ಭಾರತದ ನ್ಯಾಷನಲ್ ಪಾರ್ಕ್ ಗಳ ಹೆಮ್ಮೆಯ ಹುಲಿಗಳು
.ನಿಮಗೆ ಗೊತ್ತಿರಬಹುದು,ಈಗ ಪ್ರಪಂಚದಲ್ಲಿ ಇರುವ ಹುಲಿಗಳ ಸಂಖ್ಯೆಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಹುಲಿಗಳಿರುವುದು ಭಾರತದಲ್ಲಿ .ಭಾರತದಲ್ಲಿ 98 ನ್ಯಾಷನಲ್ ಪಾರ್ಕ್ ಗಳು ಇದ್ದರೂ ಕೂಡ ಎಲ್ಲಾ ನ್ಯಾಷನಲ್ ಪಾರ್ಕ್ ಗಳಲ್ಲೂ ಹುಲಿಗಳಿಲ್ಲ.ಹುಲಿಗಳು ಹೆಚ್ಚಿರುವ ಕೆಲವು ನ್ಯಾಷನಲ್ ಪಾರ್ಕ್ ಗಳೆಂದರೆ Bandhavgarh ನ್ಯಾಷನಲ್ ಪಾರ್ಕ್ ,ಬಂಡೀಪುರ ಹಾಗು ನಾಗರ ಹೊಳೆ ನ್ಯಾಷನಲ್ ಪಾರ್ಕ್ ,ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ ,ರಣತಂಬೂರ್ ನ್ಯಾಷನಲ್ ಪಾರ್ಕ್ ,ಸುಂದರ್ ಬನ್ಸ್ ನ್ಯಾಷನಲ್ ಪಾರ್ಕ್ .ಈ ನ್ಯಾಷನಲ್ ಪಾರ್ಕ್ ಗಳಲ್ಲಿ ಇರುವ ಕೆಲವು ಹುಲಿಗಳ ಬಗ್ಗೆ ಇಂದು ಬರೆದಿದ್ದೇನೆ.ಈ ಹುಲಿಗಳು ಶಕ್ತಿಶಾಲಿ,ಚಾಣಾಕ್ಷ ಹಾಗು ತಮ್ಮ ನಡವಳಿಕೆಗಳಲ್ಲಿ ಇತರೆ ಹುಲಿಗಳನ್ನು ಮೀರಿಸಿದವು.ಆದ್ದರಿಂದಲೇ ಇವುಗಳು ನಮ್ಮ ದೇಶದ ನ್ಯಾಷನಲ್ ಪಾರ್ಕ್ ನ ಹೆಮ್ಮೆಯ ಹುಲಿಗಳು .ಬನ್ನಿ ಹಾಗಾದರೆ...ಈ ಹೆಮ್ಮೆಯ ಹುಲಿಗಳ ಬಗ್ಗೆ ತಿಳಿಯೋಣ 1) ಸೀತಾ .ಇವಳು ಇದ್ದದ್ದು Bandhavgarh ನ್ಯಾಷನಲ್ ಪಾರ್ಕ್ ನಲ್ಲಿ .ಮಚಲಿಯ ನಂತರ ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಬಾರಿ ಫೋಟೋಗ್ರಫಿ ಗೆ ಒಳಪಟ್ಟ ಸುಂದರಿ ಇವಳು .ತನ್ನ ಜೀವಿತಾವದಿಯಲ್ಲಿ 14 ಮರಿಗಳಿಗೆ ಜನ್ಮ ನೀಡಿದ್ದಾಳೆ,ಅವುಗಳನ್ನು ಬೆಳೆಸಿದ್ದಾಳೆ,ಇವುಗಳಲ್ಲಿ 12 ಹುಲಿಗಳು ಬೆಳೆದು ತಮ್ಮ Territory ಸ್ಥಾಪಿಸಿಕೊಂಡಿವೆ .ಇವಳು 1996 ರಲ್ಲಿ ತನ್ನ 17 ನೇ ವಯಸ್ಸಿನಲ್ಲ...