Posts

Showing posts from June, 2012
Image
''ಮಚಲಿ -ರಣತಂಬೂರ್ ನ ರಾಣಿ -Lady Of The Lake'' .ಮಚಲಿ- ರಣತಂಬೂರ್ ನ್ಯಾಷನಲ್ ಪಾರ್ಕ್ ನ ಹೆಮ್ಮೆಯ ಹೆಣ್ಣು ಹುಲಿ  .ರಣತಂಬೂರ್ ನ ಸುಂದರ ಪ್ರಕೃತಿಯಲ್ಲಿ ಇರುವ ಕೋಟೆಯ ಸುತ್ತ ಮುತ್ತಲಿನ ಪ್ರದೇಶವನ್ನು ತನ್ನ territory ಯನ್ನಾಗಿಸಿಕೊಂಡಿದ್ದ ಮಚಲಿ ಹುಟ್ಟಿದ್ದು 1997 ನೇ ಇಸವಿಯಲ್ಲಿ  .ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಬಾರಿ  ಕ್ಯಾಮರಾ ಕಣ್ಣುಗಳಲ್ಲಿ ಚಿತ್ರೀಕೃತಗೊಂಡ ಹುಲಿ ನಮ್ಮ ಮಚಲಿ  .ಮಚಲಿಯ ತಾಯಿಯ ಹೆಸರೂ ಕೂಡ  ಮಚಲಿ.ಆದರೆ ಕೆಲವು ಗೊಂದಲಗಳಿಂದ ತಾಯಿಯ ಹೆಸರನ್ನೇ ಇವಳಿಗೂ ಇಡಲಾಯಿತು .ಮೊದಲ ಬಾರಿಗೆ 'Tiger Queen' ಎಂಬ ಡಾಕ್ಯುಮೆಂಟರಿಯ ಮೂಲಖ ಇವಳನ್ನು ಜಗತ್ತಿಗೆ ಪರಿಚಯಿಸಿದ್ದು ನಲ್ಲ ಮುತ್ತು .ಮಚಲಿಯ ವಿಶೇಷತೆ ಅವಳ ಎಡ ಕೆನ್ನೆಯ ಮೇಲಿರುವ ವಿಶೇಷ  ಗುರುತು .ಮಚಲಿಯ territory ಸುಂದರ ಹಾಗು ಜೀವ ವೈವಿದ್ಯತೆಗಳಿಂದ ಕೂಡಿದ ಪ್ರದೇಶ.ಹಲವು ಸಸ್ಯಾಹಾರಿ ಪ್ರಾಣಿಗಳು,ಮೊಸಳೆಗಳು ಇವಳ territory ಯಲ್ಲಿದೆ  .ಇವಳ territory ಯಲ್ಲಿ ಮನುಷ್ಯರ ಪ್ರವೇಶವೂ ಹೆಚ್ಚು.ಪ್ರವಾಸಿಗರ ಜೊತೆಗೆ ಇವಳ territory ಯಲ್ಲಿರುವ ಗಣೇಶನ ದೇವಾಲಕ್ಕೆ ವರ್ಷದಲ್ಲಿ ಮೂರು ದಿನ 5,00,000 ಭಕ್ತಾದಿಗಳು ಆಗಮಿಸುತ್ತಾರೆ.ಆದರೆ ಇವುಗಳಿಂದ ಮಚಲಿ ವಿಚಲಿತವಾಗುವುದಿಲ್ಲ.ಅವಳಿಗೆ ಇದು ಅಭ್ಯಾಸವಾಗಿ ಬಿಟ್ಟಿದೆ  .ಮಚಲಿ ಹುಟ್ಟಿ ಬೆಳೆದು ದೊಡ್ಡವಳಾದ ನಂತರ ಅವಳ ಅಮ್ಮನನ್ನೇ ಸೋಲಿಸಿ ಅಮ್ಮನ territory ಯನ್ನು...