-ಪಶ್ಚಿಮ ಘಟ್ಟ ಉಳಿಸಿ-
.ಭಾರತದಲ್ಲಿ ಇರುವ 4 hotspot ಗಳಲ್ಲಿ ಪಶ್ಚಿಮ ಘಟ್ಟಗಳು ಕೂಡ ಒಂದು
.ಒಟ್ಟು ಸುಮಾರು1600 ಕಿ.ಮೀ. ಉದ್ದವಿರುವ ಪಶ್ಚಿಮ ಘಟ್ಟಗಳು ಮಹಾರಾಷ್ಟ್ರ,ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹಬ್ಬಿವೆ
.ಪಶ್ಚಿಮ ಘಟ್ಟಗಳು ಒಟ್ಟು 60000 ಚದರ ಕಿ.ಮೀ. ಪ್ರದೇಶವನ್ನು ಆವರಿಸಿದ್ದು ಅತಿ ಸಂಕೀರ್ಣ ನದಿ ವ್ಯವಸ್ಥೆಗೆ ಮೂಲವಾಗಿವೆ
.ತಾಮ್ರಪರ್ಣಿ, ಗೋದಾವರಿ, ಕೃಷ್ಣಾ ಶರಾವತಿ ಮತ್ತು ನೇತ್ರಾವತಿ ಮುಂತಾದ ನದಿಗಳ ಉಗಮ ಸ್ಥಾನವು ಪಶ್ಚಿಮ ಘಟ್ಟ
.ಕೆಮ್ಮಣ್ಣುಗುಂಡಿ, ಕೊಡಚಾದ್ರಿ, ಕುದ್ರೆಮುಖ .ಮಹಾಬಲೇಶ್ವರ, ಸೋನ್ಸಾಗರ್, ಮುಳ್ಳಯ್ಯನಗಿರಿ,ಆನೈ ಮುಡಿ ಮುಂತಾದ ಪ್ರಮುಖ ಶಿಖರಗಳನ್ನು ಪಶ್ಚಿಮ ಘಟ್ಟಗಳು ಒಳಗೊಂಡಿವೆ
.ಘಟ್ಟ ಪ್ರದೇಶಗಳಲ್ಲಿ ಸರಾಸರಿ ತಾಪಮಾನ ಉತ್ತರದಲ್ಲಿ ೨೪ ಡಿ. ಸೆಲ್ಸಿಯಸ್ ಮತ್ತು ದಕ್ಷಿಣದಲ್ಲಿ ೨೮ ಡಿ. ಸೆಲ್ಸಿಯಸ್
.ಈ ಪ್ರದೇಶದಲ್ಲಿ 13 ರಾಷ್ಟ್ರೀಯ ಉದ್ಯಾನಗಳು,2 biosphere reserves ಗಳಂತಹ ಸಂರಕ್ಷಿತ ಪ್ರದೇಶಗಳಿವೆ
.ಪಶ್ಚಿಮ ಘಟ್ಟಗಳು ಸಾವಿರಾರು ತಳಿಯ ಪ್ರಾಣಿಗಳಿಗೆ ನೆಲೆಯಾಗಿದ್ದು ಜಾಗತಿಕವಾಗಿ ವಿನಾಶದಂಚಿನಲ್ಲಿರುವ 325 ತಳಿಗಳ ಪ್ರಾಣಿಗಳನ್ನು ಒಳಗೊಂಡಿದೆ
.ಒಟ್ಟು 139 ತಳಿಯ ಸಸ್ತನಿಗಳು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿವೆ
.ಕರ್ನಾಟಕದ ಘಟ್ಟಗಳು 6000 ಆನೆಗಳಿಗೆ ಆವಾಸಸ್ಥಾನವಾಗಿವೆ
.508 ಪ್ರಭೇದದ ಪಕ್ಷಿಗಳು ಮತ್ತು 179 ಪ್ರಕಾರದ ದ್ವಿಚರಿಗಳಿಗೆ ಪಶ್ಚಿಮ ಘಟ್ಟಗಳು ನೆಲೆಯಾಗಿವೆ
.ವಿಶ್ವದಲ್ಲಿ ಅಳಿವಿನಂಚಿನಲ್ಲಿರುವ ಜೀವತಳಿಗಳ ಪೈಕಿ 325 ತಳಿಗಳ ಜೀವಿಗಳು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿವೆ
.ದೇಶದ ಹವಾಮಾನವನ್ನು ಸುಸ್ತಿತಿಯಲ್ಲಿಡಲು ಪಶ್ಚಿಮ ಘಟ್ಟ ಗಳು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ
.ಜೂನ್ ತಿಂಗಳಿನಿಂದ ಸೆಪ್ಟೆಂಬರ್ವರೆಗಿನ ಮಳೆಗಾಲದಲ್ಲಿ ಇಲ್ಲಿ ಬೀಳುವ ಸರಾಸರಿ ಮಳೆ ವಾರ್ಷಿಕ 3000 ದಿಂದ 4000 ಮಿಲಿಮೀಟರ್
.ಎತ್ತರದ ಪ್ರದೇಶಗಳಲ್ಲಿ ಸದಾಹಸಿರಿನ ಮಳೆಕಾಡುಗಳಿದ್ದು ಅತೀವ ಸಸ್ಯ ವೈವಿಧ್ಯವನ್ನು ಹೊಂದಿವೆ
.ಜಗತ್ತಿನ ಬೇರೆ ಯಾವ ಭಾಗದಲ್ಲಿಯೂ ಕಾಣದ 84 ಜಾತಿಯ ದ್ವಿಚರಿಗಳು, 16 ಪ್ರಕಾರದ ಪಕ್ಷಿಗಳು, 7 ತಳಿಯ ಸಸ್ತನಿಗಳು ಮತ್ತು 1600 ಹೂಬಿಡುವ ಸಸ್ಯಗಳು ಪಶ್ಚಿಮ ಘಟ್ಟಗಳಲ್ಲಿ ಇವೆ
.ಇದು ಪಶ್ಚಿಮ ಘಟ್ಟಗಳ ಬಗ್ಗೆ ಕೇವಲ 1 ಸಣ್ಣ ಪರಿಚಯವಷ್ಟೇ,ಇಂತಹ ಸಾವಿರಾರು ಪ್ರಕೃತಿ ಅದ್ಭುತಗಳಿಂದ ಕೂಡಿದೆ ನಮ್ಮ ಪಶ್ಚಿಮ ಘಟ್ಟಗಳು
.ಆದರೆ ಇಂತಹ ಬೆಲೆ ಕಟ್ಟಲಾಗದ ಪಶ್ಚಿಮ ಘಟ್ಟಗಳು ಇಂದು ನಮ್ಮ ಹಾಗು ನಮ್ಮನ್ನಾಳುವ ಸರ್ಕಾರಗಳಿಂದ ವಿನಾಶದ ಅಂಚಿಗೆ ತಲುಪಿವೆ
.ಸರ್ಕಾರಗಳ ಉದ್ದೇಶಗಳು ಒಳ್ಳೆಯದಾದರೂ ಅದನ್ನು ಜಾರಿಗೊಳಿಸಲು ಬಳಸುತ್ತಿರುವ ಮಾರ್ಗಗಳು ಪ್ರಕೃತಿಗೆ ಮಾರಕವಾಗಿದೆ
.2010 ರಲ್ಲಿ ಭಾರತದಲ್ಲಿ ಆಗುತ್ತಿರುವ ಹವಾಮಾನ ವ್ಯಪರೀತ್ಯಗಳನ್ನು ಗಮನಿಸಿದರೆ ನಮಗೆ ಇದರ ಅರಿವಾಗುತ್ತದೆ
.ಇಂದಿನ ದಿನಗಳಲ್ಲಿ ಪಶ್ಚಿಮ ಘಟ್ಟಗಳ ಮಾರಣ ಹೋಮ ಎಗ್ಗಿಲ್ಲದೆ ಸಾಗಿದೆ
.ಒಂದು ಕ್ಷಣ ಯೋಚಿಸಿ ನೋಡಿ,ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಈ ವಿಷಯಗಳ ಬಗ್ಗೆ ಎಷ್ಟು ಸಮಯ ಯೋಚನೆ ಮಾಡುತ್ತೇವೆಂದು....
.ನಮ್ಮ ಕುತ್ತಿಗೆಗೆ ಬರುವವರೆಗೂ ಈ ಯಾವ ವಿಚಾರಗಳು ನಮಗೆ ಬೇಕಾಗುವುದಿಲ್ಲ
.ನಿಮನ್ನು ಸಾಕಿ ಬೆಳೆಸಿದ ನಿಮ್ಮ ತಂದೆ ತಾಯಿಯರಿಗೆ ಯಾರಾದರು ನೋವು ಉಂಟು ಮಾಡಿದರೆ ನಿಮಗೆ ಕೋಪ ಬರುತ್ತದೆ.ಆದರೆ ನೀವು ಹುಟ್ಟಿದ ಕ್ಷಣದಿಂದ ನೀವು ಸಾಯುವವರೆಗೂ ನಿಮಗೆ ಬದುಕಲು ಸಹಾಯ ಮಾಡುವ ಆ ಮಹಾತಾಯಿ ಪ್ರಕೃತಿಯ ನಾಶವಾಗುತ್ತಿರುವಾಗ ನಿಮಗೆ ಏನು ಅನ್ನಿಸುವುದಿಲ್ಲವೇ?
.ಏಳಿ,ಎದ್ದೇಳಿ ಎಂಬ ವಿವೇಕಾನಂದರ ವಾಕ್ಯವನ್ನು ಇಂದು ಪ್ರಕೃತಿಯನ್ನು ಉಳಿಸಲು ಬಳಸಬೇಕಾಗಿದೆ
.ಪಶ್ಚಿಮ ಘಟ್ಟಗಳ ನಾಶ ಪ್ರಕೃತಿಯ ನಾಶವಲ್ಲ, ಅದು ನಮ್ಮೆಲ್ಲರ ನಾಶ.....
.ಇನ್ನಾದರೂ ಪ್ರಕೃತಿಯ ಉಳಿವಿಗೆ ನಿಮ್ಮ ಕ್ಯೆಲಾದ ಸಹಾಯ ಮಾಡಿ.......ಪಶ್ಚಿಮ ಘಟ್ಟಗಳನ್ನು ಉಳಿಸಿ
"ಉಳಿಸದಿದ್ದರೆ ಪಶ್ಚಿಮ ಘಟ್ಟ,ನೀವು ಸತ್ತಮೇಲೆ ನಿಮಗಾಗಿ ಮಾಡಲು ಇರುವುದಿಲ್ಲ 1 ಚಟ್ಟ"
.........ಪಶ್ಚಿಮ ಘಟ್ಟಗಳನ್ನು ಉಳಿಸಿ..........
image courtesy-DINESH,RAGHU
Comments
Post a Comment