Wednesday, May 1, 2013

ನೇಚರ್ wrap-up

-ಸರ್ಕಸ್ ನಲ್ಲಿ ವನ್ಯ ಪ್ರಾಣಿಗಳ ನಿಷೇಧ-
.ಇಂಗ್ಲೆಂಡ್ ನಲ್ಲಿ ಡಿಸೆಂಬರ್ 1,2015 ರಿಂದ ಜಾರಿಗೆ ಬರುವಂತೆ ಸರ್ಕಸ್ ಕಂಪನಿಗಳಲ್ಲಿ ವನ್ಯ ಜೀವಿಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ 

.ಈಗಾಗಲೇ ಇದರ ಕರಡು ಪ್ರತಿ ಸಿದ್ದವಾಗಿದ್ದು ಇದರ ಪ್ರಕಾರ ಸಾಕು ಪ್ರಾಣಿಗಳ ಹೋರತಾದ ಯಾವುದೇ ವನ್ಯ ಜೀವಿಗಳನ್ನು ಸರ್ಕಸ್ ನಲ್ಲಿ ಬಳಸುವುದನ್ನು ನಿಷೇಧಿಸಲಾಗಿದೆ


-ಲಂಟಾನ ನಿರ್ಮೂಲನೆಗೆ ಟೊಂಕ ಕಟ್ಟಿ ನಿಂತ ಹಿಮಾಚಲ ಪ್ರದೇಶ-
.ಹಿಮಾಚಲ ಪ್ರದೇಶದ ಅರಣ್ಯ ಇಲಾಖೆ ಒಂದು ಮಹತ್ವದ ಯೋಜನೆಗೆ ಜಾರಿಗೆ ಸಿದ್ದವಾಗಿದೆ

.ಹಿಮಾಚಲ ಪ್ರದೇಶದ ಕಾಡಿನಲ್ಲಿ ಎಗ್ಗಿಲ್ಲದೆ ಬೆಳೆಯುತ್ತಿರುವ ಹಾಗು ರಾಜ್ಯದ ಅರಣ್ಯ ಸಂಪತ್ತಿಗೆ ದಕ್ಕೆ ಉಂಟುಮಾಡುತ್ತಿರುವ ಲಂಟಾನವನ್ನು ಬುಡ ಸಮೇತ ಕಿತ್ತು ಹಾಕುವ ಯೋಜನೆ ಇದಾಗಿದ್ದು  2014 ರ ಮಾರ್ಚ್ 31 ರ ಒಳಗೆ ಈ ಕಾರ್ಯವನ್ನು ಮುಗಿಸಲು ತಿರ್ಮಾನಿಸಲಾಗಿದೆ

.ಈ ಯೋಜನೆ ಜೊತೆಗೆ ಬೇಗ ಬೆಳೆಯಬಹುದಾದ ಬಿದಿರು,ಆಮ್ಲ ಮರಗಳನ್ನು ಬೆಳೆಸಲು ತೀರ್ಮಾನಿಸಲಾಗಿದೆ

.ಒಂದು ಅಂದಾಜಿನ ಪ್ರಕಾರ ರಾಜ್ಯದ 1850 sqkm ಅರಣ್ಯ ಹಾಗು ತೇವ ಪ್ರದೇಶದಲ್ಲಿ ಲಂಟಾನ ತನ್ನ ಕಭಂದ ಬಾಹುವನ್ನು ಬೀಸಿದೆ


-ತಿರುಮಲ ತಪ್ಪಲಿನಲ್ಲಿ ವಿಷಕಾರಿ ಜೇಡ ಪತ್ತೆ-
.ವಿವಿಧ ಜಾತಿಯ ಸಸ್ಯ ಹಾಗು ಪ್ರಾಣಿಗಳಿಗೆ ನೆಲೆಯಾದ ತಿರುಮಲದ ಶೇಷಾಚಲಂ ಗುಡ್ಡ ಪ್ರದೇಶದಲ್ಲಿ ಬರೋಬ್ಬರಿ 113 ವರ್ಷಗಳ ನಂತರ ಅಪಾಯದಂಚಿನಲ್ಲಿರುವ ವಿಷಕಾರಿ ಜೇಡವನ್ನು ಪತ್ತೆಹಚ್ಚಲಾಗಿದೆ

. Genus poecilotheria ಗಳ ಅಡಿಯಲ್ಲಿ ವರ್ಗೀಕರಿಸಲಾದ ಇವುಗಳು  ಭಾರತ ಹಾಗು ಶ್ರೀಲಂಕಾದಲ್ಲಿ  ಕಂಡುಬರುತ್ತವೆ

.7 ಜಾತಿಯ ಜೇಡಗಳು ಶ್ರೀಲಂಕಾದಲ್ಲಿ ಕಂಡುಬಂದರೆ,8 ಜಾತಿಯ ಜೇಡಗಳು ಭಾರತದಲ್ಲಿ ಕಂಡುಬರುತ್ತವೆ

.ಈ ಮೊದಲು ಈ ವಿಷಕಾರಿ ಜೇಡಗಳನ್ನು ಅನಂತಪುರ ಜಿಲ್ಲೆಯ ಗೂಟಿ ಎಂಬ ಕಡೆ ನೋಡಲಾಗಿತ್ತು


-ಕೀಟನಾಶಕಗಳನ್ನು ನಿಷೇಧಿಸಲು ನಿರ್ಧರಿಸಿದ ಯುರೋಪ್-
 .ಪ್ರಪಂಚದಾದ್ಯಂತ ಅತೀ ಹೆಚ್ಚಾಗಿ  ಬಳಸುವ 3 ಬಗೆಯ ಕೀಟನಾಶಕಗಳನ್ನು ನಿಷೇಧಿಸಲು ಯುರೋಪ್ ಒಕ್ಕೂಟ ನಿರ್ಧರಿಸಿದೆ

.ಇದಕ್ಕೆ ಕಾರಣ ಜೇನು ಹುಳಗಳ ಸಂತತಿಯಲ್ಲಿ ದಿಡೀರನೆ ಕಂಡು ಬಂದ ಇಳಿಕೆ

.ಆಹಾರ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಜೇನುಹುಳಗಳ ಸಂತತಿ ಯುರೋಪ್ ನಲ್ಲಿ ಇಳಿಮುಖವಾಗಿದ್ದು,ಇದಕ್ಕೆ ಕಾರಣ ಈ ಕೀಟನಾಶಕಗಳು ಎಂದು ಅಂದಾಜಿಸಲಾಗಿದೆ

.ಆದರೆ  ಕೀಟನಾಶಕ ಉತ್ಪಾದಿಸುವ ಕಂಪನಿಗಳು ಹಾಗು ಕೆಲವು ವಿಜ್ನ್ಯಾನಿಗಳ ಪ್ರಕಾರ ಜೇನುಹುಳಗಳ ಸಂಖ್ಯೆ ಕಡಿಮೆಯಾಗುವಿಕೆಗೂ ಹಾಗು ಈ ಕೀಟನಾಶಕಗಳಿಗೂ ಯಾವುದೇ ಸ್ಪಷ್ಟ ಕೊಂಡಿ ಇಲ್ಲ  

.ಈಗಾಗಲೇ ಈ ಒಪ್ಪಂದಕ್ಕೆ 15 ಯುರೋಪ್ ರಾಷ್ಟ್ರಗಳು ಸಹಿ ಹಾಕಿದ್ದು ಇದು ಡಿಸೆಂಬರ್ 1,2013 ರಿಂದ ಜಾರಿಗೆ ಬರಲಿದೆ


-ನಾಶವಾಗುತ್ತಿರುವ ಸುಂದರ್ ಬನ್, ಹುಲಿರಾಯನ ಭವಿಷ್ಯ ಕಗ್ಗತ್ತಲಿನತ್ತ..-
.ಪ್ರಪಂಚದಲ್ಲೇ  ಅತ್ಯಂತ ಹೆಚ್ಚು  Mangrove ಅರಣ್ಯವನ್ನು ಹೊಂದಿರುವ ಸುಂದರ್ ಬನ್ ಪ್ರದೇಶ ವರ್ಷದಿಂದ ವರ್ಷಕ್ಕೆ ನಾಶವಾಗುತ್ತಾ ಬರುತ್ತಿದ್ದು ಇದು ಅಲ್ಲಿನ ಜೀವಿಗಳ ಭವಿಷ್ಯವನ್ನು ಕತ್ತಲಿಗೆ ನೂಕಿದೆ

.ವಿಜ್ನ್ಯಾನಿಗಳ ಪ್ರಕಾರ ಪ್ರತೀ ವರ್ಷ ಸುಮಾರು 200 ಮೀಟರ್ ನಷ್ಟು ಆರೋಗ್ಯಕರ ಸಮುದ್ರ ತೀರದ  ಅರಣ್ಯ ನಾಶವಾಗುತ್ತಿದೆ

.ಸುಮಾರು 500 ಜಾತಿಯ ಸರೀಸೃಪಗಳು,ಮೀನುಗಳು,ಸಸ್ತನಿಗಳು ಇಲ್ಲಿವೆ ಹಾಗು ಭಾರತದ ಹೆಮ್ಮೆಯ ರಾಯಲ್ ಬೆಂಗಾಲ್ ಹುಲಿಗಳಿಗೆ ಇದು ಪ್ರಸಿದ್ದಿಯನ್ನು ಪಡೆದಿದೆ 

.ಮಾನವನ ಒತ್ತಡ,ಜಾಗತಿಕ ಭೂ ತಾಪಮಾನ ಹೆಚ್ಚಳ,ಅಲೆಗಳ ಹೊಡೆತ ಹಾಗು ಸೈಕ್ಲೋನ್ ಗಳು ಇಲ್ಲಿನ ಆರೋಗ್ಯಕರ Mangrove ಅರಣ್ಯವನ್ನು ನಾಶಪಡಿಸುತ್ತಿವೆ 

.ಸುಂದರ್ ಬನ್ ಹುಲಿಗಳ ಅವಾಸ ಸ್ಥಾನವಾಗಿದ್ದು ಇಲ್ಲಿನ ಅರಣ್ಯ ನಾಶ ಹುಲಿಗಳ ಸಂತತಿ ವಿನಾಶಕ್ಕೆ ಕಾರಣವಾಗಿದೆ


-ಕರಡಿಗೆ ನಡೆದ ಪ್ರಥಮ ಮೆದುಳಿನ ಶಸ್ತ್ರಚಿಕಿತ್ಸೆ-
.ಮಾನವರ ಮೆದುಳಿನ ಶಸ್ತ್ರಚಿಕಿತ್ಸೆ ಬಗ್ಗೆ ನೀವು ಕೇಳಿರಬಹುದು ಆದರೆ ಇಲ್ಲೊಂದು ಕಡೆ ಕರಡಿಗೆ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಲಾಗಿದೆ

.ಹೌದು, ಇದು ನಡೆದದ್ದು ಉತ್ತರ Laos ನ ಗುಡ್ಡ ಪ್ರದೇಶದಲ್ಲಿ

. ಸುಮಾರು 3 ವರ್ಷ ವಯಸ್ಸಿನ ಚಂಪಾ ಎಂಬ ಕರಡಿಗೆ ಮೆದುಳಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ

.ಈ ಕರಡಿ ಮೆದುಳಿನಲ್ಲಿ ನೀರು ತುಂಬಿಕೊಳ್ಳುವ ಖಾಯಿಲೆ  hydrocephalus ನಿಂದ ಬಳಲುತ್ತಿತ್ತು

.ಫೆಬ್ರವರಿ 25 ರಂದು ಸುಮಾರು 6 ಗಂಟೆಗಳ ನಿರಂತರ  ಶಸ್ತ್ರಚಿಕಿತ್ಸೆ ಈ ಕರಡಿಗೆ ಹೊಸ ಬದುಕನ್ನು ನೀಡಿದೆ


-ರಣತಂಬೂರ್ ನಲ್ಲಿ ನಾಪತ್ತೆಯಾಗಿರುವ ಸುಂದರಿ-
. ರಣತಂಬೂರ್ ನ ಸುಂದರಿ t-17 ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದಾಳೆ 

.ಪಾರ್ಕಿನ ಪ್ರಸಿದ್ದ ಹುಲಿ ಮಚಲಿಯ ಮಗಳು ಈ t-17 

.ತಾಯಿಯಂತೆಯೇ ಅತ್ಯಂತ ಧೈರ್ಯಶಾಲಿಯಾದ ಇವಳು ಈಗ 11 ತಿಂಗಳ ಮೂರು ಮುದ್ದು ಮರಿಗಳ ತಾಯಿ 

.ಇದ್ದಕ್ಕಿದಂತೆ ಇವಳ ಕಣ್ಮರೆ ಪರಿಸರ ಪ್ರೆಮಿಗಳಲ್ಲಿ ಆತಂಕವನ್ನು ಉಂಟುಮಾಡಿದೆ 

.ಇವಳನ್ನು ಪತ್ತೆ ಮಾಡಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದು,ಎಲ್ಲೆಡೆ ಕ್ಯಾಮರಾ ಟ್ರಾಪ್ ಗಳನ್ನು ಅಳವಡಿಸಲಾಗಿದೆ

.ಸ್ವತಹ ರಾಜಸ್ಥಾನದ ಅರಣ್ಯ ಮಂತ್ರಿಯಾದ ಬಿನಾ ಕಾಕ್ ಪಾರ್ಕ್ ಗೆ ಆಗಮಿಸಿದ್ದು ಸುಂದರಿ ಪತ್ತೆಗೆ ಕಾರ್ಯತಂತ್ರ ರೂಪಿಸುತ್ತಿದ್ದಾರೆ 

.ಸುಂದರಿ ಕ್ಷೇಮವಾಗಿ ಮರಳಲಿ ಹಾಗು ತನ್ನ ಮುದ್ದು ಮರಿಗಳನ್ನು ಸೇರಿಕೊಳ್ಳಲಿ ಎಂಬುದೇ ಎಲ್ಲಾ ಹುಲಿ ಪ್ರೀಯರ ಆಶಯ 


-1360 ಎಕರೆ ಕಾಡು ಬೆಳೆಸಿದ ಧೀರ-
.ಸಾಹಸ,ಪ್ರಕೃತಿ ಪ್ರೇಮ ಅಂದರೆ ಇದೆ ಅಲ್ಲವೇ ಸ್ನೇಹಿತರೆ....

.ಇಲ್ಲೊಬ್ಬ ಪರಿಸರ ಪ್ರೇಮಿ ಬರೋಬ್ಬರಿ 1360 ಎಕರೆ ಕಾಡು ಬೆಳೆಸಿ ಪ್ರಕೃತಿ ಮಾತೆಯ ಪ್ರೀತಿಗೆ ಒಳಗಾಗಿದ್ದಾನೆ 

.ಅದು 1979 ನೇ ಇಸವಿ ಅಸ್ಸಾಂ ನ ಲ್ಲಿ ಬಂದೆರಗಿದ ಪ್ರವಾಹ ಹಲವಾರು ಹಾವುಗಳನ್ನು sandbar ಎನ್ನುವ ಪ್ರದೇಶಕ್ಕೆ ಕೊಚ್ಚಿಕೊಂಡು ಬಂದಿತ್ತು .ಅಲ್ಲಿ ಮರಗಳ ನೆರಳು ಇಲ್ಲದ ಕಾರಣ ಈ ಹಾವುಗಳು ಬಿಸಿಲಿಗೆ ಬಳಲಿ ಪ್ರಾಣ ಬಿಟ್ಟವು 

.ಈ ಘಟನೆ Jadav Molai Payeng ಎನ್ನುವವರ ಮನಕಲುಕಿತು .ಆಗಲೇ ಅವರು ನಿರ್ಧರಿಸಿದ್ದು ಆ ಜಾಗದಲ್ಲಿ ಕಾಡು ಬೆಳೆಸಬೇಕೆಂದು 

.ತಕ್ಷಣ ಅವರು ಅರಣ್ಯ ಅಧಿಕಾರಿಗಳನ್ನು ಸಂಪರ್ಕಿಸಿ ಅಲ್ಲಿ ಕಾಡು ಬೆಳೆಸುವಂತೆ ಮನವಿ ಮಾಡಿದರು.ಆದರೆ ಅವರ ಮನವಿ ತಿರಸ್ಕರಿಸಿದ ಅಧಿಕಾರಿಗಳು ಅಲ್ಲಿ ಏನೂ ಬೆಳೆಯುವುದಿಲ್ಲ ಬದಲಾಗಿ ನೀವೇ ಅಲ್ಲಿ ಬಿದಿರು ಬೆಳೆಸಿ ಎಂದು ಸಲಹೆ ನೀಡಿದರು 

.ಅವರಿಗೆ ಸಹಾಯ ಮಾಡಲು ಯಾರೂ ಬರಲಿಲ್ಲ.ಆದರೂ ಈ ಪ್ರಕೃತಿ ಪುತ್ರ ಧೈರ್ಯಗೆಡಲಿಲ್ಲ.ಅವರೇ ಕುದ್ದಾಗಿ ಬಿಜಗಳನ್ನು ಸಂಗ್ರಹಿಸಿ ನೆಡಲು ಶುರು ಮಾಡಿದರು.ಹಲವು ವರ್ಷಗಳ ವರೆಗೆ ಈ ಕಾಯಕ ಮುಂದುವರೆಸಿದರು 

.ಇದರ ಫಲವಾಗಿಯೇ ಅಂದು ಬರಡು ಭೂಮಿಯಾಗಿದ್ದ sandbar ಪ್ರದೇಶ ಇಂದು ಹಚ್ಚ ಹಸಿರು ಮರ ಗಿಡಗಳಿಂದ ಕಂಗೊಳಿಸುತ್ತಿದೆ.ಅಲ್ಲದೇ ಇದು ಜಿಂಕೆ,ಆನೆ,ಘೇಂಡಾಮೃಗ ಹಾಗು ಹಲವು ಪಕ್ಷಿಗಳ ಅವಾಸ ಸ್ಥಾನವಾಗಿದೆ 

.47 ವರ್ಷ ಪ್ರಾಯದ Payeng ತನ್ನ ಮಕ್ಕಳಂತೆ ಕಾಡು ಹಾಗು ಕಾಡಿನ ಪ್ರಾಣಿಗಳನ್ನು ಬೆಳೆಸಿದ್ದಾರೆ. ಇವರ ಸಾಹಸವನ್ನು ಇಂದು ಅರಣ್ಯ ಅಧಿಕಾರಿಗಳು ಕೊಂಡಾಡುತ್ತಿದ್ದಾರೆ 

.ಈ ಅರಣ್ಯವನ್ನು ಇಂದು Molai woods ಎಂದು ಕರೆಯಲಾಗುತ್ತಿದೆ 

.ಇದೇ ಅಲ್ಲವೇ ನಿಜವಾದ ಪ್ರಕೃತಿ  ಪ್ರೇಮ ಅಂದರೆ...........


-ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್ ಶುದ್ದೀಗೊಳಿಸಿದ ವಿಧ್ಯಾರ್ಥಿಗಳು-
.ಇತ್ತೀಚಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಅಧ್ಯಾಪಕರುಗಳ ಸಂಘ ಕ್ಯಾಂಪಸ್ ಶುದ್ದಿಗೊಳಿಸುವ ಕಾರ್ಯಕ್ರಮವನ್ನು ಏರ್ಪಡಿಸಿತ್ತು

.ವಿಶ್ವ ವಿದ್ಯಾನಿಲಯದ ವಿಧ್ಯಾರ್ಥಿಗಳು, ಅಧ್ಯಾಪಕರುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ಇದ್ದ ಪರಿಸರ ಮಾರಕ ವಸ್ತುಗಳನ್ನು ತೆರವುಗೊಳಿಸಿದರು

.ವಿಶ್ವ ವಿದ್ಯಾನಿಲಯಗಳಲ್ಲಿ ಇಂತಹ ಪರಿಸರ ಜಾಗೃತಿ ಕೆಲಸಗಳು ನಡೆಯುವುದು ನಿಜಕ್ಕೂ ಶ್ಲಾಘನೀಯ ಹಾಗು ಇದು ಯುವ ಜನತೆಯಲ್ಲಿನ ಪ್ರಕೃತಿ ಪ್ರೇಮ ಜಾಗೃತವಾಗುವಲ್ಲಿ ಸಹಾಯ ಮಾಡುವುದು-RAGAT PARADISE ವತಿಯಿಂದ ವಿಶ್ವ ಭೂ ದಿನಾಚರಣೆ ಆಚರಣೆ-
.ಪ್ರತೀ ವರ್ಷದಂತೆ ಈ ವರ್ಷವೂ RAGAT PARADISE ವತಿಯಿಂದ ವಿಶ್ವ ಭೂ ದಿನಾಚರಣೆ ಅಂಗವಾಗಿ ಗಿಡಗಳನ್ನು ನೆಡುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು

.ಕಾರ್ಯಕ್ರಮದಲ್ಲಿ ರಾಜೇಂದ್ರ,ಕಾರ್ತಿಕ್,ಸುಬ್ರಮಣ್ಯ,ನಾಗೇಂದ್ರ ಹಾಗು ರಾಘವೇಂದ್ರ ಪಾಲ್ಗೊಂಡು ವಿವಿಧ ಬಗೆಯ ಗಿಡಗಳನ್ನು ನೆಟ್ಟರು

.ನಂತರ ಮಾತನಾಡಿದ ರಾಜೇಂದ್ರರವರು ಗಿಡಗಳ ಮಹತ್ವದ ಬಗ್ಗೆ ವಿವರಣೆ ನೀಡಿದರು 

 #ಭಾರತದಲ್ಲಿನ ಹುಲಿಗಳ ಸಾವಿನ ಸಂಖ್ಯೆಯ ಮಾಹಿತಿ#
.ಈ ವರ್ಷ ಭಾರತದಲ್ಲಿ ಸಾವನ್ನಪ್ಪಿದ ಹುಲಿಗಳ ಸಂಖ್ಯೆ-38

.ಪ್ರಾಕೃತಿಕವಾಗಿ ಸಂಭವಿಸಿದ ಸಾವು -20

.ಭೇಟೆ ಹಾಗು ಇತರೆ ಕಾರಣಗಳಿಂದ ಸಾವು-18

ಕೃಪೆ-ಭಾರತೀಯ ವನ್ಯಜೀವಿ ರಕ್ಷಣಾ ಸಂಸ್ಥೆ 

.ಇವಿಷ್ಟು ಈ ಬಾರಿಯ ನೇಚರ್ wrap-up ನ ಸುದ್ದಿಗಳು.ಇನ್ನಷ್ಟು ಸುದ್ದಿಗಳೊಂದಿಗೆ ಮತ್ತೊಮ್ಮೆ ಹಾಜರಾಗುತ್ತೇನೆ,ಅಲ್ಲಿಯವರೆಗೂ take care of mother nature 

-ಪ್ರಕೃತಿಯನ್ನು ಉಳಿಸಿ- 
 


No comments:

Post a Comment