ರಾಜ ಕಾಳಿಂಗ

ಮಿತ್ರ ರಾಘು .. ಬ್ಲಾಗ್ ನಲ್ಲಿ ಬರೆಯಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದ.. ನಾನು ದಿನೇಶ್ ಜಮ್ಮಟಿಗೆ.. ಕಾಡು ಗುಡ್ಡ ಸುತ್ತೋದು.. ಹುಳು ಹಪ್ಪಟ್ಟೆ ಚಿತ್ರ ತೆಗೆಯೋದು ನನ್ನ ಇಷ್ಟ... ಮೊನ್ನೆ ನಮ್ಮ ಊರಿನ ಫಾರೆಸ್ಟರ್ ಕರೆ ಮಾಡಿ ತುರ್ತಾಗಿ ಬರಲು ಹೇಳಿದ್ರು . ಹೋಗಿ ನೋಡಿದಾಗ ಕಾಳಿಂಗ ಊರಿನ ಕುಡಿಯುವ ನೀರಿನ ಪಂಪ್ ಹೌಸ್ ಕೆಳಗಿನ ಬಾವಿಯೊಳಗೆ ಬಿದ್ದಿತ್ತು . ಮುಂದಿನದ್ದು ಅವನನ್ನು ಸುರಕ್ಷಿತವಾಗಿ ರಕ್ಷಿಸುವ ಕಾರ್ಯಾಚರಣೆ . ಆಗುಂಬೆಯಿಂದ ಹಾವು ರಕ್ಷಕ ಅಜಯ್ ಗಿರಿಯ ಆಗಮನ . ಕತ್ತಲೆಯ ಬಾವಿಯೊಳಗೆ ಕಾರ್ಯಾಚರಣೆ . ಆಳದ ಬಾವಿಯಲ್ಲಿನ ರಾಜ ಕಾಳಿಂಗನನ್ನು ಕೈ ಮತ್ತು ಸ್ಟಿಕ್ ಬಳಸಿ , ಹಗ್ಗದೊಂದಿಗೆ ಇಳಿಸಲಾದ ಮರದ ಮೇಲೆ ಸಾಹಸದಿಂದ ಕೂರಿಸಲಾಯಿತು . ಗಾಬರಿ ಮತ್ತು ಥ೦ಡಿಯಾದ ರಾಜ ಕುತೂಹಲದಿಂದ ಮರದ ರೆಂಬೆಯ ಮೇಲೆ ಆಸೀನನಾಗಿದ್ದ . ಬಾವಿಯ ಮೇಲ್ಬಾಗಕ್ಕೆ ಬಂದಾಗ ಅಜಯ್ ರವರ ಸಹಾಯ ಹಸ್ತದೊಂದಿಗೆ ಹೊರ ಲೋಕಕ್ಕೆ ಆಗಮನ . ಜೊತೆಗೆ ಸುತ್ತ ಕುತೂಹಲದಿಂದ ನೆರೆದ ಜನಕ್ಕೆ ಕಾಳಿಂಗ ರಾಜನ ಸ್ವಭಾವ ಮತ್ತು ವಾಸ್ತವ್ಯದ ಪ್ರದೇಶದ ಮಾಹಿತಿಯೊಂದಿಗೆ , ರಕ್ಷಣೆಯ ಬಗ್ಗೆ ಮಾಹಿತಿ . ಹಿಡಿದ ಸ್ಥಳದಿಂದ ಸ್ವಲ್ಪವೇ ದೂರದಲ್ಲಿ ಕಾಳಿಂಗನಿಗೆ ಸ್ವಾತಂತ್ರ್ಯ . ಸ್ವತಂತ್ರನಾದ ಕೂಡಲೇ ಸ್ವಚಂಧವಾಗಿ ತುಂಗಾ ನದಿಯಲ್ಲಿ ವಿಹಾರ . ನನಗೆ ಕೆಲವು ಚಿತ್ರಗಳೊಂದಿಗೆ , ಊರಿಗೆ ಬಂದ ರಾಜನನ್ನು ಮರಳಿ ಅವನ ಸಾಮ್ರಾಜ್ಯಕ್ಕೆ ಕಳುಹಿಸಿದ ಸಂತೃಪ್ತಿ...