ನೇಚರ್ wrap-up
-ಅರುಣಾಚಲ ಪ್ರದೇಶದಲ್ಲಿ ಹೊಸ ಜಾತಿಯ ಮೀನು ಪತ್ತೆ- . Pseudolaguvia ಪಂಗಡ (genus) ಗೆ ಸೇರಿದ ಕ್ಯಾಟ್ ಫಿಶ್ ಅನ್ನು ಅರುಣಾಚಲ ಪ್ರದೇಶದ ಪಶ್ಚಿಮ ಸಯಾಂಗ್ ಜಿಲ್ಲೆಯಲ್ಲಿ ಪತ್ತೆ ಹಚ್ಚಲಾಗಿದೆ .ಲಕ್ಪ ತಾಮಾಂಗ್ ಎಂಬುವವರು 'ಸಿಲ್ಲೆ' ಎಂಬ ನದಿಯಲ್ಲಿ ಈ ಹೊಸ ಜಾತಿಯ ಮೀನನ್ನು ಪತ್ತೆ ಹಚ್ಚಿದ್ದಾರೆ .ಇದಕ್ಕೆ ವೈಜ್ನ್ಯಾನಿಕವಾಗಿ Pseudolaguvia Viriosa ಎಂದು ಹೆಸರಿಡಲಾಗಿದೆ -ಮೈಸೂರು ಮೃಗಾಲಯದಲ್ಲಿ ಪ್ರಾಣ ಬಿಟ್ಟ ಸಿಂಹದ ಮರಿ- .ಸತತ ಆರು ತಿಂಗಳುಗಳ ಕಾಲ ಬದುಕಲು ಹೋರಾಟ ನಡೆಸಿದ ಸಿಂಹದ ಮರಿ ಕೊನೆಗೂ ಫೆಬ್ರವರಿ 20 ರ ಬುಧವಾರದಂದು ಮೈಸೂರು ಮೃಗಾಲಯದಲ್ಲಿ ಕೊನೆಯುಸಿರೆಳೆದಿದೆ .ಗುಜರಾತ್ ನಿಂದ ತರಲಾಗಿದ್ದ ಗೌರಿ ಹಾಗು ಶಂಕರ್ ಎಂಬ ಸಿಂಹಗಳಿಗೆ ಕಳೆದ ವರ್ಷ ಹುಟ್ಟಿದ ಈ ಸಿಂಹದ ಮರಿಗೆ ಚಾಮುಂಡಿ ಎಂದು ಹೆಸರಿಡಲಾಗಿತ್ತು .ಹುಟ್ಟಿದ ಎರಡನೇ ದಿನಕ್ಕೆ ತಾಯಿ ಸಿಂಹ ಈ ಮರಿಯನ್ನು ದೂರ ಮಾಡಿತು.ಅಂದಿನಿಂದ ಈ ಮರಿಯ ಜವಾಬ್ದಾರಿ ತೆಗೆದುಕೊಂಡಿದ್ದ ಮೃಗಾಲಯದ ಅಧಿಕಾರಿಗಳು ಇದನ್ನು ಉಳಿಸಲು ಇನ್ನಿಲ್ಲದ ಹೋರಾಟ ನಡೆಸಿದ್ದರು.ಆದರೂ ಅವರ ಹೋರಾಟ ಕೊನೆಗೂ ಫಲ ನೀಡಲಿಲ್ಲ .ಮೈಸೂರು ಮೃಗಾಲಯದಲ್ಲಿ ಹುಟ್ಟಿದ ಮೊದಲ ಏಷ್ಯಾದ ಸಿಂಹದ ಮರಿ ಇದಾಗಿತ್ತು .ಕರ್ನಾಟಕದಲ್ಲಿ ಏಷ್ಯಾದ ಸಿಂಹಗಳನ್ನು ನಾವು ಮೈಸೂರು ಮೃಗಾಲಯದಲ್ಲಿ ಮಾತ್ರ ನೋಡಬಹುದಾಗಿದೆ -ಹುಲಿಧಾಮದ...