-ವಿಶ್ವ ಪರಿಸರ ದಿನ-


.ಮತ್ತೆ ಬಂದಿದೆ ಪ್ರಕೃತಿ ಪ್ರಿಯರ ದಿನ ದಿನ...ಅದೇ ವಿಶ್ವ ಪರಿಸರ ದಿನ

.ನನಗೆ ಕೆಲವರು ಕರೆ ಮಾಡಿ ಪ್ರಕೃತಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ರಕೃತಿಯ slogans ಗಳನ್ನು ನಿಮ್ಮ ಬ್ಲಾಗ್ ನಲ್ಲಿ ಪೋಸ್ಟ್ ಮಾಡಿ ಎಂದು ಕೇಳಿಕೊಂಡಿದ್ದರು.ಈ ತರಹದ ಕನ್ನಡದಲ್ಲಿ ಪ್ರಕೃತಿಯ slogan ಗಳು ಇಂಟರ್ನೆಟ್ ನಲ್ಲಿ ಕಡಿಮೆ ಸಿಗುತ್ತವೆ

.ನನಗೂ ಈ ತರಹದ ಒಂದು ಪೋಸ್ಟ್ ಮಾಡಬೇಕೆಂದೆನಿಸಿ ಹಲವಾರು ಕಡೆ ಹುಡುಕಿ ಒಂದಷ್ಟು,ಹಾಗು ನಾನೇ ಯೋಚನೆ ಮಾಡಿದ ಪ್ರಕೃತಿಯ slogans ಗಳನ್ನು ಇಂದಿನ ವಿಶೇಷ ದಿನದಲ್ಲಿ ಪೋಸ್ಟ್ ಮಾಡಿದ್ದೇನೆ.ಇದು ಹಲವರಿಗೆ ಉಪಯೋಗವಾಗಬಹುದು ಎಂಬುದು ನನ್ನ ನಂಬಿಕೆ

.ಇಲ್ಲಿ ಕೇವಲ 52 slogans ಗಳನ್ನು ಪೋಸ್ಟ್ ಮಾಡಿದ್ದೇನೆ.ನೀವು ಕೊಡ ಇಂತಹ ಪರಿಸರ ವಿಚಾರದ slogans ಗಳನ್ನು ರಚಿಸಿ ನನ್ನ mail id - acct4rag@gmail.com ಗೆ ಕಳುಹಿಸಬಹುದು.ನಾನು ಅವುಗಳನ್ನು ಈ list ಗೆ ಸೇರಿಸುತ್ತೇನೆ




1.‘ಕಂಡ ಕಂಡಲ್ಲಿ ಪ್ಲಾಸ್ಟಿಕ್ ಎಸೆಯುವ ನೀಚ ಬುದ್ದಿಯನ್ನು ಬಿಡಿ’ ‘ಪರಿಸರವನ್ನು ಸ್ವಚ್ಛವಾಗಿಡಿ’


2.’ಒಂದು ಪ್ಲಾಸ್ಟಿಕ್ ಭೂಮಿಯಲ್ಲಿ ಕೊಳೆಯಲು ನೂರಾರು ವರ್ಷ ಬೇಕು’’.
‘’ಪ್ಲಾಸ್ಟಿಕ್ ನ ಮರುಬಳಕೆ ಪ್ರಕೃತಿಯಲ್ಲಿ ಪ್ಲಾಸ್ಟಿಕ್ ಹಾವಳಿ ತಡೆಯಲು ಇರುವ ಒಂದು ಉತ್ತಮ ವಿಧಾನ’’
‘’ತಿಳಿಯಿರಿ,ತಿಳಿಸಿರಿ,ಪ್ರಕೃತಿಯನ್ನು ಉಳಿಸಿರಿ’’


3.‘’ಪ್ರತೀ ವರ್ಷ 1 Million ಗೂ ಹೆಚ್ಚು ಪಕ್ಷಿಗಳು ಪ್ಲಾಸ್ಟಿಕ್ ಸಂಭಂದಿ ಮಾಲಿನ್ಯದಿಂದಾಗಿ ಸಾಯುತ್ತಿವೆ’’
‘’ಈ ಭೂಮಿ ಕೇವಲ ಮಾನವರ ಸ್ವತ್ತಲ್ಲ’’
‘’ಬದುಕಿ,ಬದುಕಲು ಬಿಡಿ’’
‘’ಪರಿಸರ ಉಳಿಸಿ’’


4.‘ತಪ್ಪಿಸದಿದ್ದರೆ ಪರಿಸರ ನಾಶ,ಜೀವಕುಲಕ್ಕೆ ಕಾದಿದೆ ಮಹಾ ವಿನಾಶ’


5.‘ಉಸಿರಾಡಲು ಬೇಕಾದ ಹಸಿರಿನ ಉಸಿರನ್ನೇ ನಿಲ್ಲಿಸದಿರು ಓ ಮಾನವ’


6.‘ಅನ್ನ,ನೀರು,ಗಾಳಿ,ಬದುಕು ಕೊಡುವ ಪರಿಸರಕ್ಕೆ ನಾವು ಕೊಡುತ್ತಿದ್ದೇವೆ ವಿಷಾನಿಲ,ಪ್ಲಾಸ್ಟಿಕ್...ತಿಂದ ಮನೆಗೆ ವಿಷವನ್ನು ನೀಡದಿರು ಮಾನವ’


7.‘ಮಾನವನ ಅತಿಯಾದ ಆಸೆಯ ಫಲ,ಬತ್ತುತ್ತಿದೆ ಅಂತರ್ಜಲ’ ಅಂತರ್ಜಲವನ್ನು ಉಳಿಸಿ’


8.‘ನೀರು ಅಮೂಲ್ಯ,ಜೀವಜಲವನ್ನು ಮಾಲಿನ್ಯಗೊಳಿಸದೆ ಮಿತವಾಗಿ ಬಳಸೋಣ’


9.‘ಒಂದು ಮರ ವರ್ಷವೊಂದಕ್ಕೆ 260 ಪೌಂಡ್ ಆಮ್ಲಜನಕವನ್ನು ಉತ್ಪತ್ತಿ ಮಾಡುತ್ತದೆ’ ಇಷ್ಟು ಅಮೂಲ್ಯವಾದ ಮರಗಳನ್ನು ನಮ್ಮ ಸ್ವಾರ್ಥಕ್ಕೆ ಕಡಿಯುವುದು ಎಂತಾ ಪಾಪದ ಕೆಲಸವಲ್ಲವೇ..???


10.‘ಏರುತ್ತಿದೆ ಜಾಗತಿಕ ತಾಪಮಾನ,ಕುಲಗೆಡುತ್ತಿದೆ ಹವಾಮಾನ,ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಮಾನವನ ಬದುಕೇ ಡೋಲಾಯಮಾನ’ ಪರಿಸರವನ್ನು ರಕ್ಷಿಸಿ


11.‘ಏರುತ್ತಿದೆ ಜನಸಂಖ್ಯೆ,ಇಳಿಯುತ್ತಿದೆ ಅರಣ್ಯಗಳ ಸಂಖ್ಯೆ,ಅರಣ್ಯವಿಲ್ಲದೆ ಬದುಕಿಲ್ಲ ತಿಳಿಯೋ ಓ ಮಂಕೇ.....


12.‘ವನ್ಯಜೀವಿಗಳು ಮಾನವರ ಸ್ವತ್ತಲ್ಲ.ಈ ಭೂಮಿ ಅವುಗಳ ಮನೆ,ಇದನ್ನು ಹಾಳುಗೆಡವದಿರಿ’


13.‘ಏಳಿ,ಎದ್ದೇಳಿ ಪರಿಸರದ ಮೇಲಾಗುತ್ತಿರುವ ಅತ್ಯಾಚಾರವನ್ನು ತಪ್ಪಿಸಿ,ಇಲ್ಲವಾದಲ್ಲಿ ಮೊಂದೊಂದು ದಿನ ಆ ದೇವರೂ ಕೂಡ ನಿಮ್ಮನ್ನು ರಕ್ಷಿಸಲಾರ’


14.‘ವಿಜ್ಞಾನ,ತಂತ್ರಜ್ಞಾನ ಏನಿದ್ದರೇನು ಪ್ರಯೋಜನ,ಮಾನವನಿಗೆ ಮೊದಲು ಬೇಕು ಪರಿಸರ ಉಳಿಸಬೇಕೆಂಬ ಜ್ಞಾನ’


15.‘ಎಗ್ಗಿಲ್ಲದೇ ಸಾಗುತ್ತಿರುವ ಭೂಮಿಯ ಶ್ವಾಶಕೋಶದಂತಿರುವ ಮಳೆಕಾಡಿನ ನಾಶವನ್ನು ತಪ್ಪಿಸದಿದ್ದರೆ ಭೂಮಿಯ ಉಸಿರಾಟ ನಿತು ಹೋದೀತು ಎಚ್ಚರ’


16.‘ಬೆಲೆಕಟ್ಟಲಾಗದ ಪಶ್ಚಿಮ ಘಟ್ಟ ಗಳ ಮೇಲೆ ಬಿದ್ದಿದೆ ಮಾನವನ ಕಣ್ಣು....’ಉಳಿಸದಿದ್ದರೆ ಪಶ್ಚಿಮ ಘಟ್ಟ....ಸಾಮೂಹಿಕವಾಗಿ ನಾವೆಲ್ಲರೂ ಏರಬೇಕಾಗುತ್ತದೆ ಚಟ್ಟ’


17.‘ನಿಮ್ಮ ಮಸ್ತಿ ಮೋಜುಗಳಿಗೆ ವನ್ಯ ಜೀವಿಗಳೇ ಬೇಕೇ?? ನೆನಪಿರಲಿ ಮನುಷ್ಯನ ಸಮೀಪ್ಯವನ್ನು ಯಾವ ವನ್ಯ ಜೀವಿಯೂ ಸಹಿಸುವುದಿಲ್ಲ’


18.‘ವಿಷಯುಕ್ತ ಎಂದು ಹಾವುಗಳನ್ನು ಕೊಲ್ಲದಿರಿ...ಮಾನವನಿಗಿಂತ ವಿಷದ ಹಾವು ಈ ಪ್ರಪಂಚದಲ್ಲೊಂಟೆ???


19.‘ಕಣ್ಮರೆಯಾಗಿವೆ ಗುಬ್ಬಚಿಗಳು,ಕಣ್ಮರೆಯಾಗುತ್ತಿವೆ ಕಾಗೆಗಳು,ಪರಿಸರದ ಆಹಾರ ಸರಪಳಿಯನ್ನು ಕತ್ತರಿಸಿದರೆ ನೀವೂ ಆಗುವಿರಿ ಪರಿಸರದಿಂದಲೇ ಕಣ್ಮರೆ....’


20.‘ಹಣಕ್ಕಾಗಿ ಉರುಳಿಸದಿರಿ ವನ್ಯ ಜೀವಿಗಳ ಹೆಣ,ಈ ಜನ್ಮ ಪೂರ್ತಿ ಪರಿಸರಕ್ಕಾಗಿ ದುಡಿದರೂ ತೀರಿಸಲಾಗದು ಪ್ರಕೃತಿಯ ಋಣ’


21.‘ಪ್ಲಾಸ್ಟಿಕ್ ಎಂಬ ಮಹಾಮಾರಿಯನ್ನು ನಿಯಂತ್ರಿಸದಿದ್ದರೆ ನಾಳೆ ಹೊಟ್ಟೆಗೆ ಅದನ್ನೇ ತಿನ್ನಬೇಕಾದ ಪರಿಸ್ಥಿತಿ ಬರಬಹುದು,ಎಚ್ಚರ’


22.‘ಪ್ರಕೃತಿಯನ್ನು ತಾಯಿ ಎಂದು ಪ್ರೀತಿಸಿ,ದೇವರೆಂದು ಗೌರವಿಸಿ,ಮಗುವೆಂದು ರಕ್ಷಿಸಿ,ಸ್ನೇಹಿತರೆಂದು ಬೆಂಬಲಿಸಿ’


23.‘ಪ್ರಕೃತಿಯನ್ನು ರಕ್ಷಿಸಿ,ಅದು ನಿಮ್ಮನ್ನು ರಕ್ಷಿಸುವುದು’


24.‘ಪರಿಸರವನ್ನು ನಾಶಮಾಡುವ ಜ್ಞಾನವಿಲ್ಲದ ತಂತ್ರಜ್ಞಾನಗಳು ನಮಗೆ ಬೇಕೇ?? ಪ್ರಕೃತಿಯನ್ನು ಉಳಿಸಲು ಬೇಕಾಗಿರುವುದು ಗಿಡ ನೆಡುವ ಕೈಗಳೇ ಹೊರತು,ಗಂಟೆ ಗಟ್ಟಲೆ ಭಾಷಣ ಮಾಡುವ ನಾಲಿಗೆಗಳಲ್ಲ’


25.ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವೇ ನಾವು ಪರಿಸರಕ್ಕೆ ಮಾಡುವ ಮಹದುಪಕಾರ


26.ಕಂಡ ಕಂಡಲ್ಲಿ ಕಸ ಹಾಕುವ,ಉಗುಳುವ ಕೆಟ್ಟ ಚಟವನ್ನು ಬಿಡಿ,ನಿಮ್ಮ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಿ


27.ಕಣ್ಮರೆಯಾಗುತ್ತಿರುವ ಹುಲಿ ಸಂತತಿ ಪರಿಸರದ ಅದೋಗತಿಗೆ ಎತ್ತಿ ಹಿಡಿದ ಕನ್ನಡಿ...ನೆನಪಿರಲಿ ಇಂದು ಹುಲಿಯನ್ನು ರಕ್ಷಿಸಲು ಕೆಲವರಾದರೂ ಇದ್ದಾರೆ..ಪರಿಸರ ನಾಶ ಹೀಗೆ ಮುಂದುವರಿದರೆ ನಾಳೆ ನಿಮ್ಮನ್ನು ರಕ್ಷಿಸಲು ಯಾರೂ ಇರುವುದಿಲ್ಲ


28.ಪರಿಸರದ ಬಗ್ಗೆ ಪ್ರಜ್ಞೆ ಬೆಳೆಸದ ಶಿಕ್ಷಣವೂ ಒಂದು ಶಿಕ್ಷಣವೇ??ಅಂತಹ ಶಿಕ್ಷಣದಿಂದ ಕೇವಲ ಭಕ್ಷಕರನ್ನು ಮಾತ್ರ ರೂಪಿಸಲು ಸಾಧ್ಯ..ರಕ್ಷಕರನ್ನಲ್ಲ


29.ಪರಿಸರವನ್ನು ಪ್ರೀತಿಸಿ...ನಿಮನ್ನು ಒಂಟಿ ಭಾವ ಕಾಡುವುದಿಲ್ಲ...ಪರಿಸರಕ್ಕಾಗಿ ದುಡಿಯಿರಿ..ನೆಮ್ಮದಿ ಮನೋಭಾವ ಸಿಗುತ್ತದೆ.....ಪರಿಸರದ ಬಗ್ಗೆ ಉಳಿದವರಲ್ಲಿ ಪ್ರಜ್ಞೆ ಬೆಳೆಸಿ...ನಿಮ್ಮ ಜೀವನಕ್ಕೊಂದು ಸಾರ್ಥಕತೆ ದೊರೆಯುತ್ತದೆ


30.ದೇಶ,ಭಾಷೆ,ಜಾತಿ.ಧರ್ಮ ಎಲ್ಲವನ್ನೂ ಮೀರಿದ್ದು ಈ ಪ್ರಕೃತಿ...ಪ್ರಕೃತಿಯನ್ನು ಉಳಿಸಿದರೆ ಎಲ್ಲವನ್ನೂ ಬೆಳೆಸಿದಂತೆ...ಪ್ರಕೃತಿಯನ್ನು ನಾಶ ಮಾಡಿದರೆ ಎಲ್ಲವನ್ನೂ ಅಳಿಸಿದಂತೆ


31.ಪ್ರಕೃತಿಯ ಬಗ್ಗೆ ಕಾಳಜಿ ಇರದವರು ಬದುಕಿದ್ದೂ ಸತ್ತಂತೆ

32.ಅತೀ ಸೆಖೆಯಾದರೆ fan,ac ಬಳಸುತ್ತೇವೆ,ಅತೀ ಶೀತವಾದರೆ ಸ್ವೆಟರ್ ಬಳಸುತ್ತೇವೆ ಅದೇ ಭೂಮಿಯೇ ಬಾಯಿ ಬಿಟ್ಟರೆ......???? ಯಾರೂ ಏನೂ ಮಾಡಲಾರರು...ಅದ್ದರಿಂದ ನಮ್ಮ ಗಮನ fan,ac,fridge ಗಿಂತ ಹೆಚ್ಚಾಗಿ ಪ್ರಕೃತಿಯ ರಕ್ಷಣೆ ಮೇಲಿರಲಿ


33.ಪ್ರಕೃತಿಯ ಭಕ್ಷಕರಾಗಬೇಡಿ.......ರಕ್ಷಕರಾಗೋಣ


34.ಈ ಪ್ರಾಕೃತಿಕ ಸಂಪತ್ತು ಅತ್ಯಮೂಲ್ಯವಾದದ್ದು ಇದನ್ನು ಹಾಳುಗೆಡವದಿರಿ ಹುಚಪ್ಪಗಳಿರಾ.......


35.ಪ್ರಕೃತಿಯ ನಾಶ ನಮ್ಮ ವಿನಾಶಕ್ಕೆ ನಾವೇ ಮುನ್ನುಡಿ ಬರೆದಂತೆ

36.ಬಾಯಾರಿದ ಮನುಷ್ಯನಿಗೆ ಒಂದು ಹನಿ ನೀರು ಒಂದು ಚೀಲ ಚಿನ್ನಕ್ಕಿಂತಲೂ ಮುಖ್ಯ.....ನೀರನ್ನು ಮಿತವಾಗಿ ಬಳಸಿ


37.ಒಂದು ಮರದಿಂದ ಒಂದು ಲಕ್ಷ ಬೆಂಕಿಕಡ್ಡಿ ಮಾಡಬಹುದು...ಅದೇ ಒಂದು ಬೆಂಕಿ ಕಡ್ಡಿಯಿಂದ ಒಂದು ಲಕ್ಷ ಮರಗಳು ನಾಶವಾಗಬಲ್ಲವು....ಕಾಡನ್ನು ಬೆಂಕಿಯಿಂದ ರಕ್ಷಿಸಿ


38.ನೀರನ್ನು ಬೇಕಾಬಿಟ್ಟಿ ಬಳಸದಿರಿ,ನಮ್ಮ ಜೀವನ ನಡೆಯುತ್ತಿರುವುದು ಆ ನೀರಿನಿಂದಲೇ ಎಂಬುದನ್ನು ಮರೆಯದಿರಿ


39.ಈ ಪ್ರಪಂಚದ ಕೊನೆಯ ಮರ ನಾಶವಾದಾಗ,ಕೊನೆಯ ನೀರಿನ ಹನಿ ಖಾಲಿಯಾದಾಗ ಮನುಷ್ಯನಿಗೆ ಅರಿವಾಗುತ್ತದೆ ನಾನು ಹಣವನ್ನು ತಿಂದು ಬದುಕಲಾಗುವುದಿಲ್ಲವೆಂದು...


40.ನೀರನ್ನು taste ಮಾಡಿ waste ಮಾಡಬೇಡಿ


41.ಮಾಲಿನ್ಯ cool ಆಗುವುದೆಂದು ನೀನು fool ಆಗಬೇಡ.....


42.ಇಂದು ನಮ್ಮ ಭೂಮಿಯನ್ನು ನಾಳೆಯ ಮಕ್ಕಳಿಗಾಗಿ ರಕ್ಷಿಸೋಣ 


43.ಭೂಮಿಯ ಎರಡನೇ ಮೂರು ಭಾಗದಷ್ಟನ್ನು ನೀರು ಆವರಿಸಿರಬಹುದು..ಆದರೆ ಇದರಲ್ಲಿ ಸಿಹಿ ನೀರಿನ ಪ್ರಮಾಣ ಕೇವಲ 0.002%.ಆದ್ದರಿಂದ ನೀರನ್ನು ಮಿತವಾಗಿ ಬಳಸಿ


44.ಮರುಬಳಕೆಯೇ ಒಳ್ಳೆಯ ನಾಳೆಗಳಿಗೆ ದಾರಿ


45.ಪ್ಲಾಸ್ಟಿಕ್ ಮತ್ತು ಪೇಪರ್ ಗಳನ್ನು ಎಸೆಯುವುದರ ಬದಲು ಮರುಬಳಕೆಗೆ ನೀಡಿ


46.‘ಪರಿಸರ ನಾಶದಿಂದಾದ ಅನಾಹುತವನ್ನು ಸರಿಪಡಿಸಲಾಗುವುದಿಲ್ಲ,ಆದರೆ ಮುಂದಾಗುವ ಅನಾಹುತವನ್ನು ಪರಿಸರ ರಕ್ಷಣೆಯ ಮೂಲಕ ತಪ್ಪಿಸಬಹುದು’


47.ಈ ಪರಿಸರವನ್ನು ಹಸಿರಾಗಿಡಲು ಇರುವ ಮೂರು ಸರಳ ಉಪಾಯಗಳು-Reduce, Reuse, Recycle


48.ನಾಳೆಯನ್ನು ಬದಲಿಸುವ ಶಕ್ತಿ ಇಂದು ನಿಮ್ಮಲಿದೆ....ಪರಿಸರವನ್ನು ರಕ್ಷಿಸಿ


49.ನಮಗಿರುವುದೊಂದೇ ಭೂಮಿ...ಇದನ್ನು ಉಳಿಸಿಕೊಳ್ಳೋಣ


50.ಒಬ್ಬ ಮನುಷ್ಯನು ತನ್ನ ಸರಾಸರಿ ಜೀವಿತಾವದಿಯಲ್ಲಿ 127, 604 ಪೌಂಡ್ ನಷ್ಟು ಕಸವನ್ನು ಈ ಭೂಮಿಗೆ ತುಂಬುತ್ತಾನೆ...ನೀವೇ ಯೋಚಿಸಿ ಭೂಮಿಗೆ ನಮ್ಮ ಕೊಡುಗೆ ಏನು ಎಂದು.....


51.ಖಾಲಿಯಾಗುವ ಸಂಪನ್ಮೂಲಗಳ ಮಿತ ಬಳಕೆ ಮಾಡಿ...ಖಾಲಿಯಾಗದ ಸೌರ ಶಕ್ತಿಯಂತಹ ಸಂಪನ್ಮೂಲಗಳನ್ನು ಹೆಚ್ಚು ಬಳಸೋಣ...ಪರಿಸರವನ್ನು ಉಳಿಸೋಣ

.52ಈ ಭೂಮಿ ಕೇವಲ ಮಾನವರ ಸ್ವತ್ತಲ್ಲ....ಬದುಕಿ ಬದುಕಲು ಬಿಡಿ...ಪ್ರಕೃತಿ ರಕ್ಷಕರಾಗಿ...ನಿಜವಾದ ಹೀರೋಗಳಾಗಿ




.ಇವಿಷ್ಟು ಸದ್ಯಕ್ಕೆ publish ಮಾಡಿದ slogans,ನಿಮ್ಮ slogans ಗಳನ್ನು ಕಳುಹಿಸಲು ಮರೆಯದಿರಿ

.ಅಂದಹಾಗೆ ಇಂದಿನ ವಿಶೇಷ ದಿನವನ್ನು ಪರಿಸರ ಸ್ನೇಹಿ ಕೆಲಸಗಳ ಮೂಲಕ ಸಾರ್ಥಕ ಮಾಡಿಕೊಳ್ಳಿ

.ನಿಮಗೆಲ್ಲರಿಗೂ ವಿಶ್ವ ಪರಿಸರ ದಿನದ ಶುಭಾಶಯಗಳು....


-ಪರಿಸರ ಉಳಿಸಿ-

Comments

Popular posts from this blog

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....