''ಮಚಲಿ -ರಣತಂಬೂರ್ ನ ರಾಣಿ -Lady Of The Lake''
.ಮಚಲಿ- ರಣತಂಬೂರ್ ನ್ಯಾಷನಲ್ ಪಾರ್ಕ್ ನ ಹೆಮ್ಮೆಯ ಹೆಣ್ಣು ಹುಲಿ 

.ರಣತಂಬೂರ್ ನ ಸುಂದರ ಪ್ರಕೃತಿಯಲ್ಲಿ ಇರುವ ಕೋಟೆಯ ಸುತ್ತ ಮುತ್ತಲಿನ ಪ್ರದೇಶವನ್ನು ತನ್ನ territory ಯನ್ನಾಗಿಸಿಕೊಂಡಿದ್ದ ಮಚಲಿ ಹುಟ್ಟಿದ್ದು 1997 ನೇ ಇಸವಿಯಲ್ಲಿ 

.ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಬಾರಿ  ಕ್ಯಾಮರಾ ಕಣ್ಣುಗಳಲ್ಲಿ ಚಿತ್ರೀಕೃತಗೊಂಡ ಹುಲಿ ನಮ್ಮ ಮಚಲಿ 

.ಮಚಲಿಯ ತಾಯಿಯ ಹೆಸರೂ ಕೂಡ  ಮಚಲಿ.ಆದರೆ ಕೆಲವು ಗೊಂದಲಗಳಿಂದ ತಾಯಿಯ ಹೆಸರನ್ನೇ ಇವಳಿಗೂ ಇಡಲಾಯಿತು

.ಮೊದಲ ಬಾರಿಗೆ 'Tiger Queen' ಎಂಬ ಡಾಕ್ಯುಮೆಂಟರಿಯ ಮೂಲಖ ಇವಳನ್ನು ಜಗತ್ತಿಗೆ ಪರಿಚಯಿಸಿದ್ದು ನಲ್ಲ ಮುತ್ತು

.ಮಚಲಿಯ ವಿಶೇಷತೆ ಅವಳ ಎಡ ಕೆನ್ನೆಯ ಮೇಲಿರುವ ವಿಶೇಷ  ಗುರುತು

.ಮಚಲಿಯ territory ಸುಂದರ ಹಾಗು ಜೀವ ವೈವಿದ್ಯತೆಗಳಿಂದ ಕೂಡಿದ ಪ್ರದೇಶ.ಹಲವು ಸಸ್ಯಾಹಾರಿ ಪ್ರಾಣಿಗಳು,ಮೊಸಳೆಗಳು ಇವಳ territory ಯಲ್ಲಿದೆ 

.ಇವಳ territory ಯಲ್ಲಿ ಮನುಷ್ಯರ ಪ್ರವೇಶವೂ ಹೆಚ್ಚು.ಪ್ರವಾಸಿಗರ ಜೊತೆಗೆ ಇವಳ territory ಯಲ್ಲಿರುವ ಗಣೇಶನ ದೇವಾಲಕ್ಕೆ ವರ್ಷದಲ್ಲಿ ಮೂರು ದಿನ 5,00,000 ಭಕ್ತಾದಿಗಳು ಆಗಮಿಸುತ್ತಾರೆ.ಆದರೆ ಇವುಗಳಿಂದ ಮಚಲಿ ವಿಚಲಿತವಾಗುವುದಿಲ್ಲ.ಅವಳಿಗೆ ಇದು ಅಭ್ಯಾಸವಾಗಿ ಬಿಟ್ಟಿದೆ 

.ಮಚಲಿ ಹುಟ್ಟಿ ಬೆಳೆದು ದೊಡ್ಡವಳಾದ ನಂತರ ಅವಳ ಅಮ್ಮನನ್ನೇ ಸೋಲಿಸಿ ಅಮ್ಮನ territory ಯನ್ನು ತನ್ನದಾಗಿಸಿಕೊಂಡಳು 

.ಇವಳು ಅತ್ಯಂತ ಧೈರ್ಯಶಾಲಿ,ಯಾವುದೇ ಸಂಧರ್ಭದಲ್ಲೂ ಸೋಲನ್ನು ಒಪ್ಪಿಕೊಳ್ಳುವವಳಲ್ಲ.ಇವಳ ಈ ಗುಣಗಳೇ ಅವಳನ್ನು ರಣತಂಬೂರ್ ನ ರಾಣಿಯನ್ನಾಗಿ ಮಾಡಿದ್ದು 

.2000 ಹಾಗು 2008 ಇಸವಿಯ ನಡುವಿನಲ್ಲಿ ಇವಳು ಬರೋಬ್ಬರಿ 9 ಕ್ಕೂ ಹೆಚ್ಚು ಮರಿಗಳಿಗೆ ಜನ್ಮ ನೀಡಿದ್ದಾಳೆ  

.2000 ನೇ ಇಸವಿಯಲ್ಲಿ ಅವಳು ಮೊದಲ ಬಾರಿಗೆ  “Bamboo Ram” ಎಂಬ ಶಕ್ತಿಶಾಲಿ ಗಂಡು ಹುಲಿಯ ಜೊತೆ ಸೇರಿ ಎರಡು ಮರಿಗಳಿಗೆ ಜನ್ಮ ನೀಡುತ್ತಾಳೆ .ಈ ಎರಡು ಮರಿಗಳ ಹೆಸರು 'slant ear' ಹಾಗು 'broken tail'

.ಆದರೆ ದುರಾದೃಷ್ಟವಶಾತ್ ಮರಿಗಳ ರಕ್ಷಣೆ ಮಾಡಬೇಕಿದ್ದ Bamboo Ram ಸಾವನ್ನಪ್ಪುತ್ತದೆ .ಈ ಸಮಯದಲ್ಲಿ ಮರಿಗಳ ಸಂಪೂರ್ಣ ರಕ್ಷಣೆ ಮಚಲಿಯ ಮೇಲೆ ಬೀಳುತ್ತದೆ 

.ಈ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸುವ ಅವಳು ಮರಿಗಳನ್ನು ಚೆನ್ನಾಗಿ ಪೋಷಿಸತೊಡಗುತ್ತಾಳೆ

.ಮಚಲಿ ಇನ್ನೊಂದು ಶಕ್ತಿ ಎಂದರೆ ಇವಳ territory ಯಲ್ಲಿದ್ದ ಕೆರೆಯಲ್ಲಿ ಇರುವ ಮೊಸಳೆಗಳ ಜೊತೆ ಇವಳು ನಡೆಸುತ್ತಿದ್ದ ಕಾದಾಟ.ಮಚಲಿ ಒಬ್ಬಳೇ ಒಮ್ಮೆ ಏಳು ಮೊಸಳೆಗಳ ಜೊತೆ ಹೊಡೆದಾಡಿ ಯಶಸ್ವಿಯಾಗುತ್ತಾಳೆ .ಮೊಸಳೆಗಳು ನೀರು ಕುಡಿಯಲು ಬರುವ ಜಿಂಕೆ ಹಾಗು ಸಂಬಾರ್ ಗಳ ಮೇಲೆ ದಾಳಿ ಮಾಡಿ ಅವುಗಳನ್ನು ತಿನ್ನಲು ನೀರಿಗೆ ಎಳೆದಾಗ ಮಚಲಿ ಮೊಸಳೆಗಳ ಮೇಲೆ ದಾಳಿ ಮಾಡಿ ಅವುಗಳ ಬಾಯಿಂದ ಭೇಟೆಯನ್ನು ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾಳೆ.ಇದು ಅವಳ ಚಾಣಾಕ್ಷತನಕ್ಕೆ ಒಂದು ಉದಾಹರಣೆ 

.ಮಚಲಿ ತನ್ನ ಮರಿಗಳನ್ನು ಯಶಸ್ವಿಯಾಗಿ ಬೆಳೆಸುತ್ತಿದ್ದ ಸಂಧರ್ಭದಲ್ಲಿ 'Nick' ಎನ್ನುವ ಇನ್ನೊಂದು ಬಲಿಷ್ಟ ಗಂಡು ಹುಲಿ ಮಚಲಿಯ territory ಗೆ ಪ್ರವೇಶಿಸುತ್ತದೆ.ಇದು ಮಚಲಿ ಯ ಜೊತೆ ಸೇರಲು ಬಯಸಿರುವುದರಿಂದ ಈಗಿರುವ ಮಚಲಿಯ ಮರಿಗಳಿಗೆ ಇದು ತುಂಬಾ ಅಪಾಯಕಾರಿಯಾಗಿ ಪರಿಣಮಿಸುತ್ತದೆ.ಆದರೆ Nick ನಿಂದ ತನ್ನ ಮರಿಗಳಿಗೆ ಅಪಾಯವಾಗದಂತೆ ಚಾಣಾಕ್ಷತೆಯಿಂದ ನಿಭಾಯಿಸುತ್ತಾಳೆ .ಕೊನೆಗೆ Nick ಕಾಟ ಜಾಸ್ತಿಯಾದಾಗ ತನ್ನ ಮರಿಗಳನ್ನು ಬೇರೆಡೆಗೆ ಸಾಗಿಸಿ Nick ಜೊತೆ Territory ಹಂಚಿಕೊಳ್ಳುತ್ತಾಳೆ 

.ಈ ಮರಿಗಳಲ್ಲಿ ಒಂದಾದ Slant Ear ನ ಸುಳಿವು ನಂತರದಲ್ಲಿ ಸಿಗುವುದಿಲ್ಲ .ಇನ್ನೊಂದು ಮರಿ Broken Tail ಯಶಸ್ವಿಯಾಗಿ ರಣತಂಬೂರ್ ನ ಇನ್ನೊಂದು ಭಾಗದಲ್ಲಿ territory ಸ್ಥಾಪಿಸುವ ಲಕ್ಷಣಗಳನ್ನು ತೋರಿಸುತ್ತದೆ .ಆದರೆ ಹಲವು ದಿನಗಳ ನಂತರ ಹೆಣ್ಣು ಹುಲಿಯನ್ನು ಅರಸುತ್ತಾ ಸಾಗುವ ಅದು ರಣತಂಬೂರ್ ನಿಂದ ಹೊರ ಹೋಗಿ ದರ್ರಾ ಎಂಬ ರಕ್ಷಿತಾರಣ್ಯದಲ್ಲಿ ಸಾಗಿ ಒಂದು ದಿನ 'ರಾಜಧಾನಿ Express' ರೈಲಿಗೆ ಸಿಕ್ಕಿ ಪ್ರಾಣ ಬಿಡುತ್ತದೆ 

.ಈ ಸಮಯದಲ್ಲಿ Nick ಜೊತೆ ಸೇರಿದ್ದ ಮಚಲಿ ಎರಡು ವರ್ಷಗಳ ನಂತರ ಮತ್ತೊಮ್ಮೆ ಮೂರು ಮರಿಗಳಿಗೆ ಜನ್ಮ ನೀಡುತ್ತಾಳೆ .ಇದರಲ್ಲಿ ಒಂದು ಮರಿ ಬದುಕುಳಿಯುವುದಿಲ್ಲ .ಉಳಿದ ಎರಡು ಮರಿಗಳ ಹೆಸರು ಜುಮುರು ಹಾಗು ಹೆಣ್ಣು ಮರಿ ಜುಮುರಿ 

.ಎರಡು ವರ್ಷಗಳ ತನಕ ಮರಿಗಳನ್ನು ಪೋಷಿಸುವ ಇವಳು 2004 ರ ಹೊತ್ತಿಗೆ ಇನ್ನೊಂದು ಬಲಿಷ್ಟ ಗಂಡು ಹುಲಿಯೊಂದಿಗೆ ಸೇರುತ್ತಾಳೆ .ಇದನ್ನು 'X Male' ಎಂದು ಗುರುತಿಸಲಾಗಿದೆ .ಈ ಸಮಯದಲ್ಲಿ ಅವಳು ಜುಮುರು ಹಾಗು ಜುಮುರಿಯಿಂದ ದೂರಾಗುತ್ತಾಳೆ 

.ಗಂಡು ಹುಲಿ ಜುಮುರು ರಣತಂಬೂರ್ ನ  Lahpur ಎಂಬ ಬಳಿ ಯಶಸ್ವಿಯಾಗಿ ತನ್ನದೇ territory ಯನ್ನು ಸ್ಥಾಪಿಸುತ್ತಾನೆ .ಆದರೆ ಜುಮುರಿಯ ಸುಳಿವು ಸಿಗುವುದಿಲ್ಲ 

.ಮೊಸಳೆಗಳೊಂದಿಗೆ ಹೋರಾಡುವ ಕಲೆಯನ್ನು ತನ್ನ ಮರಿಗಳಿಗೂ ವರ್ಗಾಯಿಸಿರುತ್ತಾಳೆ ಮಚಲಿ.ಇದಕ್ಕೆ ಉದಾಹರಣೆ ಇವಳ ಮಗ ಜುಮುರು ಒಮ್ಮೆ ಒಂದು ಮೊಸಳೆಯೊಂದಿಗೆ ಕಾದಾಡಿ ಅದನ್ನು ಕೊಂದು ತಿಂದಿರುತ್ತದೆ 

.ಸುಮಾರು 2005 ರ ಹೊತ್ತಿಗೆ ಈ ಮೊಸಳೆಗಳೊಂದಿಗಿನ ಕಾದಾಟದಲ್ಲಿ ಮಚಲಿ ತನ್ನ ಎರಡು ಹಲ್ಲುಗಳನ್ನು ಕಳೆದುಕೊಂಡಿರುತ್ತದೆ .ಈ ಸಮಯಕ್ಕಾಗಲೇ ಇನ್ನು ಮಚಲಿಗೆ ಮರಿಗಳನ್ನು ಸಾಕುವುದು ಅಸಂಭವ ಎಂದು ಅಲ್ಲಿನ ಜನರು ತಿಳಿದಿರುತ್ತಾರೆ 

.2005 ರಲ್ಲಿ ಮತ್ತೆ ಮಚಲಿ ಎರಡು ಮರಿಗಳಿಗೆ ಜನ್ಮ ನೀಡುತ್ತಾಳೆ.ಇದರಲ್ಲಿ ಒಂದು ಗಂಡು ಹಾಗು ಇನ್ನೊಂದು ಹೆಣ್ಣು ಹುಲಿ 

.ಗಂಡು ಹುಲಿಗೆ ಬಹದ್ದೂರ್ ಎಂದೂ ಹೆಣ್ಣು ಹುಲಿಗೆ ಶರ್ಮೀಲಿ ಎಂದು ಹೆಸರಿಡಲಾಗುತ್ತದೆ 

.ಈ ಎರಡೂ ಮರಿಗಳನ್ನು ಭೇಟಿಯಾಗಲು X male ಕೆಲಮೊಮ್ಮೆ ಮಚಲಿಯ territory ಗೆ ಬರುತ್ತಿರುತ್ತದೆ.ತಮ್ಮ ತಂದೆ ಹಾಗು ತಾಯಿ ಮಚಲಿ ಯ ಜೊತೆಗಿನ ಮರಿಗಳ ಒಡನಾಟ ಅತ್ಯಂತ ಅದ್ಭುತವಾಗಿರುತ್ತದೆ 

.ತನ್ನ ಎರಡು ಹಲ್ಲುಗಳನ್ನು ಕಳೆದುಕೊಂಡರೂ ಕೂಡ ಮಚಲಿ ಈ ಎರಡು ಮರಿಗಳನ್ನು ಅತ್ಯಂತ ಯಶಸ್ವಿಯಾಗಿ ಸಾಕುತ್ತಾಳೆ 2006 ರ ಅಕ್ಟೋಬರ್ ವರೆಗೆ ಈ ಮರಿಗಳ ಜೊತೆಗೆ ಇರುವ ಮಚಲಿ ಎಲ್ಲರಿಗೂ ಆಶ್ಚರ್ಯವಾಗುವಂತೆ ಇದೇ ವರ್ಷದ ಮಾನ್ಸೂನ್ ನಲ್ಲಿ ಮತ್ತೆ ಮೂರು ಮರಿಗಳಿಗೆ ಜನ್ಮ ನೀಡುತ್ತಾಳೆ 

.ಈ ಮೂರು ಮರಿಗಳನ್ನು ತನ್ನ ಎರಡು ಹಲ್ಲುಗಳನ್ನು ಕಳೆದುಕೊಂಡೇ ಸಾಕುವ ಮಚಲಿ ನಿಜವಾಗಿಯೂ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸುತ್ತಾಳೆ

.ಈ ಮೂರು ಮರಿಗಳಲ್ಲಿ ಎರಡು ಹೆಣ್ಣು ಹುಲಿಗಳು. ಇದರಲ್ಲಿ ಒಂದು ನಾನು ಈಗಾಗಲೇ ಬ್ಲಾಗ್ ನಲ್ಲಿ ಬರೆದಿರುವ 'ಬಘಾನಿ' ಇನ್ನೊಬ್ಬಳು T-17 ಅಥವಾ ಸುಂದರಿ 

.ಈ ಮರಿಗಳು ದೊಡ್ಡದಾದ ನಂತರ ಸುಂದರಿ ತನ್ನ ಅಮ್ಮ ಮಚಲಿಯಿಂದ territory ಯನ್ನು ಕಿತ್ತುಕೊಳ್ಳುತ್ತಾಳೆ.ಬಘಾನಿಯನ್ನು ಹುಲಿ ಯೋಜನೆಗಾಗಿ ಸರಿಸ್ಕಾಗೆ ಕರೆದೊಯ್ಯಲಾಗಿದೆ 

.ಮಚಲಿ ಗೆ ಈಗ 15 ವರ್ಷಗಳು.ಸುಮಾರು ಹತ್ತಕ್ಕೂ ಹೆಚ್ಚು ವರ್ಷಗಳ ಕಾಲ ರಣತಂಬೂರ್ ನ ತನ್ನ territory ಅನ್ನು ಆಳಿದ ಅವಳು ಈಗ ಎಲ್ಲಾ ಹಲ್ಲುಗಳನ್ನು ಕಳೆದುಕೊಂಡಿದ್ದಾಳೆ .ಅವಳು ಈಗ ಸಣ್ಣ ಪುಟ್ಟ ಪ್ರಾಣಿಗಳ ಮೇಲಷ್ಟೇ ಮುಗಿ ಬೀಳಲು ಸಮರ್ಥಳು .ಆದರೆ ರಣತಂಬೂರ್ ನ ರಾಣಿಯ ಕಷ್ಟಕ್ಕೆ ನೆರವಾಗಲು ಅರಣ್ಯ ಇಲಾಖೆಯವರು ದಿನಂಪ್ರತಿ ಅವಳಿಗೆ ಊಟವನ್ನು ಒದಗಿಸುತ್ತಿದೆ .ಹಾಗು ಅವಳ ಮೇಲೆ ನಿಗಾ ಇಡಲು ಒಂದು ಟೀಂ ಸದಾ ಅವಳ ಬೆನ್ನ ಹಿಂದೆಯೇ ಇರುತ್ತದೆ 

.ಇವಳನ್ನು ನೋಡಲು ಬರುವ ಪ್ರವಾಸಿಗರಿಂದಲೇ ಸುಮಾರು 10 ಮಿಲಿಯನ್ ಆದಾಯವನ್ನು ಇವಳು  ಅರಣ್ಯ ಇಲಾಖೆಗೆ ಕರುಣಿಸಿದ್ದಾಳೆ 

.ಇಂದು ರಣತಂಬೂರ್ ನಲ್ಲಿರುವ ಸುಮಾರು 40 ಹುಲಿಗಳ ಪೈಕಿ ಹಲವು ಹುಲಿಗಳಲ್ಲಿ ಹರಿಯುತ್ತಿರುವ ರಕ್ತ ಮಚಲಿಯದ್ದು 

.ರಣತಂಬೂರ್ ನಲ್ಲಿ ಹುಲಿಗಳ ಅಭಿವೃದ್ದಿಗೆ ಮಚಲಿಯ ಕೊಡುಗೆ ಅಪಾರ.ಹಲವು ಕಷ್ಟದ ಪರಿಸ್ಥಿತಿಯಲ್ಲಿ ಕೂಡಾ ಯಶಸ್ವಿಯಾಗಿ ತನ್ನ ಜೀವನವನ್ನೂ ಹಾಗು ತನ್ನ ಮರಿಗಳ ಜೀವವನ್ನು ರಕ್ಷಿಸಿ ಅವುಗಳನ್ನು ಯಶಸ್ವಿಯಾಗಿ ಬೆಳಸಿದ ಮಚಲಿ ನಿಜಕ್ಕೂ ಒಬ್ಬಳು ಯಶಸ್ವಿ ತಾಯಿ ,ಅಸಾಧಾರಣ ಹುಲಿ,ಭಾರತದ ಹುಲಿ ಲೋಕದ ರಾಣಿ ಇವಳು,ರಣತಂಬೂರ್ ನ ಹೆಮ್ಮೆ 

.ಇಂತಹ ಅದ್ಭುತ ರಾಣಿ ಇಂದು ತನ್ನ ಜೀವನದ ಕೊನೆಯ ಕ್ಷಣಗಳನ್ನು ಕಳೆಯುತ್ತಿದ್ದಾಳೆ .ಅವಳಿಗೆ ಕಷ್ಟಕರವಲ್ಲದ ಸಾವು ಬರಲಿ ಹಾಗು ಅವಳಿಂದ ಹುಟ್ಟಿ ಬೆಳೆದ ಮುಂದಿನ ಪೀಳಿಗೆಯ ಹುಲಿಗಳು ಇವಳಷ್ಟೇ ಶಕ್ತಿ ಸಾಮರ್ಥ್ಯ ಚಾಣಾಕ್ಷತೆಯಿಂದ ಕೂಡಿ ರಣತಂಬೂರ್ ನ ಹುಲಿ ಲೋಕವನ್ನು ವೃದ್ದಿಸಲಿ ಎಂದು ಬಯಸೋಣ 
                                photo by Bina Kak, Rajasthan Minister for Forest and Environment

Finlay A Hats Off To The 'Queen Of Ranthambhore- Machli' 

-ಪ್ರಕೃತಿಯನ್ನು ರಕ್ಷಿಸಿ-

Comments

  1. Great! ಮಚಲಿಯ ಸಾಹಸಮಯ ಬದುಕು ನಿಜಕ್ಕೂ ಗ್ರೇಟ್

    ReplyDelete
  2. ರಾಗು ಮಚಲಿಯ ಕಥೆ ತುಂಬಾ ಚೆನ್ನಾಗಿದೆ ನನಗಂತೂ ತುಂಬಾ ಇಷ್ಟ ಆಯಿತು ನಾನು ಮಚಲಿಯ ಅಭಿಮಾನಿ ಈಗ

    ReplyDelete
  3. hm ಮನು..ನಾನು ಕೂಡ ಅವಳ ಅಭಿಮಾನಿ.ನಿಮ್ಮ ಕಮೆಂಟ್ ಗಾಗಿ ಧನ್ಯವಾದಗಳು

    ReplyDelete
  4. ಮಚಲಿಯ ಧೈರ್ಯ-ಸಾಹಸಮಯ ಜೀವನ ತುಂಬಾ ಚೆನ್ನಾಗಿತ್ತು, ಮಚಲಿ ಗ್ರೇಟ್

    ReplyDelete

Post a Comment

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....