ನಾಗರ ಹಾವು
.ಭಾರತದಲ್ಲಿ ಪೂಜ್ಯ ಭಾವನೆಯಿಂದ ಕಾಣುವ ನಾಗರ ಹಾವಿನ family elapidae
.ಭಾರತದಲ್ಲಿ ಕಾಣ ಸಿಗುವ ಅತ್ಯಂತ 4 ವಿಷಪೂರಿತ ಹಾವುಗಳಲ್ಲಿ ನಾಗರ ಹಾವು ಪ್ರಮುಖವಾದದ್ದು
.ಸಾಮಾನ್ಯವಾಗಿ ನಾಗರಹಾವುಗಳು 6 ಅಡಿಗಿಂತಲೂ ಹೆಚ್ಚು ಬೆಳೆಯಬಲ್ಲವು
.The genus Naja consists of from 20 to 22 species
.ಏಪ್ರಿಲ್ ಮತ್ತು ಜುಲೈ ನಡುವಿನ ಸಮಯದಲ್ಲಿ ಇವು ಮೊಟ್ಟೆ ಇಡುತ್ತವೆ
.ಸಾಮಾನ್ಯವಾಗಿ 12 ರಿಂದ 30 ಮೊಟ್ಟೆ ಇಡುತ್ತವೆ
.ಹುಟ್ಟಿದಾಗಲೇ ಇವು 20 ರಿಂದ 30cm ನಷ್ಟು ಇರುತ್ತವೆ
.ಹುಟ್ಟಿದ ಮರಿಗಳಲ್ಲೇ ವಿಷ ಗ್ರಂಥಿಗಳು ಪೂರ್ತಿಯಾಗಿ ಬೆಳೆದಿರುತ್ತವೆ
.ನಾಗರ ಪಂಚಮಿಯಂತಹ ವಿಶೇಷ ದಿನಗಳಲ್ಲಿ ಇವುಗಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ
.ಇವುಗಳ ವಿಷ neurotoxin ಆಗಿದ್ದು ನರಗಳ ಮೇಲೆ ಪ್ರಭಾವ ಭೀರಿ ಕಚ್ಚಿದ 1 ಗಂಟೆಯೊಳಗೆ ಸಾವು ಸಂಭವಿಸಬಹುದು
.ನೆನಪಿನಲ್ಲಿಡಿ- *ಇವುಗಳು ಎಂದೂ ಸುಮ್ಮನೆ ಕಚ್ಚಲು ಬರುವುದಿಲ್ಲ ,ಇವುಗಳಿಗೆ ತೊಂದರೆಯಾದಾಗ ಮಾತ್ರ ಇವು ಆಕ್ರಮನಕ್ಕಿಳಿಯುತ್ತವೆ *
.ಇವುಗಳ ಆಯಸ್ಸು 20 ವರ್ಷಗಳಿಗಿಂತಲೂ ಜಾಸ್ತಿ
.ರಾತ್ರಿಯಲ್ಲೂ ಇವುಗಳು ಸ್ಪಷ್ಟವಾಗಿ ನೋಡಬಲ್ಲವು
.temperature ನ ಸಣ್ಣ ಬದಲಾವಣೆಯನ್ನು ಕೂಡ ಇವು ಗ್ರಹಿಸಬಲ್ಲವು
.ಇವುಗಳಲ್ಲಿರುವ Jacobsen's Organ ನಿಂದಾಗಿ ಇವುಗಳ ವಾಸನಾ ಶಕ್ತಿ ಅದ್ಭುತವಾಗಿರುತ್ತದೆ
.ಸಾಮಾನ್ಯವಾಗಿ ಇವುಗಳ ಶತ್ರುಗಳು mongoose ಹಾಗು ಎಲ್ಲಾ ಪ್ರಾಣಿಗಳ ಶತ್ರು ಮಾನವ
.ಮನುಷ್ಯ ನ ಆಹಾರವನ್ನು ನಾಶ ಮಾಡುವ ಇಲಿಗಳನ್ನು ಇವುಗಳು ತಿನ್ನುವುದರಿಂದ ಇವುಗಳು ಮಾನವನಿಗೂ ಸಹಕಾರಿ ಹಾಗು ಪರಿಸರಕ್ಕೂ ಸಹಾಯಕಾರಿ
.ಇವುಗಳು ನೆಲದ ಮೂಲಕ ಶಬ್ದವನ್ನು ಗ್ರಹಿಸುತ್ತವೆ
.ಕೆಲವು ಸಲ ಇವು ಮನುಷ್ಯರಿಗೆ ಅಥವಾ ಪ್ರಾಣಿಗಳಿಗೆ ಕಚ್ಚಿದಾಗ ಅದು ವಿಷದ ಕಡಿತವಾಗಿರದೆ dry bite ಸಹಿತ ಆಗಿರಬಹುದು
.ಇವುಗಳು ಕಚ್ಚಿದಾಗ ಕೊಡುವ antivenom ಕೂಡ ಇವುಗಳ ವಿಷದಿಂದಲೇ ತಯಾರಾಗಿರುತ್ತದೆ
.ಇವುಗಳ ಗುಂಪನ್ನು quiver ಎಂದು ಕರೆಯುವರು
.1972 ರ wildlife protection act ನ ಪ್ರಕಾರ ಇವುಗಳನ್ನು ಹಿಡಿದು ಹಿಂಸಿಸುವುದು,ಕೊಲ್ಲುವುದು.ತೊಂದರೆ ಮಾಡುವುದು ಕಾನೂನು ಭಾಹೀರ ಅಪರಾದವಾಗಿದೆ
.ಇತ್ತೀಚಿನ ದಿನಗಳಲ್ಲಿ 'ನಾಗರ ಮಣಿ' ಎಂಬ concept ಬಳಸಿ ಕೆಲವು ಕಳ್ಳ ಕಾಕರು ಇವುಗಳಿಗೆ ತೊಂದರೆ ನೀಡುತ್ತಿದ್ದಾರೆ
.ನಾಗರ ಹಾವು- ಪರಿಸರದ ಸುಂದರ ಜೀವಿಗಳು,ಅವುಗಳಿಗೆ ನೀವು ತೊಂದರೆ ಕೊಡದ ಹೊರತು ನಿಮಗೆ ಅವುಗಳು ತೊಂದರೆ ಮಾಡುವುದಿಲ್ಲ
-ನಾಗರ ಹಾವು ಗಳನ್ನೂ ಪೂಜಿಸಿ,ಗೌರವಿಸಿ ಆದರೆ ನಿಮ್ಮ ಪೂಜೆ ಪುನಸ್ಕಾರಗಳು ಅವುಗಳಿಗೆ ತೊಂದರೆ ಮಾಡದಂತೆ ಇರಲಿ-
.ಈ ಪ್ರಕೃತಿಯಲ್ಲಿ ನಮಗೆಷ್ಟು ಬದುಕುವ ಹಕ್ಕು ಇದೆಯೋ ಅಷ್ಟೇ ಹಕ್ಕು ಇವುಗಳಿಗೂ ಇದೆ
.ನಿಮ್ಮ ವಾಸ ಸ್ಥಳದಲ್ಲಿ ಇವುಗಳು ಬಂದಾಗ ಇವುಗಳಿಗೆ ಹಿಂಸಿಸದೆ ಇವುಗಳನ್ನು ಹಿಡಿಯುವ ಪರಿಸರ ಪ್ರೇಮಿಗಳನ್ನು ಸಂಪರ್ಕಿಸಿ ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿ-ಇದೇ ಅವುಗಳಿಗೆ ನೀವು ಮಾಡುವ ಮಹದುಪಕಾರ
*** ಬದುಕಿ ಬದುಕಲು ಬಿಡಿ***
Tweet
information was gud..great job...
ReplyDeleteThank you sunil..
ReplyDeleteಉತ್ತಮವಾದ ಮಾಹಿತಿ...
ReplyDelete