Sunday, April 24, 2011

-ಪ್ರಪಂಚದ ಡೆಡ್ಲಿ ರಸ್ತೆಗಳು-
.ನೀವು ಡ್ರೈವಿಂಗ್ ಪ್ರಿಯರಾಗಿದ್ದರೆ ನಿಮಗೆ ಈ ಪೋಸ್ಟ್ ಇಷ್ಟ ಆಗಬಹುದು

.ಪ್ರಪಂಚದಲ್ಲಿನ ಕೆಲವು ಡೆಡ್ಲಿ ರೋಡ್ ಗಳ ಬಗ್ಗೆ ಇಲ್ಲಿ ಪೋಸ್ಟ್ ಮಾಡಿದ್ದೇನೆ

.ಈ ಡೆಡ್ಲಿ ರಸ್ತೆ ಗಳಲ್ಲಿ ಡ್ರೈವ್ ಮಾಡಲು ಮೀಟರ್ ಬೇಕು.ವರ್ಷವೊಂದಕ್ಕೆ ಸಾವಿರಾರು ಜನರನ್ನು ಬಲಿ ತೆಗೆದುಕೊಳ್ಳುವ ಈ ರಸ್ತೆಗಳು ನಿಜಕ್ಕೂ ಡೆಡ್ಲಿ

.ಕೆಲವು ರಸ್ತೆಗಳಂತೂ ರುದ್ರ ರಮಣೀಯ ಪ್ರಕೃತಿಯ ನಡುವೆ ಹಾದುಹೋಗುತ್ತವೆ.ಸ್ವಲ್ಪ ಹಿಡಿತ ತಪ್ಪಿದರೂ ಸಾವು ಕಟ್ಟಿಟ್ಟ ಬುತ್ತಿ

.ಈ ರಸ್ತೆಗಳಲ್ಲಿ ಡ್ರೈವ್ ಮಾಡುವ ಅನುಭವವೇ ವರ್ಣನಾತೀತ....

.ಇನ್ನೇಕೆ ತಡ...ಆ ಡೆಡ್ಲಿ ರಸ್ತೆಗಳನ್ನು ನಮ್ಮ ಕಣ್ಣಿನಲ್ಲೇ ಒಮ್ಮೆ ರೌಂಡ್ ಹೊಡೆದು ಬರೋಣ ಬನ್ನಿ....
 
*The Death Road (Bolivia)

*Guoliang Tunnel Road (China)


*Sichuan-Tibet Highway, China

*Arica to Iquique Road (Chile)


*Coastal Roads, Croatia

*Siberian Road to Yakutsk (Russia)

*James Dalton Highway (Alaska)


*Patiopoulo-Perdikaki Road (Greece)

*Trollstigen (Norway)

*Stelvio Pass Road Trollstigen(Italy)

*Skippers Road (New Zealand)

*Halsema Highway (Philippines)

*Fairy Meadows Road (Pakistan)
 courtesy-www.oddee.com,www.forbes.com,www.toptenz.net
              
.ನೋಡಿದಿರಲ್ವಾ ಡೆಡ್ಲಿ ರಸ್ತೆಗಳನ್ನ.ಈಗ ನಿಮಗೆ ಅನ್ನಿಸುತ್ತಿರಬಹುದು ನಾವು ಕೂಡ ಒಮ್ಮೆ ಇಂತಹ ರಸ್ತೆಯಲ್ಲಿ ಡ್ರೈವ್ ಮಾಡಬೇಕೆಂದು..

.ಈ ಡೆಡ್ಲಿ ರಸ್ತೆಗಳ ಹಾಗು ಇನ್ನೂ ಇತರ ಡೆಡ್ಲಿ ರಸ್ತೆಗಳ ಮನಮೋಹಕ ಇಮೇಜ್ ಗಳನ್ನೂ ನೋಡಬೇಕಾದರೆ ಇಲ್ಲಿಗೆ ಭೇಟಿ ಕೊಡಿ

-Drive safe...ನಿಮ್ಮ ಡ್ರೈವಿಂಗ್ ಇನ್ನೊಂದು ಜೀವಕ್ಕೆ ಟಿಕೆಟ್ ಕೊಡದೆ ಇರಲಿ-

-ಪ್ರಕೃತಿಯನ್ನು ರಕ್ಷಿಸಿ-

Thursday, April 21, 2011

-ಮತ್ತೆ ಬಂದಿದೆ ಭೂ ದಿನ-
.ಮತ್ತೆ ಬಂದಿದೆ ಏಪ್ರಿಲ್ 22 .ನಮ್ಮೆಲರನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು,ನಾವು ಕೊಡುತ್ತಿರುವ ಹಿಂಸೆಯನ್ನು ಸಹಿಸಿಕೊಂಡು ಇಡೀ ವಿಶ್ವದ ಜೀವ ರಾಶಿಗಳನ್ನು ಸಾಕಿ ಸಲಹುತ್ತಿರುವ ಆ ಮಹಾತಾಯಿ ಭೂಮಿಗಾಗಿ ಮೀಸಲಿಟ್ಟ ದಿನ ಏಪ್ರಿಲ್ 22

.ಪ್ರತೀ ವರ್ಷದಂತೆ ಈ ಬಾರಿಯೂ ಪ್ರಕೃತಿ ಪ್ರಿಯರು ಈ ದಿನವನ್ನು ವಿಶೇಷವಾಗಿ ಆಚರಿಸಲು ಕಾಯುತ್ತಿದ್ದಾರೆ

.ಇನ್ನು ಪ್ರತಿಷ್ಟೆಗಾಗಿ ಮಾತ್ರ ಗಿಡ ನೆಡುವ ಕೆಲ ಸಂಘ ಸಂಸ್ಥೆಗಳು ಕೂಡ ನಾಳೆ ವನ (ವಣ) ಮಹೋತ್ಸವ ಆಚರಿಸಲು ರೆಡಿಯಾಗಿದ್ದಾರೆ

.ಈ ಬಾರಿಯ ವಿಶ್ವ ಭೂ ದಿನಕ್ಕೆ ನಮ್ಮ ಕೊಡುಗೆ ಏನು?? ಈ ಪ್ರಶ್ನೆ ನಿಮ್ಮಲ್ಲಿ ಇದ್ದರೆ ಇದಕ್ಕೆ ಪರಿಹಾರವಾಗಿ ಕೆಲವೊಂದು ಟಿಪ್ಸ್ ಗಳನ್ನ ನಾನು ಇಲ್ಲಿ ಪೋಸ್ಟ್ ಮಾಡಿದ್ದೇನೆ

.ಇವುಗಳಲ್ಲಿ ನಿಮಗೆ ಸಾಧ್ಯವಾಗುವ ಕೆಲಸ ಮಾಡಿ ಈ ದಿನವನ್ನು ಅರ್ಥ ಪೂರ್ಣ ದಿನವನ್ನಾಗಿ ಆಚರಿಸಿ.ಯುಗಾದಿ,ಸಂಕ್ರಾಂತಿ ಆಚರಿಸಿದಾಗ ನಿಮಗೆ ಅಷ್ಟು ತೃಪ್ತಿ ದೊರೆಯುತ್ತದೂ ಇಲ್ಲವೂ ಗೊತ್ತಿಲ್ಲ,ಆದರೆ ನೀವು ನಾಳೆ ನೆಟ್ಟ ಒಂದು ಗಿಡ ಬೆಳೆದು ದೊಡ್ಡದಾದರೆ ಅದರಲ್ಲಿ ದೊರೆಯುವ ತೃಪ್ತಿ ಅನನ್ಯವಾದದ್ದು

.so ಈ ಸಾರಿಯ ಭೂ ದಿನಕ್ಕೆ ನೀವು ಏನೇನು ಮಾಡಬಹುದು???ಲೆಟ್ಸ್ ಸೀ

*ಈ ದಿನವನ್ನು ಸಾರ್ಥಕವನ್ನಗಿ ಆಚರಿಸಲು ಇರುವ ಬಹಳ ಒಳ್ಳೆ ಮಾರ್ಗ ಪರಿಸರ ಉಪಯುಕ್ತ ಗಿಡಗಳನ್ನು ನೆಡುವುದು.ನಿಮ್ಮ ಜಾಗದಲ್ಲೋ ಅಥವಾ ಶಾಲಾ ಕಾಲೇಜುಗಳಲ್ಲೋ ಪರಿಸರಕ್ಕೆ ಬೇಕಾದ ಗಿಡಗಳನ್ನು ಬೆಳೆಸಿ.ಕೇವಲ ನಾಳೆ ಗಿಡ ನೆಟ್ಟು ಹೋದರೆ ಸಾಲದು ಆ ಗಿಡ ಒಂದು ಹಂತಕ್ಕೆ ಬೆಳೆಯುವವರೆಗೆ ಅದರ ಜವಾಬ್ಧಾರಿಯನ್ನು ತೆಗೆದುಕೊಳ್ಳಬೇಕು

*ಪ್ರತಿ ನಿತ್ಯ ನಾವು ನಮ್ಮ ವಾಹನಗಳಿಂದ ಈ ಭೂಮಿಗೆ ಎಷ್ಟೊಂದು ಕೊಳೆ ತುಂಬುತ್ತಿದ್ದೇವೆ ಅಲ್ಲವೇ...? atleast ಈ ದಿನದಂದು ನಮ್ಮ ವಾಹನಗಳನ್ನು ರಸ್ತೆಗಿಳಿಸುವುದು ಬೇಡ.ಪ್ರಯಾಣ ಅನಿವಾರ್ಯವಾದರೆ ಸಾರ್ವಜನಿಕ ವಾಹನಗಳನ್ನು ಬಳಸಿ

*ನಾವು ನಮ್ಮ ಮನೆ ಸುತ್ತ ಮುತ್ತಲಿನ ಪ್ರದೇಶವನ್ನು ಮಾತ್ರ ಯಾವಾಗಲು ಮಲಿನವಾಗದಂತೆ ನೋಡಿಕೊಳ್ಳುತ್ತೇವೆ.ಈ ದಿನದಂದು ನಮ್ಮ ಊರಿನಲ್ಲಿ ಹಾಗು ಊರಿನ ಸುತ್ತ ಮುತ್ತ ಪ್ರದೇಶದ ಮಲಿನವಾದ ಸ್ಥಳಗಳನ್ನು ಶುಚಿಗೊಳಿಸೋಣ.ಆ ಮೂಲಕ ನಮ್ಮ ಊರಿನ ಪರಿಸರವನ್ನು ಶುಚಿಯಾಗಿಡೋಣ

*ಈ ಭೂಮಿಗೆ ಅತ್ಯಂತ ಮಾರಕ ಪ್ಲಾಸ್ಟಿಕ್.'ಈ ದಿನದಿಂದ ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆ ಮಾಡುತ್ತೇನೆ' ಎಂಬ ಪ್ರತಿಜ್ಞೆ ಕೈಗೊಳ್ಳೋಣ

*ಈ ಎಲ್ಲ ಕೆಲಸಗಳಿಗಿಂತ ಶ್ರೇಷ್ಟವಾದ ಕೆಲಸ ಯಾವುದು ಗೊತ್ತಾ??? ಅದೇ ಪರಿಸರದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ.ಪರಿಸರ ಉಳಿಸುವ ಬಗ್ಗೆ ನಮಗೆ ತಿಳಿದಷ್ಟು ಮಾಹಿತಿಯನ್ನು ಆದಷ್ಟು ಜನರಿಗೆ ಅರಿವು ಮೂಡುವಂತೆ ತಿಳಿಸಬೇಕು.ಮಕ್ಕಳಲ್ಲಿ ಪರಿಸರ ಪ್ರಜ್ಞೆಯ ಬೀಜವನ್ನು ಬಿತ್ತಬೇಕು.ಈ ದಿನದಂದು ನೀವು ಈ ಅರಿವು ಮೂಡಿಸುವ ಕೆಲಸ ಮಾಡಿದರೆ ಈ ಸಾರಿಯ ಭೂ ದಿನಕ್ಕೆ ನಿಮ್ಮ ಕೊಡುಗೆ ಅಪಾರವಾಗುತ್ತದೆ

*ಆದಷ್ಟು ಪರಿಸರ ಸ್ನೇಹಿ ವಸ್ತುಗಳನ್ನು ಉಪಯೋಗಿಸುವ ಪ್ರತಿಜ್ಞೆ ಕೈಗೊಳ್ಳುವುದು

*ಪರಿಸರಕ್ಕಾಗಿ ದುಡಿಯುವ ಅದೆಷ್ಟೂ ಸಣ್ಣ ಪುಟ್ಟ ಸಂಸ್ಥೆಗಳಿವೆ.ಅವುಗಳಿಗೆ ನಿಮ್ಮ ಕೈಲಾದಷ್ಟು ಹಣ ಸಹಾಯ ಮಾಡಿ

*ನಿಮ್ಮ ಪರಿಸರ ಸ್ನೇಹಿ ಕೆಲಸಗಳು ಬೇರೆಯವರಿಗೂ ಪ್ರೇರಣೆ ತರುವಂತಿರಲಿ

.ಸ್ನೇಹಿತರೆ ಇವಿಷ್ಟು ನನಗೆ ತಿಳಿದ,ವಿಶ್ವ ಭೂ ದಿನದಂದು ನೀವು ಮಾಡಬಹುದಾದ ಕೆಲಸಗಳು.ಇದರ ಹೊರತಾಗಿಯೂ ನಿಮಗೆ ತೋಚುವ ಇನ್ನೂ ಅನೇಕೆ ಕೆಲಸಗಳನ್ನು ಮಾಡಬಹುದು

.ಆದರೆ ದಯವಿಟ್ಟು ಏನೂ ಮಾಡದೆ ಮಾತ್ರ ಇರಬೇಡಿ.ನಮ್ಮೆಲರ ತಾಯಿ ಆ ಭೂಮಿಯ ಋಣ ಸಾಕಷ್ಟು ನಮ್ಮ ಮೇಲಿದೆ.ನಮ್ಮ ಕೈಲಾದ ಪರಿಸರ ಸ್ನೇಹಿ ಕೆಲಸವನ್ನು ಇಂದು ಮಾಡೋಣ.ಸುಮ್ಮನೆ ಈ ಭೂಮಿಯ ಒಳಿತಿಗೆ ನೆರವಾಗದ ದಂಡ ಪಿಂಡಗಳಗೋದು ಬೇಡ

.ಖಂಡಿತ ನೀವು ಈ ಭೂ ದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರಿ ಎಂದು ಭಾವಿಸುತ್ತೇನೆ

-Wish you happy EARTH DAY-

Friday, April 15, 2011

-ಹೆದ್ದಾರಿಯಲ್ಲಿ ಹೆಬ್ಬಾವು-
.ಈ ಹಿಂದೆ ನೀವು ನನ್ನ ಬ್ಲಾಗ್ನಲ್ಲಿ ರಸ್ತೆಯಲ್ಲಿ ಸತ್ತು ಬಿದ್ದ ಹಾವುಗಳ ಚಿತ್ರವನ್ನು ನೋಡಿರಬಹುದು.ರಸ್ತೆ ಅಪಘಾತದಿಂದ ಸಾಯುವ ಹಾವುಗಳ ಸಂಖ್ಯೆಗೇನೂ ಕಡಿಮೆ ಇಲ್ಲ

.ಈ ಸಾರಿ ರಸ್ತೆ ದಾಟುತ್ತಿದ್ದ ಒಂದು ಹಾವು  ನಮ್ಮ ಕ್ಯಾಮೆರೆ ಕಣ್ಣಿಗೆ ಬಿದ್ದಿದೆ.ಅದೂ ಕೂಡ ಒಂದು ಹೆಬ್ಬಾವು

.ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ನಮ್ಮ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕ ಹೆಬ್ಬಾವಿನ Exclusive ಇಮೇಜ್ ಗಳು ಈ ಪೋಸ್ಟ್ನಲ್ಲಿ

.ಈ ಚಿತ್ರಗಳನ್ನು ತೆಗೆದಿದ್ದು ದಿನೇಶ್.j .k-ಹಾವುಗಳನ್ನು ರಕ್ಷಿಸಿ,ಪ್ರಕೃತಿಯನ್ನು ಉಳಿಸಿ-

Saturday, April 9, 2011

-ಮತ್ತೆ ಬಂದನು ಸರ್ಪ ರಾಜನು-
.ನನ್ನ ಬ್ಲಾಗ್ ನಲ್ಲಿ ಹಿಂದಿನ ವರ್ಷದಲ್ಲಿ King Cobra ದ ಬಗ್ಗೆ ಹಲವು ಪೋಸ್ಟ್ ಗಳನ್ನು ಪ್ರಕಟಿಸಿದ್ದೆ

.ಈ ವರ್ಷ ಮತ್ತೆ ನಮ್ಮ king cobra ಕಾಡಿನಿಂದ ಊರಿನತ್ತ ಬಂದಿದ್ದಾನೆ

.ಮನೆಯೊಂದಕ್ಕೆ ವಿಸಿಟ್ ಮಾಡಿದ್ದ king cobra ದ ಕೆಲವು ಸುಂದರ ಇಮೇಜ್ ಗಳು ಈ ಪೋಸ್ಟ್ನಲ್ಲಿ


Image Courtesy-Dinesh.j.k

 -ಪ್ರಕೃತಿಯನ್ನು ರಕ್ಷಿಸಿ-