-ಥಂಡಿ ಥಂಡಿ ಅಂಟಾರ್ಟಿಕಾ-
.ಭೂಮಿಯ ದಕ್ಷಿಣ ಗೋಳದಲ್ಲಿರುವ ಅಂಟಾರ್ಟಿಕಾವು ಪ್ರಪಂಚದ 5 ನೇ ಅತಿ ದೊಡ್ಡ ಖಂಡ

.ಇದರ ಒಟ್ಟು ವಿಸ್ತೀರ್ಣ 14.2 million square kilometers

.ಈ ಪೋಸ್ಟಿನ title ಲೇ ಹೇಳುವಂತೆ ಅಂಟಾರ್ಟಿಕಾದ 98 ಪ್ರತಿಶತ ಭಾಗ ಮಂಜುಗಡ್ಡೆಯಿಂದ ಆವೃತವಾಗಿದೆ.ಹಾಗಾಗಿ ಇದು ವರ್ಷದ 365 ದಿನಗಳಲ್ಲೂ ಥಂಡಿ,ಥಂಡಿ

.ಇಲ್ಲಿನ ಮಂಜುಗಡ್ಡೆಯ ದಪ್ಪವೇ 1.6 kilometres

.ಅಕಸ್ಮಾತ್ ಇಲ್ಲಿನ ಮಂಜೆಲ್ಲಾ ಒಮ್ಮೆಗೆ ಕರಗಿದರೆ ಅದು ಸಮುದ್ರದ ನೀರಿನ ಮಟ್ಟವನ್ನು 200 ಅಡಿಗಳಷ್ಟು ಏರಿಸಬಲ್ಲದು

.ಪ್ರಪಂಚದ ಶೇಕಡಾ 90 ರಷ್ಟು ಮಂಜುಗೆಡ್ಡೆ ಇಲ್ಲೇ ಇದೆ

.ಇಡೀ ಅಂಟಾರ್ಟಿಕಾ ಖಂಡವನ್ನು ಪೂರ್ವ ಅಂಟಾರ್ಟಿಕಾ ಹಾಗು ಪಶ್ಚಿಮ ಅಂಟಾರ್ಟಿಕಾ ಎಂದು ವಿಭಾಗಿಸಲಾಗಿದೆ.ಈ ಎರಡು ಭಾಗಗಳು ಒಂದು ಪರ್ವತದಿಂದ ವಿಭಾಗವಾಗಿದೆ

.ಇಲ್ಲಿ ಬೀಳುವ ಹಿಮ ಕರಗದೆ ಮಂಜುಗೆಡ್ಡೆಗಳಾಗಿ ಪರಿವರ್ತನೆ ಹೊಂದುತ್ತವೆ

.ಅಂಟಾರ್ಟಿಕಾ ಖಂಡವು ಪ್ರಪಂಚದ ಅತೀ ಥಂಡಿಯ,ಅತೀ ಗಾಳಿ ಬೀಸುವ ಹಾಗು ಅತೀ ತೇವಾಂಶದಿಂದ ಕೂಡಿದ ಪ್ರದೇಶವಾಗಿದೆ

.ಅಂಟಾರ್ಟಿಕಾವು ಒಂದು ಹೆಪ್ಪು ಗಟ್ಟಿದ ಮರುಭೂಮಿ.ಇಲ್ಲಿ ಬೀಳುವ ವಾರ್ಷಿಕ ಮಳೆಯ ಪ್ರಮಾಣ 10 cm ಗಿಂತಲೂ ಕಡಿಮೆ

.ಅತೀ ಹೆಚ್ಚು ಪ್ರಮಾಣದಲ್ಲಿ ಹಿಮಪಾತ ಇಲ್ಲಿ ಆಗುತ್ತದೆ.ಎಷ್ಟರ ಮಟ್ಟಿಗೆಯೆಂದರೆ ಕೇವಲ 48 ಘಂಟೆಗಳಲ್ಲಿ 1.22 metres ನಷ್ಟು 

.'Vinson Massif ' ಇದು ಅಂಟಾರ್ಟಿಕಾದಲ್ಲಿರುವ ಅತೀ ಎತ್ತರದ ಶಿಖರ

.ಪ್ರಪಂಚದಲ್ಲೇ ಅತೀ ಕನಿಷ್ಟ ಉಷ್ಣಾಂಶ -128 degrees F ದಾಖಲಾಗಿದ್ದು ಇದೇ ನಮ್ಮ ಅಂಟಾರ್ಟಿಕಾದಲ್ಲಿ

.ಇಂತಹ ಅಂಟಾರ್ಟಿಕಾದಲ್ಲೂ ಜ್ವಾಲಾಮುಖಿ ಪರ್ವತಗಳಿವೆ.Mount Erebus ಹಾಗು Deception Island ಗಳು ಅಂಟಾರ್ಟಿಕಾದ ಕೆಲವು ಜ್ವಾಲಾಮುಖಿ ಪರ್ವತಗಳು

.70 ಕ್ಕೂ ಹೆಚ್ಚು ಸರೋವರಗಳು ಅಂಟಾರ್ಟಿಕಾದಲ್ಲಿವೆ.ಈ ಸರೋವರಗಳು ice sheet ನ ಕೆಳಗೆ ಇರುತ್ತವೆ

.ಹೆಪ್ಪುಗಟ್ಟಿದ ಕೆಲವು ಸರೋವರಗಳ ಮೇಲ್ಮೈಗಳು ಗುರು ಗ್ರಹದ ಚಂದ್ರ (satelite) ಯುರೋಪದ ಗುಣ ಲಕ್ಷಣಗಳನ್ನು ಹೋಲುತ್ತವೆ

.ಅಂಟಾರ್ಟಿಕಾದಲ್ಲಿ ಸಸ್ಯ ಸಂಕುಲ ಬಹಳ ಕಡಿಮೆ.ಆದರೂ 350 ಜಾತಿಯ ಸಸ್ಯಗಳು ಇಲ್ಲಿವೆ. moss ಮತ್ತು lichen ಗಳು ಹೆಚ್ಚು ಕಂಡುಬರುತ್ತವೆ 

.ಇನ್ನು ಅಂಟಾರ್ಟಿಕಾದ ಪ್ರಾಣಿಗಳ ಬಗ್ಗೆ ಹೇಳುವುದಾದರೆ,ಇಲ್ಲಿ ಪ್ರಾಣಿ ಸಂಕುಲ ತುಂಬಾ ಕಡಿಮೆ.mite-ಇದು ಇಲ್ಲಿನ ಅತಿ ದೊಡ್ಡ ಭೂಮಿಯ ಮೇಲೆ ವಾಸಿಸುವ ಪ್ರಾಣಿ.ಈ ಪ್ರಾಣಿಯ ದೇಹವು ಕೆಲವು ರಾಸಾಯನಿಕ ಪದಾರ್ಥಗಳನ್ನು ಉತ್ಪತಿ ಮಾಡುತ್ತದೆ.ಈ ರಾಸಾಯನಿಕಗಳು mite ಗಳಿಗೆ ಚಳಿಯಿಂದ ರಕ್ಷಣೆ ಕೊಡುತ್ತದೆ

.ಅಂಟಾರ್ಟಿಕಾ ಪಕ್ಷಿ ಸಂಕುಲದ ಅತಿ ಹೆಚ್ಚು ಪಾಲನ್ನು penguin ಗಳು ಪಡೆದುಕೊಳ್ಳುತ್ತದೆ.ಅತಿ ಹೆಚ್ಚು ಸಂಖೆಯ penguin ಗಳು ಇಲ್ಲಿ ಕಂಡುಬರುತ್ತದೆ.penguin ಗಳಿಗೆ ಅಂಟಾರ್ಟಿಕಾವೇ ಮನೆ.ಇವುಗಳ ಜೀವನ ವಿಧಾನವೇ ಕುತೂಹಲಕಾರಿ.ಉಳಿದಂತೆ ಅಂಟಾರ್ಟಿಕಾದಲ್ಲಿ seal ಗಳು ಹೆಚ್ಚಾಗಿ ಕಂಡುಬರುತ್ತದೆ

.ಅಂಟಾರ್ಟಿಕಾವು ಯಾವುದೇ ದೇಶದ ಸುಪರ್ದಿಗೆ ಒಳಪಟ್ಟಿಲ್ಲ

.ಅಂಟಾರ್ಟಿಕಾದಲ್ಲಿ ಮನುಷ್ಯರು ವಾಸ ಮಾಡುವುದಿಲ್ಲ. ಇಲ್ಲಿನ ಹವಾಮಾನ ಹಾಗು ಇನ್ನಿತರ ವಿಷಯಗಳ ಬಗ್ಗೆ ಅಧ್ಯಯನ ಮಾಡಲು ವಿಜ್ಞಾನಿಗಳು ತಾತ್ಕಾಲಿಕವಾಗಿ ಇಲ್ಲಿಗೆ ಬಂದು ಹೋಗುತ್ತಾರೆ

.meteorites ಗಳನ್ನು ಪತ್ತೆ ಮಾಡಲು ಅಂಟಾರ್ಟಿಕಾವು ಪ್ರಪಂಚದಲ್ಲೇ ಉತ್ತಮ ಪ್ರದೇಶ

.ಅಂಟಾರ್ಟಿಕಾದ ಕೆಲವು ಪ್ರದೇಶಗಳಲ್ಲಿ ಬಾರಿ ಹಿಮ ಗುಡ್ಡಗಳು(iceberg) ಭೂ ಪ್ರದೇಶದಿಂದ ಬೇರ್ಪಟ್ಟು ಸಮುದ್ರದಲ್ಲಿ ತೇಲುತ್ತಿರುತ್ತವೆ.ಇಂತಹ ದಾಖಲಾದ ಅತೀ ದೊಡ್ಡ ಹಿಮ ಗುಡ್ಡ 295 km ಉದ್ದ ಹಾಗು 37 km ಅಗಲವಿತ್ತು

.ಇಂತಹ ಭೂಮಿಯ ಅತ್ಯಂತ ವ್ಯಶಿಷ್ಟ್ಯವಾದ ಪ್ರದೇಶವಿಂದು 'ಜಾಗತಿಕ ತಾಪಮಾನದಿಂದಾಗಿ' ತನ್ನ ಸ್ವರೂಪವನ್ನೇ ಕಳೆದುಕೊಳ್ಳುತ್ತಿದೆ.ಇಲ್ಲಿನ ಮಂಜುಗೆಡ್ಡೆಗಳು ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಕರುಗುತ್ತಿದೆ

.ಭೂಮಿಯನ್ನು ರಕ್ಷಿಸುತ್ತಿರುವ ozone ಪದರವು ಅಂಟಾರ್ಟಿಕಾದಲ್ಲಿ ನಾಶವಾಗಿರುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.'ozone hole' ಇಲ್ಲಿ ಪ್ರತಿ ವರ್ಷವೂ ದೊಡ್ದದಾಗುತ್ತಿದೆ ಎಂದು ಅವರು ಹೇಳುತ್ತಾರೆ

.ಅಂಟಾರ್ಟಿಕಾವು ಭೂಮಿಯ ವಾತಾವರಣದ ಮೇಲೂ ಪರಿಣಾಮ ಬೀರುವುದರಿಂದ.ಅಂಟಾರ್ಟಿಕಾದ ನಾಶ=ಭೂಮಿಯ ಮೇಲಿನ ಜೀವಿಗಳ ವಿನಾಶದ ಸಂಖೇತ 

-ಪ್ರಕೃತಿಯನ್ನು ಉಳಿಸಿ-

Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....