Posts

Showing posts from 2012

ಬಿಲ್ಟ್ ಫಾರ್ ದಿ ಕಿಲ್

Image
.ಪ್ರಕೃತಿಯ ವಿಚಿತ್ರವೇ ಹಾಗೆ,ಇಲ್ಲಿ ಕೊಲ್ಲುವ ಹಾಗು ಕೊಲ್ಲಲ್ಪಡುವ ಜೀವಿಗಳ ಗಾತ್ರ ಮಹತ್ವದ್ದಾಗಿರುವುದಿಲ್ಲ .ನೋಡಲು ಗಾತ್ರದಲ್ಲಿ ಚಿಕ್ಕವಾಗಿರುವ ಜೀವಿಗಳು ತಮ್ಮ ಗಾತ್ರದ ಎಷ್ಟೋ ಪಟ್ಟು ಹೆಚ್ಚಿನ ಗಾತ್ರದ ಜೀವಿಗಳನ್ನು ಅನಾಯಾಸವಾಗಿ ಕೊಂದು ತಿನ್ನುತ್ತವೆ.ಇಂತಹ ದೃಶ್ಯಗಳನ್ನು ನೋಡಿದಾಗ ಪ್ರಕೃತಿಯ ಮಹಿಮೆಯ ಅರಿವಾಗುತ್ತದೆ .ಇಂತಹುದೇ ಒಂದು ಸನ್ನಿವೇಷವನ್ನು ಈ ಪೋಸ್ಟ್ ನಲ್ಲಿ ಪ್ರಕಟಿಸಿದ್ದೇನೆ.ಚಿಕ್ಕ ಹಾವೊಂದು ದೈತ್ಯ ಕಪ್ಪೆಯ ಮೇಲೆರಗಿ ಅದನ್ನು ತಿಂದ  ಚಿತ್ರಗಳನ್ನು ದಿನೇಶ್ ತಮ್ಮ ಕ್ಯಾಮರದಲ್ಲಿ ಸೆರೆಹಿಡಿದಿದ್ದಾರೆ. .ದಿನೇಶ್ ಹಾಗು  ಈ ಸನ್ನಿವೇಶದ ಮಾಹಿತಿ ನೀಡಿದ ಗೆಳೆಯ ಕಾರ್ತಿಕ್ ರವರಿಗೆ ನಮ್ಮ ಬ್ಲಾಗ್ ಪರವಾಗಿ ಧನ್ಯವಾದಗಳು   -ಪ್ರಕೃತಿಯನ್ನು ರಕ್ಷಿಸಿ-

ಸೈಕ್ಲೋನ್

Image
.ಇತ್ತೀಚೆಗಷ್ಟೇ ಅಮೇರಿಕಾವನ್ನು ತಲ್ಲಣಗೊಳಿಸಿದ ಸ್ಯಾಂಡಿಯಾಗಿರಬಹುದು.... ಭಾರತದಲ್ಲಿ ಬಾರಿ ಸುದ್ದಿ ಮಾಡಿದ್ದ 'ನೀಲಂ' ಆಗಿರಬಹುದು ಮತ್ತು ಸದ್ಯಕ್ಕೆ ಬಂಗಾಳ ಕೊಲ್ಲಿ ಯಲ್ಲಿ ಸೈಕ್ಲೋನ್ ಆಗಿ ಜನ್ಮ ತಳೆಯಲು ಸಿದ್ದವಾಗಿರುವ Depression ಆಗಿರಬಹುದು .. ಇಂತಹ  ಪ್ರಕೃತಿಯ ವಿನಾಶಕಾರಿ ಸೈಕ್ಲೋನ್  ಗಳ ಬಗ್ಗೆ ಬರೆಯಬೇಕೆಂದೆನಿಸಿ ಈ ಪೋಸ್ಟ್ ಬರೆದಿದ್ದೇನೆ .ವಿನಾಶಕಾರಿ ಸೈಕ್ಲೋನ್  ಗಳು ಹೇಗೆ ಜನ್ಮ ತಾಳುತ್ತವೆ ಎಂಬುದೇ ನಮ್ಮಲ್ಲಿ ಹಲವಾರು ಜನಗಳಿಗೆ ಗೊತ್ತಿಲ್ಲ.ಸೈಕ್ಲೋನ್  ಗಳ ಬಗ್ಗೆ ಮಾತನಾಡುವ ನಮಗೆ ಅದು ಹೇಗೆ ಸೃಷ್ಟಿಯಾಗುತ್ತದೆ ಎಂಬುದೇ ಗೊತ್ತಿರುವುದಿಲ್ಲ.ಈ ಪೋಸ್ಟ್ ನಲ್ಲಿ ನಾನು ಸೈಕ್ಲೋನ್  ಗಳು ಹೇಗೆ ಸೃಷ್ಟಿಯಾಗುತ್ತವೆ ಎಂಬುದರ ಬಗ್ಗೆ ಬರೆದಿದ್ದೇನೆ .ಸಾಮಾನ್ಯವಾಗಿ ಸೈಕ್ಲೋನ್  ಗಳ ಹುಟ್ಟಿನ ಹಿಂದೆ ತುಂಬಾ ವಿಜ್ಞ್ಯಾನ ಅಡಗಿದೆ.ಆದರೆ ನಾನು ಇಲ್ಲಿ ತುಂಬಾ ಸರಳವಾಗಿ ಸೈಕ್ಲೋನ್  ಗಳ ಹುಟ್ಟಿನ ಬಗ್ಗೆ ಬರೆದಿದ್ದೇನೆ .ನಮ್ಮ ದೇಶದಲ್ಲಿ ಸೈಕ್ಲೋನ್  ಗಳ ಅರ್ಭಟ ಕಡಿಮೆ ಎಂದೇ ಹೇಳಬೇಕು.ಆದರೆ ಅಮೇರಿಕಾದಂತಹ ದೇಶಗಳಲ್ಲಿ ಸೈಕ್ಲೋನ್  ಎಂದರೆ ಜನರು ನಡುಗುತ್ತಾರೆ.ಅಷ್ಟರ ಮಟ್ಟಿಗೆ ಅಲ್ಲಿ ಸೈಕ್ಲೋನ್  ಗಳು ಅರ್ಭಟಿಸುತ್ತದೆ .ಸಾಮಾನ್ಯವಾಗಿ ಸೈಕ್ಲೋನ್  ಗಳು ಜನನ ತಾಳುವುದು ಭೂಮದ್ಯ ರೇಖೆಯ ಬಿಸಿ ನೀರಿನ ಸಾಗರಗಳಲ್ಲಿ (Warm Ocean Water- ಬಿಸಿಲಿನಿಂದ ಕಾದ ಸಾಗ...

ನಡು ರಾತ್ರಿಯ ಹಂತಕ

Image
.ಶೃಂಗೇರಿ ಬಳಿಯ ಒಂದು ಹಳ್ಳಿ ಗೆ ಇತ್ತೀಚಿಗೆ ಒಬ್ಬ ನಡು ರಾತ್ರಿಯ ಹಂತಕ ಭೇಟಿ ನೀಡಿದ್ದ .ಕಾಡಿನಿಂದ ಆಹಾರ ಅರೆಸುತ್ತಾ ಬಂದಿದ್ದ ಈ ಹಂತಕನ ಕಣ್ಣಿಗೆ ಬಿದ್ದಿದ್ದು ಒಂದು ಅಮಾಯಕ ನಾಯಿ .ಈ ನಾಯಿ ಒಂದು ಅತ್ಯುತ್ತಮ್ಮ ಭೇ ಟೆ ನಾಯಿ.ಅದರ ಮನೆಯವರಿಗೆ ಅದರ ಮೇಲೆ ಅತ್ಯಂತ ಪ್ರೀತಿ .ದುರದೃಷ್ಟವಶಾತ್ ಆ ನಾಯಿಯನ್ನು ಅವರು ಅಂದು ರಾತ್ರಿ ಕಟ್ಟಿ ಹಾಕಿ ಮಲಗಿದ್ದರು.ಹಂತಕನ ದಾರಿಯೂ ಅಂದು ಆ ನಾಯಿ ಇದ್ದ ಮನೆಯ ಹತ್ತಿರಕ್ಕೆ ಬಂದಿತ್ತು .ಕಟ್ಟಿ ಹಾಕಿದ್ದರಿಂದ ತಪ್ಪಿಸಿಕೊಳ್ಳಲಾಗದ ಆ ನಾಯಿ ಹಂತಕನ ಆಕ್ರಮಣಕ್ಕೆ ಬಲಿಯಾಯ್ತು .ಇತ್ತೀಚಿನ ದಿನಗಳಲ್ಲಿ ಮಾನವ-ಕಾಡು ಪ್ರಾಣಿಗಳ ಸಂಘರ್ಷ ಹೆಚ್ಚುತ್ತಲೇ ಇದೆ.ಕೆಲವೊಮ್ಮೆ ಈ ಸಂಘರ್ಷದಲ್ಲಿ ಬಲಿಯಾಗುವುದು ಇಂತಹ ಅಮಾಯಕ ಪ್ರಾಣಿಗಳು  .ಆದರೇ ನಾವಿಲ್ಲಿ ನೆನಪಿಡಬೇಕಾದ ಅಂಶವೆಂದರೆ ಇಂತಹ ಕಾಡು ಪ್ರಾಣಿಗಳು ನಾಡಿಗೆ ಬಂದು ಇಲ್ಲಿನ ಪ್ರಾಣಿಗಳ ಮೇಲೆ ಮುಗಿ ಬೀಳಲು ಕಾರಣಕರ್ತರು ಯಾರು??? ನಾವೇ ಅಲ್ಲವೇ.... .ಈ ನಾಯಿಯನ್ನು ಬಲಿ ತೆಗೆದುಕೊಂಡದ್ದು ಚಿರತೆ  ( ಇದನ್ನೇ ಮಲೆನಾಡಿನಲ್ಲಿ  ಕುರ್ಕ ಎಂದು ಕರೆಯುತ್ತಾರೆ) ಚಿರತೆಯನ್ನೇ ಹೋಲುವ ಇವು ಗಾತ್ರದಲ್ಲಿ ಚಿರತೆಗಳಿಗಿಂತ ಗಾತ್ರದಲ್ಲಿ ಚಿಕ್ಕವಿರುತ್ತವೆ (.ವಿಶೇಷ ಸೂಚನೆ- ನಾನಿಲ್ಲಿ ಪೋಸ್ಟ್ ಮಾಡಿರುವ ಚಿತ್ರಗಳು ನಿಮ್ಮ ಮನಸ್ಸಿಗೆ ಘಾಸಿಯನ್ನು ಉಂಟುಮಾಡಬಹುದು. ಚಿಕ್ಕ ಮಕ್ಕಳು ಹಾಗು ಮಹಿಳೆಯರು ಈ ಚಿತ್ರವನ್ನು ನೋಡದಿರುವುದು ಒಳಿತು) .ಹಂತಕನ ಆಕ್ರಮಣ...

ಡೆಲಿಯಾ ಹೂವುಗಳು

Image
.ಹರಿಹರಪುರದ ಸಮೀಪವಿರುವ ಅಬಂಳಿಕೆಯ ಶ್ರೀಮತಿ ರುಕ್ಮಿಣಿ ಕೃಷ್ಣಪ್ಪನವರ ಆಸಕ್ತಿಯ ಫಲವಾಗಿ ಅವರ ಮನೆಯ ೧೫*೨೦ ಅಡಿಯ ಪುಟಾಣಿ ಅಂಗಳ ಡೆಲಿಯಾ ಹೂಗಳ ವನವಾಗಿದೆ .ಮನೆಯಂಗಳದಲ್ಲಿ ಪ್ಲಾಸ್ಟಿಕ್‌ ಚೀಲಗಳಲ್ಲಿ ಗೊಬ್ಬರ ಮಣ್ಣು ತುಂಬಿ, ಬೇಸಿಗೆಯಲ್ಲಿ ಜೊಪಾನವಾಗಿ ಕಾಪಾಡಿಟ್ಟ ಗೆಡ್ಡೆಗಳನ್ನು ನೆಟ್ಟು, ಆಧಾರ ನೀಡಿ ಬೆಳೆಸಿದ ""ಡೆಲಿಯಾ''  ಆಡು ಭಾಷೆಯಲ್ಲಿ "ಕಮಲ''ವಾಗಿದೆ. .ಅವರ ಚಿಕ್ಕ  ಮಗಳು ಅವುಗಳನ್ನು ಗುರುತಿಸುತ್ತಾಳೆ. ರಾಕ್ಷಸ ಕಮಲ, ನಾಚಿಕೆ ಕಮಲ, ಲಿಲ್ಲ್ಲಿಪುಟ್‌ ಕಮಲ, ದಾಸ ಕಮಲ, ಈರುಳ್ಳಿ ಕಮಲ, ಜೇನು ಗೂಡು ಕಮಲ, ಹಳದಿ ಕಡ್ಡಿ ಕಮಲ, ಗೊರಟೆ ಕಮಲ, ಬೀಟ್ರೂಟ್‌ ಕಮಲ, ಕೋಳಿ ಜುಟ್ಟು ಕಮಲ, ಬಿಳಿಗೊಂಡೆ, ಹಳದಿ ಗೊಂಡೆ, ನೀಲಿ ಗೊಂಡೆ ಕಮಲಗಳೆಂದು ಪಟಪಟನೆ ಹೆಸರಿಸುತ್ತಾಳೆ .ದಾರಿಯಲ್ಲಿ ಸಾಗುವ ಪ್ರಯಾಣಿಕರು ವಾಹನ ನಿಲ್ಲಿಸಿ, ಭೇಟಿ ನೀಡಿ ಹೂಗಳ ಅಂದ ಸವಿಯುವುದು  ಸಾಮಾನ್ಯವಾಗಿದೆ. ಕೃತಕ ಹೂಗಳನ್ನು ತಂದು ಜೊಡಿಸಿಡುವ ಈ ಕಾಲದಲ್ಲಿ, ಚಿಕ್ಕದಾದ ನಮ್ಮ ಜಾಗದಲ್ಲಿ, ನಾವೇ ಬೆಳೆದ ಗಿಡಗಳು ಹೂ ಬಿಟ್ಟಾಗ ಸಿಗುವ ಆನಂದ ಹಣ ಕೊಟ್ಟು ಪಡಯಲು ಅಸಾಧ್ಯವೆನ್ನುತ್ತಾರೆ .ಮಲೆನಾಡಿನ ಹಳ್ಳಿಯ ಮೂಲೆಯಲ್ಲಿ ೩೮ಕ್ಕೂ ಹೆಚ್ಚು ವಿಧಗಳ ಡೆಲಿಯಾ ಹೂಗಳ ಲೋಕ ಸೃಷ್ಟಿಸಿದ ಇವರ ಪ್ರಯತ್ನಕ್ಕೆ  ನಮ್ಮದೊಂದು ಚಿಕ್ಕ ಸಲಾಂ.. ಮಾಹಿತಿ  ಮತ್ತು ಛಾಯಾಚಿತ್ರ: ದಿನೇಶ್‌ ಜಮ್ಮಟಿಗೆ

ಭಾರತದ ನ್ಯಾಷನಲ್ ಪಾರ್ಕ್ ಗಳ ಹೆಮ್ಮೆಯ ಹುಲಿಗಳು

Image
.ನಿಮಗೆ ಗೊತ್ತಿರಬಹುದು,ಈಗ ಪ್ರಪಂಚದಲ್ಲಿ ಇರುವ ಹುಲಿಗಳ ಸಂಖ್ಯೆಯಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಹುಲಿಗಳಿರುವುದು ಭಾರತದಲ್ಲಿ .ಭಾರತದಲ್ಲಿ 98 ನ್ಯಾಷನಲ್ ಪಾರ್ಕ್ ಗಳು ಇದ್ದರೂ ಕೂಡ ಎಲ್ಲಾ ನ್ಯಾಷನಲ್ ಪಾರ್ಕ್ ಗಳಲ್ಲೂ ಹುಲಿಗಳಿಲ್ಲ.ಹುಲಿಗಳು ಹೆಚ್ಚಿರುವ ಕೆಲವು ನ್ಯಾಷನಲ್ ಪಾರ್ಕ್ ಗಳೆಂದರೆ Bandhavgarh ನ್ಯಾಷನಲ್ ಪಾರ್ಕ್ ,ಬಂಡೀಪುರ ಹಾಗು ನಾಗರ ಹೊಳೆ ನ್ಯಾಷನಲ್ ಪಾರ್ಕ್ ,ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ ,ರಣತಂಬೂರ್ ನ್ಯಾಷನಲ್ ಪಾರ್ಕ್ ,ಸುಂದರ್ ಬನ್ಸ್ ನ್ಯಾಷನಲ್ ಪಾರ್ಕ್ .ಈ ನ್ಯಾಷನಲ್ ಪಾರ್ಕ್ ಗಳಲ್ಲಿ ಇರುವ ಕೆಲವು ಹುಲಿಗಳ ಬಗ್ಗೆ ಇಂದು ಬರೆದಿದ್ದೇನೆ.ಈ ಹುಲಿಗಳು ಶಕ್ತಿಶಾಲಿ,ಚಾಣಾಕ್ಷ ಹಾಗು ತಮ್ಮ ನಡವಳಿಕೆಗಳಲ್ಲಿ ಇತರೆ ಹುಲಿಗಳನ್ನು ಮೀರಿಸಿದವು.ಆದ್ದರಿಂದಲೇ ಇವುಗಳು ನಮ್ಮ ದೇಶದ ನ್ಯಾಷನಲ್ ಪಾರ್ಕ್ ನ ಹೆಮ್ಮೆಯ ಹುಲಿಗಳು .ಬನ್ನಿ ಹಾಗಾದರೆ...ಈ ಹೆಮ್ಮೆಯ ಹುಲಿಗಳ ಬಗ್ಗೆ ತಿಳಿಯೋಣ  1) ಸೀತಾ  .ಇವಳು  ಇದ್ದದ್ದು  Bandhavgarh ನ್ಯಾಷನಲ್ ಪಾರ್ಕ್ ನಲ್ಲಿ  .ಮಚಲಿಯ ನಂತರ ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಬಾರಿ ಫೋಟೋಗ್ರಫಿ ಗೆ ಒಳಪಟ್ಟ ಸುಂದರಿ ಇವಳು     .ತನ್ನ ಜೀವಿತಾವದಿಯಲ್ಲಿ 14 ಮರಿಗಳಿಗೆ ಜನ್ಮ ನೀಡಿದ್ದಾಳೆ,ಅವುಗಳನ್ನು ಬೆಳೆಸಿದ್ದಾಳೆ,ಇವುಗಳಲ್ಲಿ 12 ಹುಲಿಗಳು ಬೆಳೆದು ತಮ್ಮ Territory ಸ್ಥಾಪಿಸಿಕೊಂಡಿವೆ  .ಇವಳು 1996 ರಲ್ಲಿ ತನ್ನ 17 ನೇ ವಯಸ್ಸಿನಲ್ಲ...

-ವಿಶ್ವದ ದೈತ್ಯಾಕಾರದ ಗುಹೆ-

Image
ಹೆಸರು-Hang Sơn Đoòng (Mountain River Cave) ಇರುವ ಸ್ಥಳ-Quảng Bình Province,ವಿಯೆಟ್ನಾಂ  ಆಳ-150m / 490ft ಅಗಲ- 9,000m / 30,000ft ಕಂಡು ಹಿಡಿದವರು-Hồ-Khanh in 1991 ವಿಶೇಷತೆ-ಈ ಗುಹೆಯಲ್ಲಿ ಹರಿಯುವ ನದಿ .ವಿಶ್ವದ ಈ ದೊಡ್ಡ ದೈತ್ಯ ಗುಹೆಯ ಸುಂದರ ಚಿತ್ರಗಳು  .Courtesy- Google Images and National Geographic  .ಇ ನ್ನೂ ಈ ತರಹದ ಅದೆಷ್ಟು ವಿಸ್ಮಯಗಳನ್ನು ಹೊಂದಿದೆಯೋ ನಮ್ಮ ಭೂಮಿ ....   .ಈ ಮಾಹಿತಿಯನ್ನು ನಮಗೆ mail ಮಡಿದ ವಿಕ್ರಮ್ ಜೋಯಿಸ್,ಶಿವಮೊಗ್ಗ ರವರಿಗೆ ಧನ್ಯವಾದಗಳು -ಪ್ರಕೃತಿಯನ್ನು ರಕ್ಷಿಸಿ-