ನಡು ರಾತ್ರಿಯ ಹಂತಕ

.ಶೃಂಗೇರಿ ಬಳಿಯ ಒಂದು ಹಳ್ಳಿಗೆ ಇತ್ತೀಚಿಗೆ ಒಬ್ಬ ನಡು ರಾತ್ರಿಯ ಹಂತಕ ಭೇಟಿ ನೀಡಿದ್ದ

.ಕಾಡಿನಿಂದ ಆಹಾರ ಅರೆಸುತ್ತಾ ಬಂದಿದ್ದ ಈ ಹಂತಕನ ಕಣ್ಣಿಗೆ ಬಿದ್ದಿದ್ದು ಒಂದು ಅಮಾಯಕ ನಾಯಿ

.ಈ ನಾಯಿ ಒಂದು ಅತ್ಯುತ್ತಮ್ಮ ಭೇಟೆ ನಾಯಿ.ಅದರ ಮನೆಯವರಿಗೆ ಅದರ ಮೇಲೆ ಅತ್ಯಂತ ಪ್ರೀತಿ

.ದುರದೃಷ್ಟವಶಾತ್ ಆ ನಾಯಿಯನ್ನು ಅವರು ಅಂದು ರಾತ್ರಿ ಕಟ್ಟಿ ಹಾಕಿ ಮಲಗಿದ್ದರು.ಹಂತಕನ ದಾರಿಯೂ ಅಂದು ಆ ನಾಯಿ ಇದ್ದ ಮನೆಯ ಹತ್ತಿರಕ್ಕೆ ಬಂದಿತ್ತು

.ಕಟ್ಟಿ ಹಾಕಿದ್ದರಿಂದ ತಪ್ಪಿಸಿಕೊಳ್ಳಲಾಗದ ಆ ನಾಯಿ ಹಂತಕನ ಆಕ್ರಮಣಕ್ಕೆ ಬಲಿಯಾಯ್ತು

.ಇತ್ತೀಚಿನ ದಿನಗಳಲ್ಲಿ ಮಾನವ-ಕಾಡು ಪ್ರಾಣಿಗಳ ಸಂಘರ್ಷ ಹೆಚ್ಚುತ್ತಲೇ ಇದೆ.ಕೆಲವೊಮ್ಮೆ ಈ ಸಂಘರ್ಷದಲ್ಲಿ ಬಲಿಯಾಗುವುದು ಇಂತಹ ಅಮಾಯಕ ಪ್ರಾಣಿಗಳು 

.ಆದರೇ ನಾವಿಲ್ಲಿ ನೆನಪಿಡಬೇಕಾದ ಅಂಶವೆಂದರೆ ಇಂತಹ ಕಾಡು ಪ್ರಾಣಿಗಳು ನಾಡಿಗೆ ಬಂದು ಇಲ್ಲಿನ ಪ್ರಾಣಿಗಳ ಮೇಲೆ ಮುಗಿ ಬೀಳಲು ಕಾರಣಕರ್ತರು ಯಾರು??? ನಾವೇ ಅಲ್ಲವೇ....

.ಈ ನಾಯಿಯನ್ನು ಬಲಿ ತೆಗೆದುಕೊಂಡದ್ದು ಚಿರತೆ  ( ಇದನ್ನೇ ಮಲೆನಾಡಿನಲ್ಲಿ  ಕುರ್ಕ ಎಂದು ಕರೆಯುತ್ತಾರೆ) ಚಿರತೆಯನ್ನೇ ಹೋಲುವ ಇವು ಗಾತ್ರದಲ್ಲಿ ಚಿರತೆಗಳಿಗಿಂತ ಗಾತ್ರದಲ್ಲಿ ಚಿಕ್ಕವಿರುತ್ತವೆ

(.ವಿಶೇಷ ಸೂಚನೆ- ನಾನಿಲ್ಲಿ ಪೋಸ್ಟ್ ಮಾಡಿರುವ ಚಿತ್ರಗಳು ನಿಮ್ಮ ಮನಸ್ಸಿಗೆ ಘಾಸಿಯನ್ನು ಉಂಟುಮಾಡಬಹುದು. ಚಿಕ್ಕ ಮಕ್ಕಳು ಹಾಗು ಮಹಿಳೆಯರು ಈ ಚಿತ್ರವನ್ನು ನೋಡದಿರುವುದು ಒಳಿತು)
















.ಹಂತಕನ ಆಕ್ರಮಣಕ್ಕೆ ಬಲಿಯಾದ ನಾಯಿ

(ಮೂಲ ಚಿತ್ರದ ಬಣ್ಣವನ್ನು ಎಡಿಟ್ ಮಾಡಲಾಗಿದೆ)

 .ಹಂತಕನ ಹೆಜ್ಜೆ ಗುರುತುಗಳು




-ಕಾಡು ಉಳಿಸಿ-ಕಾಡು ಪ್ರಾಣಿಗಳನ್ನು ರಕ್ಷಿಸಿ-





Comments

  1. ಸ್ವಾಮಿ, ಅದು ಜಾಗ್ವಾರ್ (Jaguar) ಅಲ್ಲ, ಚಿರತೆ (Leopard). ಜಾಗ್ವಾರ್ (Panthera onca)ಗಳು ನಮ್ಮ ದೇಶದಲ್ಲಿ ಇಲ್ಲ. ಅವು ದಕ್ಷಿಣ ಮತ್ತು ಮಧ್ಯ ಅಮೆರಿಕದ ಬೃಹತ್ ಬೆಕ್ಕುಗಳು. ಮೇಲ್ನೋಟಕ್ಕೆ ಜಾಗ್ವಾರ್ (Panthera onca) ಮತ್ತು ಚಿರತೆ (Panthera pardus) ಒಂದೇ ರೀತಿ ಕಂಡರೂ ಅವು ಸಂಪೂರ್ಣ ಬೇರೆಯೇ ಪ್ರಭೇದಗಳು. ಹುಲಿ (Panthera tigris) ಮತ್ತು ಸಿಂಹ (Panthera leo) ಹೇಗೆ ಸಂಪೂರ್ಣ ಬೇರೆಯೋ ಜಾಗ್ವಾರ್ ಮತ್ತು ಚಿರತೆಗಳೂ ಬೇರೆ ಬೇರೆ. (ವಿ.ಸೂ. ವೈಜ್ಞಾನಿಕ ನಾಮಧೇಯಗಳನ್ನು 'ಇಟಾಲಿಕ್ಸ್' (ಓರೆ ಅಕ್ಷರ)ಗಳಲ್ಲೇ ಬರೆಯಬೇಕೆಂಬ ನಿಯಮವಿದ್ದರೂ ಈ ಬ್ಲಾಗ್ ಕಾಮೆಂಟ್ ನಲ್ಲಿ ಹಾಗೆ ಬರೆಯಲು ಸಾಧ್ಯವಾಗದಿರುವುದಕ್ಕೆ ವಿಷಾದವಿದೆ).

    ReplyDelete

Post a Comment

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....