-ಬಾವಲಿಗಳ ಬಗ್ಗೆ ಒಂದಷ್ಟು-
.ಹಗಲು ಹೊತ್ತು ಮರದ ಮೇಲೆ ತಲೆ ಕೆಳಗಾಗಿ ನೇತಾಡುತ್ತಾ,ರಾತ್ರಿಯಲ್ಲಿ ತನ್ನ ಕಾರ್ಯ ಚಟುವಟಿಕೆಗಳನ್ನು ಮಾಡುವ ಪ್ರಕೃತಿಯ ವಿಚಿತ್ರ ಜೀವಿ ಬಾವಲಿಗಳ ಬಗ್ಗೆ ಒಂದಷ್ಟು ಮಾಹಿತಿ ಈ ಪೋಸ್ಟ್ನಲ್ಲಿ
.ನಿಶಾಚರಿಗಳಾದ ಇವುಗಳ family 'Chiroptera '

.
ಸಾವಿರಕ್ಕಿಂತಲೂ ಹೆಚ್ಚು ಬಗೆಯ ಬಾವಲಿಗಳ ಪ್ರಭೇದಗಳು ಪ್ರಪಂಚದಲ್ಲಿವೆ

.ಬಾವಲಿಗಳು ಇರದ ಖಂಡ
Antarctica.ಇವುಗಳು ಅತೀ ಉಷ್ಣಾಂಶ ಅಥವಾ ಅತೀ ತಂಡಿ ಪ್ರದೇಶದಲ್ಲಿ ಬದುಕಲಾರವು

.
ಸಸ್ತನಿ ಜಾತಿಯಲ್ಲಿನ ಹಾರುವ (ಪಕ್ಷಿಗಳಂತೆ) ಜೀವಿ ಬಾವಲಿ ಒಂದೇ

.ದೊಡ್ಡ ಜಾತಿಯ ಬಾವಲಿಗಳು ಸಾದಾರಣವಾಗಿ ಬೆಚ್ಚಗಿನ ಜಾಗದಲ್ಲಿ ಬದುಕುತ್ತವೆ.ಸಣ್ಣ ಜಾತಿಯ ಬಾವಲಿಗಳು ಬೆಚ್ಚನೆಯ ಹಾಗು ತಣ್ಣನೆಯ ಪ್ರದೇಶಗಳೆರೆಡರಲ್ಲೂ ಬದುಕುತ್ತವೆ

.ಮರಿ ಬಾವಲಿಗಳನ್ನು
'pups' ಎಂದು ಕರೆಯುತ್ತಾರೆ
.ಹೆಚ್ಚಾಗಿ ಒಂದು ಹೆಣ್ಣು ಬಾವಲಿ ಪ್ರತಿ ವರ್ಷ ಒಂದೇ ಮರಿಗೆ ಜನ್ಮ ನೀಡುತ್ತದೆ

.ಮರಿ ಬಾವಲಿಗಳು ಅವುಗಳು ಹುಟ್ಟಿದ ಕೆಲವೇ ವಾರಗಳಲ್ಲಿ ಹಾರಲು ಕಲಿಯುತ್ತವೆ

.ಜಾತಿಗನುಗುಣವಾಗಿ ಇವುಗಳ ಬಣ್ಣ
ಕೆಂಪು,ಕಂದು,ಕೆಂಪು ಕಂದು,ಬಿಳಿ ಯಾಗಿರುತ್ತದೆ

.ಸಾಧಾರಣವಾಗಿ ಬಾವಲಿಗಳು
ಗುಂಪಿನಲ್ಲೇ ವಾಸಿಸುತ್ತವೆ

.ಇವುಗಳ ಜೀವಿತಾವಧಿ
4 ರಿಂದ 30 ವರ್ಷಗಳು
.ಇವುಗಳು ಹೆಚ್ಚಾಗಿ ಜೀವಿಸಲು ಇಷ್ಟ ಪಡುವುದು ಗುಹೆಗಳಲ್ಲಿ,ಕತ್ತಲೆಯ ಪ್ರದೇಶಗಳಲ್ಲಿ ,ದೊಡ್ಡ ದೊಡ್ಡ ಹೊಂಡಗಳಲ್ಲಿ,ಪಾಳು ಬಿದ್ದ ಕಟ್ಟಡಗಳಲ್ಲಿ

.ಹೆಚ್ಚಿನ ಜನರಲ್ಲಿ ಇರುವ ನಂಬಿಕೆ ಎಂದರೆ ಬಾವಲಿಗಳಿಗೆ
ಕಣ್ಣು ಕಾಣುವುದಿಲ್ಲವೆಂದು.ಆದರೆ ಇದು ಸತ್ಯ ಅಲ್ಲ.ಬಾವಲಿಗಳಿಗೆ ಕಣ್ಣು ಕಾಣುತ್ತದೆ

.70 ಪ್ರತಿಶತ ಬಾವಲಿಗಳು
ಕೀಟಗಳನ್ನು (insect) ತಿಂದು ಬದುಕುತ್ತವೆ.ಹಣ್ಣುಗಳು,ಹೂವಿನ ಮಕರಂದ,ಇನ್ನಿತರ ಸಣ್ಣ ಪುಟ್ಟ ಜೀವಿಗಳು ಇವುಗಳ ಇತರ ಆಹಾರಗಳು.ಹಣ್ಣುಗಳನ್ನು ತಿಂದು ಬೀಜವನ್ನು ಉದುರಿಸುವುದರಿಂದ ಸಸ್ಯ ಸಂಕುಲದ ಅಭಿವೃದ್ದಿಗೆ ಇವು ಸಹಾಯ ಮಾಡುತ್ತವೆ

.ಒಂದು ಬಾವಲಿ ಒಂದು ಗಂಟೆಯಲ್ಲಿ
ಒಂದು ಸಾವಿರದಷ್ಟು ಕೀಟಗಳನ್ನು ತಿನ್ನಬಲ್ಲದು

.ಬಾವಲಿಗಳ ರೆಕ್ಕೆಗಳು ಕೂದಲು ಮುಕ್ತವಾಗಿದ್ದು,ರೆಕ್ಕೆಗಳನ್ನೇ ಕೈಗಳಂತೆ ಬಳಸಿಕೊಳ್ಳುತ್ತವೆ

.ಇವುಗಳ ಬೇಟೆಯ ವಿಧಾನ ಬೇರೆಲ್ಲ ಜೀವಿಗಳಿಗಿಂತ ಭಿನ್ನ.ಇವುಗಳು ಬೇಟೆಯನ್ನು ಹುಡುಕಲು ಬಳಸುವ ತಂತ್ರವನ್ನು
'echolocation' ಎನ್ನುತ್ತಾರೆ .ರಾತ್ರಿಯಲ್ಲಿ ಇವುಗಳು ಆಹಾರವನ್ನು ಹುಡುಕುವುದರಿಂದ ಕತ್ತಲಲ್ಲಿ ಆಹಾರ ಹುಡುಕುವ ಕಷ್ಟ ದಿಂದ ಪಾರಾಗಲು echolocation ತಂತ್ರವನ್ನು ಇವುಗಳು ಬಳಸಿಕೊಳ್ಳುತ್ತವೆ

.'echolocation ' ತಂತ್ರದಲ್ಲಿ ಇವುಗಳು ತಮ್ಮದೇ ಆದ ಶಬ್ದಗಳನ್ನು ಹಾರುವಾಗ ಮಾಡುತ್ತವೆ,ಆ ಶಬ್ದದ
ಪ್ರತಿಫಲನದ ಆದರದ ಮೇಲೆ ಇವು ತಮ್ಮ ಬೇಟೆಯ ಇರುವಿಕೆಯನ್ನು ಪತ್ತೆಮಾಡುತ್ತವೆ

.ಬಾವಲಿಗಳ ಶ್ರವಣ ಶಕ್ತಿ ತುಂಬಾ ತೀಕ್ಷ್ಣವಾಗಿರುತ್ತದೆ

.ಕೆಲವು ಪ್ರಭೇದದ ಬಾವಲಿಗಳು ಜಾನುವಾರುಗಳ ಮೈಮೇಲೆ ಕುಳಿತು ಅದರ ರಕ್ತವನ್ನೇ ಆಹಾರವಾಗಿ ಬಳಸುತ್ತವೆ.ಇವುಗಳನ್ನು
vampire ಬಾವಲಿಗಳು ಎಂದು ಕರೆಯುತ್ತಾರೆ .ಇಂತಹ ಬಾವಲಿಗಳು ತೀರ ವಿರಳ (ದಕ್ಷಿಣ ಅಮೇರಿಕ)

.ಪ್ರಪಂಚದ ಅತೀ ಸಣ್ಣ ಬಾವಲಿ(4 cm )
African Banana bat (ಮಧ್ಯ ಆಫ್ರಿಕಾ)

.ಕೆಲವು ಬಾವಲಿಗಳು ಚಳಿಗಾಲದ ಚಳಿಯಿಂದ ರಕ್ಷಣೆ ಪಡೆಯಲು ನೂರಾರು km
ವಲಸೆ ಹೋಗುತ್ತವೆ

.ಆಫ್ರಿಕಾದ ಒಂದು ಜಾತಿಯ ಬಾವಲಿ ಜೀರುಂಡೆಯ ನಡೆಯ ಶಬ್ದವನ್ನು
6 ಅಡಿಗಿಂತಲೂ ಹೆಚ್ಚು ಅಂತರದಿಂದ ಗ್ರಹಿಸಬಲ್ಲದು

.
Little Brown ಬಾವಲಿಯು hibernat ನಲ್ಲಿ ಇದ್ದಾಗ 48 ನಿಮಿಷಗಳ ಕಾಲ ಉಸಿರಾಟವನ್ನೇ ನಿಲ್ಲಿಸಬಲ್ಲದು

.ಕಪ್ಪೆಯನ್ನು ತಿನ್ನುವ ಕೆಲವು ಬಾವಲಿಗಳು
'ವಿಷಯುಕ್ತ ಕಪ್ಪೆಗಳನ್ನು' ಗಂಡು ಕಪ್ಪೆಯ mating call (ಮಿಲನದ ಕರೆ) ನಿಂದ ಕಂಡುಹಿಡಿಯಬಲ್ಲವು

.ಇಂತಹ ವಿಚಿತ್ರ ಜೀವಿಗಳೂ ಕೂಡ ಇಂದು ಅಪಾಯದ ಅಂಚಿನಲ್ಲಿವೆ


.ಪ್ರಪಂಚದಾದ್ಯಂತ ಇರುವ ಬಾವಲಿಗಳಲ್ಲಿ
13 ಪ್ರಭೇದದ ಬಾವಲಿಗಳನ್ನು 'ಅಪಾಯದ ಅಂಚಿನಲ್ಲಿರುವ ಬಾವಲಿಗಳು' ಎಂದು ಗುರುತಿಸಲಾಗಿದೆ

.ಮುಖ್ಯವಾಗಿ ವಾಸ ಸ್ಥಾನದ ಕೊರತೆ,ಕಡಿಮೆ ಸಂತಾನೋತ್ಪತಿ,ಖಾಯಿಲೆಗಳು ಬಾವಲಿಗಳ ಸಂಖ್ಯೆ ಕಡಿಮೆಯಾಗಲು ಕಾರಣ

.ಬಾವಲಿಗಳು
ಪರಿಸರ ಹಾಗು ಮಾನವ ಸ್ನೇಹಿ ಜೀವಿಗಳು.ಇವುಗಳು ನಶಿಸದಿರಲಿ.ಇಂತವುಗಳ ಸಂತಾನ ಬೆಳೆಯಲಿ ಎಂದು ಹಾರೈಸೋಣ...

.ಇನ್ನೊಮ್ಮೆ ಎಲ್ಲಾದರು ಬಾವಲಿಗಳನ್ನ ನೋಡಿದರೆ ಒಂದು ಕ್ಷಣ ಇಲ್ಲಿ (ಈ ಪೋಸ್ಟ್ ನಲ್ಲಿ ) ನಿಮಗೆ ತಿಳಿದ ವಿಷಯದ ಬಗ್ಗೆ ಯೋಚಿಸಿ....


Bookmark and Share

Comments

  1. Some photos are also in dark... Bats are hiding in it.. keep some lights on it.. Informative..thanks.

    ReplyDelete
  2. ನಿಮಗೆ ಪ್ರಕೃತಿಯ ಮೇಲಿರುವ ಅಭಿಮಾನ ನೋಡಿ ಸಂತೋಷವಾಯಿತು, ನಿಮ್ಮ ಬ್ಲಾಗ್ ನೋಡಿದೆ, ಚೆನ್ನಾಗಿದೆ, ಹೀಗೆ ಬರೆಯುತ್ತಿರಿ. ಈಗಿನ ಕಾಲದಲ್ಲೂ ಈ ರೀತಿ ಅಭಿರುಚಿ ಬೆಳೆಸಿಕೊಂಡಿರುವ ಯುವಕರು ಇದ್ದಾರೆ ಎಂದು ಹೆಮ್ಮೆಯಾಯಿತು.

    ReplyDelete

Post a Comment

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....