ನೇಚರ್ wrap-up
-ಅರುಣಾಚಲ ಪ್ರದೇಶದಲ್ಲಿ ಹೊಸ ಜಾತಿಯ ಮೀನು ಪತ್ತೆ-
.Pseudolaguvia ಪಂಗಡ (genus) ಗೆ ಸೇರಿದ ಕ್ಯಾಟ್ ಫಿಶ್ ಅನ್ನು ಅರುಣಾಚಲ ಪ್ರದೇಶದ ಪಶ್ಚಿಮ ಸಯಾಂಗ್ ಜಿಲ್ಲೆಯಲ್ಲಿ ಪತ್ತೆ ಹಚ್ಚಲಾಗಿದೆ
.ಲಕ್ಪ ತಾಮಾಂಗ್ ಎಂಬುವವರು 'ಸಿಲ್ಲೆ' ಎಂಬ ನದಿಯಲ್ಲಿ ಈ ಹೊಸ ಜಾತಿಯ ಮೀನನ್ನು ಪತ್ತೆ ಹಚ್ಚಿದ್ದಾರೆ
.ಇದಕ್ಕೆ ವೈಜ್ನ್ಯಾನಿಕವಾಗಿ Pseudolaguvia Viriosa ಎಂದು ಹೆಸರಿಡಲಾಗಿದೆ
-ಮೈಸೂರು ಮೃಗಾಲಯದಲ್ಲಿ ಪ್ರಾಣ ಬಿಟ್ಟ ಸಿಂಹದ ಮರಿ-
.ಸತತ ಆರು ತಿಂಗಳುಗಳ ಕಾಲ ಬದುಕಲು ಹೋರಾಟ ನಡೆಸಿದ ಸಿಂಹದ ಮರಿ ಕೊನೆಗೂ ಫೆಬ್ರವರಿ 20 ರ ಬುಧವಾರದಂದು ಮೈಸೂರು ಮೃಗಾಲಯದಲ್ಲಿ ಕೊನೆಯುಸಿರೆಳೆದಿದೆ
.ಗುಜರಾತ್ ನಿಂದ ತರಲಾಗಿದ್ದ ಗೌರಿ ಹಾಗು ಶಂಕರ್ ಎಂಬ ಸಿಂಹಗಳಿಗೆ ಕಳೆದ ವರ್ಷ ಹುಟ್ಟಿದ ಈ ಸಿಂಹದ ಮರಿಗೆ ಚಾಮುಂಡಿ ಎಂದು ಹೆಸರಿಡಲಾಗಿತ್ತು
.ಹುಟ್ಟಿದ ಎರಡನೇ ದಿನಕ್ಕೆ ತಾಯಿ ಸಿಂಹ ಈ ಮರಿಯನ್ನು ದೂರ ಮಾಡಿತು.ಅಂದಿನಿಂದ ಈ ಮರಿಯ ಜವಾಬ್ದಾರಿ ತೆಗೆದುಕೊಂಡಿದ್ದ ಮೃಗಾಲಯದ ಅಧಿಕಾರಿಗಳು ಇದನ್ನು ಉಳಿಸಲು ಇನ್ನಿಲ್ಲದ ಹೋರಾಟ ನಡೆಸಿದ್ದರು.ಆದರೂ ಅವರ ಹೋರಾಟ ಕೊನೆಗೂ ಫಲ ನೀಡಲಿಲ್ಲ
.ಮೈಸೂರು ಮೃಗಾಲಯದಲ್ಲಿ ಹುಟ್ಟಿದ ಮೊದಲ ಏಷ್ಯಾದ ಸಿಂಹದ ಮರಿ ಇದಾಗಿತ್ತು
.ಕರ್ನಾಟಕದಲ್ಲಿ ಏಷ್ಯಾದ ಸಿಂಹಗಳನ್ನು ನಾವು ಮೈಸೂರು ಮೃಗಾಲಯದಲ್ಲಿ ಮಾತ್ರ ನೋಡಬಹುದಾಗಿದೆ
-ಹುಲಿಧಾಮದಲ್ಲಿ ಅಂಥ್ರಾಕ್ಸ್ ಭಯ-
.9 ವರ್ಷದ ಹಿಂದೆ ನಾಗರಹೊಳೆ ಹಾಗು ಬಂಡೀಪುರ ಅರಣ್ಯ ಪ್ರದೇಶದಲ್ಲಿ 4 ಆನೆಗಳ ಸಾವಿಗೆ ಕಾರಣವಾಗಿದ್ದ ಅಂಥ್ರಾಕ್ಸ್ ಮತ್ತೆ ಈಗ ಬಂಡೀಪುರ ಹಾಗು ಬಿ ಅರ್ ಟಿ ಹುಲಿಧಾಮಗಳಲ್ಲಿ ಮತ್ತೆ ಕಾಣಿಸಿಕೊಂಡಿದೆ
. ಇತ್ತೀಚೆಗಷ್ಟೇ ಬಂಡೀಪುರ ವ್ಯಾಪ್ತಿಯಲ್ಲಿ ಹತ್ತು ಹಸುಗಳು ನಿಗೂಢವಾಗಿ ಪ್ರಾಣ ಬಿಟ್ಟಿದ್ದವು
.ಇದಕ್ಕೂ ಮುಂಚೆ ಅಂಥ್ರಾಕ್ಸ್ ನಿಂದ ಸತ್ಯಮಂಗಲ ಅರಣ್ಯ ವ್ಯಾಪ್ತಿಯಲ್ಲಿ 10 ವರ್ಷದ ಆನೆ ಅಸುನೀಗಿತ್ತು
.ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿದ್ದು ಜಾನುವಾರುಗಳಿಗೆ ಚುಚ್ಚುಮದ್ದು ನಿಡುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ
.ಅಂಥ್ರಾಕ್ಸ್ ಬ್ಯಾಕ್ಟೀರಿಯ Bacillus anthracis ಈಗ ಮತ್ತೆ ಕಾಣಿಸಿಕೊಂಡಿರುವುದು ಗ್ರಾಮಸ್ಥರಲ್ಲೂ ಭಯವನ್ನುಂಟು ಮಾಡಿದೆ
-ಅಳಿವಿನಂಚಿನಲ್ಲಿವೆ ಭೂಮಿಯ ಸರೀಸೃಪಗಳು-
.ಭೂಮಿಯ ಸುಮಾರು 5 ಪ್ರತಿಶತ ಸರೀಸೃಪಗಳು ಅಳಿವಿನಂಚಿಗೆ ತಲುಪಿವೆ ಎಂದು ಹೊಸ ಸಂಶೋಧನೆಯಿಂದ ತಿಳಿದುಬಂದಿದೆ
.ಲಂಡನ್ ನ Zoological Society ನಡೆಸಿದ ಸಮೀಕ್ಷೆಯಲ್ಲಿ ಪ್ರಪಂಚದ 47 ಪ್ರತಿಶತ ಸರೀಸೃಪಗಳು ತೊಂದರೆ ಅಥವಾ ಭಯದ ಪರಿಸ್ಥಿತಿಯಲ್ಲಿವೆ (Threatened) ಹಾಗು 3 ಜಾತಿಯ ಜೀವಿಗಳು ಸದ್ಯದಲ್ಲೇ ಭೂಮಿಯಿಂದಲೇ ಕಣ್ಮರೆಯಾಗುತ್ತವೆ ಎಂದು ತಿಳಿದುಬಂದಿದೆ
.ಹಾವುಗಳು,ಆಮೆ,ಮೊಸಳೆಗಳು,ಹಲ್ಲಿಗಳು ಈ ಸರಿಸೃಪದ ಜಾತಿಗೆ ಸೇರಿದವುಗಳಾಗಿವೆ
.ಒಂದು ಅಧ್ಯಯನದ ಪ್ರಕಾರ ಇಂದು ಪ್ರಪಂಚದಲ್ಲಿ ಸುಮಾರು 9,500 ಜಾತಿಯ ಸರಿಸೃಪಗಳಿವೆ
.ಸರೀಸೃಪಗಳು ಆಹಾರ ಜಾಲದ ಪ್ರಮುಖ ಕೊಂಡಿಗಳು.ಇವುಗಳ ವಿನಾಶ ಇಡೀ ಆಹಾರ ಜಾಲವನ್ನೇ ನಾಶಮಾಡುವ ಅಪಾಯವನ್ನು ಹೊಂದಿದೆ
-30 kg ಚಿಪ್ಪು ಹಂದಿಯ ಚಿಪ್ಪು ವಶ-
.ಉತ್ತರಾಖ೦ಡ್ ನ ರಾಜಾಜಿ ನ್ಯಾಷನಲ್ ಪಾರ್ಕ್ ನ ಅಧಿಕಾರಿಗಳು ಇತ್ತೀಚಿಗೆ 30 kg ಚಿಪ್ಪು ಹಂದಿಯ ( Pangolin) ಚಿಪ್ಪನ್ನು ಕಳ್ಳ ಭೇಟೆಗಾರರಿಂದ ವಶಪಡಿಸಿಕೊಂಡಿದ್ದಾರೆ
.ಇಷ್ಟು ಪ್ರಮಾಣದ ಚಿಪ್ಪು ಹಂದಿಯ ಚಿಪ್ಪು ಸಿಕ್ಕಿರುವುದು ರಾಜ್ಯದಲ್ಲಿ ಇದೇ ಮೊದಲು ಎಂದು ಪಾರ್ಕ್ ನ ಅಧಿಕಾರಿಗಳು ತಿಳಿಸಿದ್ದಾರೆ
.ಚಿಪ್ಪು ಹಂದಿ ಅಪಾಯದಂಚಿನಲ್ಲಿರುವ ಪ್ರಾಣಿಯಾಗಿದ್ದು ಅದರ ಚಿಪ್ಪಿನ ಮಾರಾಟವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ನಿಷೇಧಿಸಲಾಗಿದೆ
.ಇದರ ಚಿಪ್ಪನ್ನು ಔಷಧೀಯ ಉದ್ದೇಶಗಳಿಗೆ ಬಳಸುತ್ತಾರೆ
.ಈ ಭೇಟೆಗಾರರನ್ನು Kansrao ಅರಣ್ಯದಲ್ಲಿ ಬಂಧಿಸಲಾಗಿದೆ.ಈ ಸಂಧರ್ಭದಲ್ಲಿ ಮೊಬೈಲ್, ಸಿಂ ಕಾರ್ಡ್ ಹಾಗು ಮುಳ್ಳು ಹಂದಿಯ ಚಿಪ್ಪನ್ನು ವಶಪಡಿಸಿಕೊಳ್ಳಲಾಗಿದೆ
-ದೊಡ್ಡ ಮೊಸಳೆ ಸಾವು-
.ಮಾನವನ ಸೆರೆಯಲ್ಲಿದ್ದ ಪ್ರಪಂಚದ ಉಪ್ಪು ನೀರಿನ ಅತ್ಯಂತ ದೊಡ್ಡ ಮೊಸಳೆ ಇತ್ತೀಚಿಗೆ ಮರಣ ಹೊಂದಿದೆ
.ಫಿಲಿಪೈನ್ಸ್ ನ Bunawan Eco-Park and Research Centre ನಲ್ಲಿ ಇದನ್ನು ಸಾಕಲಾಗುತ್ತಿತ್ತು
.ಸೆಪ್ಟೆಂಬರ್ 2011 ರಲ್ಲಿ ಇದನ್ನು ಸೆರೆಹಿಡಿಯಲಾಗಿತ್ತು.ಕಳೆದ ವರ್ಷ ಇದರ ಹೆಸರು ಜುಲೈ ನಲ್ಲಿ ಇದು ಗಿನಿಸ್ ವರ್ಡ್ ರೆಕಾರ್ಡ್ ಗೆ ಸೇರ್ಪಡೆಯಾಗಿತ್ತು
.ಇದು 6.17 ಮೀಟರ್ ಉದ್ದವಿತ್ತು.ಇದರ ಸಾವಿನಿಂದ ಫಿಲಿಪೈನ್ಸ್ ಮೊಸಳೆ ಸಂರಕ್ಷಣೆ ಹೋರಾಟಕ್ಕೆ ಹಿನ್ನೆಡೆ ಉಂಟಾಗಿದೆ
-Kaziranga ದಲ್ಲಿ ಮತ್ತೊಂದು ಘೇಂಡಾಮೃಗ ಸಾವು-
.ಇತ್ತೀಚಿಗೆ Kaziranga ನ್ಯಾಷನಲ್ ಪಾರ್ಕ್ ನಲ್ಲಿ ಘೇಂಡಾಮೃಗಗಳ (Rhino) ಅದೃಷ್ಟ ಸರಿ ಇಲ್ಲವೆಂದು ಕಾಣುತ್ತದೆ
.ಬಾಘೋರಿ ವ್ಯಾಪ್ತಿಯ Kawoimari ಅರಣ್ಯ ವ್ಯಾಪ್ತಿಯಲ್ಲಿ ಗಂಡು ಘೇಂಡಾಮೃಗವನ್ನು ಕೊಂದು ಕೊಂಭನ್ನು ಅಪಹರಿಸಲಾಗಿದೆ
.ಗಾರ್ಡ್ ಗಳು ಇದನ್ನು ನೋಡಿದ್ದು ಸ್ಥಳದಲ್ಲಿ ಎರಡು .303 ರೈಫಾಲ್ ಗಳು ಪತ್ತೆಯಾಗಿವೆ
.ಭೇಟೆಗಾರರಿಗಾಗಿ ಶೋಧ ಕಾರ್ಯ ತೀವ್ರಗೊಂಡಿದ್ದು ಪಳಗಿದ ನಾಯಿಗಳನ್ನು ಬಳಸಿಕೊಳ್ಳಲಾಗಿದೆ
.ಈ ಸಾವಿನೊಂದಿಗೆ ಈ ವರ್ಷ Kaziranga ದಲ್ಲಿ ಮೃತಪಟ್ಟ ಘೇಂಡಾಮೃಗಗಳ ಸಂಖ್ಯೆ 9 ಕ್ಕೆ ಏರಿದೆ
.Kaziranga ನ್ಯಾಷನಲ್ ಪಾರ್ಕ್ ಒಂದು ಕೊಂಬಿನ ಘೇಂಡಾಮೃಗಗಳಿಗೆ (One Horned Rhino) ಪ್ರಸಿದ್ದಿ
-ನಾಗರಹೊಳೆಯಲ್ಲಿ ಪ್ರಾಣ ಬಿಟ್ಟವು 3 ಹುಲಿಗಳು-
.ಹುಲಿ ಸಂರಕ್ಷಣೆಯ ವಿಷಯ ಎಲ್ಲೆಡೆ ಚರ್ಚೆಯಲ್ಲಿರುವಾಗಲೇ ಕರ್ನಾಟಕದ ನಾಗರಹೊಳೆ ನ್ಯಾಷನಲ್ ಪಾರ್ಕ್ ನಿಂದ ಬರಸಿಡಿಲಿನಂತೆ ಸುದ್ದಿಯೊಂದು ಬಂದಿದೆ
.ಕೇವಲ ಒಂದೇ ತಿಂಗಳ ಅವದಿಯಲ್ಲಿ ನಾಗರಹೊಳೆ ನ್ಯಾಷನಲ್ ಪಾರ್ಕ್ ನ ವ್ಯಾಪ್ತಿಯಲ್ಲಿ 3 ಹುಲಿಗಳು ಅಸುನೀಗಿವೆ
.ಇದರಲ್ಲಿ 2 ಹುಲಿಗಳು ವಿಷಪ್ರಾಶಾಣದಿಂದ ಸಾವನ್ನಪ್ಪಿದರೇ ಇನ್ನೊಂದು ಹುಲಿ ಜಗಳದಲ್ಲಿ ಪ್ರಾಣ ಬಿಟ್ಟಿದೆ ಎಂದು ತಿಳಿದುಬಂದಿದೆ
.ನಾಗರಹೊಳೆ ವ್ಯಾಪ್ತಿಯಲ್ಲಿ ವಿಷಪ್ರಾಶಾಣದಿಂದ ಹುಲಿ ಸತ್ತಿರುವುದು ಇದೇ ಮೊದಲು.ಅದ್ದರಿಂದ ಅಧಿಕಾರಿಗಳಿಗೆ ಇದು ಎಚ್ಚರಿಕೆಯ ಘಂಟೆಯಾಗಿ ಪರಿಣಮಿಸಿದೆ
-ಕರ್ನಾಟಕದಲ್ಲಿ ಹುಲಿ ರಕ್ಷಣೆಗೆ ಹೊಸ ಯೋಜನೆ-
.ನಾಗರಹೊಳೆಯಲ್ಲಿ ಇತ್ತೀಚಿಗೆ ಮೃತಪಟ್ಟ ಹುಲಿಗಳು ಅಧಿಕಾರಿಗಳಲ್ಲಿ ಹೊಸ ಯೋಜನೆಗೆ ಪ್ರೇರೇಪಣೆ ನೀಡಿವೆ
.ಭೇಟೆಗಾರರು ವಿಷಪ್ರಾಶಾಣವನ್ನು ತಮ್ಮ ಕಾರ್ಯ ಯೋಜನೆಗೆ ಬಳಸಿಕೊಳ್ಳುತ್ತಿದ್ದು ಇದನ್ನು ತಡೆಯುವ ಉದ್ದೇಶದಿಂದ ಪ್ರಾಜೆಕ್ಟ್ ಟೈಗರ್ ನ ಅಧಿಕಾರಿಗಳು ಹೊಸ ಯೋಜನೆ ರೂಪಿಸಲು ಮುಂದಾಗಿದ್ದಾರೆ
.Special Tiger Protection Force ನ ಸದಸ್ಯರೊಂದಿಗೆ ಕೈ ಜೋಡಿಸಿ ಹುಲಿ ಧಾಮದ ಹಾಗು ಸುತ್ತ ಮುತ್ತಲಿನ ಎಲ್ಲಾ ಜಾನುವಾರುಗಳ ಚಿತ್ರ ಸಮೇತ ಮಾಹಿತಿ ಸಂಗ್ರಹ ಹಾಗು ಅವುಗಳ ಮಾಲಿಕರ ಮಾಹಿತಿ ಸಂಗ್ರಹ ಮಾಡುವುದು ಮತ್ತು ಹುಲಿಗಳಿಂದ ಪ್ರಾಣ ಕಳೆದುಕೊಳ್ಳುವ ಜಾನುವಾರುಗಳಿಗೆ ಪರಿಹಾರ ಪ್ಯಾಕೇಜ್ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ
.ಇದರಿಂದ ವಿಷಪ್ರಾಶಾಣದಂತಹ ಘಟನೆ ನಡೆಯದಂತೆ ತಡೆಯಬಹುದು ಎಂಬುದು ಅಧಿಕಾರಿಗಳ ಅಭಿಪ್ರಾಯ
-ಮರದ ಉಂಗುರಗಳು ತಿಳಿಸುತ್ತವೆ ಹವಾಮಾನದ ಭೂತ ಭವಿಷ್ಯ-
.ಸಂಶೋಧನೆಯೊಂದರ ಪ್ರಕಾರ ಮರದ ಕಾಂಡದಲ್ಲಿನ ಉಂಗುರಗಳು ಹಿಂದೆ ನಡೆದ ಹಾಗು ಮುಂದಾಗುವ ಹವಾಮಾನದ ಅನಾಹುತಗಳನ್ನು ತಿಳಿಸುತ್ತವೆ
.ಕ್ವಿನ್ಸ್ ಲ್ಯಾಂಡ್ ನ ಮರದ ಉಂಗುರಗಳ ಅಧ್ಯಯನದಿಂದ ಹಿಂದಿನ 400 ವರ್ಷಗಳಲ್ಲಿ ನಡೆದ ಹವಾಮಾನ ವೈಪರೀತ್ಯ ಹಾಗು ಮುಂದೆ ಹವಾಮಾನದಲ್ಲಿ ಉಂಟಾಗುವ ಬದಲಾವಣೆಯನ್ನು ತಿಳಿಯಲಾಗಿದೆ
.ವರ್ಷದ ಬೇರೆ ಬೇರೆ ಸಮಯದಲ್ಲಿ ಮರಗಳ ಬೆಳವಣಿಗೆಯ ವೇಗ ಈ ಉಂಗುರಗಳನ್ನು ಹುಟ್ಟುಹಾಕುತ್ತವೆ
.ಸಾಮಾನ್ಯವಾಗಿ ಒಂದು ಉಂಗುರ ಮರದ ಒಂದು ವರ್ಷದ ಚಿತ್ರಣವನ್ನು ನೀಡುತ್ತದೆ
#ಭಾರತದಲ್ಲಿನ ಹುಲಿಗಳ ಸಾವಿನ ಸಂಖ್ಯೆಯ ಮಾಹಿತಿ#
.ಈ ವರ್ಷ ಭಾರತದಲ್ಲಿ ಸಾವನ್ನಪ್ಪಿದ ಹುಲಿಗಳ ಸಂಖ್ಯೆ-17
.ಪ್ರಾಕೃತಿಕವಾಗಿ ಸಂಭವಿಸಿದ ಸಾವು -8
.ಭೇಟೆ ಹಾಗು ಇತರೆ ಕಾರಣಗಳಿಂದ ಸಾವು-9
ಕೃಪೆ-ಭಾರತೀಯ ವನ್ಯಜೀವಿ ರಕ್ಷಣಾ ಸಂಸ್ಥೆ
.ಇವಿಷ್ಟು ಈ ಬಾರಿಯ ನೇಚರ್ wrap-up ನ ಸುದ್ದಿಗಳು.ಇನ್ನಷ್ಟು ಸುದ್ದಿಗಳೊಂದಿಗೆ ಮತ್ತೊಮ್ಮೆ ಹಾಜರಾಗುತ್ತೇನೆ,ಅಲ್ಲಿಯವರೆಗೂ take care of mother nature
-ಪ್ರಕೃತಿಯನ್ನು ಉಳಿಸಿ-

Comments
Post a Comment