Posts

ನೋಕಿಯಾದಿಂದ 108MP ಕ್ಯಾಮರಾ ಫೋನ್

Image
ನೋಕಿಯಾದ ಬ್ರಾಂಡ್ ಪರವಾನಗಿದಾರರಾದ ಎಚ್‌ಎಂಡಿ ಗ್ಲೋಬಲ್ 2020 ರ ತ್ರೈ ಮಾಸಿಕದಲ್ಲಿ ಪ್ರಮುಖ ನೋಕಿಯಾ 9.3 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಕೆಲಸ ಮಾಡುತ್ತಿದೆ  ಇತ್ತೀಚಿನ ಅಪ್‌ಡೇಟ್‌ನಲ್ಲಿ, ನೋಕಿಯಾ ಪವರ್ ಯೂಸರ್ ವರದಿಯ ಪ್ರಕಾರ ಫೋನ್‌ನಲ್ಲಿ 108 ಎಂಪಿ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 64 ಎಂಪಿ ಪ್ರಾಥಮಿಕ ಸೆನ್ಸಾರ್ ಒಳಗೊಂಡಿರುವ ಪೆಂಟಾ-ಲೆನ್ಸ್ ಹಿಂಬದಿ ಕ್ಯಾಮೆರಾ ಸೆಟಪ್ ಅನ್ನು ಈ ಫೋನ್ ಹೊಂದಿದೆ ಎಂದು ಹೇಳಲಾಗಿದೆ  ಅಲ್ಲದೆ, ಫೋನ್ ಕ್ಯೂಎಚ್‌ಡಿ + ಡಿಸ್ಪ್ಲೇ ಮತ್ತು ಫ್ಲ್ಯಾಗ್‌ಶಿಪ್-ಗ್ರೇಡ್ ಇಂಟರ್ನಲ್‌ಗಳನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ

ದೇಶದಲ್ಲಿ ಎಷ್ಟು COVID-19 ಪರೀಕ್ಷೆ ನಡೆದಿದೆ? ICMR ವರದಿ

Image
ಏಪ್ರಿಲ್ 13 ರಂದು ICMR 9pm ಗಂಟೆಯ ಬುಲೆಟಿನ್ ಪ್ರಕಾರ ದೇಶದಲ್ಲಿ 2,02,551 ವ್ಯಕ್ತಿಗಳಿಂದ ಒಟ್ಟು 2,17,554 ಮಾದರಿಗಳನ್ನು ಪರೀಕ್ಷಿಸಲಾಗಿದೆ ಮತ್ತು ಭಾರತದಲ್ಲಿ 9,341 ವ್ಯಕ್ತಿಗಳು COVID-19 ಸಕಾರಾತ್ಮಕವೆಂದು ಪಡಿಸಲಾಗಿದೆ. ಏಪ್ರಿಲ್ 14 ರಂದು ಬೆಳಿಗ್ಗೆ 10 ರ ಹೊತ್ತಿಗೆ ರಾಜ್ಯವಾರು ಸಂಖ್ಯೆಗಳು ಇಲ್ಲಿವೆ ಆಂಧ್ರಪ್ರದೇಶ 8,755 ಮಾದರಿಗಳನ್ನು ಪರೀಕ್ಷಿಸಿದೆ.  ರಾಜ್ಯದಲ್ಲಿ 439 ಸಕಾರಾತ್ಮಕ ಪ್ರಕರಣಗಳು, 7 ಸಾವುಗಳು ಮತ್ತು 12 ಜನರು ಚೇತರಿಸಿಕೊಂಡಿದ್ದಾರೆ ಕೇರಳ ಇದುವರೆಗೆ 15,683 ಮಾದರಿಗಳನ್ನು ಪರೀಕ್ಷಿಸಿದ್ದು, 378 ಸಕಾರಾತ್ಮಕ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ 3 ಸಾವುಗಳು ದಾಖಲಾಗಿದ್ದರೆ, 198 ಜನರು ಚೇತರಿಸಿಕೊಂಡಿದ್ದಾರೆ. ಕರ್ನಾಟಕವು 11,472 ಮಾದರಿಗಳನ್ನು ಸಂಗ್ರಹಿಸಿದ್ದು, 247 ಸಕಾರಾತ್ಮಕ ಪ್ರಕರಣಗಳು ದಾಖಲಾಗಿವೆ.ರಾಜ್ಯದಲ್ಲಿ 8 ಸಾವುಗಳು ದಾಖಲಾಗಿದ್ದರೆ, 59 ಜನರು ಚೇತರಿಸಿಕೊಂಡಿದ್ದಾರೆ. ಮಹಾರಾಷ್ಟ್ರವು 43,199 ಮಾದರಿಗಳನ್ನು ಪರೀಕ್ಷಿಸಿದ್ದು, 2,334 ಪರೀಕ್ಷೆಗಳು ಸಕಾರಾತ್ಮಕವಾಗಿವೆ.  ರಾಜ್ಯದಲ್ಲಿ 160 COVID-19 ಸಾವುಗಳು ದಾಖಲಾಗಿದ್ದರೆ, 229 ಜನರು ಚೇತರಿಸಿಕೊಂಡಿದ್ದಾರೆ.

ನಾಳೆ ಪ್ರಧಾನಿಯವರ ಮಾತು

Image
ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಬೆಳಿಗ್ಗೆ 10 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಿಯವರ ಕಚೇರಿ ತಿಳಿಸಿದೆ.  ಕರೋನವೈರಸ್ ಹರಡುವುದನ್ನು ತಡೆಯುವ 21 ದಿನಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್ ನಾಳೆ, ಏಪ್ರಿಲ್ 14 ಕ್ಕೆ ಕೊನೆಗೊಳ್ಳುತ್ತದೆ ಮತ್ತು ಪ್ರಧಾನಮಂತ್ರಿ ಅದರ ಸಂಭವನೀಯ ವಿಸ್ತರಣೆಯ ಬಗ್ಗೆ ಮಾತನಾಡುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ. "ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 14, 2020 ರಂದು ಬೆಳಿಗ್ಗೆ 10 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ”ಎಂದು ಪಿಎಂಒ ಇಂಡಿಯಾ ಟ್ವೀಟ್ ಮಾಡಿದೆ ಮುಂದಿನ ಲಾಕ್ ಡೌನ್ ಕ್ರಮಗಳು ಏನು? ಜನರಿಗೆ ನಾಳೆ ಯಾವ ಸಂದೇಶ ನೀಡಲಿದ್ದಾರೆ ಎನ್ನುವ ಕುತೂಹಲ ಇದೀಗ ಎಲ್ಲರಲ್ಲಿ ಮೂಡಿದೆ

ಪ್ಲೇ ಸ್ಟೋರ್ ನಲ್ಲಿ ಟಿಕ್ ಟಾಕ್ ನ ಮೈಲಿಗಲ್ಲು

Image
ಟಿಕ್ ಟಾಕ್ ಇದೀಗ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. 2020 ರ ಫೆಬ್ರವರಿಯಲ್ಲಿ ಟಿಕ್‌ಟಾಕ್ ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ 1 ಬಿಲಿಯನ್ ಡೌನ್‌ಲೋಡ್‌ಗಳನ್ನು ದಾಟಿತ್ತು.  ಕಿರು ವೀಡಿಯೊ ಅಪ್ಲಿಕೇಶನ್ ಈಗ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮಾತ್ರ 1 ಬಿಲಿಯನ್ ಸ್ಥಾಪನೆಗಳನ್ನು ಕಂಡಿದೆ.  ಲಾಕ್‌ಡೌನ್‌ನಿಂದಾಗಿ ಟಿಕ್‌ಟಾಕ್ ಪ್ರಸಿದ್ಧಗೊಳ್ಳುತ್ತಿದೆ, ಮತ್ತು ಇದು ಅಪ್ಲಿಕೇಶನ್‌ಗ ನ ಪ್ರಮುಖ ಮೈಲಿಗಲ್ಲುಗಳಿಗೆ ಕಾರಣವಾಗುತ್ತಿದೆ  ಪ್ಲೇ ಸ್ಟೋರ್‌ನಲ್ಲಿ 1 ಬಿಲಿಯನ್ ಇನ್‌ಸ್ಟಾಲ್‌ಗಳನ್ನು ದಾಟಿದ ಟಿಕ್‌ಟಾಕ್ ಅನ್ನು ಮೊದಲು ಆಂಡ್ರಾಯ್ಡ್ ಪೊಲೀಸ್ ಗುರುತಿಸಿದೆ.  ಆಪ್ ಸ್ಟೋರ್‌ನಲ್ಲಿನ ಡೌನ್ ಲೋಡ್ ಸಂಖ್ಯೆಯನ್ನು ಆಪಲ್ ಬಹಿರಂಗಪಡಿಸುವುದಿಲ್ಲ, ಆದರೆ ಟಿಕ್‌ಟಾಕ್ ಪ್ರಸ್ತುತ ಮನರಂಜನಾ ಅಪ್ಲಿಕೇಶನ್‌ಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ.  ಟಿಕ್‌ಟಾಕ್ ವಾಟ್ಸಾಪ್ ಮತ್ತು ಫೇಸ್‌ಬುಕ್‌ಗಳನ್ನು ಸೋಲಿಸಿ ಜಾಗತಿಕವಾಗಿ ಹೆಚ್ಚು ಡೌನ್‌ಲೋಡ್ ಮಾಡಲಾದ ಗೇಮ್-ಅಲ್ಲದ ಅಪ್ಲಿಕೇಶನ್ ಆಗಿ ಮಾರ್ಪಟ್ಟಿದೆ.  ಕಳೆದ ತಿಂಗಳು, ಇದು 115.2 ಮಿಲಿಯನ್ ಡೌನ್ ಲೋಡ್ ನೊಂದಿಗೆ ತನ್ನ ಪ್ರಚಂಡ ಯಾತ್ರೆಯನ್ನು ಮುಂದುವರಿಸಿದೆ ಎಂದು ಸೆನ್ಸರ್ ಟವರ್ ವರದಿ ಮಾಡಿದೆ.

"ಕೊರಲ್ ಬ್ಲೀಚಿಂಗ್"

Image
ಹೀಗೆ ಅಂತರ್ಜಾಲದಲ್ಲಿ ಸುತ್ತುವಾಗ ನಾನು ನೋಡಿದ ಒಂದು ಚಿತ್ರ ಮನಸ್ಸಿಗೆ ಬಹಳ ಬೇಸರವನ್ನು ತಂದೊಡ್ಡಿತು.ಈ ಬಗ್ಗೆ ಒಂದಷ್ಟು ಬರೆಯಬೇಕೆನ್ನಿಸಿ ಬರೆದಿದ್ದೇನೆ ಮೇಲೆ ಇರುವ ಚಿತ್ರ 2017 ರಲ್ಲಿ ನಡೆದ (ಈಗಲೂ ನಡೆಯುತ್ತಿರುವ )ಕೊರಲ್ ಬ್ಲೀಚಿಂಗ್ ಎಂಬ ಕೊರಲ್ ಗಳ ದಾರುಣ ಕತೆಯ ಬಗ್ಗೆ ನೀವೆಲ್ಲಾ ಎನ್ ಜಿ ಸಿ ಅನಿಮಲ್ ಪ್ಲಾನೆಟ್ ಚಾನೆಲ್ ಗಳಲ್ಲಿ ಸಮುದ್ರಗಳಲ್ಲಿ ಇರುವ ಅತ್ಯಂತ ಬಣ್ಣ ಬಣ್ಣಗಳಿಂದ ಕುಡಿದ ಹವಳದ ಬಂಡೆಗಳನ್ನು ನೋಡಿರಬಹುದು.ಇವುಗಳೇ ಕೊರಲ್ ರೀಫ್. ಈ ಕೊರಲ್ ರೀಫ್ ಇರುವಲ್ಲಿ ಸಾವಿರಾರು ಜಾತಿಯ ಕಣ್ಮನ ತಣಿಸುವ ಜೀವಿಗಳು ವಾಸಿಸುತ್ತವೆ. ಏನಿದು ಕೊರಲ್ ರೀಫ್ ?? ಸಮುದ್ರಗಳಲ್ಲಿ ವಾಸಿಸುವ ಜೀವಿ. ಪ್ರತೀ ಕೊರಲ್ ಕೂಡ ಹಲವಾರು ಪಾಲಿಪ್ ಎಂದು ಕರೆಯಲ್ಪಡುವ ಜೀವಿಗಳಿಂದ ಮಾಡಲ್ಪಟ್ಟದ್ದಾಗಿರುತ್ತದೆ. ಈ ಪಾಲಿಪ್ ಗಳು calcium carbonate ಸ್ರವಿಸಿ ರಕ್ಷಣೆಗೆ ಶೆಲ್ ಗಳನ್ನು ನಿರ್ಮಿಸಿ ದಿಬ್ಬಗಳ ಆಕಾರ ನೀಡಿರುತ್ತದೆ ( ಕೊರಲ್ ಗಳಲ್ಲಿ ಮತ್ತೆ ಹಲವು ಬಗೆಗಳಿವೆ) ಈ ಕೊರಲ್ ಗಳಲ್ಲಿ ವಾಸಿಸುವ zooxanthellae ಎಂಬ ಆಲ್ಗೆಯಿಂದ ಕೂಡಾ ಇವು ಆಹಾರವನ್ನು ಪಡೆಯುತ್ತವೆ.ಸಮುದ್ರದ ಭಾಗದ ಕೇವಲ 1 ಪ್ರತಿಶತ ಇದ್ದರೂ ಕೂಡಾ ಇಡೀ ಸಾಗರ ಪರಿಸರ ವ್ಯವಸ್ಥೆಯ 25 ಪ್ರತಿಶತ ಜೀವಿಗಳು ಈ ಕೊರಲ್ ರೀಫ್ ಗಳಲ್ಲಿ ಕಂಡುಬರುತ್ತದೆ. ಇದಕ್ಕಾಗಿಯೇ ಇವುಗಳನ್ನು ಸಾಗರದ ಮಳೆಕಾಡು ಎನ್ನಬಹುದು     ಏನಿದು ಬ್ಲೀಚಿಂಗ್  ಸಾಗರದ ನೀರಿನ

ಅಬ್ಬಬ್ಬಾ ಇದೆಂತಹಾ ಸೆಖೆ....

ಅಬ್ಬಬ್ಬಾ ಇದೆಂತಾ ಸೆಖೆ..ಹಿಂದೆಂದಿಗಿಂತಲೂ ಸಹಿಸಲಸಾಧ್ಯವಾದ ಸೆಖೆ..ಎಂತಾ ಬಿಸಿಲು..ಒಂದು ಮಳೆಯಾದರೂ ಬರಬಾರದೇ...! ಹೀಗೆ ಮಾತನಾಡುತ್ತಾ ಇದೇ ಸಮಯದಲ್ಲಿ ಕರೆಂಟ್ ತೆಗುವುವವರಿಗೆ ಒಂದಷ್ಟು ಹಿಡಿ ಶಾಪ ಹಾಕುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ .ಇಂತಹ ಮಾತುಗಳನ್ನು ಕೇಳಿದಾಗ ನನಗನ್ನಿಸುವುದು ಜನಗಳು ಸಮ್ಮನೆ ಸೆಖೆ ,ಮಳೆ ಎನ್ನುತ್ತಾರೆಯೇ ವಿನಃ ಇಂತಹ ಹವಾಮಾನ ವೈಪರೀತ್ಯದ ಮೂಲಗಳ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲವಲ್ಲವೆಂದು  .ಹೌದು ಬೇಸಿಗೆ ಬಂತೆಂದರೆ ಇಂತಹ ಮಾತುಗಳನ್ನು ನಾವು ಕೇಳುವುದು ಸಹಜವೇ..ಅದರಲ್ಲಿ ವಿಶೇಷವೇನು ಇಲ್ಲ ಬಿಡಿ ಅನ್ನುತ್ತಿರಾ... ಇದೆ ಖಂಡಿತವಾಗಿಯೂ ವಿಶೇಷವಿದೆ .ಇತ್ತೀಚಿನ ವರ್ಷಗಳ ಬೇಸಿಗೆಗಳು ಹಿಂದೆಂದಿಗಿಂತಲೂ ಹೆಚ್ಚು ಉಷ್ಣತೆಯನ್ನು ಹೊಂದುತ್ತಿರುವುದಲ್ಲದೇ ಸಹಿಸಲು ಅಸಾಧ್ಯವಾದ ಪರಿಸ್ಥಿತಿಯನ್ನು ತಂದಿರುವುದರಲ್ಲಿ ಸಂಶಯವಿಲ್ಲ .ನೀವೀ ಲೇಖನವನ್ನು ಆಫೀಸ್ ನ ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತು ಓದುತ್ತಿರುವುದಾದರೆ ನಾನು ಹೇಳಿದ ಮಾತು 'ಹೌದಾ' ಎಂದೆನಿಸಬಹುದು .ಆದರೆ ಸ್ವಲ್ಪ ಹೊರ ಬಂದು ಬಿಸಿಲಿಗೆ ಮೈ ಒಡ್ಡಿ ನಿಂತುಕೊಳ್ಳಿ...ನಾನು ಹೇಳುತ್ತಿರುವ ಉರಿ ಭೇಸಿಗೆಯ ಅನುಭವ ಕೆಲವೇ ನಿಮಿಷಗಳಲ್ಲಿ ನಿಮಗೆ ಉಂಟಾಗುತ್ತದೆ .ನಮ್ಮ ಶಿವಮೊಗ್ಗದಲ್ಲೇ ಒಂದು ವಾರದ ಹಿಂದೆ ದಾಖಲಾದ 40 ಡಿಗ್ರೀ ಉಷ್ಣಾಂಶ ಇಲ್ಲಿಯವರನ್ನು ಒಮ್ಮೆ ತಬ್ಬಿಬ್ಬು ಮಾಡಿದ್ದು ಸುಳ್ಳಲ್ಲ .ನೀವು ಮಲೆನಾಡಿ

ಫ್ಲೈಯಿಂಗ್ ಸ್ನೇಕ್

Image
.ಪ್ರಿಯ ಓದುಗ ಮಿತ್ರರೇ ಹಲವು ತಿಂಗಳುಗಳ ಬಳಿಕ i am back with ಫ್ಲೈಯಿಂಗ್ ಸ್ನೇಕ್ .ಈ ಹಾವನ್ನು ನೀವು ಸಾಧಾರಣವಾಗಿ ನೋಡಿರುತ್ತಿರಾ. ಹಳ್ಳಿ,ಕೆಲವೊಮ್ಮೆ ನಗರ ಪ್ರದೇಶಗಳಲ್ಲೂ ಇದು ಕಂಡುಬರುತ್ತದೆ.ಮರದ ಮೇಲೆ ವಾಸ ಮಾಡುವ ಈ ಹಾವು ಕೀಟ ಮತ್ತು ಕಪ್ಪೆಗಳನ್ನು ತಿಂದು ಬದುಕುತ್ತವೆ  .ಮಲೆನಾಡಿನ ಭಾಗದ ಜನರು ಈ ಹಾವನ್ನು ಹಾರುಂಬೆ ಹಾವು ಎಂದು ಕರೆಯುತ್ತಾರೆ.ಇದರ ಬಗೆಯ ಕತೆಗಳು ನಂಬಿಕೆಗಳು ತೀರಾ ಉತ್ಪ್ರೇಕ್ಷೆ ಎನ್ನಿಸುವಷ್ಟರ ಮಟ್ಟಿಗೆ ಇದೆ .ಈ ಹಾವು ಸಾಧಾರಣವಾಗಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಕೆಲವೊಮ್ಮೆ ಗಾಳಿಯಲ್ಲಿ ಹಾರುವುದರಿಂದ  (Gliding)  ಇದರ ಬಗ್ಗೆ ವಿಶೇಷ ಕತೆಗಳು ಸೃಷ್ಟಿಯಾಗಿವೆ.ಈ ಹಾವಿನ ವಿಷ ಅದು ಕೇವಲ ತನ್ನ ಬಲಿಪ್ರಾಣಿಗಳ ಮೇಲೆ ಪರಿಣಾಮ ಬೀರುತ್ತದೆಯೇ ಹೊರತು ಮನುಷ್ಯರಿಗೆ ಇದರ ವಿಷದಿಂದ ಯಾವ ತೊಂದರೆಯೂ ಸಂಭವಿಸುವುದಿಲ್ಲ  .ಹಲವರ ಪ್ರಕಾರ ಇದು ವಿಷಯುಕ್ತ ಹಾವಾಗಿದ್ದು,ಇದು ತಲೆಯ ಮಧ್ಯ ಭಾಗಕ್ಕೆ ಕಚ್ಚುತ್ತದೆ,ಸಾವು ಸಂಭವಿಸುತ್ತದೆ ಎಂದು ನಂಬಿದ್ದಾರೆ. ಜನರ ಈ ನಂಬಿಕೆಯಿಂದ ಈ ಹಾವನ್ನು ಸಾಧಾರಣವಾಗಿ ಕಂಡಲ್ಲಿ ಸಾಯಿಸಲಾಗುತ್ತದೆ ಜನರ ಮನಸ್ಸಿನಲ್ಲಿರುವ ಈ ಸುಳ್ಳು ನಂಬಿಕೆಗಳು ಈ ಹಾವಿಗೆ ಮಾರಕವಾಗಿರುವುದು ನಿಜಕ್ಕೂ ದುರಾದೃಷ್ಟಕರ .ಹಲವು ಕಡೆ ನಾನು ನೋಡಿದ್ದೀನಿ ಈ ಹಾವನ್ನು ವಿಷಜಂತು ಎಂದು ಎಂದು ಹೊಡೆದು ಕೊಲ್ಲುವುದನ್ನು.ಆ ಸಂಧರ್ಭಗಳಲ್ಲಿ ಅವರಿಗೆ ಎಷ್ಟೇ ಹೇಳಿದರೂ ಅವರು ನಮ್ಮ ಮಾತನ್ನು