ಸೈಕ್ಲೋನ್
.ಇತ್ತೀಚೆಗಷ್ಟೇ ಅಮೇರಿಕಾವನ್ನು ತಲ್ಲಣಗೊಳಿಸಿದ ಸ್ಯಾಂಡಿಯಾಗಿರಬಹುದು.... ಭಾರತದಲ್ಲಿ ಬಾರಿ ಸುದ್ದಿ ಮಾಡಿದ್ದ 'ನೀಲಂ' ಆಗಿರಬಹುದು ಮತ್ತು ಸದ್ಯಕ್ಕೆ ಬಂಗಾಳ ಕೊಲ್ಲಿ ಯಲ್ಲಿ ಸೈಕ್ಲೋನ್ ಆಗಿ ಜನ್ಮ ತಳೆಯಲು ಸಿದ್ದವಾಗಿರುವ Depression ಆಗಿರಬಹುದು .. ಇಂತಹ ಪ್ರಕೃತಿಯ ವಿನಾಶಕಾರಿ ಸೈಕ್ಲೋನ್ ಗಳ ಬಗ್ಗೆ ಬರೆಯಬೇಕೆಂದೆನಿಸಿ ಈ ಪೋಸ್ಟ್ ಬರೆದಿದ್ದೇನೆ .ವಿನಾಶಕಾರಿ ಸೈಕ್ಲೋನ್ ಗಳು ಹೇಗೆ ಜನ್ಮ ತಾಳುತ್ತವೆ ಎಂಬುದೇ ನಮ್ಮಲ್ಲಿ ಹಲವಾರು ಜನಗಳಿಗೆ ಗೊತ್ತಿಲ್ಲ.ಸೈಕ್ಲೋನ್ ಗಳ ಬಗ್ಗೆ ಮಾತನಾಡುವ ನಮಗೆ ಅದು ಹೇಗೆ ಸೃಷ್ಟಿಯಾಗುತ್ತದೆ ಎಂಬುದೇ ಗೊತ್ತಿರುವುದಿಲ್ಲ.ಈ ಪೋಸ್ಟ್ ನಲ್ಲಿ ನಾನು ಸೈಕ್ಲೋನ್ ಗಳು ಹೇಗೆ ಸೃಷ್ಟಿಯಾಗುತ್ತವೆ ಎಂಬುದರ ಬಗ್ಗೆ ಬರೆದಿದ್ದೇನೆ .ಸಾಮಾನ್ಯವಾಗಿ ಸೈಕ್ಲೋನ್ ಗಳ ಹುಟ್ಟಿನ ಹಿಂದೆ ತುಂಬಾ ವಿಜ್ಞ್ಯಾನ ಅಡಗಿದೆ.ಆದರೆ ನಾನು ಇಲ್ಲಿ ತುಂಬಾ ಸರಳವಾಗಿ ಸೈಕ್ಲೋನ್ ಗಳ ಹುಟ್ಟಿನ ಬಗ್ಗೆ ಬರೆದಿದ್ದೇನೆ .ನಮ್ಮ ದೇಶದಲ್ಲಿ ಸೈಕ್ಲೋನ್ ಗಳ ಅರ್ಭಟ ಕಡಿಮೆ ಎಂದೇ ಹೇಳಬೇಕು.ಆದರೆ ಅಮೇರಿಕಾದಂತಹ ದೇಶಗಳಲ್ಲಿ ಸೈಕ್ಲೋನ್ ಎಂದರೆ ಜನರು ನಡುಗುತ್ತಾರೆ.ಅಷ್ಟರ ಮಟ್ಟಿಗೆ ಅಲ್ಲಿ ಸೈಕ್ಲೋನ್ ಗಳು ಅರ್ಭಟಿಸುತ್ತದೆ .ಸಾಮಾನ್ಯವಾಗಿ ಸೈಕ್ಲೋನ್ ಗಳು ಜನನ ತಾಳುವುದು ಭೂಮದ್ಯ ರೇಖೆಯ ಬಿಸಿ ನೀರಿನ ಸಾಗರಗಳಲ್ಲಿ (Warm Ocean Water- ಬಿಸಿಲಿನಿಂದ ಕಾದ ಸಾಗ...