ಬನ್ನೇರುಘಟ್ಟದ ಆನೆಗಳ ಜಾಡಿನಲ್ಲಿ
.ನಿಮಗೆಲ್ಲಾ ಗೊತ್ತಿರಬಹುದು,ಇತ್ತೀಚೆಗಷ್ಟೇ ಬನ್ನೇರುಘಟ್ಟ ದಲ್ಲಿ ಪ್ರವಾಸ ಹೋಗಿ ಆನೆ ದಾಳಿಯಿಂದ ಒಬ್ಬರು ಟೆಕ್ಕಿ ಪ್ರಾಣ ಕಳೆದುಕೊಂಡರು .ಈ ಘಟನೆ ನೆನೆದಾಗ ಬನ್ನೇರುಘಟ್ಟದಲ್ಲಿ ಇರುವ ಆನೆಗಳು ಹಾಗು ಒಮ್ಮೆ ನಾವು ಈ ಆನೆಗಳ ಜಾಡಿನಲ್ಲಿ ಚಾರಣಕ್ಕೆ ತೆರಳಿದ ಘಟನೆಯನ್ನು ಬ್ಲಾಗ್ ನಲ್ಲಿ ಪೋಸ್ಟ್ ಮಾಡಬಹುದು ಎಂಬ ಯೋಚನೆ ಬಂದಿತು .ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಅಷ್ಟೇನೂ ದೊಡ್ದದಲ್ಲದ ಒಂದು ವನ್ಯ ಜೀವಿಗಳಿಂದ ಕೂಡಿದ ಪ್ರದೇಶ .ಸುಮಾರು 25,000 ಎಕರೆ (ಸರಿ ಸುಮಾರು 104.27 ಕಿಲೋಮೀಟರ್) ಯಷ್ಟು ವಿಸ್ತೀರ್ಣ ಹೊಂದಿರುವ ಇದು ಆ ನೆಗಳ ನೆಲೆಬೀಡು .ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ನ ಮಿತಿಯಲ್ಲಿ ಕೇವಲ ವನ್ಯ ಜೀವಿಗಳಲ್ಲದೆ ಹಲವು ಹಳ್ಳಿಗಳೂ ಹಾಗು ಅಲ್ಲಿ ವಾಸಿಸುವ ಜನಸಾಮಾನ್ಯರ ಹೊಲ ಗದ್ದೆಗಳೂ ಇವೆ.ಇದು ಮಾನವ ಹಾಗು ಆನೆಗಳ ನಡುವಿನ ತಿಕ್ಕಾಟಕ್ಕೆ ಪ್ರಮುಖ ಕಾರಣ .ನಮಗೆಲ್ಲಾ ಗೊತ್ತಿರುವಂತೆ ಆನೆಗಳು ಕೇವಲ ಒಂದೇ ಪ್ರದೇಶದಲ್ಲಿ ವಾಸಿಸುವ ಪ್ರಾಣಿಗಳಲ್ಲ,ಬದಲಾಗಿ ಆಹಾರ ಮತ್ತು ನೀರಿನ ಹುಡುಕಾಟದಲ್ಲಿ ನಿರಂತರವಾಗಿ ಚಲನೆಯಲ್ಲಿರುತ್ತವೆ .ಪ್ರಮುಖವಾಗಿ ಬನ್ನೇರುಘಟ್ಟದ ಈ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಹೊಲಗಳಲ್ಲಿ ಹೆಚ್ಚಾಗಿ ರಾಗಿ ಬೆಳೆಯುತ್ತಾರೆ,ಈ ರಾಗಿಯ ಕುಡಿಯಲ್ಲಿ ಇರುವ ಪ್ರೋಟೀನ್ ಯುಕ್ತ ಅಂಶವು ಆನೆಗಳಿಗೆ ಬಹಳ ಪ್ರಿಯ.ಕಾಲ ಕಾಲದಿಂದ ಅವುಗಳ ವಂಶವಾಹಿನಿಯಲ್ಲೇ ಈ ಗುಣಗಳು ಸಾಗಿ ಪ್ರತಿಯೊಂದು ಆನೆಯೂ ಈ ರಾಗಿಯ ಚಿಗುರನ್ನು ತು...