ಚಿರಾಪುಂಜಿ,ಮಳೆ ನಾಡು
.ಚಿರಾಪುಂಜಿ-ಭಾರತದಲ್ಲೇ ಅತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶ.ಪ್ರಪಂಚದಲ್ಲೇ ಎರಡನೆಯ ಅತ್ಯಂತ ತೆವ (ಒದ್ದೆ) ಪ್ರದೇಶ
.ಮೇಘಾಲಯದ ಈಸ್ಟ್ ಖಾಸಿ ಹಿಲ್ ಜಿಲ್ಲೆಯಲ್ಲಿದೆ ಈ ಮಳೆಯ ನಾಡು
.ಇದೇ ಜಿಲ್ಲೆಯಲ್ಲಿ ಬರುವ Mawsynram ಎಂಬುವ ಪ್ರದೇಶ ಸದ್ಯಕ್ಕೆ ಪ್ರಪಂಚದ ಮೊದಲ ಅತ್ಯಂತ ತೇವ ಪ್ರದೇಶ
.ಚಿರಾಪುಂಜಿಯ ನೈಜ ಹೆಸರು ಸೊಹ್ರ.ಇದುಶಿಲಾಂಗ್ ನಿಂದ 65km ದೂರದಲ್ಲಿದೆ
.ಚಿರಾಪುಂಜಿ ಎಂದರೆ 'ಕಿತ್ತಳೆಗಳ ನಾಡು' ಎಂದು
.ಚಿರಾಪುಂಜಿ ಸಮುದ್ರ ಮಟ್ಟದಿಂದ 4500 ಅಡಿ ಎತ್ತರದಲ್ಲಿದೆ
.ಚಿರಾಪುಂಜಿಯ ಕಣಿವೆಗಳು ಹಲವು ಸ್ಥಳೀಯ ಪ್ರಭೇದದ ಗಿಡ ಮರಗಳ ಆಶ್ರಯ ಸ್ಥಾನವಾಗಿದೆ.ಮೇಘಾಲಯದ ಉಪ ಉಷ್ಣ ವಲಯದ ಕಾಡುಗಳು ಈ ಕಣಿವೆಗಳಲ್ಲಿ ಕಂಡುಬರುತ್ತದೆ
.ಇಲ್ಲಿ ಬೀಳುವ ವಾರ್ಷಿಕ ಮಳೆಯ ಸರಾಸರಿ ಪ್ರಮಾಣ -11,777 ಮಿಲಿಮೀಟರ್ , Mawsynram ನಲ್ಲಿ ಬೀಳುವ ಮಳೆಯ ಪ್ರಮಾಣ 11,873 ಮಿಲಿಮೀಟರ್
.ಚಿರಾಪುಂಜಿಯು ನೈರುತ್ಯ ಹಾಗು ಈಶಾನ್ಯ ಮಾನ್ಸೂನ್ ಮಾರುತಗಳೆರಡರ ಪ್ರಭಾವಕ್ಕೆ ಒಳಗಾಗಿರುವುದರಿಂದ ಇಲ್ಲಿ ಒಂದೇ ಮಾನ್ಸೂನ್ ಋತುವಿರುತ್ತದೆ
.ಚಳಿಗಾಲದಲ್ಲಿ ಬ್ರಹ್ಮ ಪುತ್ರ ಕಣಿವೆಗಳಿಂದ ಬೀಸುವ ಈಶಾನ್ಯ ಮಾರುತಗಳು ಇಲ್ಲಿ ಮಳೆಯನ್ನು ಸುರಿಸುತ್ತವೆ
.ಸದಾ ಕೂಲ್ ಕೂಲ್ ಆಗಿ ಇರುವ ಇಲ್ಲಿನ ವಾರ್ಷಿಕ ಸರಾಸರಿ ಉಷ್ಣಾಂಶ 17.3 °C .ಜನವರಿ ತಿಂಗಳಲ್ಲಿ 11.5 °C ರಷ್ಟು ಉಷ್ಣಾಂಶವಿದ್ದರೆ ಜುಲೈನಲ್ಲಿ 20.6 °C ನಷ್ಟು ಉಷ್ಣಾಂಶವಿರುತ್ತದೆ
.ಚಿರಾಪುಂಜಿ ಸದ್ಯಕ್ಕೆ ಎರಡು ಗಿನ್ನಿಸ್ ರೆಕಾರ್ಡ್ ಗಳನ್ನು ಹೊಂದಿದೆ. ಮೊದಲನೆಯದಾಗಿ ಇಲ್ಲಿ ಆಗಸ್ಟ್ 1860 ಹಾಗು ಜುಲೈ 1861 ರ ನಡುವಿನಲ್ಲಿ ಬಿದ್ದ 22,987 ಮಿಲಿಮೀಟರ್ ನಷ್ಟು ಅತ್ಯದಿಕ ಮಳೆ ಹಾಗು 1861 ನೇ ಇಸವಿಯ ಜುಲೈ ಒಂದೇ ತಿಂಗಳಲ್ಲಿ 9,300 ಮಿಲಿಮೀಟರ್ ನಷ್ಟು ಬಿದ್ದ ಮಳೆ.
.ಬಂಗಳಕೊಲ್ಲಿಯಿಂದ ಹೊರಡುವ ಮೋಡಗಳು ಬಾಂಗ್ಲಾದೇಶದ Plain ಗಳ ಮೇಲೆ ಸುಮಾರು 400 km ನಷ್ಟು ಹರಡಿಕೊಂಡಿರುತ್ತದೆ.ನಂತರದಲ್ಲಿ ಇದು ಸಮುದ್ರ ಮಟ್ಟದಿಂದ 1370 ಮೀಟರ್ ನಷ್ಟು ಎತ್ತರವಿರುವ ಖಾಸಿ ಪರ್ವತಗಳಿಗೆ ಅಪ್ಪಳಿಸುತ್ತದೆ.ಇಲ್ಲಿನ ಕಣಿವೆಗಳಿಂದ ಬೀಸುವ ರಭಸವಾದ ಗಾಳಿಯು ಈ ಮೋಡಗಳನ್ನು ಎತ್ತರದ ವಾತಾವರಣಕ್ಕೆ ಸೇರಿಸುತ್ತವೆ. ಈ ಮೋಡಗಳು ಎತ್ತರದ ವಾತಾವರಣದಲ್ಲಿ ತಂಪಾಗಿ ಮಳೆಯ ರೂಪದಲ್ಲಿ ಚಿರಾಪುಂಜಿಯ ಮೇಲೆ ಬೀಳುತ್ತದೆ
.ಚಿರಾಪುಂಜಿಯಲ್ಲಿ ಬೀಳುವ ಅತ್ಯಧಿಕ ಮಳೆಯ ವಿಧವು ಓರೋಗ್ರಾಫಿಕ್ ಮಳೆಗೆ ಗುಂಪಿಗೆ ಸೇರಿದೆ.ಓರೋಗ್ರಾಫಿಕ್ ಮಳೆಯ ಬಗೆಯಲ್ಲಿ ಮೇಲೆ ತಿಳಿಸಿದಂತಹ ರೀತಿಯಲ್ಲಿ ಮಳೆ ಬೀಳುತ್ತದೆ
.ಚಿರಾಪುಂಜಿಯಲ್ಲಿ ಮಾನ್ಸೂನ್ ಅವದಿಯಲ್ಲಿ ವಾತಾವರಣದ ಆರ್ದ್ರತೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿರುತ್ತದೆ
.ಚಿರಾಪುಂಜಿಯಲ್ಲಿ ಮಾನ್ಸೂನ್ ನಲ್ಲಿ ಬೀಳುವ ಮಳೆಯ ಇನ್ನೊಂದು ವಿಶೇಷವೆಂದರೆ ಬೆಳಗಿನ ಹೊತ್ತಿನಲ್ಲಿ ಹೆಚ್ಚು ಮಳೆಯಾಗುವುದು.ಇದಕ್ಕೆ ಒಂದು ಕಾರಣ ಎರಡು ಬಗೆಯ ಮಾರುತಗಳು ಒಟ್ಟಿಗೆ ಸೇರುವುದು.ಬ್ರಹ್ಮಪುತ್ರ ಕಣಿವೆಯ ಪೂರ್ವದಿಂದ ಬೀಸುವ ಮಾರುತ ಹಾಗು ಮೇಘಾಲಯದ ದಕ್ಷಿಣದಿಂದ ಬೀಸುವ ಮಾರುತಗಳು ಖಾಸಿ ಪರ್ವತಗಳ ಮೇಲೆ ಒಟ್ಟುಗೂಡುವುವು.ಈ ಮಾರುತಗಳು ರಾತ್ರಿ ಹೊತ್ತಿನಲ್ಲಿ ಕಣಿವೆಯ ಕೆಳಗಿದ್ದು ಬೆಳಿಗಿನ ಹೊತ್ತಿನಲ್ಲಿ ಬೆಚ್ಚಗಾಗಿ ಮೇಲೇರುತ್ತವೆ.ಹೀಗಾಗಿ ಬೆಳಗಿನ ಸಮಯದಲ್ಲಿ ಹೆಚ್ಚಿನ ಮಳೆ ಬೀಳುತ್ತದೆ ಎಂದು ನಂಬಲಾಗಿದೆ
.2001 ರ ಜನಗಣತಿ ಪ್ರಕಾರ ಇಲ್ಲಿನ ಜನಸಂಖ್ಯೆ 10,086 .49 ಪ್ರತಿಶತ ಪುರುಷರಿದ್ದರೆ,51 ಪ್ರತಿಶತ ಮಹಿಳೆಯರಿದ್ದಾರೆ
.ಚಿರಾಪುಂಜಿಯ ಇನ್ನೊಂದು ವಿಶೇಷತೆಯೆಂದರೆ living bridges.ಹಲವಾರು ವರ್ಷಗಳ ಅನುಭವ ಇಲ್ಲಿನ ಜನರಿಗೆ ಒಂದು ವಿಶೇಷ ಕಲೆಯನ್ನು ಕಲಿಸಿಕೊಟ್ಟಿದೆ,ಅದೇನೆಂದರೆ ಇಲ್ಲಿನ ಜನರು ಮರಗಳ ಬೇರನ್ನು ಉಪಯೋಗಿಸಿ ಸೇತುವೆಗಳನ್ನು ನಿರ್ಮಿಸುತ್ತಾರೆ .ಈ ಕಾರ್ಯಕ್ಕೆ ಸುಮಾರು 10 ರಿಂದ 15 ವರ್ಷಗಳು ತಗುಲುತ್ತವೆ.ಇಂತಹ ಸೇತುವೆಗಳು ಅತ್ಯಂತ ಧೀರ್ಘಾವದಿ ಬಳಕೆ ಬರುತ್ತವೆ,ಸುಮಾರು 500 ವರ್ಷ ಹಳೆಯದಾದ ಇಂತಹ ಸೇತುವೆ ಇಲ್ಲಿದೆ
.ಚಿರಾಪುಂಜಿಯು ಹಲವು ಜಲಪಾತಗಳ ತವರೂರು.ಹೆಚ್ಚು ಮಳೆಯಾಗುವ ಇಲ್ಲಿ ಜಲಪಾತಗಳು ಮೈದುಂಬಿ ಹರಿಯುತ್ತವೆ
.ಇವುಗಳಲ್ಲಿ ಕೆಲವು DainThlen Falls,Mawsmai Fall ,Nohkalikai Falls,Kynrem Falls
.ಅಲ್ಲದೆ ಚಿರಾಪುಂಜಿಯಲ್ಲಿ ಭೇಟಿ ಕೊಡಬಹುದಾದ ಇತರ ಪ್ರೇಕ್ಷಣೀಯ ಸ್ಥಳಗಳು Mawkdok Dympep Valley,Eco Park , Khasi Monoliths ,KohRamhah Pillar Rock,Krem Mawmluh Cave,Mawsmai Cave,Living Root Bridge
.ನಮ್ಮ ರಾಜ್ಯಧಾನಿ ಬೆಂಗಳೂರಿನಿಂದ ಚಿರಾಪುಂಜಿಗೆ 3085 ಕಿಲೋಮೀಟರ್ ಗಳು
.ಸೊ ಭಾರತದ ಮಳೆ ನಾಡು ಚಿರಾಪುಂಜಿಯ ಪ್ರಕೃತಿ ಸವಿಯನ್ನು ಒಮ್ಮೆ ಸವಿಯಿರಿ.ಮಾನ್ಸೂನ್ ನಲ್ಲಿ ಚಿರಾಪುಂಜಿ ಪ್ರವಾಸ ಮಾಡಿದರೆ ಖಂಡಿತಾ ನೀವು ಒಂದು ಹೊಸ ಲೋಕಕ್ಕೆ ಹೋಗಿ ಬಂದ ಅನುಭವವನ್ನು ಹೊಂದುವುದರಲ್ಲಿ ಸಂಶಯವಿಲ್ಲ
-ಪ್ರಕೃತಿಯನ್ನು ರಕ್ಷಿಸಿ-
Comments
Post a Comment