-ವಾರೆ ವಾ ವಿದೇಶಿಯರೇ...-
.ಇಂದು ಸಂಜೆ ನಾನು ಕಂಡ ಒಂದು ಕುತೂಹಲಕಾರಿ ಘಟನೆ ಬಗ್ಗೆ ಈ ಪೋಸ್ಟ್ ನಲ್ಲಿ ಬರೆದಿದ್ದೇನೆ.ನಾನು ಇಂದು ಸಂಜೆ ನಮ್ಮೂರಿನ ನದಿಯ ಸಮೀಪ ನಡೆದು ಹೋಗುತ್ತಿರಬೇಕಾದರೆ ಒಂದು ಆಶ್ಚರ್ಯಕರ ಸಂಗತಿ ನೋಡಿದೆ.ಇಬ್ಬರು ವಿದೇಶಿಯರು ನದಿಯ ಸುತ್ತ ಮುತ್ತಲಿನ ಜಾಗದಲ್ಲಿ ಜನರು ಎಸದಿದ್ದ ಪ್ಲಾಸ್ಟಿಕ್,ಕಸ,ಕಡ್ಡಿಗಳನ್ನು ತೆಗುಯುತ್ತಿದರು
.ಅವರ ಬಳಿ ಹೋಗಿ ವಿಚಾರಿಸಿದಾಗ ಅವರು ಹೇಳಿದ ಮಾತು ಕೇಳಿ ಒಂದು ಕ್ಷಣ ನಾನೇ ದಂಗಾಗಿ ಹೋದೆ
.''ನಿಮ್ಮ ಊರು ಎಷ್ಟು ಸುಂದರವಾಗಿದೆ,ಇಂತಹ ಸ್ಥಳದಲ್ಲಿ ಕಸ,ಕಡ್ಡಿ,ಪ್ಲಾಸ್ಟಿಕ್ ಗಳು ಹೆಚ್ಚಾದರೆ ಅದು ಪರಿಸರಕ್ಕೂ ಹಾಗು ಜನರಿಗೂ ತೊಂದರೆಯಾಗುತ್ತದೆ,ಆದ್ದರಿಂದ ನಮ್ಮ ಕೈಲಾದಷ್ಟು ಕಸಗಳನ್ನು ತೆಗೆದು ಶುದ್ದ ಮಾಡುತ್ತಿದ್ದೇವೆ ಎಂದು'' ಇಬ್ಬರು ವಿದೇಶಿಯರು ಹೇಳಿದ ಮಾತಿದು
.ನಮ್ಮ ಊರಿಗೆ ಬರುವ ಪ್ರವಾಸಿಗರು ನದಿಯ ಅಕ್ಕ ಪಕ್ಕದ ಜಾಗದಲ್ಲಿ ಹಲವಾರು ಪ್ಲಾಸ್ಟಿಕ್ ಕಸ ಗಳನ್ನು ಎಸೆದಿರುತ್ತಾರೆ.ದಿನ ನಿತ್ಯ ಕಣ್ಣಿಗೆ ಆ ಕಸಗಳು ಕಂಡರೂ ಯಾರೂ ಅದನ್ನು ತೆಗೆಯಲು ಮನಸ್ಸು ಮಾಡುತ್ತಿರಲಿಲ್ಲ.ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಆ ಕಸಗಳನ್ನು ನೋಡಿದರೂ ತೆಗೆಯಲು ನನ್ನ ಹತ್ತಿರ ಸಾಧ್ಯವಾಗಿರಲಿಲ್ಲ
.ಅಂತಹದರಲ್ಲಿ ಬೇರೆ ಯಾವುದೂ ದೇಶದಿಂದ ಬಂದವರು ಇಲ್ಲಿನ ಕಸ ನೋಡಿ ಅದನ್ನು ತೆಗೆದು ಪರಿಸರ ಶುದ್ದಿ ಮಾಡಿದ್ದು ನಿಜವಾಗಿಯೂ ಅದ್ಭುತವೇ ಸರಿ.ಅವರ ಕೆಲಸ ನೋಡಿ ಉತ್ಸಾಹಗೊಂಡ ನಾನು ನಮ್ಮ ಹುಡುಗರು ಅವರ ಜೊತೆ ಕೈಜೋಡಿಸಿ ಅಲ್ಲಿದ್ದ ಕಸವನೆಲ್ಲಾ ಒಟ್ಟು ಮಾಡಿ ಬೆಂಕಿ ಕೊಟ್ಟೆವು.ಸುತ್ತಲೂ ಗಲೀಜಗಿದ್ದ ಜಾಗ ವಿದೇಶಿ-ಸ್ವದೇಶಿ ಕಾರ್ಯಾಚರಣೆಯ ದೆಸೆಯಿಂದ ಶುದ್ದವಾಗಿತ್ತು
.ನಮ್ಮ ದೇಶದ ಸುಂದರ ಪ್ರಕೃತಿಯ ಬೆಲೆ ನಮಗೆ ಗೊತ್ತಾಗುವುದಿಲ್ಲ,ಪರಿಸರವನ್ನು ಹಾಳು ಮಾಡುವುದು,ಹಾಳಾದ ಪರಿಸರವನ್ನು ಶುದ್ದ ಮಾಡದೆ ಇರುವುದು.ಬೇರೆ ದೇಶದ ಜನ ಇಲ್ಲಿನ ಪರಿಸರದ ಬಗ್ಗೆ ಕಾಳಜಿ ತೋರಿಸುವ ಇಂತಹ ಉದಾಹರಣೆ ನೋಡಿದರೆ ಒಂದು ಕ್ಷಣ ನಮ್ಮ ಜನಗಳ ಬಗ್ಗೆ ಭೇಸರ ಮೂಡುತ್ತದೆ.ಇಂತಹ ಘಟನೆಗಳಿಂದಾದರೂ ಜನ ಎಚ್ಚೆತ್ತು ಪರಿಸರ ರಕ್ಷಣೆಯಲ್ಲಿ ಕೈಜೋಡಿಸಿದರೆ ಅದು ನಿಜವಾಗಿಯೂ ನಮ್ಮ ದೇಶದ ಸೌಭಾಗ್ಯವೇ ಸರಿ
.ನಮ್ಮ ಪರಿಸರದ ಬಗ್ಗೆ ಕಾಳಜಿ ತೂರಿದ ಆ ಇಬ್ಬರು ವಿದೇಶಿಯರಿಗೆ ನನ್ನದೊಂದು ಸಲಾಂ...
.ಈ ಸ್ವದೇಶಿ-ವಿದೇಶಿ ಕಾರ್ಯಾಚರಣೆಯ ಕೆಲವು ಇಮೇಜ್ ಗಳು ನಿಮಗಾಗಿ...
.ಇವರೇ ಆ ಇಬ್ಬರು ವಿದೇಶಿಯರು
ಸ್ವದೇಶಿ-ವಿದೇಶಿ ಕಾರ್ಯಾಚರಣೆಯ ಟೀಂ (ನಾನು ಈ ಚಿತ್ರವನ್ನು ತೆಗೆಯುತ್ತಿದ್ದೆ)
-ಪ್ರಕೃತಿಯನ್ನು ರಕ್ಷಿಸಿ-
ರಘು , ನಮ್ಮ ದೇಶಕ್ಕೆ ಬಂದು ಕಸವನ್ನು ತೆಗದು ಹಾಕಿ ನಮ್ಮ ಪರಿಸರ ಕಾಯ್ದ ಆ ವಿದೇಶಿಯರಿಗೆ ಹಾಗು ಅವರ ಜೊತೆ ಗೂಡಿದ ನಿಮ್ಮ ತಂಡಕ್ಕೆ ನನ್ನ ಆತ್ಮೀಯ ಶುಭಾಶಯಗಳು.ಪರಿಸರ ಪ್ರಜ್ಞೆ ಮೂಡಿಸಿದ ಆ ವಿದೇಶಿಯರು ಅಭಿನಂದನೆಗೆ ಅರ್ಹರು .
ReplyDelete--
ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]
ನಿಮ್ಮ ಮಾತುಗಳಿಗೆ ಧನ್ಯವಾದಗಳು ಬಾಲು ಸರ್....
ReplyDeleteನಂಬಲಸಾಧ್ಯ, ನಮ್ಮಲ್ಲಿನ ಪರಿಸರದ ಬಗ್ಗೆ ಕಾಳಜಿ ವಹಿಸಿ ಸ್ವಚ್ಛಗೊಳಿಸಿದ ವಿದೇಶಿಯರ ಹಾಗು ಅವರೊಂದಿಗೆ ಜೊತೆಗೂಡಿ ಸಹಕರಿಸಿದ ನಿಮ್ಮೆಲ್ಲರ ಪರಿಸರ ಸೇವೆಯು ಶ್ಲಾಘನೀಯ.....
ReplyDeleteನಿಮ್ಮ ಅಭಿಪ್ರಾಯ ಬರೆದಿದಕ್ಕೆ ಧನ್ಯವಾದಗಳು ಉಷ ಮೇಡಂ ...
ReplyDelete