ನೇಚರ್ wrap-up
.ಪ್ರಿಯ ಪರಿಸರ ಪ್ರೇಮಿ ಮಿತ್ರರೇ ತಮಗೆಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು .2013 ನೇ ವರ್ಷದಲ್ಲಿ ನಮ್ಮ ಬ್ಲಾಗ್ ನಲ್ಲಿ ಪ್ರಕಟಗೊಳ್ಳುತ್ತಿರುವ ಪ್ರಥಮ ಪೋಸ್ಟ್ ಇದು.ಸದಾ ಏನಾದರೊಂದು ಹೊಸ ವಿಷಯವನ್ನು ಹೊತ್ತು ತರುವ ನಮ್ಮ ಬ್ಲಾಗ್ ಈ ವರ್ಷದಲ್ಲೂ ಕೂಡಾ ಹಲವು ಹೊಸ ಪ್ರಕೃತಿಯ ಹೊಸ ವಿಷಯಗಳೊಂದಿಗೆ ಪ್ರಕಟಗೊಳ್ಳಲಿದೆ .ನೇಚರ್ wr a p-up ಅನ್ನುವ ಹೊಸ ಸರಣಿಯ ಪೋಸ್ಟ್ ಗಳ ಮೂಲಕ ಪ್ರಪಂಚದ ಪ್ರಕೃತಿ ಸಂಭಂದ ವಿಚಾರಗಳನ್ನು ಸರಳವಾಗಿ ನಿಮ್ಮ ಮುಂದಿಡುವ ಪ್ರಯತ್ನ ಮಾಡಿದ್ದೇವೆ .ಈ ನೇಚರ್ wr a p-up ಸರಣಿಯ ಪೋಸ್ಟ್ ಗಳು ನಿಮಗೆ ಇಷ್ಟವಾಗಬಹುದು ಎಂದು ಭಾವಿಸಿದ್ದೇವೆ.ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಗಳ ಮೂಲಖ ಬರೆಯಲು ಮರೆಯದಿರಿ ನೇಚರ್ wr a p-up -1 -ವಿಮಾನದಲ್ಲಿ ಪ್ರಯಾಣಿಸಿ ಪ್ರಾಣ ತೆತ್ತ ಹಾವು - .ಆಸ್ಟ್ರೇಲಿಯಾ ದ Scrub python ಹಾವೊಂದು ಹೇ ಗೋ ವಿಮಾನವನ್ನು ಏರಿ ಸುಮಾರು ಒಂದು ಗಂಟೆ ಐವತ್ತು ನಿಮಿಷಗಳ ಕಾಲ ಪ್ರಾಣ ಉಳಿಸಿಕೊಳ್ಳಲು ಹೋರಾಡಿ ಕೊನೆಗೆ ಮರಣವನ್ನಪ್ಪಿದೆ .ಈ ಹಾವು ಆಸ್ಟ್ರೇಲಿಯಾ ದ Cairns ಹಾಗು Papua New Guinea ದ Port Moresby ನಗರ ಗಳ ನಡುವೆ ಹಾರಾಡುವ ವಿಮಾನವೊಂದರ ರೆಕ್ಕೆ ಮೇಲೆ ಹತ್ತಿ ಕುಳಿತಿತ್ತು .ವಿಮಾನ ಟೇಕ್ ಅ...