರ್ಣ ಹೆಸರು M.S Balasubramania

.ಇವರ ಊರು mysore

.ಹಾವುಗಳ ಸ್ನೇಹಿತರಾದ ಇವರು ಮೈಸೂರಿನಾದ್ಯಂತ ಸ್ನೇಕ್ ಶ್ಯಾಮ್ ಎಂದೇ ಪ್ರಸಿದ್ದಿ

.ಇವರು ಒಬ್ಬ ಪರಿಸರ ಪ್ರೇಮಿ,ಪರಿಸರ ಸಂರಕ್ಷಕ,ಉರಗ ತಜ್ಞ

.ಇವರ ತಂದೆಯ ಹೆಸರು M.R.ಸುಬ್ಬರಾವ್,ತಾಯಿ A.Nagalakshmi

ಮೈಸೂರಿನ ಕೃಷ್ಣರಾಜನಗರ ದಲ್ಲಿ ಹುಟ್ಟಿದ ಇವರು ತಮ್ಮ ಚಿಕ್ಕ ವಯಸ್ಸಿನಿಂದಲೇ ಹಾವುಗಳ ಬಗ್ಗೆ ಆಸಕ್ತಿ ಹೊಂದ್ದಿದ್ದರು

.ಅವರ ಚಿಕ್ಕ ವಯಸ್ಸಿನಲ್ಲೇ ಅವರ ಪಕ್ಕದ ಮನೆಗೆ ಬಂದ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದರು

.ಡ್ರೈವರ್ ಆಗಿರುವ ಇವರಿಗೆ ಚಿಕ್ಕ ಮಕ್ಕಳೆಂದರೆ ತುಂಬಾ ಪ್ರೀತಿ

.ಶ್ಯಾಮ್ ನೋಡುವುದಕ್ಕೆ ತುಂಬಾ different.ಕೈ ತುಂಬಾ ಉಂಗುರಗಳು,ಕುತ್ತಿಗೆ ತುಂಬಾ ಸರಗಳು.ಇವುಗಳೇ ಶ್ಯಾಮ್ ರವರ highlights

.ಇವರ ಹಾವು ಹಿಡಿಯುವ ಕಾಯಕ 1982 ರಿಂದ ಶುರುವಾಯಿತು

.1982 ರಿಂದ ಇಲ್ಲಿಯವರೆಗೂ ಸುಮಾರು 40,೦೦೦ ಕ್ಕೂ ಹೆಚ್ಚು ಹಾವುಗಳನ್ನು ಸ್ನೇಕ್ ಶ್ಯಾಮ್ ಹಿಡಿದು ಕಾಡಿಗೆ ಬಿಟ್ಟಿದ್ದಾರೆ

.ಶ್ಯಾಮ್ ಗೆ ಪ್ರಾಣಿ,ಪಕ್ಷಿಗಳೆಂದರೆ ಅತೀವ ಪ್ರೀತಿ,ಅವರ ಮನೆಯಲ್ಲೇ ಸುಮಾರು 150 ಪಕ್ಷಿಗಳನ್ನು ಸಾಕಿದ್ದಾರೆ

.ಮೈಸೂರಿನ ಯಾವುದೇ ಜನವಸತಿ ಪ್ರದೇಶದಲ್ಲಿ ಹಾವು ಕಂಡರೆ ಜನರು ಶ್ಯಾಮ್ ಗೆ ತಿಳಿಸುತ್ತಾರೆ.ಆಗ ಶ್ಯಾಮ್ ಎಲ್ಲೇ ಇದ್ದರೂ ಬಂದು ಆ ಹಾವುಗಳನ್ನು ಸುರಕ್ಷಿತವಾಗಿ ಹಿಡಿಯುತ್ತಾರೆ

.ದಿನವೊಂದಕ್ಕೆ ಸುಮಾರು 10 ರಿಂದ 15 ಹಾವುಗಳಿಗೆ ಸಂಭಂದ್ದಪಟ್ಟ ಕರೆಗಳು ಶ್ಯಾಮ್ ಗೆ ಬರುತ್ತವೆ

.ಅವರು ಹಿಡಿದ ಎಲ್ಲಾ ಹಾವುಗಳನ್ನು ವಾರದಂತ್ಯದಲ್ಲಿ ಕಾಡಿಗೆ ಹೋಗಿ ಬಿಡುತ್ತಾರೆ

.ಸುಮಾರು 28 ರಿಂದ 30 ಬಗೆಯ ಹಾವುಗಳನ್ನು ಶ್ಯಾಮ್ ಗುರುತಿಸಬಲ್ಲರು

.ವಿಶೇಷವೆಂದರೆ ಶ್ಯಾಮ್ ಹಿಡದ ಹಾವುಗಳಿಗೆ ಜನರ ಹತ್ತಿರ ದುಡ್ಡು ತೆಗೆದುಕೊಳ್ಳುವುದಿಲ್ಲ

.ಕೇವಲ ಹಾವುಗಳನ್ನು ಹಿಡಿಯುವುದಲ್ಲದೆ ಜನರಲ್ಲಿ ಹಾಗು ಚಿಕ್ಕ ಮಕ್ಕಳಲ್ಲಿ ಹಾವುಗಳು ಹಾಗು ಪ್ರಕೃತಿಯ ಬಗ್ಗೆ ಅರಿವು ಮೂಡಿಸುತ್ತಾರೆ ನಮ್ಮ ಶ್ಯಾಮ್

.ಇಂದು ಅವರಿಂದಾಗಿ ಸಾವಿರಾರು ಹಾವುಗಳು ಬದುಕುಳಿದಿವೆ

.ಈವರೆಗೂ ಶ್ಯಾಮ್ 4 ಬಾರಿ ಹಾವುಗಳಿಂದ (ವಿಷಪೂರಿತ) ಕಡಿತಕ್ಕೊಳಗಾಗಿದ್ದಾರೆ


.ಮೈಸೂರಿನ ಬಹು ಜನರು ಇಂದು ಹಾವುಗಳನ್ನು ನೋಡಿದರೆ ಕೊಲ್ಲುವುದಿಲ್ಲ. ಬದಲಾಗಿ ಅವುಗಳನ್ನು ಸಂರಕ್ಷಿಸುವತ್ತ ಗಮನ ಹರಿಸುತ್ತಾರೆ.ಜನಗಳಲ್ಲಿ ಈ ಭಾವನೆ ತರುವಲ್ಲಿ ಶ್ಯಾಮ್ ರ ಪಾತ್ರ ತುಂಬಾ ಇದೆ

.ಅವರ ಪ್ರಕಾರ 'ಮನುಷ್ಯರು ಹಾವುಗಳಿಗಿಂತ ವಿಷಪೂರಿತ ಜೀವಿಗಳು' ಎಷ್ಟು ಸತ್ಯದ ಮಾತಲ್ಲವೇ???

.ಇವರ ಕಾರ್ಯವನ್ನು ಗುರುತಿಸಿ ಹಲವಾರು ಸಂಘ,ಸಂಸ್ಥೆಗಳು ಇವರಿಗೆ ಸನ್ಮಾನವನ್ನು ಮಾಡಿವೆ

.National Geographic ಚಾನೆಲ್ ನ Croc Chronicles ನಲ್ಲಿ ಶ್ಯಾಮ್ ಮಿಂಚಿದ್ದಾರೆ

.ಹಾವುಗಳ ಬಗ್ಗೆ ಇವರಿಗಿರುವ ಕಾಳಜಿ ನಿಜಕ್ಕೂ ಎಲ್ಲಾ ಜನರಿಗೆ ಮಾದರಿ

.ಶ್ಯಾಮ್ ರಂತಹ ಪ್ರಕೃತಿ ಪ್ರೇಮಿ ನಮ್ಮ ಕರ್ನಾಟಕದಲ್ಲಿರುವುದು ನಮ್ಮೆಲ್ಲರ ಹೆಮ್ಮೆ

.ನಮ್ಮ RAGAT PARADISE ಶ್ಯಾಮ್ ಗೆ ಅವರ ಎಲ್ಲಾ ಕಾರ್ಯಗಳಲ್ಲಿ ಶುಭವನ್ನು ಕೂರುತ್ತದೆ

.ಶ್ಯಾಮ್ ಗೆ ಹಾಗು ಅವರಂತೆ ಹಾವುಗಳನ್ನು ರಕ್ಷಿಸುವ ಪ್ರತಿಯೊಬ್ಬ ಪ್ರಕೃತಿ ಪ್ರೇಮಿಗೂ ನಮ್ಮ Hats off 


.ನೀವು ಶ್ಯಾಮ್ ಗೆ ಅವರ ಕಾರ್ಯಗಳಲ್ಲಿ ಸಹಾಯ ಮಾಡಲು ಇಚ್ಚಿಸುವಿವಿರಾದರೆ ಅವರನ್ನು ಸಂಪರ್ಕಿಸಿ.ಅವರ ಮೊಬೈಲ್ no-
94480- 69399

.ಜೈ ಹೋ
ಸ್ನೇಕ್ ಶ್ಯಾಮ್Share this post with your friends


Bookmark and Share

Friday, August 27, 2010

-ಮಳೆ ಕಾಡುಗಳು- (RAIN FORESTS)-
.ಮಳೆ ಕಾಡುಗಳು ಈ ಭೂಮಿಯ ಶ್ವಾಸಕೋಶಗಳಿದ್ದಂತೆ

.ಭೂಮಿಯ ಶೇಕಡ 2 % ರಷ್ಟು ಭಾಗವನ್ನು ಮಳೆ ಕಾಡುಗಳು ಆವರಿಸಿಕೊಂಡಿವೆ

.ಭೂಮಿಯ ಮೇಲೆ ಬದುಕಿರುವ ಜೀವಿಗಳಲ್ಲಿ 2/3 ರಷ್ಟು ಜೀವಿಗಳು ಈ ಮಳೆ ಕಾಡುಗಳಲ್ಲೇ ಕಾಣಸಿಗುತ್ತವೆ

.ಇಲ್ಲಿನ ಜೀವ ವೈವಿದ್ಯತೆ ಎಷ್ಟೆಂದರೆ ಇಲ್ಲಿನ ಪ್ರತಿ squre kilometerನಲ್ಲಿ 100೦ ಕ್ಕೂ ಹೆಚ್ಚು species ಗಳನ್ನು ನೋಡಬಹುದು

.Amazon Basin of South America ಇದು ಪ್ರಪಂಚದ ಅತ್ಯಂತ ದೊಡ್ಡದಾದ ಮಳೆ ಕಾಡು


.ಸಾಧಾರಣವಾಗಿ ಇಲ್ಲಿನ temperature 80 degrees Fahrenheit (ವಾರ್ಷಿಕ ಸರಾಸರಿ )

.160 ರಿಂದ 400 inches ನಷ್ಟು ಮಳೆ ಇಲ್ಲಿ ಬೀಳುತ್ತದೆ (ವಾರ್ಷಿಕ ಸರಾಸರಿ)

.ಇಲ್ಲಿನ ಕೇವಲ four-mile square mile ಜಾಗವು 1,500 ತಳಿಗಳ ಹೂ ಬಿಡುವ ಸಸ್ಯಗಳನ್ನು,750 ತಳಿಗಳ ಮರಗಳನ್ನು,125 ತಳಿಗಳ ಸಸ್ತನಿಗಳನ್ನೂ ,400 ತಳಿಗಳ ಪಕ್ಷಿಗಳನ್ನು,100 ತಳಿಗಳ ಸರಿಸೃಪಗಳನ್ನು,60 ತಳಿಗಳ ಉಭಯವಾಸಿಗಳನ್ನು,150 ತಳಿಗಳ ಚಿಟ್ಟೆಗಳನ್ನು ಒಳಗೊಂಡಿರುತ್ತದೆ

.1 ton ನಷ್ಟು carbon dioxide ಅನ್ನು 1 HECTARE ಮಳೆ ಕಾಡು 1 ವರ್ಷದಲ್ಲಿ ಹೀರಿಕೊಳ್ಳಬಲ್ಲವು


.ಪ್ರಪಂಚದಲ್ಲಿ ಉತ್ಪಾದನೆಯಾಗುವ ಒಟ್ಟು ಆಮ್ಲಜನಕದಲ್ಲಿ 20 percent ಗಿಂತಲೂ ಅಧಿಕ ಪ್ರಮಾಣದ ಆಮ್ಲಜನಕವು ಬರಿ ಮಳೆ ಕಾಡಿನಿಂದಲೇ ಉತ್ಪಾದನೆಯಾಗುತ್ತದೆ


.1 HECTARE ಮಳೆ ಕಾಡಿನಲ್ಲಿ 750 ಬಗೆಯ ಮರಗಳನ್ನು ,1500 ತಳಿಗಳ higher plants ಗಳನ್ನೂ ನೋಡಬಹುದಾಗಿದೆ


.3000 ದಷ್ಟು ಬಗೆಯ ಹಣ್ಣುಗಳು ಮಳೆ ಕಾಡಿನಲ್ಲಿ ಸಿಗುತ್ತವೆ


.U.S. National Cancer Institute ನ ಪ್ರಕಾರ 3000 ಕ್ಕಿಂತಲೂ ಹೆಚ್ಚಿನ ಮಳೆ ಕಾಡಿನ ಸಸ್ಯಗಳ ಔಷಧಿಗಳು cancer cell ಗಳ ವಿರುದ್ದ ಹೊರಡಬಲ್ಲವು


.ದೊಡ್ಡ ಜಾತಿಯ ಬಿದಿರುಗಳು ದಿನಕ್ಕೆ 9 ಅಡಿಗಳಷ್ಟು ಬೆಳೆಯಬಲ್ಲವು


.tropical rainfores ನಲ್ಲಿ ಮರಗಳು ಎಷ್ಟು ಒತ್ತಾಗಿ ಬೆಳೆದಿರುತ್ತವೆಂದರೆ canopy ಗಳ ಮೇಲೆ ಬೀಳುವ ಮಳೆ ಭೂಮಿ ತಲುಪಲು ಕನಿಷ್ಠ 10 ನಿಮಿಷ ಬೇಕು


.ಕೆಲವು ಮಳೆ ಕಾಡುಗಳಲ್ಲಿ ಕಂಡು ಬರುವ ಮಂಗಗಳು ಪ್ರಾಣಿಗಳು ಹಾಗು ಸಸ್ಯಗಳು ಎರಡನ್ನೂ ತಿನ್ನುತ್ತವೆ


.ಮದ್ಯ ಆಫ್ರಿಕಾದ ಮಳೆ ಕಾಡುಗಳಲ್ಲಿ 8000 ಕ್ಕಿಂತಲೂ ಅಧಿಕ ತಳಿಗಳ ಸಸ್ಯಗಳು ಕಂಡುಬರುತ್ತವೆ


.ಆಸ್ಟ್ರೇಲಿಯಾದ ಮಳೆ ಕಾಡುಗಳಲ್ಲಿ ಸಿಗುವ 80 percent ನಷ್ಟು ಹೂವುಗಳು ಪ್ರಪಂಚದ ಬೇರೆಲ್ಲೂ ಕಾಣಸಿಗುವುದಿಲ್ಲ


.ಪ್ರಪಂಚದಲ್ಲಿರುವ ಪಕ್ಷಿಗಳಲ್ಲಿ 1/3 ರಷ್ಟು ಪಕ್ಷಿಗಳು ಮಳೆ ಕಾಡಿನಲ್ಲೇ ಕಂಡುಬರುತ್ತವೆ


.30000 ಬಗೆಯ epiphytes ಗಳು ಮಳೆ ಕಾಡುಗಳಲ್ಲಿ ಕಂಡುಬರುತ್ತವೆ


.ವರ್ಷದ 365 ದಿನಗಳಲ್ಲಿ 200 ದಿನಗಳು ಅತ್ಯಂತ ತೇವಾಂಶದಿಂದ ಕೂಡಿರುತ್ತವೆ


.ಮಳೆ ಕಾಡಿನ ಕೆಲವು ಮರಗಳು 200 ft ನಷ್ಟು ಎತ್ತರ ಬೆಳೆಯಬಲ್ಲವು


.ಪ್ರತಿಯೊಂದು canopy ಮರ ವರ್ಷಕ್ಕೆ 760 liters ನಷ್ಟು ನೀರನ್ನು ವಾತಾವರಣಕ್ಕೆ ಸೇರಿಸಬಲ್ಲದು


.ಭಾರತದಲ್ಲಿ ಮಳೆ ಕಾಡುಗಳು ಕಂಡು ಬರುವ ಸ್ಥಳಗಳು- ಅಸ್ಸಾಂ ಕಣಿವೆಗಳು,Dibrugarh districts,lower parts of thenaga hills ,ಮೆಘಾಲಯ, Mizoram, Manipur ,Andaman & Nicobar Islands,ಪಶ್ಚಿಮ ಘಟ್ಟಗಳು

.-ಮಳೆ ಕಾಡುಗಳು-ಭೂಮಿಯ ಅತ್ಯಂತ ಜೀವ ವೈವಿದ್ಯತೆಯ ಸ್ಥಳಗಳು .ಇವುಗಳ ಬಗ್ಗೆ ತಿಳಿದುಕೊಳ್ಳುವುದೇ 1 ರೋಮಾಂಚನ ಅನುಭವ


Share this post with your friends

Bookmark and Share

Wednesday, August 25, 2010

-ಪಶ್ಚಿಮ ಘಟ್ಟ ಉಳಿಸಿ-

.ಭಾರತದಲ್ಲಿ ಇರುವ 4 hotspot ಗಳಲ್ಲಿ ಪಶ್ಚಿಮ ಘಟ್ಟಗಳು ಕೂಡ ಒಂದು

.
ಒಟ್ಟು ಸುಮಾರು1600 ಕಿ.ಮೀ. ಉದ್ದವಿರುವ ಪಶ್ಚಿಮ ಘಟ್ಟಗಳು ಮಹಾರಾಷ್ಟ್ರ,ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹಬ್ಬಿವೆ.ಪಶ್ಚಿಮ ಘಟ್ಟಗಳು ಒಟ್ಟು 60000 ಚದರ ಕಿ.ಮೀ. ಪ್ರದೇಶವನ್ನು ಆವರಿಸಿದ್ದು ಅತಿ ಸಂಕೀರ್ಣ ನದಿ ವ್ಯವಸ್ಥೆಗೆ ಮೂಲವಾಗಿವೆ

.
ತಾಮ್ರಪರ್ಣಿ, ಗೋದಾವರಿ, ಕೃಷ್ಣಾ ಶರಾವತಿ ಮತ್ತು ನೇತ್ರಾವತಿ ಮುಂತಾದ ನದಿಗಳ ಉಗಮ ಸ್ಥಾನವು ಪಶ್ಚಿಮ ಘಟ್ಟ

.
ಕೆಮ್ಮಣ್ಣುಗುಂಡಿ, ಕೊಡಚಾದ್ರಿ, ಕುದ್ರೆಮುಖ .ಮಹಾಬಲೇಶ್ವರ, ಸೋನ್ಸಾಗರ್, ಮುಳ್ಳಯ್ಯನಗಿರಿ,ಆನೈ ಮುಡಿ ಮುಂತಾದ ಪ್ರಮುಖ ಶಿಖರಗಳನ್ನು ಪಶ್ಚಿಮ ಘಟ್ಟಗಳು ಒಳಗೊಂಡಿವೆ

.
ಘಟ್ಟ ಪ್ರದೇಶಗಳಲ್ಲಿ ಸರಾಸರಿ ತಾಪಮಾನ ಉತ್ತರದಲ್ಲಿ ೨೪ ಡಿ. ಸೆಲ್ಸಿಯಸ್ ಮತ್ತು ದಕ್ಷಿಣದಲ್ಲಿ ೨೮ ಡಿ. ಸೆಲ್ಸಿಯಸ್.
ಪ್ರದೇಶದಲ್ಲಿ 13 ರಾಷ್ಟ್ರೀಯ ಉದ್ಯಾನಗಳು,2 biosphere reserves ಗಳಂತಹ ಸಂರಕ್ಷಿತ ಪ್ರದೇಶಗಳಿವೆ

.
ಪಶ್ಚಿಮ ಘಟ್ಟಗಳು ಸಾವಿರಾರು ತಳಿಯ ಪ್ರಾಣಿಗಳಿಗೆ ನೆಲೆಯಾಗಿದ್ದು ಜಾಗತಿಕವಾಗಿ ವಿನಾಶದಂಚಿನಲ್ಲಿರುವ 325 ತಳಿಗಳ ಪ್ರಾಣಿಗಳನ್ನು ಒಳಗೊಂಡಿದೆ

.
ಒಟ್ಟು 139 ತಳಿಯ ಸಸ್ತನಿಗಳು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿವೆ

.
ಕರ್ನಾಟಕದ ಘಟ್ಟಗಳು 6000 ಆನೆಗಳಿಗೆ ಆವಾಸಸ್ಥಾನವಾಗಿವೆ

.
508 ಪ್ರಭೇದದ ಪಕ್ಷಿಗಳು ಮತ್ತು 179 ಪ್ರಕಾರದ ದ್ವಿಚರಿಗಳಿಗೆ ಪಶ್ಚಿಮ ಘಟ್ಟಗಳು ನೆಲೆಯಾಗಿವೆ

.
ವಿಶ್ವದಲ್ಲಿ ಅಳಿವಿನಂಚಿನಲ್ಲಿರುವ ಜೀವತಳಿಗಳ ಪೈಕಿ 325 ತಳಿಗಳ ಜೀವಿಗಳು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿವೆ

.
ದೇಶದ ಹವಾಮಾನವನ್ನು ಸುಸ್ತಿತಿಯಲ್ಲಿಡಲು ಪಶ್ಚಿಮ ಘಟ್ಟ ಗಳು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ.ಜೂನ್ ತಿಂಗಳಿನಿಂದ ಸೆಪ್ಟೆಂಬರ್ವರೆಗಿನ ಮಳೆಗಾಲದಲ್ಲಿ ಇಲ್ಲಿ ಬೀಳುವ ಸರಾಸರಿ ಮಳೆ ವಾರ್ಷಿಕ 3000 ದಿಂದ 4000 ಮಿಲಿಮೀಟರ್

.
ಎತ್ತರದ ಪ್ರದೇಶಗಳಲ್ಲಿ ಸದಾಹಸಿರಿನ ಮಳೆಕಾಡುಗಳಿದ್ದು ಅತೀವ ಸಸ್ಯ ವೈವಿಧ್ಯವನ್ನು ಹೊಂದಿವೆ

.
ಜಗತ್ತಿನ ಬೇರೆ ಯಾವ ಭಾಗದಲ್ಲಿಯೂ ಕಾಣದ 84 ಜಾತಿಯ ದ್ವಿಚರಿಗಳು, 16 ಪ್ರಕಾರದ ಪಕ್ಷಿಗಳು, 7 ತಳಿಯ ಸಸ್ತನಿಗಳು ಮತ್ತು 1600 ಹೂಬಿಡುವ ಸಸ್ಯಗಳು ಪಶ್ಚಿಮ ಘಟ್ಟಗಳಲ್ಲಿ ಇವೆ

.
ಇದು ಪಶ್ಚಿಮ ಘಟ್ಟಗಳ ಬಗ್ಗೆ ಕೇವಲ 1 ಸಣ್ಣ ಪರಿಚಯವಷ್ಟೇ,ಇಂತಹ ಸಾವಿರಾರು ಪ್ರಕೃತಿ ಅದ್ಭುತಗಳಿಂದ ಕೂಡಿದೆ ನಮ್ಮ ಪಶ್ಚಿಮ ಘಟ್ಟಗಳು

.
ಆದರೆ ಇಂತಹ ಬೆಲೆ ಕಟ್ಟಲಾಗದ ಪಶ್ಚಿಮ ಘಟ್ಟಗಳು ಇಂದು ನಮ್ಮ ಹಾಗು ನಮ್ಮನ್ನಾಳುವ ಸರ್ಕಾರಗಳಿಂದ ವಿನಾಶದ ಅಂಚಿಗೆ ತಲುಪಿವೆ
.ಸರ್ಕಾರಗಳ ಉದ್ದೇಶಗಳು ಒಳ್ಳೆಯದಾದರೂ ಅದನ್ನು ಜಾರಿಗೊಳಿಸಲು ಬಳಸುತ್ತಿರುವ ಮಾರ್ಗಗಳು ಪ್ರಕೃತಿಗೆ ಮಾರಕವಾಗಿದೆ

.
2010 ರಲ್ಲಿ ಭಾರತದಲ್ಲಿ ಆಗುತ್ತಿರುವ ಹವಾಮಾನ ವ್ಯಪರೀತ್ಯಗಳನ್ನು ಗಮನಿಸಿದರೆ ನಮಗೆ ಇದರ ಅರಿವಾಗುತ್ತದೆ

.
ಇಂದಿನ ದಿನಗಳಲ್ಲಿ ಪಶ್ಚಿಮ ಘಟ್ಟಗಳ ಮಾರಣ ಹೋಮ ಎಗ್ಗಿಲ್ಲದೆ ಸಾಗಿದೆ

.
ಒಂದು ಕ್ಷಣ ಯೋಚಿಸಿ ನೋಡಿ,ನಾವು ನಮ್ಮ ದಿನನಿತ್ಯದ ಜೀವನದಲ್ಲಿ ವಿಷಯಗಳ ಬಗ್ಗೆ ಎಷ್ಟು ಸಮಯ ಯೋಚನೆ ಮಾಡುತ್ತೇವೆಂದು....

.ನಮ್ಮ ಕುತ್ತಿಗೆಗೆ ಬರುವವರೆಗೂ ಯಾವ ವಿಚಾರಗಳು ನಮಗೆ ಬೇಕಾಗುವುದಿಲ್ಲ

.
ನಿಮನ್ನು ಸಾಕಿ ಬೆಳೆಸಿದ ನಿಮ್ಮ ತಂದೆ ತಾಯಿಯರಿಗೆ ಯಾರಾದರು ನೋವು ಉಂಟು ಮಾಡಿದರೆ ನಿಮಗೆ ಕೋಪ ಬರುತ್ತದೆ.ಆದರೆ ನೀವು ಹುಟ್ಟಿದ ಕ್ಷಣದಿಂದ ನೀವು ಸಾಯುವವರೆಗೂ ನಿಮಗೆ ಬದುಕಲು ಸಹಾಯ ಮಾಡುವ ಮಹಾತಾಯಿ ಪ್ರಕೃತಿ ನಾಶವಾಗುತ್ತಿರುವಾಗ ನಿಮಗೆ ಏನು ಅನ್ನಿಸುವುದಿಲ್ಲವೇ?

.
ಏಳಿ,ಎದ್ದೇಳಿ ಎಂಬ ವಿವೇಕಾನಂದರ ವಾಕ್ಯವನ್ನು ಇಂದು ಪ್ರಕೃತಿಯನ್ನು ಉಳಿಸಲು ಬಳಸಬೇಕಾಗಿದೆ

.
ಪಶ್ಚಿಮ ಘಟ್ಟಗಳ ನಾಶ ಪ್ರಕೃತಿಯ ನಾಶವಲ್ಲ, ಅದು ನಮ್ಮೆಲ್ಲರ ನಾಶ.....

.
ಇನ್ನಾದರೂ ಪ್ರಕೃತಿಯ ಉಳಿವಿಗೆ ನಿಮ್ಮ ಕ್ಯೆಲಾದ ಸಹಾಯ ಮಾಡಿ.......ಪಶ್ಚಿಮ ಘಟ್ಟಗಳನ್ನು ಉಳಿಸಿ

"
ಉಳಿಸದಿದ್ದರೆ ಪಶ್ಚಿಮ ಘಟ್ಟ,ನೀವು ಸತ್ತಮೇಲೆ ನಿಮಗಾಗಿ ಮಾಡಲು ಇರುವುದಿಲ್ಲ 1 ಚಟ್ಟ"


.........ಪಶ್ಚಿಮ ಘಟ್ಟಗಳನ್ನು ಉಳಿಸಿ..........

image courtesy-DINESH,RAGHUBookmark and Share

Sunday, August 15, 2010

NATURE
Nature is mighty
Nature is strong
Nature is usually always right
Nature is rarely ever wrong
Nature is beauty
Nature is moody
Nature is smart
Nature always has the greater part
Nature is blue
Nature is green
Nature is every color possibly seen
Nature is true
Nature is beaming
Nature is dreaming
Nature is in every place
Nature is always with grace
Nature is true
Nature is you
Nature is me
Nature will forever be free.


-anees akbar
Saturday, August 14, 2010

Friday, August 13, 2010

ನಾಗರ ಹಾವು
.ಭಾರತದಲ್ಲಿ ಪೂಜ್ಯ ಭಾವನೆಯಿಂದ ಕಾಣುವ ನಾಗರ ಹಾವಿನ family elapidae

.
ಭಾರತದಲ್ಲಿ ಕಾಣ ಸಿಗುವ ಅತ್ಯಂತ 4 ವಿಷಪೂರಿತ ಹಾವುಗಳಲ್ಲಿ ನಾಗರ ಹಾವು ಪ್ರಮುಖವಾದದ್ದು

.
ಸಾಮಾನ್ಯವಾಗಿ ನಾಗರಹಾವುಗಳು 6 ಅಡಿಗಿಂತಲೂ ಹೆಚ್ಚು ಬೆಳೆಯಬಲ್ಲವು

.The genus Naja consists of from 20 to 22 species

.
ಏಪ್ರಿಲ್ ಮತ್ತು ಜುಲೈ ನಡುವಿನ ಸಮಯದಲ್ಲಿ ಇವು ಮೊಟ್ಟೆ ಇಡುತ್ತವೆ

.
ಸಾಮಾನ್ಯವಾಗಿ 12 ರಿಂದ 30 ಮೊಟ್ಟೆ ಇಡುತ್ತವೆ

.
ಹುಟ್ಟಿದಾಗಲೇ ಇವು 20 ರಿಂದ 30cm ನಷ್ಟು ಇರುತ್ತವೆ

.
ಹುಟ್ಟಿದ ಮರಿಗಳಲ್ಲೇ ವಿಷ ಗ್ರಂಥಿಗಳು ಪೂರ್ತಿಯಾಗಿ ಬೆಳೆದಿರುತ್ತವೆ

.
ನಾಗರ ಪಂಚಮಿಯಂತಹ ವಿಶೇಷ ದಿನಗಳಲ್ಲಿ ಇವುಗಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ.
ಇವುಗಳ ವಿಷ neurotoxin ಆಗಿದ್ದು ನರಗಳ ಮೇಲೆ ಪ್ರಭಾವ ಭೀರಿ ಕಚ್ಚಿದ 1 ಗಂಟೆಯೊಳಗೆ ಸಾವು ಸಂಭವಿಸಬಹುದು

.
ನೆನಪಿನಲ್ಲಿಡಿ- *ಇವುಗಳು ಎಂದೂ ಸುಮ್ಮನೆ ಕಚ್ಚಲು ಬರುವುದಿಲ್ಲ ,ಇವುಗಳಿಗೆ ತೊಂದರೆಯಾದಾಗ ಮಾತ್ರ ಇವು ಆಕ್ರಮನಕ್ಕಿಳಿಯುತ್ತವೆ *

.
ಇವುಗಳ ಆಯಸ್ಸು 20 ವರ್ಷಗಳಿಗಿಂತಲೂ ಜಾಸ್ತಿ

.
ರಾತ್ರಿಯಲ್ಲೂ ಇವುಗಳು ಸ್ಪಷ್ಟವಾಗಿ ನೋಡಬಲ್ಲವು

.
temperature ಸಣ್ಣ ಬದಲಾವಣೆಯನ್ನು ಕೂಡ ಇವು ಗ್ರಹಿಸಬಲ್ಲವು

.
ಇವುಗಳಲ್ಲಿರುವ Jacobsen's Organ ನಿಂದಾಗಿ ಇವುಗಳ ವಾಸನಾ ಶಕ್ತಿ ಅದ್ಭುತವಾಗಿರುತ್ತದೆ

.
ಸಾಮಾನ್ಯವಾಗಿ ಇವುಗಳ ಶತ್ರುಗಳು mongoose ಹಾಗು ಎಲ್ಲಾ ಪ್ರಾಣಿಗಳ ಶತ್ರು ಮಾನವ

.
ಮನುಷ್ಯ ಆಹಾರವನ್ನು ನಾಶ ಮಾಡುವ ಇಲಿಗಳನ್ನು ಇವುಗಳು ತಿನ್ನುವುದರಿಂದ ಇವುಗಳು ಮಾನವನಿಗೂ ಸಹಕಾರಿ ಹಾಗು ಪರಿಸರಕ್ಕೂ ಸಹಾಯಕಾರಿ

.
ಇವುಗಳು ನೆಲದ ಮೂಲಕ ಶಬ್ದವನ್ನು ಗ್ರಹಿಸುತ್ತವೆ

.
ಕೆಲವು ಸಲ ಇವು ಮನುಷ್ಯರಿಗೆ ಅಥವಾ ಪ್ರಾಣಿಗಳಿಗೆ ಕಚ್ಚಿದಾಗ ಅದು ವಿಷದ ಕಡಿತವಾಗಿರದೆ dry bite ಸಹಿತ ಆಗಿರಬಹುದು

.
ಇವುಗಳು ಕಚ್ಚಿದಾಗ ಕೊಡುವ antivenom ಕೂಡ ಇವುಗಳ ವಿಷದಿಂದಲೇ ತಯಾರಾಗಿರುತ್ತದೆ

.
ಇವುಗಳ ಗುಂಪನ್ನು quiver ಎಂದು ಕರೆಯುವರು

.
1972 wildlife protection act ಪ್ರಕಾರ ಇವುಗಳನ್ನು ಹಿಡಿದು ಹಿಂಸಿಸುವುದು,ಕೊಲ್ಲುವುದು.ತೊಂದರೆ ಮಾಡುವುದು ಕಾನೂನು ಭಾಹೀರ ಅಪರಾದವಾಗಿದೆ

.
ಇತ್ತೀಚಿನ ದಿನಗಳಲ್ಲಿ 'ನಾಗರ ಮಣಿ' ಎಂಬ concept ಬಳಸಿ ಕೆಲವು ಕಳ್ಳ ಕಾಕರು ಇವುಗಳಿಗೆ ತೊಂದರೆ ನೀಡುತ್ತಿದ್ದಾರೆ

.
ನಾಗರ ಹಾವು- ಪರಿಸರದ ಸುಂದರ ಜೀವಿಗಳು,ಅವುಗಳಿಗೆ ನೀವು ತೊಂದರೆ ಕೊಡದ ಹೊರತು ನಿಮಗೆ ಅವುಗಳು ತೊಂದರೆ ಮಾಡುವುದಿಲ್ಲ
-
ನಾಗರ ಹಾವು ಗಳನ್ನೂ ಪೂಜಿಸಿ,ಗೌರವಿಸಿ ಆದರೆ ನಿಮ್ಮ ಪೂಜೆ ಪುನಸ್ಕಾರಗಳು ಅವುಗಳಿಗೆ ತೊಂದರೆ ಮಾಡದಂತೆ ಇರಲಿ-

.
ಪ್ರಕೃತಿಯಲ್ಲಿ ನಮಗೆಷ್ಟು ಬದುಕುವ ಹಕ್ಕು ಇದೆಯೋ ಅಷ್ಟೇ ಹಕ್ಕು ಇವುಗಳಿಗೂ ಇದೆ

.ನಿಮ್ಮ
ವಾಸ ಸ್ಥಳದಲ್ಲಿ ಇವುಗಳು ಬಂದಾಗ ಇವುಗಳಿಗೆ ಹಿಂಸಿಸದೆ ಇವುಗಳನ್ನು ಹಿಡಿಯುವ ಪರಿಸರ ಪ್ರೇಮಿಗಳನ್ನು ಸಂಪರ್ಕಿಸಿ ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿ-ಇದೇ ಅವುಗಳಿಗೆ ನೀವು ಮಾಡುವ ಮಹದುಪಕಾರ
***
ಬದುಕಿ ಬದುಕಲು ಬಿಡಿ***
Bookmark and Share


Thursday, August 12, 2010

-ಪ್ರಕೃತಿ ಮುನಿದಾಗ.......

-ಪಾಕಿಸ್ತಾನದಲ್ಲಿ ಪ್ರವಾಹ-


.
ಜುಲೈ 2010 ರಲ್ಲಿ ಉಂಟಾದ ಪಾಕಿಸ್ತಾನ್ flood ನಲ್ಲಿ ಸತ್ತವರ ಸಂಖೆ 1600

.14.
೦೦೦ million ಜನರು ಇದರಿಂದ ತೊಂದರೆಗೆ ಒಳಗಾಗಿದ್ದಾರೆ

.
4,600 ಹಳ್ಳಿಗಳು ನಾಶವಾಗಿವೆ

.
7,೦೦,೦೦೦ acres ನಲ್ಲಿ ಬೆಳೆದಿದ್ದ ಹತ್ತಿ ನಾಶವಾಗಿದೆ

.200,
೦೦೦ acres ನಲ್ಲಿ ಬೆಳೆದಿದ್ದ ಅಕ್ಕಿ ಹಾಗು ಕಬ್ಬು ನಾಶವಾಗಿದೆ

.
ಕೇವಲ 36 ಗಂಟೆಯಲ್ಲಿ 300 mm ಮಳೆ ಬಿದ್ದಿದೆ

.722,
600 ಮನೆಗಳಿಗೆ ಹಾನಿಯಾಗಿದೆ

.
ದಿನದ ವರೆಗೂ ಸತ್ತವರ ಸಂಖೆಯಲ್ಲಿ ಏರಿಕೆಯಾಗುತ್ತಲಿದೆ


-2010 Russian
wildfires-.ಜುಲೈ-ಆಗಸ್ಟ್ 2010 ರಲ್ಲಿ ಸಂಭವಿಸಿದ Russian wildfires ನಿಂದಾಗಿ russia ದಲ್ಲಿ ತಾಪಮಾನ 42.3 ನಷ್ಟು ಏರಿಕೆಯಾಗಿತ್ತು

. 500,
೦೦೦ ha ಕ್ಕಿಂತಲೂ ಹೆಚ್ಚಿನ ಅರಣ್ಯದಲ್ಲಿ ಭೀಕರ ಕಾಡ್ಗಿಚ್ಚು ತನ್ನ ರುದ್ರ ಪ್ರತಾಪವನ್ನು ತೋರಿಸಿತ್ತು

.50
ಕ್ಕಿಂತಲೂ ಹೆಚ್ಚು ಜನರು ಕಾಡ್ಗಿಚ್ಚಿನಲ್ಲಿ ತಮ್ಮ ಪ್ರಾಣ ಬಿಟ್ಟಿದ್ದಾರೆ

.1,800
ಪ್ರಾಣಿಗಳ ಪ್ರಾಣಕ್ಕೆ ಸಂಚಕಾರ ಬಂದೊದಗಿದೆ

. 2,
೦೦೦ ಮನೆಗಳು ನಾಶವಾಗಿವೆ

.162,
೦೦೦ ಜನರು ಬೆಂಕಿ ಆರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ

.ಹಲಾವರು ನಗರಗಳು ಹೊಗೆಯಿಂದ ಆವೃತವಾಗಿದ್ದವು-China landslide-.
2010 ಆಗಸ್ಟ್ ನಲ್ಲಿ ಉಂಟಾದ China landslide ನಲ್ಲಿ ಸತ್ತವರ ಸಂಖೆ 702

.
1000 ರಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ


-leh flood in jammu -
.
ಆಗಸ್ಟ್ 2010 ರಲ್ಲಿ jammu ವಿನಲ್ಲಿ ಉಂಟಾದ ಜಲ ಪ್ರಳಯಕ್ಕೆ ಸಿಕ್ಕಿ 165 ಕ್ಕೂ ಹೆಚ್ಚು ಜನರು ಮೃತರಾಗಿದ್ದಾರೆ

.
100 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ-ಪ್ರಕೃತಿಯು ಮುನಿದಾಗ...........Bookmark and Share


Wednesday, August 11, 2010


-ELEPHANT SECRETS-


.
ಆನೆ ಜಗತ್ತಿನಲ್ಲಿ ನೆಲದ ಮೇಲೆ ವಾಸಿಸುವ ಪ್ರಾಣಿಗಳಲ್ಲಿ ಅತಿ ದೊಡ್ಡದು

.
ಆನೆಗಳಲ್ಲಿ ಆಫ್ರಿಕಾ ಆನೆಗಳು ಏಷಿಯಾ ಆನೆಗಳಿಗಿಂತ ದೊಡ್ಡವು

.
ಇಂದು ಭೂಮಿಯ ಮೇಲೆ ಸುಮಾರು ೬೦,೦೦೦ ಮಾತ್ರ ಏಷ್ಯಾದ ಆನೆಗಳು ಇವೆ

.
ಏಷಿಯಾದ ಗಂಡು ಆನೆಗಳ ಸಾಮಾನ್ಯ ತೂಕ 5,000 kg

.
ಆನೆಯ ಸೊಂಡಿಲಿನಲ್ಲಿರುವ ಸ್ನಾಯುಗಳ ಸಂಖ್ಯೆ ಒಂದು ಲಕ್ಷದಷ್ಟು

.
ಆನೆಗಳು ಗಂಟೆಗೆ 5km ನಷ್ಟು ಚಲಿಸಬಲ್ಲವು

.
ಆನೆಗಳ ದಂತಗಳು ಜೀವನಪರ್ಯಂತ ಬೆಳೆಯುತ್ತಲೇ ಇರುತ್ತವೆ

.
ಇದುವರೆಗೂ ದಾಖಲಾಗಿರುವ ಅತ್ಯಂತ ದೊಡ್ಡದಾದ ದಂತವು 214 pounds ಹಾಗು 138 inches long ಗಳಷ್ಟು ಇತ್ತು

.
ಆನೆಯು 1 ಸಲಕ್ಕೆ 18 quarts ನಷ್ಟು ನೀರನು ತನ್ನ ಸೊಂಡಿಲಿನ ಮೂಲಕ ತೆಗೆದುಕೊಳ್ಳುತ್ತದೆ

.
ಆನೆಯ ಗರ್ಭಾವಸ್ಥೆ ಕಾಲ ೨೨ ತಿಂಗಳುಗಳು ಎಲ್ಲಕ್ಕಿಂತ ದೀರ್ಘ

.
ಭೂಮಿಯ ಮೇಲಿನ ಹಾರಲಾಗದ ಏಕೈಕ ಪ್ರಾಣಿ ಆನೆ

.
ಆನೆಯು ನೀರಿನ ಇರುವಿಕೆಯನ್ನು 3 mile ಗಳಷ್ಟು ದೂರದಿಂದಲೇ ಪತ್ತೆ ಹಚ್ಚುತ್ತವೆ


.ಸಾಮಾನ್ಯವಾಗಿ ಆನೆಗಳು ತಮ್ಮ ಜೀವಿತಾವಧಿಯಲ್ಲಿ ೨೮ ಹಲ್ಲುಗಳನ್ನು ಹೊಂದಿರುತ್ತವೆ

.
ಸಾಮಾನ್ಯವಾಗಿ ಆನೆಗಳ ಚರ್ಮವು 2.5 centimetres ನಷ್ಟು ದಪ್ಪವಾಗಿರುತ್ತದೆ

.
ಆನೆಗಳ ಜೀವಿತಾವದಿ ಸಾಮಾನ್ಯವಾಗಿ 70 ವರ್ಷ ಅಥವಾ ಅದಕ್ಕಿಂತ ಜಾಸ್ತಿ

.
ಆನೆಗಳು ಮನುಷ್ಯರ ಭಾವನೆಗಳಾದ ನಗು ಹಾಗು ಅಳು ಗಳನ್ನೂ ವ್ಯಕ್ತಪಡಿಸುತ್ತವೆ

.
ಆಫ್ರಿಕಾದ ಆನೆಗಳು ಮಲಗುವುದೇ ಇಲ್ಲ. ಸದಾಕಾಲ ನಿಂತೇ ಇರುತ್ತವೆ

.
ಆನೆಯು ಒಂದು ಉತ್ತಮ ಈಜುಗಾರ ಪ್ರಾಣಿ.ಸಮುದ್ರಗಳಲ್ಲಿ ದಿನಗಟ್ಟಲೆ ಈಜಬಲ್ಲವು

.
ಆನೆಗೆ ತನ್ನ ದೇಹದ ತಾಪಮಾನವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಕಿವಿಗಳು ಬಲು ಆವಶ್ಯಕ

.
ಹೆಣ್ಣಾನೆಯು ರಿಂದ ೧೨ನೆಯ ವಯಸ್ಸಿಗೆ ಲೈಂಗಿಕವಾಗಿ ಪ್ರೌಢಾವಸ್ಥೆಯನ್ನು ತಲುಪುವುದು

.
ಹೆಣ್ಣಾನೆಯು ೫೫ ರಿಂದ ೬೦ನೆಯ ವಯಸ್ಸಿನವರೆಗೂ ಹೆರಬಲ್ಲುದು

.
ದೊಡ್ಡದಾದ ಕಿವಿ ಇದ್ದರು ಸಹ ಆನೆಗಳಿಗೆ ಶ್ರವಣ ಶಕ್ತಿ ಕಡಿಮೆ

.
ಬೆಳೆದ ಗಂಡು ಆನೆಯನ್ನು bull ಎಂದು ಕರೆಯುತ್ತಾರೆ

.
ಇದೆ ರೀತಿ ಬೆಳೆದ ಹೆಣ್ಣು ಆನೆಯನ್ನು cow ಎಂದು ಕರೆಯುತ್ತಾರೆ

.
ಮರಿ ಆನೆಗಳಿಗೆ calf ಎಂದು ಕರೆಯುತ್ತಾರೆ

.
ಆನೆಗಳ ಗುಂಪನ್ನು herd ಎಂದು ಕರೆಯುತ್ತಾರೆ

.
ಆನೆಗಳು ಸಾಮಾನ್ಯವಾಗಿ ದಿನದ 16 ಗಂಟೆಯನ್ನು ತಿನ್ನಲು ಮೀಸಲಿಡುತ್ತವೆ

.
ದಿನವೊಂದಕ್ಕೆ ಆನೆಗಳು 495 pounds ನಷ್ಟು ಆಹಾರವನ್ನು ತಿನ್ನುತ್ತವೆ

.
ತನ್ನ ಸೌಮ್ಯಸ್ವಭಾವದ ಹೊರತಾಗಿಯೂ ಆನೆ ಜಗತ್ತಿನ ಅತಿ ಅಪಾಯಕಾರಿ ಪ್ರಾಣಿಗಳಲ್ಲಿ ಒಂದು

.
ಆನೆಗಳ ಹೃದಯದ ಬಡಿತ ನಿಮಿಷಕ್ಕೆ 27 ಬಾರಿ

.
ಆನೆಯು ದಿನವೊಂದಕ್ಕೆ 80 gallons ನಷ್ಟು ನೀರನ್ನು ಕುಡಿಯುತ್ತವೆ

.
ದಿನವೊಂದರಲ್ಲಿ ಆನೆಯ ನಿದ್ರಾ ಸಮಯ 4 ರಿಂದ 5 ಗಂಟೆ

.
ಹುಟ್ಟುವಾಗಲೇ ಆನೆಯ ಮರಿ 100-120 kilograms ನಷ್ಟು ತೂಕವಿರುತ್ತವೆ

.
ಆನೆಗಳು ಸತ್ತ ಮೇಲು ಬಹಳ ಸಮಯದ ವರೆಗೂ ನಿಂತೇ ಇರುತ್ತವೆ

.
ಪರಿಸರದ ಸಮತೋಲನವನ್ನು ಕಾಪಾಡುವುದರಲ್ಲಿ ಆನೆಗಳು ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತವೆ

.
ಇಂದಿನ ದಿನಗಳಲ್ಲಿ ಅರಣ್ಯ ನಾಶ,ಭೇಟೆಯಂತಹ ಮಾನವನ ಹೀನ ಕೃತ್ಯದಿಂದಾಗಿ ಆನೆಗಳು ವಿನಾಶದಂಚಿಗೆ ತಲುಪಿವೆ


-
ಪ್ರಕೃತಿಯನ್ನು ಉಳಿಸಿ- -ಆನೆಗಳನ್ನು ಬದುಕಲು ಬಿಡಿ-Bookmark and Share