- ಸ್ನೇಕ್ ಶ್ಯಾಮ್ -


.ಇವರ ಪೂರ್ಣ ಹೆಸರು M.S Balasubramania

.ಇವರ ಊರು mysore

.ಹಾವುಗಳ ಸ್ನೇಹಿತರಾದ ಇವರು ಮೈಸೂರಿನಾದ್ಯಂತ ಸ್ನೇಕ್ ಶ್ಯಾಮ್ ಎಂದೇ ಪ್ರಸಿದ್ದಿ

.ಇವರು ಒಬ್ಬ ಪರಿಸರ ಪ್ರೇಮಿ,ಪರಿಸರ ಸಂರಕ್ಷಕ,ಉರಗ ತಜ್ಞ

.ಇವರ ತಂದೆಯ ಹೆಸರು M.R.ಸುಬ್ಬರಾವ್,ತಾಯಿ A.Nagalakshmi

ಮೈಸೂರಿನ ಕೃಷ್ಣರಾಜನಗರ ದಲ್ಲಿ ಹುಟ್ಟಿದ ಇವರು ತಮ್ಮ ಚಿಕ್ಕ ವಯಸ್ಸಿನಿಂದಲೇ ಹಾವುಗಳ ಬಗ್ಗೆ ಆಸಕ್ತಿ ಹೊಂದ್ದಿದ್ದರು

.ಅವರ ಚಿಕ್ಕ ವಯಸ್ಸಿನಲ್ಲೇ ಅವರ ಪಕ್ಕದ ಮನೆಗೆ ಬಂದ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದರು

.ಡ್ರೈವರ್ ಆಗಿರುವ ಇವರಿಗೆ ಚಿಕ್ಕ ಮಕ್ಕಳೆಂದರೆ ತುಂಬಾ ಪ್ರೀತಿ

.ಶ್ಯಾಮ್ ನೋಡುವುದಕ್ಕೆ ತುಂಬಾ different.ಕೈ ತುಂಬಾ ಉಂಗುರಗಳು,ಕುತ್ತಿಗೆ ತುಂಬಾ ಸರಗಳು.ಇವುಗಳೇ ಶ್ಯಾಮ್ ರವರ highlights

.ಇವರ ಹಾವು ಹಿಡಿಯುವ ಕಾಯಕ 1982 ರಿಂದ ಶುರುವಾಯಿತು

.1982 ರಿಂದ ಇಲ್ಲಿಯವರೆಗೂ ಸುಮಾರು 40,೦೦೦ ಕ್ಕೂ ಹೆಚ್ಚು ಹಾವುಗಳನ್ನು ಸ್ನೇಕ್ ಶ್ಯಾಮ್ ಹಿಡಿದು ಕಾಡಿಗೆ ಬಿಟ್ಟಿದ್ದಾರೆ

.ಶ್ಯಾಮ್ ಗೆ ಪ್ರಾಣಿ,ಪಕ್ಷಿಗಳೆಂದರೆ ಅತೀವ ಪ್ರೀತಿ,ಅವರ ಮನೆಯಲ್ಲೇ ಸುಮಾರು 150 ಪಕ್ಷಿಗಳನ್ನು ಸಾಕಿದ್ದಾರೆ

.ಮೈಸೂರಿನ ಯಾವುದೇ ಜನವಸತಿ ಪ್ರದೇಶದಲ್ಲಿ ಹಾವು ಕಂಡರೆ ಜನರು ಶ್ಯಾಮ್ ಗೆ ತಿಳಿಸುತ್ತಾರೆ.ಆಗ ಶ್ಯಾಮ್ ಎಲ್ಲೇ ಇದ್ದರೂ ಬಂದು ಆ ಹಾವುಗಳನ್ನು ಸುರಕ್ಷಿತವಾಗಿ ಹಿಡಿಯುತ್ತಾರೆ

.ದಿನವೊಂದಕ್ಕೆ ಸುಮಾರು 10 ರಿಂದ 15 ಹಾವುಗಳಿಗೆ ಸಂಭಂದ್ದಪಟ್ಟ ಕರೆಗಳು ಶ್ಯಾಮ್ ಗೆ ಬರುತ್ತವೆ

.ಅವರು ಹಿಡಿದ ಎಲ್ಲಾ ಹಾವುಗಳನ್ನು ವಾರದಂತ್ಯದಲ್ಲಿ ಕಾಡಿಗೆ ಹೋಗಿ ಬಿಡುತ್ತಾರೆ

.ಸುಮಾರು 28 ರಿಂದ 30 ಬಗೆಯ ಹಾವುಗಳನ್ನು ಶ್ಯಾಮ್ ಗುರುತಿಸಬಲ್ಲರು

.ವಿಶೇಷವೆಂದರೆ ಶ್ಯಾಮ್ ಹಿಡದ ಹಾವುಗಳಿಗೆ ಜನರ ಹತ್ತಿರ ದುಡ್ಡು ತೆಗೆದುಕೊಳ್ಳುವುದಿಲ್ಲ

.ಕೇವಲ ಹಾವುಗಳನ್ನು ಹಿಡಿಯುವುದಲ್ಲದೆ ಜನರಲ್ಲಿ ಹಾಗು ಚಿಕ್ಕ ಮಕ್ಕಳಲ್ಲಿ ಹಾವುಗಳು ಹಾಗು ಪ್ರಕೃತಿಯ ಬಗ್ಗೆ ಅರಿವು ಮೂಡಿಸುತ್ತಾರೆ ನಮ್ಮ ಶ್ಯಾಮ್

.ಇಂದು ಅವರಿಂದಾಗಿ ಸಾವಿರಾರು ಹಾವುಗಳು ಬದುಕುಳಿದಿವೆ

.ಈವರೆಗೂ ಶ್ಯಾಮ್ 4 ಬಾರಿ ಹಾವುಗಳಿಂದ (ವಿಷಪೂರಿತ) ಕಡಿತಕ್ಕೊಳಗಾಗಿದ್ದಾರೆ


.ಮೈಸೂರಿನ ಬಹು ಜನರು ಇಂದು ಹಾವುಗಳನ್ನು ನೋಡಿದರೆ ಕೊಲ್ಲುವುದಿಲ್ಲ. ಬದಲಾಗಿ ಅವುಗಳನ್ನು ಸಂರಕ್ಷಿಸುವತ್ತ ಗಮನ ಹರಿಸುತ್ತಾರೆ.ಜನಗಳಲ್ಲಿ ಈ ಭಾವನೆ ತರುವಲ್ಲಿ ಶ್ಯಾಮ್ ರ ಪಾತ್ರ ತುಂಬಾ ಇದೆ

.ಅವರ ಪ್ರಕಾರ 'ಮನುಷ್ಯರು ಹಾವುಗಳಿಗಿಂತ ವಿಷಪೂರಿತ ಜೀವಿಗಳು' ಎಷ್ಟು ಸತ್ಯದ ಮಾತಲ್ಲವೇ???

.ಇವರ ಕಾರ್ಯವನ್ನು ಗುರುತಿಸಿ ಹಲವಾರು ಸಂಘ,ಸಂಸ್ಥೆಗಳು ಇವರಿಗೆ ಸನ್ಮಾನವನ್ನು ಮಾಡಿವೆ

.National Geographic ಚಾನೆಲ್ ನ Croc Chronicles ನಲ್ಲಿ ಶ್ಯಾಮ್ ಮಿಂಚಿದ್ದಾರೆ

.ಹಾವುಗಳ ಬಗ್ಗೆ ಇವರಿಗಿರುವ ಕಾಳಜಿ ನಿಜಕ್ಕೂ ಎಲ್ಲಾ ಜನರಿಗೆ ಮಾದರಿ

.ಶ್ಯಾಮ್ ರಂತಹ ಪ್ರಕೃತಿ ಪ್ರೇಮಿ ನಮ್ಮ ಕರ್ನಾಟಕದಲ್ಲಿರುವುದು ನಮ್ಮೆಲ್ಲರ ಹೆಮ್ಮೆ

.ನಮ್ಮ RAGAT PARADISE ಶ್ಯಾಮ್ ಗೆ ಅವರ ಎಲ್ಲಾ ಕಾರ್ಯಗಳಲ್ಲಿ ಶುಭವನ್ನು ಕೂರುತ್ತದೆ

.ಶ್ಯಾಮ್ ಗೆ ಹಾಗು ಅವರಂತೆ ಹಾವುಗಳನ್ನು ರಕ್ಷಿಸುವ ಪ್ರತಿಯೊಬ್ಬ ಪ್ರಕೃತಿ ಪ್ರೇಮಿಗೂ ನಮ್ಮ Hats off 


.ನೀವು ಶ್ಯಾಮ್ ಗೆ ಅವರ ಕಾರ್ಯಗಳಲ್ಲಿ ಸಹಾಯ ಮಾಡಲು ಇಚ್ಚಿಸುವಿವಿರಾದರೆ ಅವರನ್ನು ಸಂಪರ್ಕಿಸಿ.ಅವರ ಮೊಬೈಲ್ no-
94480- 69399

.ಜೈ ಹೋ
ಸ್ನೇಕ್ ಶ್ಯಾಮ್



Share this post with your friends


Bookmark and Share

Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....