-ಮತ್ತೆ ಬಂದಿದೆ ಭೂ ದಿನ-
.ಮತ್ತೆ ಬಂದಿದೆ ಏಪ್ರಿಲ್ 22 .ನಮ್ಮೆಲರನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು,ನಾವು ಕೊಡುತ್ತಿರುವ ಹಿಂಸೆಯನ್ನು ಸಹಿಸಿಕೊಂಡು ಇಡೀ ವಿಶ್ವದ ಜೀವ ರಾಶಿಗಳನ್ನು ಸಾಕಿ ಸಲಹುತ್ತಿರುವ ಆ ಮಹಾತಾಯಿ ಭೂಮಿಗಾಗಿ ಮೀಸಲಿಟ್ಟ ದಿನ ಏಪ್ರಿಲ್ 22

.ಪ್ರತೀ ವರ್ಷದಂತೆ ಈ ಬಾರಿಯೂ ಪ್ರಕೃತಿ ಪ್ರಿಯರು ಈ ದಿನವನ್ನು ವಿಶೇಷವಾಗಿ ಆಚರಿಸಲು ಕಾಯುತ್ತಿದ್ದಾರೆ

.ಇನ್ನು ಪ್ರತಿಷ್ಟೆಗಾಗಿ ಮಾತ್ರ ಗಿಡ ನೆಡುವ ಕೆಲ ಸಂಘ ಸಂಸ್ಥೆಗಳು ಕೂಡ ನಾಳೆ ವನ (ವಣ) ಮಹೋತ್ಸವ ಆಚರಿಸಲು ರೆಡಿಯಾಗಿದ್ದಾರೆ

.ಈ ಬಾರಿಯ ವಿಶ್ವ ಭೂ ದಿನಕ್ಕೆ ನಮ್ಮ ಕೊಡುಗೆ ಏನು?? ಈ ಪ್ರಶ್ನೆ ನಿಮ್ಮಲ್ಲಿ ಇದ್ದರೆ ಇದಕ್ಕೆ ಪರಿಹಾರವಾಗಿ ಕೆಲವೊಂದು ಟಿಪ್ಸ್ ಗಳನ್ನ ನಾನು ಇಲ್ಲಿ ಪೋಸ್ಟ್ ಮಾಡಿದ್ದೇನೆ

.ಇವುಗಳಲ್ಲಿ ನಿಮಗೆ ಸಾಧ್ಯವಾಗುವ ಕೆಲಸ ಮಾಡಿ ಈ ದಿನವನ್ನು ಅರ್ಥ ಪೂರ್ಣ ದಿನವನ್ನಾಗಿ ಆಚರಿಸಿ.ಯುಗಾದಿ,ಸಂಕ್ರಾಂತಿ ಆಚರಿಸಿದಾಗ ನಿಮಗೆ ಅಷ್ಟು ತೃಪ್ತಿ ದೊರೆಯುತ್ತದೂ ಇಲ್ಲವೂ ಗೊತ್ತಿಲ್ಲ,ಆದರೆ ನೀವು ನಾಳೆ ನೆಟ್ಟ ಒಂದು ಗಿಡ ಬೆಳೆದು ದೊಡ್ಡದಾದರೆ ಅದರಲ್ಲಿ ದೊರೆಯುವ ತೃಪ್ತಿ ಅನನ್ಯವಾದದ್ದು

.so ಈ ಸಾರಿಯ ಭೂ ದಿನಕ್ಕೆ ನೀವು ಏನೇನು ಮಾಡಬಹುದು???ಲೆಟ್ಸ್ ಸೀ

*ಈ ದಿನವನ್ನು ಸಾರ್ಥಕವನ್ನಗಿ ಆಚರಿಸಲು ಇರುವ ಬಹಳ ಒಳ್ಳೆ ಮಾರ್ಗ ಪರಿಸರ ಉಪಯುಕ್ತ ಗಿಡಗಳನ್ನು ನೆಡುವುದು.ನಿಮ್ಮ ಜಾಗದಲ್ಲೋ ಅಥವಾ ಶಾಲಾ ಕಾಲೇಜುಗಳಲ್ಲೋ ಪರಿಸರಕ್ಕೆ ಬೇಕಾದ ಗಿಡಗಳನ್ನು ಬೆಳೆಸಿ.ಕೇವಲ ನಾಳೆ ಗಿಡ ನೆಟ್ಟು ಹೋದರೆ ಸಾಲದು ಆ ಗಿಡ ಒಂದು ಹಂತಕ್ಕೆ ಬೆಳೆಯುವವರೆಗೆ ಅದರ ಜವಾಬ್ಧಾರಿಯನ್ನು ತೆಗೆದುಕೊಳ್ಳಬೇಕು

*ಪ್ರತಿ ನಿತ್ಯ ನಾವು ನಮ್ಮ ವಾಹನಗಳಿಂದ ಈ ಭೂಮಿಗೆ ಎಷ್ಟೊಂದು ಕೊಳೆ ತುಂಬುತ್ತಿದ್ದೇವೆ ಅಲ್ಲವೇ...? atleast ಈ ದಿನದಂದು ನಮ್ಮ ವಾಹನಗಳನ್ನು ರಸ್ತೆಗಿಳಿಸುವುದು ಬೇಡ.ಪ್ರಯಾಣ ಅನಿವಾರ್ಯವಾದರೆ ಸಾರ್ವಜನಿಕ ವಾಹನಗಳನ್ನು ಬಳಸಿ

*ನಾವು ನಮ್ಮ ಮನೆ ಸುತ್ತ ಮುತ್ತಲಿನ ಪ್ರದೇಶವನ್ನು ಮಾತ್ರ ಯಾವಾಗಲು ಮಲಿನವಾಗದಂತೆ ನೋಡಿಕೊಳ್ಳುತ್ತೇವೆ.ಈ ದಿನದಂದು ನಮ್ಮ ಊರಿನಲ್ಲಿ ಹಾಗು ಊರಿನ ಸುತ್ತ ಮುತ್ತ ಪ್ರದೇಶದ ಮಲಿನವಾದ ಸ್ಥಳಗಳನ್ನು ಶುಚಿಗೊಳಿಸೋಣ.ಆ ಮೂಲಕ ನಮ್ಮ ಊರಿನ ಪರಿಸರವನ್ನು ಶುಚಿಯಾಗಿಡೋಣ

*ಈ ಭೂಮಿಗೆ ಅತ್ಯಂತ ಮಾರಕ ಪ್ಲಾಸ್ಟಿಕ್.'ಈ ದಿನದಿಂದ ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆ ಮಾಡುತ್ತೇನೆ' ಎಂಬ ಪ್ರತಿಜ್ಞೆ ಕೈಗೊಳ್ಳೋಣ

*ಈ ಎಲ್ಲ ಕೆಲಸಗಳಿಗಿಂತ ಶ್ರೇಷ್ಟವಾದ ಕೆಲಸ ಯಾವುದು ಗೊತ್ತಾ??? ಅದೇ ಪರಿಸರದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ.ಪರಿಸರ ಉಳಿಸುವ ಬಗ್ಗೆ ನಮಗೆ ತಿಳಿದಷ್ಟು ಮಾಹಿತಿಯನ್ನು ಆದಷ್ಟು ಜನರಿಗೆ ಅರಿವು ಮೂಡುವಂತೆ ತಿಳಿಸಬೇಕು.ಮಕ್ಕಳಲ್ಲಿ ಪರಿಸರ ಪ್ರಜ್ಞೆಯ ಬೀಜವನ್ನು ಬಿತ್ತಬೇಕು.ಈ ದಿನದಂದು ನೀವು ಈ ಅರಿವು ಮೂಡಿಸುವ ಕೆಲಸ ಮಾಡಿದರೆ ಈ ಸಾರಿಯ ಭೂ ದಿನಕ್ಕೆ ನಿಮ್ಮ ಕೊಡುಗೆ ಅಪಾರವಾಗುತ್ತದೆ

*ಆದಷ್ಟು ಪರಿಸರ ಸ್ನೇಹಿ ವಸ್ತುಗಳನ್ನು ಉಪಯೋಗಿಸುವ ಪ್ರತಿಜ್ಞೆ ಕೈಗೊಳ್ಳುವುದು

*ಪರಿಸರಕ್ಕಾಗಿ ದುಡಿಯುವ ಅದೆಷ್ಟೂ ಸಣ್ಣ ಪುಟ್ಟ ಸಂಸ್ಥೆಗಳಿವೆ.ಅವುಗಳಿಗೆ ನಿಮ್ಮ ಕೈಲಾದಷ್ಟು ಹಣ ಸಹಾಯ ಮಾಡಿ

*ನಿಮ್ಮ ಪರಿಸರ ಸ್ನೇಹಿ ಕೆಲಸಗಳು ಬೇರೆಯವರಿಗೂ ಪ್ರೇರಣೆ ತರುವಂತಿರಲಿ

.ಸ್ನೇಹಿತರೆ ಇವಿಷ್ಟು ನನಗೆ ತಿಳಿದ,ವಿಶ್ವ ಭೂ ದಿನದಂದು ನೀವು ಮಾಡಬಹುದಾದ ಕೆಲಸಗಳು.ಇದರ ಹೊರತಾಗಿಯೂ ನಿಮಗೆ ತೋಚುವ ಇನ್ನೂ ಅನೇಕೆ ಕೆಲಸಗಳನ್ನು ಮಾಡಬಹುದು

.ಆದರೆ ದಯವಿಟ್ಟು ಏನೂ ಮಾಡದೆ ಮಾತ್ರ ಇರಬೇಡಿ.ನಮ್ಮೆಲರ ತಾಯಿ ಆ ಭೂಮಿಯ ಋಣ ಸಾಕಷ್ಟು ನಮ್ಮ ಮೇಲಿದೆ.ನಮ್ಮ ಕೈಲಾದ ಪರಿಸರ ಸ್ನೇಹಿ ಕೆಲಸವನ್ನು ಇಂದು ಮಾಡೋಣ.ಸುಮ್ಮನೆ ಈ ಭೂಮಿಯ ಒಳಿತಿಗೆ ನೆರವಾಗದ ದಂಡ ಪಿಂಡಗಳಗೋದು ಬೇಡ

.ಖಂಡಿತ ನೀವು ಈ ಭೂ ದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರಿ ಎಂದು ಭಾವಿಸುತ್ತೇನೆ

-Wish you happy EARTH DAY-

Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....