"ಕೊರಲ್ ಬ್ಲೀಚಿಂಗ್"
ಹೀಗೆ ಅಂತರ್ಜಾಲದಲ್ಲಿ ಸುತ್ತುವಾಗ ನಾನು ನೋಡಿದ ಒಂದು ಚಿತ್ರ ಮನಸ್ಸಿಗೆ ಬಹಳ ಬೇಸರವನ್ನು ತಂದೊಡ್ಡಿತು.ಈ ಬಗ್ಗೆ ಒಂದಷ್ಟು ಬರೆಯಬೇಕೆನ್ನಿಸಿ ಬರೆದಿದ್ದೇನೆ
ಮೇಲೆ ಇರುವ ಚಿತ್ರ 2017 ರಲ್ಲಿ ನಡೆದ (ಈಗಲೂ ನಡೆಯುತ್ತಿರುವ )ಕೊರಲ್ ಬ್ಲೀಚಿಂಗ್ ಎಂಬ ಕೊರಲ್ ಗಳ ದಾರುಣ ಕತೆಯ ಬಗ್ಗೆ
ನೀವೆಲ್ಲಾ ಎನ್ ಜಿ ಸಿ ಅನಿಮಲ್ ಪ್ಲಾನೆಟ್ ಚಾನೆಲ್ ಗಳಲ್ಲಿ ಸಮುದ್ರಗಳಲ್ಲಿ ಇರುವ ಅತ್ಯಂತ ಬಣ್ಣ ಬಣ್ಣಗಳಿಂದ ಕುಡಿದ ಹವಳದ ಬಂಡೆಗಳನ್ನು ನೋಡಿರಬಹುದು.ಇವುಗಳೇ ಕೊರಲ್ ರೀಫ್. ಈ ಕೊರಲ್ ರೀಫ್ ಇರುವಲ್ಲಿ ಸಾವಿರಾರು ಜಾತಿಯ ಕಣ್ಮನ ತಣಿಸುವ ಜೀವಿಗಳು ವಾಸಿಸುತ್ತವೆ.
ಏನಿದು ಕೊರಲ್ ರೀಫ್ ??
ಸಮುದ್ರಗಳಲ್ಲಿ ವಾಸಿಸುವ ಜೀವಿ. ಪ್ರತೀ ಕೊರಲ್ ಕೂಡ ಹಲವಾರು ಪಾಲಿಪ್ ಎಂದು ಕರೆಯಲ್ಪಡುವ ಜೀವಿಗಳಿಂದ ಮಾಡಲ್ಪಟ್ಟದ್ದಾಗಿರುತ್ತದೆ. ಈ ಪಾಲಿಪ್ ಗಳು calcium carbonate ಸ್ರವಿಸಿ ರಕ್ಷಣೆಗೆ ಶೆಲ್ ಗಳನ್ನು ನಿರ್ಮಿಸಿ ದಿಬ್ಬಗಳ ಆಕಾರ ನೀಡಿರುತ್ತದೆ ( ಕೊರಲ್ ಗಳಲ್ಲಿ ಮತ್ತೆ ಹಲವು ಬಗೆಗಳಿವೆ) ಈ ಕೊರಲ್ ಗಳಲ್ಲಿ ವಾಸಿಸುವ zooxanthellae ಎಂಬ ಆಲ್ಗೆಯಿಂದ ಕೂಡಾ ಇವು ಆಹಾರವನ್ನು ಪಡೆಯುತ್ತವೆ.ಸಮುದ್ರದ ಭಾಗದ ಕೇವಲ 1 ಪ್ರತಿಶತ ಇದ್ದರೂ ಕೂಡಾ ಇಡೀ ಸಾಗರ ಪರಿಸರ ವ್ಯವಸ್ಥೆಯ 25 ಪ್ರತಿಶತ ಜೀವಿಗಳು ಈ ಕೊರಲ್ ರೀಫ್ ಗಳಲ್ಲಿ ಕಂಡುಬರುತ್ತದೆ. ಇದಕ್ಕಾಗಿಯೇ ಇವುಗಳನ್ನು ಸಾಗರದ ಮಳೆಕಾಡು ಎನ್ನಬಹುದು
ಏನಿದು ಬ್ಲೀಚಿಂಗ್
ಸಾಗರದ ನೀರಿನ ಉಷ್ಣಾಂಶ ಕೆಲವೇ ಕೆಲವು ಡಿಗ್ರಿ ಸೆಲ್ಸಿಯಸ್ ಹೆಚ್ಚಾದರೂ ಕೂಡ ಕೊರಲ್ ಗಳು ತಮ್ಮಲ್ಲಿರುವ zooxanthellae ಆಲ್ಗೆಯನ್ನು ಕಳೆದುಕೊಳ್ಳುತ್ತವೆ. ಆಗ ಈ ಕೊರಲ್ ಗಳು ಬಿಳುಚಿಕೊಳ್ಳುತ್ತವೆ.ಇದನ್ನೇ ಕೊರಲ್ ಬ್ಲೀಚಿಂಗ್ ಎನ್ನುತ್ತೇವೆ. ದೀರ್ಘಾವಧಿ ಉಷ್ಣಾಂಶ ಹೆಚ್ಚಿದ್ದಲ್ಲಿ ( ಜಾಗತಿಕ ತಾಪಮಾನ ಹೆಚ್ಚಳದ ಪರಿಣಾಮ )ಕೊರಲ್ ಗಳು ನಾಶ ಹೊಂದುತ್ತವೆ. ಕೊರಲ್ ಬ್ಲೀಚಿಂಗ್ ಸಾಗರಗಳಲ್ಲಿ ಹೊಸದೇನಲ್ಲ ಆದರೆ 1980ರ ನಂತರ ವರ್ಷಗಳಲ್ಲಿ ಬ್ಲೀಚಿಂಗ್ ಸುಮಾರು 5 ರಿಂದ 6 ಪಟ್ಟು ಹೆಚ್ಚಳವನ್ನು ಕಂಡಿದೆ. ಬ್ಲೀಚಿಂಗ್ ಅದ ಕೊರಲ್ ಗಳು ಸಾಯಲೇ ಬೇಕೆಂದು ಇಲ್ಲ ಉಷ್ಣಾಂಶ ಇಳಿಕೆಯಾದಲ್ಲಿ ಇವು ಚೇತರಿಸಿಕೊಳ್ಳುತ್ತವೆ..ಆದರೆ ಇತ್ತೀಚಿನ ವರ್ಷಗಳಲ್ಲಿ ಅವುಗಳ ಚೇತರಿಕೆಗಿಂತ ವೇಗವಾಗಿ ಬ್ಲೀಚಿಂಗ್ ನಡೆಯುತ್ತಿರುವುದು ಆತಂಕಕಾರಿ ಸಂಗತಿ.
ಆಸ್ಟ್ರೇಲಿಯಾದ 2600 ಮೈಲಿ ವಿಸ್ತೀರ್ಣದ ದ ಗ್ರೇಟ್ ಬ್ಯಾರಿಯರ್ ರೀಫ್ ಹಿಂದೆಂದೂ ಕಾಣದ ಬ್ಲೀಚಿಂಗ್ ಅನುಭವಿಸಿದೆ. ಕೆಲವು ವಿಜ್ನ್ಯಾನಿಗಳ ಪ್ರಕಾರ ಈ ಶತಮಾನದ ಕೊನೆಯ ಹೊತ್ತಿಗೆ ಕೊರಲ್ ಗಳು ಸಾಗರಗಳಿಂದ ಕಣ್ಮರೆಯಾಗಲಿದೆ ಎಂಬ ಆತಂಕಕಾರಿ ಅಂಶ ಹೊರಬಿದ್ದಿದೆ. ಕೊರಲ್ ರೀಫ್ ಗಳು ನಾಶವಾದರೆ ಆ ಪರಿಸರ ವ್ಯವಸ್ಥೆಯನ್ನೇ ನೆಚ್ಚಿಕೊಂಡ ಸಾವಿರಾರು ಜೀವ ಪ್ರಭೇದಗಳಿಗೆ ಆಹಾರಕ್ಕೆ ಸಂತಾನೋತ್ಪತ್ತಿ ಗೆ ಕುತ್ತು ಬೀಳುತ್ತದೆ.ಅವುಗಳ ಭವಿಷ್ಯ ಅಂತಂತ್ರದತ್ತ ಸಾಗಿ ಭೂಮಿಯಿಂದಲೇ ಕಣ್ಮರೆಯಾಗಬಹುದು. ಕೊರಲ್ ರೀಫ್ ಗಳು ನಾಶವಾದಲ್ಲಿ ಅದು ಮೀನುಗಾರಿಕೆಯ ಮೇಲೆ ದೊಡ್ಡ ಹೊಡೆತ ನೀಡಿ ಮಾನವ ಸಮಾಜದ ಮೇಲೆ ಹತ್ತು ಹಲವು ಋಣಾತ್ಮಕ ಪರಿಣಾಮ ಬಿರುವುದರಲ್ಲಿ ಸಂದೇಹವಿಲ್ಲ.ಸಾಗರ ಮಾಲಿನ್ಯ ಕೂಡಾ ಕೊರಲ್ ಬ್ಲೀಚಿಂಗ್ ಉಂಟು ಮಾಡಬಹುದು - ಆರೋಗ್ಯಕರ ಕೊರಲ್ ರೀಫ್ ಗಳು ಆರೋಗ್ಯಕರ ಸಾಗರ ಪರಿಸರ ವ್ಯವಸ್ಥೆಯನ್ನು ಬಿಂಬಿಸುತ್ತವೆ
ಸಾಗರಗಳು ಬಹು ವಿಸ್ತೀರ್ಣದ ಭಾಗಗಳು ಹಾಗೂ ಅದರ ಜೀವಿಗಳಿಗೆ ಮಾನವನಿಂದ ಏನೇ ತೊಂದರೆ ಉಂಟಾಗುವುದಿಲ್ಲ ಎಂಬ ಕಲ್ಪನೆ ಸುಳ್ಳು. ಇಂದು ಸಾಗರ ಪರಿಸರ ವ್ಯವಸ್ಥೆಯ ಮೇಲೆ ಮಾನವನ ಹಸ್ತಕ್ಷೇಪ ಎಷ್ಟಿದೆ ಎನ್ನುವುದಕ್ಕೆ ಕೊರಲ್ ಗಳ ದಾರುಣ ಕತೆಯೇ ಸಾಕ್ಷಿ
ಮೇಲೆ ಕಾಣುವ ಚಿತ್ರದಲ್ಲಿ ಪರ್ಪಲ್ ಬಣ್ಣದಲ್ಲಿ ಕಾಣುತ್ತಿರುವುದು ಕೊರಲ್ ಬ್ಲೀಚಿಂಗ್ ಆತಂಕಕಾರಿ ಮಟ್ಟವನ್ನು ತಲುಪಿ ಕೊರಲ್ ಗಳು ಸಾಯಬಹುದಾದ ಪರಿಸ್ಥಿತಿಯನ್ನು ತೋರಿಸುತ್ತದೆ ಸೂಚಿಸುತ್ತದೆ. ರೆಡ್ ಕಲರ್ ನಲ್ಲಿ ಕಾಣುತ್ತಿರುವುದು ಕೂಡಾ ಬ್ಲೀಚಿಂಗ್ ಆಗುತ್ತಿರವ ಕೊರಲ್ ರೀಫ್ ಗಳು. ಜಾಗತಿಕ ತಾಪಮಾನ ಇಳಿಕೆಯಾಗದ ಹೊರತು ಕೊರಲ್ ಗಳ ಉಳಿವನ್ನು ಸಮರ್ಥಿಸಲು ಸಾಧ್ಯವಿಲ್ಲವೆಂದೆನ್ನಿಸುತ್ತದೆ
Data Courtesy - NOAA
Coral images courtesy - Internet

Comments
Post a Comment