Tuesday, November 30, 2010

-AMAZING AMAZON-
.ನಭೋಮಂಡಲ ದಲ್ಲಿ ಸಣ್ಣ ಸಾಸಿವೆ ಕಾಳಿನಂತೆ ಕಾಣುವ ನಮ್ಮ ಭೂಮಿಯಲ್ಲಿ ನಾವು ಜೀವಮಾನವಿಡೀ ನೋಡಿದರೂ ಮುಗಿಸಲಾರದಷ್ಟು ಅದ್ಭುತಗಳಿವೆ

.ಅಂತಹ ಸಹಸ್ರ,ಸಹಸ್ರ ಪ್ರಕೃತಿಯ ಅದ್ಭುತಗಳಲ್ಲಿ ಅತೀ ಅದ್ಭುತ ಒಂದರ ಬಗ್ಗೆ ನಾನು ಈ ಪೋಸ್ಟ್ನಲ್ಲಿ ಬರೆದಿದ್ದೇನೆ

.AMAZON -ಈ ಹೆಸರನ್ನು ನೀವು ಈಗಾಗಲೇ ಕೇಳಿರಬಹುದು.ಹೌದು ಮನುಷ್ಯ ಮಾತ್ರರಿಗೆ ಇದನ್ನು ಒಂದು ಜನ್ಮದಲ್ಲಿ ಪೂರ್ತಿ ಅರ್ಥ ಮಾಡಿಕೊಳ್ಳಲ್ಲು ಆಗದ ಒಂದು ಪ್ರಕೃತಿಯ ಅದ್ಭುತ ಕೊಡುಗೆ ಈ ನಮ್ಮ Amazon ನದಿ

.ಈ ಮಹಾ ನದಿಯ ಬಗ್ಗೆ ನಾನು ಸಾವಿರ ಬ್ಲಾಗ್ ತೆಗೆದು,ಲಕ್ಷ ಲಕ್ಷ ಲೇಖನಗಳನ್ನು ಬರೆದರೂ ಅದು ಕಡಿಮೆಯೇ

.ನೀವು ಈಗಾಗಲೇ Amazon ಬಗ್ಗೆ ತಿಳಿದಿದ್ದರೆ ಇನ್ನೊಮ್ಮೆ ಇದನ್ನು ಓದಿ ಆನಂದಿಸಿ.ತಿಳಿದಿಲ್ಲವಾದರೆ ಇದನ್ನು ಓದಿ ಆಮೇಲೆ ನಿಮಗೇನೇ ಗೊತ್ತಾಗುತ್ತದೆ ಪ್ರಕೃತಿಯ ಮಹಿಮೆ

.ನಾನು ಈ ನದಿಯ ಬಗ್ಗೆ ಇಲ್ಲಿ ಬರೆದ ವಿವರಗಳು ಕೇವಲ ೦.0000001 percent ಅಷ್ಟೆ

.ಪ್ರಪಂಚದ ಅತ್ಯಂತ ದೊಡ್ಡದಾದ ನದಿ ಈ Amazon

.ಇರುವ ಸ್ಥಳ South America

.ಪೆರುವಿನ Andes ಪರ್ವತದಲ್ಲಿ ಈ ನದಿ ಸಣ್ಣ ಪ್ರಮಾಣದಲ್ಲಿ ಉಗಮವಾಗುತ್ತದೆ.ಈ ತೊರೆಯನ್ನು Apurimac River  ಎಂದು ಕರೆಯುತ್ತಾರೆ

.Amazon ನದಿಯ drainage basin (ಜಲಾನಯನ ಪ್ರದೇಶ) ನ ಒಟ್ಟು ವಿಸ್ತೀರ್ಣ 7,050,000 square kilometres

.Amazon ನದಿಯು south america ದಲ್ಲಿ ಹುಟ್ಟಿ Guyana, Ecuador, Venezuela, Bolivia, Brazil, Colombia ,peru ದೇಶಗಳಲ್ಲಿ ಹರಿದು Atlantic ಸಾಗರಕ್ಕೆ ಸೇರುತ್ತದೆ

.ಇಲ್ಲಿ ಇನ್ನೊಂದು ವಿಚಿತ್ರವೆಂದರೆ Amazon ನದಿ ಹುಟ್ಟುವ ಪ್ರದೇಶಕ್ಕೆ ಪಸಿಫಿಕ್ ಸಾಗರ ಹತ್ತಿರವಿದ್ದರೂ ಕೂಡ Amazon ನದಿ ಸಾವಿರಾರು ಮೈಲಿ ದೂರದ atlantic ಸಾಗರಕ್ಕೆ ಹರಿಯುತ್ತದೆ

.ಈ ನದಿಯ ಒಟ್ಟು ಉದ್ದ 6400 kilometres

.Amazon ನದಿಯ ಅಗಲ ಸಾಮಾನ್ಯವಾಗಿ 1 .6 ರಿಂದ 10 kilometer .ಇನ್ನು ಮಳೆಗಾಲದಲಂತೂ 40 km ಗಿಂತಲೂ ಹೆಚ್ಚು (ಸುಮ್ಮನೆ ಊಹಿಸಿಕೊಳ್ಳಿ 48 kilometer ಅಗಲದ ನದಿಯನ್ನು)

.ಈ ನದಿ atlantic ಸಾಗರಕ್ಕೆ ಸೇರುವ ಮುಂಚಿನ estuary (ನದೀಮುಖ) ಯೇ 240 kilometer ಉದ್ದವಿದೆ

.ಈ ದ್ಯತ್ಯ ನದಿಯನ್ನು 'River Sea' ಅಂತಲೂ ಕರೆಯುತ್ತಾರೆ

.ಈ ನದಿಯ ನೀರು ಅತ್ಯಂತ ಶುದ್ದ ನೀರು

.Amazon ನದಿಯು ಮಳೆಗಾಲದಲ್ಲಿ ಪ್ರತೀ ಸೆಕೆಂಡ್ ಗೆ 60 million gallons ನಷ್ಟು ನೀರನ್ನು atlantic ಸಾಗರಕ್ಕೆ ಸೇರಿಸುತ್ತದೆ (ನೀವು ಈ ಲೈನ್ ಓದಿ ಮುಗಿಸುವಷ್ಟರಲ್ಲಿ)

.ಇದು ಸಾಗರ ಸೇರಿದ ಮೇಲೂ ಹಲವಾರು ಕಿಲೋಮೀಟರುವರೆಗೆ ಸಿಹಿ ನಿರಾಗಿಯೇ  ಇರುತ್ತದೆ .ಅಂದರೆ ಇದು ಸಾಗರ ಸೇರಿದ ಮೇಲಿನ ಹಲವಾರು kilometer (100) ಗಳವರೆಗೆ ನೀರಿನಲ್ಲಿ ಉಪ್ಪಿನ ಅಂಶ ಬಹಳ ಕಡಿಮೆ ಇರುತ್ತದೆ

.ಪ್ರಪಂಚದಲ್ಲಿ ಸಾಗರಕ್ಕೆ ಸೇರುವ 20 percent ನಷ್ಟು ಸಿಹಿ ನೀರು amazon ನದಿ ಒಂದರಿಂದಲೇ ಸೇರುತ್ತದೆ
 image courtesy-national geographic.com

.ಈ ಮಹಾನದಿಗೆ ಎಲ್ಲೂ ಸೇತುವೆಗಳಿಲ್ಲ

.ಈವರೆಗೆ 3000 ಕ್ಕಿಂತಲೂ ಹೆಚ್ಚಿನ ಜಾತಿಯ ಮೀನುಗಳನ್ನು ಈ ನದಿಯಲ್ಲಿ ಗುರುತಿಸಲಾಗಿದೆ.ಇನ್ನೂ ಅದೆಷ್ಟು ಜಾತಿಯ ಮೀನುಗಳು ಇಲ್ಲಿವೆಯೋ ಆ ದೇವರಿಗೇ ಗೊತ್ತು

.ಇನ್ನು 'amazon ಮಳೆ ಕಾಡುಗಳು' ಅತ್ಯಂತ ಹೆಚ್ಚಿನ ಜೀವ ಸಾಂದ್ರತೆಯನ್ನು ಹೊಂದಿರುವ ಈ ಮಳೆ ಕಾಡುಗಳು ಇರುವುದು ಈ ನದಿ ಪ್ರದೇಶದಲ್ಲೇ

.ಅತ್ಯಂತ ಉದ್ದದ ಅನಕೊಂಡ ಹಾವು,ಮಾಂಸಾಹಾರಿ piranha ಮೀನುಗಳಿಗೆ Amazon ನದಿ ತವರು ಮನೆ

.ಮಳೆಗಾಲದಲ್ಲಿ ನದಿಯ ಆಳ 130 ಅಡಿಗಿಂತಲೂ ಹೆಚ್ಚಿರುತ್ತದೆ.ನವೆಂಬರ್ ನಿಂದ ನದಿಯ ನೀರಿನ ಪ್ರಮಾಣ ಹೆಚ್ಚತೊಡಗಿ ಜೂನ್ ವರೆಗೂ ಅತ್ಯಂತ ಹೆಚ್ಚಿನ ನೀರು ಹರಿಯುತ್ತದೆ

.ಸಾಧಾರಣ ದಿನಗಳಲ್ಲಿ ನದಿ ನೀರಿನ ವೇಗ ಪ್ರತೀ ಘಂಟೆಗೆ 2.5 ಕಿಲೋಮೀಟರು.ಮಳೆಗಾಲದಲ್ಲಿ 5 km /hour

.200 ಕ್ಕೂ ಹೆಚ್ಚಿನ ಉಪನದಿಗಳು Amazon ನದಿಗೆ ಸೇರುತ್ತವೆ

.ಬೋಟೊ ಎಂದು ಕರೆಯಲ್ಪಡುವ Amazon ನದಿ ಡಾಲ್ಫಿನ್ ಜಗತ್ತಿನ ಅತಿ ದೊಡ್ಡ ನದಿ ಡಾಲ್ಫಿನ್

.catfish ಮೀನುಗಳಿಗೆ ಆವಾಸ ಸ್ಥಾನ ಈ Amazon ನದಿ

.ಪ್ರಪಂಚದ ಅತ್ಯಂತ ದೊಡ್ಡದಾದ ಸಿಹಿ ನೀರಿನ ಮೀನು ಇರುವುದು ಈ ನದಿಯಲ್ಲೇ.ಇದನ್ನು ಸ್ಥಳೀಯವಾಗಿ Pirarucu ಎಂದು ಕರೆಯುತ್ತಾರೆ.ಇದರ ವ್ಯಜ್ನಾನಿಕ ಹೆಸರು Arapaima gigas

.ವರ್ಷದಲ್ಲಿ ಯಾವಾಗಲು ಸರಾಸರಿ 27 c ಉಷ್ಣಾಂಶವಿರುತ್ತದೆ

.ಇದರ ಸುತ್ತಮುತ್ತಲಿನ ಪ್ರದೇಶದಲ್ಲಿ ಬೀಸುವ ಗಾಳಿಯಲ್ಲಿ ಹೆಚ್ಚಿನ ಪ್ರಮಾಣದ ನೀರಿನಂಶವಿರುತ್ತದೆ

.ಈ ನದಿಯ,ಹಾಗು ಇದರ ಸುತ್ತಮುತ್ತಲಿನ ಪ್ರದೇಶದ ಅದೆಷ್ಟೋ ವ್ಯಶಿಷ್ಟ್ಯಗಳು ಇನ್ನೂ ನಮಗೆ ತಿಳಿದಿಲ್ಲ

.ಹುಡುಕುತ್ತಾ ಹೋದಷ್ಟು ಅದ್ಭುತಗಳನ್ನು ತನ್ನಲ್ಲಿ ಇಟ್ಟುಕೊಂಡಿರುವ Amazon ನಿಜಕ್ಕೂ ಒಂದು ಗ್ರೇಟ್ ನದಿ

.Amazon ನದಿಗೆ Amazon ನದಿಯೇ ಸರಿಸಾಟಿ

.ಇದನ್ನು ಓದಿದ ಮೇಲೆ ಈ ನದಿಯ ಬಗ್ಗೆ ಒಂದು ಚಿತ್ರ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದೆಂದು ಭಾವಿಸುತ್ತೇನೆ

.ಎಷ್ಟು ಅನೇಕ ಬಗೆಯ ಅದ್ಭುತಗಳನ್ನು ಪ್ರಕೃತಿ ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ.ಅಲ್ಲವೇ.....

.ನಾನು,ನನ್ನದು,ನಾನೇ ಎಲ್ಲಾ ಎಂದು ಹಾರಾಡುವ ಮನುಷ್ಯನು ಇಂತಹ ಅದ್ಭುತಗಳ ಮುಂದೆ ಏನೇನೂ ಅಲ್ಲ

.ಹುಟ್ಟಿದ ಮೇಲೆ ಓದು,ಕೆಲಸ ಮಾಡು,ಮದುವೆ ಆಗು,ಒಂದಷ್ಟು ಜನಸಂಖ್ಯೆ ಜಾಸ್ತಿ ಮಾಡು,ಕೊನೆಗೊಂದು ದಿನ ಸಾಯಿ.ಇಷ್ಟೇ ಜೀವನದ ನಡುವೆ ಇಂತಹ ಪ್ರಕೃತಿಯ ಎಷ್ಟೋ ಅದ್ಭುತಗಳು ನಮ್ಮನ್ನು ಆ ಪ್ರಕೃತಿಯತ್ತ  ಸೆಳೆದು ಜೀವನದಲ್ಲಿ ಏನೋ ಒಂದು ರೀತಿಯ ಒಳ್ಳೆಯ ಬದಲಾವಣೆಯನ್ನು ತರುತ್ತದೆ ಎಂಬುದು ನನ್ನ ವಯಕ್ತಿಕ ಅಭಿಪ್ರಾಯ

.ನಿಜವಾಗಿಯೂ ಆ ಮಹಾತಾಯಿ ಪ್ರಕೃತಿಗೆ ನನ್ನ ಕೋಟಿ,ಕೋಟಿ ನಮನ.......

-ಪ್ರಕೃತಿಯನ್ನು ರಕ್ಷಿಸಿ-

Monday, November 29, 2010

-ಚೀತಾ......
.ಚೀತಾ-ಭೂಮಿಯ ಮೇಲಿನ ಅತ್ಯಂತ ವೇಗವಾಗಿ ಓಡುವ ಪ್ರಾಣಿ

.ಚೀತಾದ ಕೆಲವು ಸುಂದರ ಚಿತ್ರಗಳನ್ನು ಈ ಪೋಸ್ಟ್ನಲ್ಲಿ ಹಾಕಿದ್ದೇನೆ

.ಈ ಎಲ್ಲಾ ಚಿತ್ರಗಳನ್ನು ತೆಗೆದಿದ್ದು ನನ್ನ ಫ್ರೆಂಡ್ Maggy Meyer (all images are photographed by my friend Maggy Meyer.copy righted images-dont copy)


 image courtesy-Maggy Meyer, Berlin, Germany

Saturday, November 27, 2010

-ಗ್ರೇಟ್ MIGRATIONS-
.ಇತ್ತೀಚಿನ ದಿನಗಳಲ್ಲಿ TV ಯಲ್ಲಿ ಬರೀ ರಿಯಾಲಿಟಿ ಶೋ,etc ಗಳನ್ನು ನೋಡಿ ನೋಡಿ ಬೋರ್ ಆಗಿದೆಯಾ?

.ನೀವು ಪ್ರಕೃತಿ ಪ್ರಿಯರಾಗಿದ್ದರೆ,ನಿಮಗೆ ಇದನೆಲ್ಲಾ ನೋಡಿ (ರಿಯಾಲಿಟಿ ಶೋಗಳು ) ಬೋರ್ ಆಗಿದ್ದರೆ ನಿಮಗಿದೋ ಒಂದು ಸಂತಸದ ಸುದ್ದಿ

.ಪ್ರಕೃತಿ ಪ್ರಿಯರ ಅಚ್ಚು ಮೆಚ್ಚಿನ ಚಾನೆಲ್ ಗಳಲ್ಲಿ ಒಂದಾದ National Geographic ಚಾನೆಲ್ ಇದೇ ಭಾನುವಾರದಿಂದ ಒಂದು ಹೊಸ ಪ್ರೊಗ್ರಾಮ್ ಅನ್ನು ತರುತ್ತಲಿದೆ.ಅದೇ 'ದ ಗ್ರೇಟ್ MIGRATIONS'

.'Wild Russia' ದಂತಹ ಅದ್ಭುತದ ನಂತರ ಈಗ ಗ್ರೇಟ್ MIGRATIONS ಸರದಿ

.ತಮ್ಮ ಹಾಗು ತಮ್ಮ ಸಂತತಿಯ ಉಳಿವಿಗಾಗಿ ಪ್ರಕೃತಿಯ ಪ್ರತಿರೋಧಗಳನ್ನು ಎದುರಿಸಿ ಸಾವಿರಾರು ಮೈಲಿ ಗಳ ವರೆಗೆ ವಲಸೆ ಹೋಗುವ ಪ್ರಾಣಿ ಪಕ್ಷಿಗಳ ಬಗ್ಗೆ ಈ ಪ್ರೊಗ್ರಾಮ್ ನಲ್ಲಿ ಅದ್ಭುತವಾಗಿ ವಿವರಿಸಲಾಗಿದೆ

.HD ವೀಡಿಯೊಗಳು ಕಣ್ಮನ ಸೆಳೆಯುವಂತಿದೆ

.ಈ ಶೋ ಈಗಾಗಲೇ ಹೊರ ದೇಶಗಳಲ್ಲಿ ಪ್ರಸಾರವಾಗುತ್ತಿದೆ

.ನಮ್ಮ ಭಾರತದಲ್ಲಿ ನಾಳೆಯಿಂದ (28 -11 -2010 )
ಪ್ರತೀ ಭಾನುವಾರ ರಾತ್ರಿ 10 ರಿಂದ ಪ್ರಸಾರವಾಗುತ್ತದೆ

.ಒಟ್ಟು 7 episode ಗಳು ಇದರಲ್ಲಿವೆ


.3 ವರ್ಷಗಳ ಪ್ರಯತ್ನ ಇದರ ಹಿಂದಿದೆ 

.7 ಖಂಡಗಳ 20 ದೇಶಗಳಲ್ಲಿ ಇದನ್ನು ಚಿತ್ರೀಕರಿಸಲಾಗಿದೆ 

.so ನಾನಂತೂ ಈ ಪ್ರೊಗ್ರಾಮ್ ಗಾಗಿ ಕಾಯುತ್ತಿದ್ದೇನೆ


.ನಿಜವಾಗಿಯೂ ಇದೊಂದು mind blowing ಪ್ರೊಗ್ರಾಮ್.miss ಮಾಡ್ಕೋಬೇಡಿ


.ನಾಳೆ ರಾತ್ರಿ 10 ಘಂಟೆಗೆ National Geographic ಚಾನೆಲ್ ನೋಡ್ತೀರ ಅಲ್ವಾ.............

Thursday, November 25, 2010

-ಥಂಡಿ ಥಂಡಿ ಅಂಟಾರ್ಟಿಕಾ-
.ಭೂಮಿಯ ದಕ್ಷಿಣ ಗೋಳದಲ್ಲಿರುವ ಅಂಟಾರ್ಟಿಕಾವು ಪ್ರಪಂಚದ 5 ನೇ ಅತಿ ದೊಡ್ಡ ಖಂಡ

.ಇದರ ಒಟ್ಟು ವಿಸ್ತೀರ್ಣ 14.2 million square kilometers

.ಈ ಪೋಸ್ಟಿನ title ಲೇ ಹೇಳುವಂತೆ ಅಂಟಾರ್ಟಿಕಾದ 98 ಪ್ರತಿಶತ ಭಾಗ ಮಂಜುಗಡ್ಡೆಯಿಂದ ಆವೃತವಾಗಿದೆ.ಹಾಗಾಗಿ ಇದು ವರ್ಷದ 365 ದಿನಗಳಲ್ಲೂ ಥಂಡಿ,ಥಂಡಿ

.ಇಲ್ಲಿನ ಮಂಜುಗಡ್ಡೆಯ ದಪ್ಪವೇ 1.6 kilometres

.ಅಕಸ್ಮಾತ್ ಇಲ್ಲಿನ ಮಂಜೆಲ್ಲಾ ಒಮ್ಮೆಗೆ ಕರಗಿದರೆ ಅದು ಸಮುದ್ರದ ನೀರಿನ ಮಟ್ಟವನ್ನು 200 ಅಡಿಗಳಷ್ಟು ಏರಿಸಬಲ್ಲದು

.ಪ್ರಪಂಚದ ಶೇಕಡಾ 90 ರಷ್ಟು ಮಂಜುಗೆಡ್ಡೆ ಇಲ್ಲೇ ಇದೆ

.ಇಡೀ ಅಂಟಾರ್ಟಿಕಾ ಖಂಡವನ್ನು ಪೂರ್ವ ಅಂಟಾರ್ಟಿಕಾ ಹಾಗು ಪಶ್ಚಿಮ ಅಂಟಾರ್ಟಿಕಾ ಎಂದು ವಿಭಾಗಿಸಲಾಗಿದೆ.ಈ ಎರಡು ಭಾಗಗಳು ಒಂದು ಪರ್ವತದಿಂದ ವಿಭಾಗವಾಗಿದೆ

.ಇಲ್ಲಿ ಬೀಳುವ ಹಿಮ ಕರಗದೆ ಮಂಜುಗೆಡ್ಡೆಗಳಾಗಿ ಪರಿವರ್ತನೆ ಹೊಂದುತ್ತವೆ

.ಅಂಟಾರ್ಟಿಕಾ ಖಂಡವು ಪ್ರಪಂಚದ ಅತೀ ಥಂಡಿಯ,ಅತೀ ಗಾಳಿ ಬೀಸುವ ಹಾಗು ಅತೀ ತೇವಾಂಶದಿಂದ ಕೂಡಿದ ಪ್ರದೇಶವಾಗಿದೆ

.ಅಂಟಾರ್ಟಿಕಾವು ಒಂದು ಹೆಪ್ಪು ಗಟ್ಟಿದ ಮರುಭೂಮಿ.ಇಲ್ಲಿ ಬೀಳುವ ವಾರ್ಷಿಕ ಮಳೆಯ ಪ್ರಮಾಣ 10 cm ಗಿಂತಲೂ ಕಡಿಮೆ

.ಅತೀ ಹೆಚ್ಚು ಪ್ರಮಾಣದಲ್ಲಿ ಹಿಮಪಾತ ಇಲ್ಲಿ ಆಗುತ್ತದೆ.ಎಷ್ಟರ ಮಟ್ಟಿಗೆಯೆಂದರೆ ಕೇವಲ 48 ಘಂಟೆಗಳಲ್ಲಿ 1.22 metres ನಷ್ಟು 

.'Vinson Massif ' ಇದು ಅಂಟಾರ್ಟಿಕಾದಲ್ಲಿರುವ ಅತೀ ಎತ್ತರದ ಶಿಖರ

.ಪ್ರಪಂಚದಲ್ಲೇ ಅತೀ ಕನಿಷ್ಟ ಉಷ್ಣಾಂಶ -128 degrees F ದಾಖಲಾಗಿದ್ದು ಇದೇ ನಮ್ಮ ಅಂಟಾರ್ಟಿಕಾದಲ್ಲಿ

.ಇಂತಹ ಅಂಟಾರ್ಟಿಕಾದಲ್ಲೂ ಜ್ವಾಲಾಮುಖಿ ಪರ್ವತಗಳಿವೆ.Mount Erebus ಹಾಗು Deception Island ಗಳು ಅಂಟಾರ್ಟಿಕಾದ ಕೆಲವು ಜ್ವಾಲಾಮುಖಿ ಪರ್ವತಗಳು

.70 ಕ್ಕೂ ಹೆಚ್ಚು ಸರೋವರಗಳು ಅಂಟಾರ್ಟಿಕಾದಲ್ಲಿವೆ.ಈ ಸರೋವರಗಳು ice sheet ನ ಕೆಳಗೆ ಇರುತ್ತವೆ

.ಹೆಪ್ಪುಗಟ್ಟಿದ ಕೆಲವು ಸರೋವರಗಳ ಮೇಲ್ಮೈಗಳು ಗುರು ಗ್ರಹದ ಚಂದ್ರ (satelite) ಯುರೋಪದ ಗುಣ ಲಕ್ಷಣಗಳನ್ನು ಹೋಲುತ್ತವೆ

.ಅಂಟಾರ್ಟಿಕಾದಲ್ಲಿ ಸಸ್ಯ ಸಂಕುಲ ಬಹಳ ಕಡಿಮೆ.ಆದರೂ 350 ಜಾತಿಯ ಸಸ್ಯಗಳು ಇಲ್ಲಿವೆ. moss ಮತ್ತು lichen ಗಳು ಹೆಚ್ಚು ಕಂಡುಬರುತ್ತವೆ 

.ಇನ್ನು ಅಂಟಾರ್ಟಿಕಾದ ಪ್ರಾಣಿಗಳ ಬಗ್ಗೆ ಹೇಳುವುದಾದರೆ,ಇಲ್ಲಿ ಪ್ರಾಣಿ ಸಂಕುಲ ತುಂಬಾ ಕಡಿಮೆ.mite-ಇದು ಇಲ್ಲಿನ ಅತಿ ದೊಡ್ಡ ಭೂಮಿಯ ಮೇಲೆ ವಾಸಿಸುವ ಪ್ರಾಣಿ.ಈ ಪ್ರಾಣಿಯ ದೇಹವು ಕೆಲವು ರಾಸಾಯನಿಕ ಪದಾರ್ಥಗಳನ್ನು ಉತ್ಪತಿ ಮಾಡುತ್ತದೆ.ಈ ರಾಸಾಯನಿಕಗಳು mite ಗಳಿಗೆ ಚಳಿಯಿಂದ ರಕ್ಷಣೆ ಕೊಡುತ್ತದೆ

.ಅಂಟಾರ್ಟಿಕಾ ಪಕ್ಷಿ ಸಂಕುಲದ ಅತಿ ಹೆಚ್ಚು ಪಾಲನ್ನು penguin ಗಳು ಪಡೆದುಕೊಳ್ಳುತ್ತದೆ.ಅತಿ ಹೆಚ್ಚು ಸಂಖೆಯ penguin ಗಳು ಇಲ್ಲಿ ಕಂಡುಬರುತ್ತದೆ.penguin ಗಳಿಗೆ ಅಂಟಾರ್ಟಿಕಾವೇ ಮನೆ.ಇವುಗಳ ಜೀವನ ವಿಧಾನವೇ ಕುತೂಹಲಕಾರಿ.ಉಳಿದಂತೆ ಅಂಟಾರ್ಟಿಕಾದಲ್ಲಿ seal ಗಳು ಹೆಚ್ಚಾಗಿ ಕಂಡುಬರುತ್ತದೆ

.ಅಂಟಾರ್ಟಿಕಾವು ಯಾವುದೇ ದೇಶದ ಸುಪರ್ದಿಗೆ ಒಳಪಟ್ಟಿಲ್ಲ

.ಅಂಟಾರ್ಟಿಕಾದಲ್ಲಿ ಮನುಷ್ಯರು ವಾಸ ಮಾಡುವುದಿಲ್ಲ. ಇಲ್ಲಿನ ಹವಾಮಾನ ಹಾಗು ಇನ್ನಿತರ ವಿಷಯಗಳ ಬಗ್ಗೆ ಅಧ್ಯಯನ ಮಾಡಲು ವಿಜ್ಞಾನಿಗಳು ತಾತ್ಕಾಲಿಕವಾಗಿ ಇಲ್ಲಿಗೆ ಬಂದು ಹೋಗುತ್ತಾರೆ

.meteorites ಗಳನ್ನು ಪತ್ತೆ ಮಾಡಲು ಅಂಟಾರ್ಟಿಕಾವು ಪ್ರಪಂಚದಲ್ಲೇ ಉತ್ತಮ ಪ್ರದೇಶ

.ಅಂಟಾರ್ಟಿಕಾದ ಕೆಲವು ಪ್ರದೇಶಗಳಲ್ಲಿ ಬಾರಿ ಹಿಮ ಗುಡ್ಡಗಳು(iceberg) ಭೂ ಪ್ರದೇಶದಿಂದ ಬೇರ್ಪಟ್ಟು ಸಮುದ್ರದಲ್ಲಿ ತೇಲುತ್ತಿರುತ್ತವೆ.ಇಂತಹ ದಾಖಲಾದ ಅತೀ ದೊಡ್ಡ ಹಿಮ ಗುಡ್ಡ 295 km ಉದ್ದ ಹಾಗು 37 km ಅಗಲವಿತ್ತು

.ಇಂತಹ ಭೂಮಿಯ ಅತ್ಯಂತ ವ್ಯಶಿಷ್ಟ್ಯವಾದ ಪ್ರದೇಶವಿಂದು 'ಜಾಗತಿಕ ತಾಪಮಾನದಿಂದಾಗಿ' ತನ್ನ ಸ್ವರೂಪವನ್ನೇ ಕಳೆದುಕೊಳ್ಳುತ್ತಿದೆ.ಇಲ್ಲಿನ ಮಂಜುಗೆಡ್ಡೆಗಳು ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಕರುಗುತ್ತಿದೆ

.ಭೂಮಿಯನ್ನು ರಕ್ಷಿಸುತ್ತಿರುವ ozone ಪದರವು ಅಂಟಾರ್ಟಿಕಾದಲ್ಲಿ ನಾಶವಾಗಿರುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.'ozone hole' ಇಲ್ಲಿ ಪ್ರತಿ ವರ್ಷವೂ ದೊಡ್ದದಾಗುತ್ತಿದೆ ಎಂದು ಅವರು ಹೇಳುತ್ತಾರೆ

.ಅಂಟಾರ್ಟಿಕಾವು ಭೂಮಿಯ ವಾತಾವರಣದ ಮೇಲೂ ಪರಿಣಾಮ ಬೀರುವುದರಿಂದ.ಅಂಟಾರ್ಟಿಕಾದ ನಾಶ=ಭೂಮಿಯ ಮೇಲಿನ ಜೀವಿಗಳ ವಿನಾಶದ ಸಂಖೇತ 

-ಪ್ರಕೃತಿಯನ್ನು ಉಳಿಸಿ-

Sunday, November 21, 2010

-ಸುಂದರ ಪ್ರಕೃತಿಯಲ್ಲಿ......
.ಇದು ಒಂದು ತರಹ ಭಿನ್ನ ಪೋಸ್ಟ್

.ಪ್ರಕೃತಿಯ ಸುಂದರ ಸನ್ನಿವೇಶಗಳಲ್ಲಿ ಮನುಷ್ಯರು.....

.ಈ ಪೋಸ್ಟ್ ಬಗ್ಗೆ ನಾನೇನು ಬರೆಯಲು ಹೋಗುವುದಿಲ್ಲ.ಚಿತ್ರಗಳನ್ನು ನೋಡಿ ಆನಂದಿಸಿ

.ಈ ಸುಂದರ ಚಿತ್ರಗಳನ್ನು ನೋಡಿದ ಮೇಲೆ ನಿಮಗೆ ಅನ್ನಿಸಿದ್ದನ್ನ ನನಗೆ ಬರೆಯಿರಿ...

 
 Image Courtesy-Sam Mugraby,photos8.com