Posts

Showing posts from May, 2013

ನೇಚರ್ wrap-up

-ಸರ್ಕಸ್ ನಲ್ಲಿ ವನ್ಯ ಪ್ರಾಣಿಗಳ ನಿಷೇಧ- .ಇಂಗ್ಲೆಂಡ್ ನಲ್ಲಿ ಡಿಸೆಂಬರ್ 1,2015 ರಿಂದ ಜಾರಿಗೆ ಬರುವಂತೆ ಸರ್ಕಸ್ ಕಂಪನಿಗಳಲ್ಲಿ ವನ್ಯ ಜೀವಿಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ  .ಈಗಾಗಲೇ ಇದರ ಕರಡು ಪ್ರತಿ ಸಿದ್ದವಾಗಿದ್ದು ಇದರ ಪ್ರಕಾರ ಸಾಕು ಪ್ರಾಣಿಗಳ ಹೋರತಾದ ಯಾವುದೇ ವನ್ಯ ಜೀವಿಗಳನ್ನು ಸರ್ಕಸ್ ನಲ್ಲಿ ಬಳಸುವುದನ್ನು ನಿಷೇಧಿಸಲಾಗಿದೆ -ಲಂಟಾನ ನಿರ್ಮೂಲನೆಗೆ ಟೊಂಕ ಕಟ್ಟಿ ನಿಂತ ಹಿಮಾಚಲ ಪ್ರದೇಶ- .ಹಿಮಾಚಲ ಪ್ರದೇಶದ ಅರಣ್ಯ ಇಲಾಖೆ ಒಂದು ಮಹತ್ವದ ಯೋಜನೆಗೆ ಜಾರಿಗೆ ಸಿದ್ದವಾಗಿದೆ .ಹಿಮಾಚಲ ಪ್ರದೇಶದ ಕಾಡಿನಲ್ಲಿ ಎಗ್ಗಿಲ್ಲದೆ ಬೆಳೆಯುತ್ತಿರುವ ಹಾಗು ರಾಜ್ಯದ ಅರಣ್ಯ ಸಂಪತ್ತಿಗೆ ದಕ್ಕೆ ಉಂಟುಮಾಡುತ್ತಿರುವ ಲಂಟಾನವನ್ನು ಬುಡ ಸಮೇತ ಕಿತ್ತು ಹಾಕುವ ಯೋಜನೆ ಇದಾಗಿದ್ದು  2014 ರ ಮಾರ್ಚ್ 31 ರ ಒಳಗೆ ಈ ಕಾರ್ಯವನ್ನು ಮುಗಿಸಲು ತಿರ್ಮಾನಿಸಲಾಗಿದೆ . ಈ ಯೋಜನೆ ಜೊತೆಗೆ ಬೇಗ ಬೆಳೆಯಬಹುದಾದ ಬಿದಿರು,ಆಮ್ಲ ಮರಗಳನ್ನು ಬೆಳೆಸಲು ತೀರ್ಮಾನಿಸಲಾಗಿದೆ .ಒಂದು ಅಂದಾಜಿನ ಪ್ರಕಾರ ರಾಜ್ಯದ 1850 sqkm ಅರಣ್ಯ ಹಾಗು ತೇವ ಪ್ರದೇಶದಲ್ಲಿ ಲಂಟಾನ ತನ್ನ ಕಭಂದ ಬಾಹುವನ್ನು ಬೀಸಿದೆ -ತಿರುಮಲ ತಪ್ಪಲಿನಲ್ಲಿ ವಿಷಕಾರಿ ಜೇಡ ಪತ್ತೆ- .ವಿವಿಧ ಜಾತಿಯ ಸಸ್ಯ ಹಾಗು ಪ್ರಾಣಿಗಳಿಗೆ ನೆಲೆಯಾದ ತಿರುಮಲದ ಶೇಷಾಚಲಂ ಗುಡ್ಡ ಪ್ರದೇಶದಲ್ಲಿ ಬರೋಬ್ಬರಿ 113 ವರ್ಷಗಳ ನಂತರ ಅಪಾಯದಂಚಿನಲ್ಲಿರುವ ವಿಷಕಾರಿ ಜೇಡವನ್ನು ಪತ್ತೆಹಚ್ಚಲಾಗಿದೆ...