Posts

Showing posts from January, 2014

ಬಂಡೀಪುರದದಲ್ಲಿ ಹುಲಿಯ ಹಿಂದೆ

Image
.4 ವರ್ಷಗಳಿಗೊಮ್ಮೆ ನಡೆಯುವ ಹುಲಿ ಗಣತಿಗೆ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಅರಣ್ಯ ಇಲಾಖೆಯಿಂದ ಈ ಬಾರಿಯೂ ಕರೆ ಬಂದಿತ್ತು . ಗಣತಿಯಲ್ಲಿ ಪಾಲ್ಗೊಳ್ಳಲು ಕೆಲವು ಸರಳ ವಿಧಾನಗಳನ್ನು ಅನುಸರಿಸಬೇಕಿತ್ತು. ಅದರಂತೆಯೇ ನಾನೂ ಕೂಡ ಹುಲಿ ಗಣತಿಗೆ apply ಮಾಡಿದೆ .ಕೆಲವೇ ದಿನಗಳಲ್ಲಿ ಅರಣ್ಯ ಇಲಾಖೆಯಿಂದ ನಾನು ಹುಲಿ ಗಣತಿಗೆ ಆಯ್ಕೆಯಾಗಿರುವ ಬಗ್ಗೆ ಮೇಲ್ ಬಂತು.ನಾನು ಬನ್ನೇರ್ ಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆಯುವ ಗಣತಿ ಕಾರ್ಯಕ್ಕೆ ಆಯ್ಕೆಯಾಗಿದ್ದೆ .ಆದರೆ ನನಗೆ ಬನ್ನೇರ್ ಘಟ್ಟ ಗಣತಿಯಲ್ಲಿ ಪಾಲ್ಗೊಳ್ಳಲು ಅಷ್ಟಾಗಿ ಮನಸ್ಸಿರಲಿಲ್ಲ ಹಾಗಾಗಿ ಈ ಬಾರಿಯ ಹುಲಿ ಗಣತಿಯಲ್ಲಿ ಪಾಲ್ಗೊಳ್ಳುವುದು ಬೇಡವೆಂದು ತೀರ್ಮಾನಿಸಿದೆ. ಬನ್ನೇರ್ ಘಟ್ಟ ದಲ್ಲಿ ಮಾನವ ಹಾಗು ವನ್ಯ ಜೀವಿಗಳ ಸಂಘರ್ಷ ಜಾಸ್ತಿಯೇ ಇದ್ದು ಅಲ್ಲಿನ ಆನೆಗಳು ಒಂದು ಕ್ಷಣ ನನಗೆ ಭಯ ಉಂಟು ಮಾಡಿದವು ಹಾಗು ಹುಲಿಗಳು ಘರ್ಜಿಸುವ ಕಾಡಿನಲ್ಲಿ ನಡೆಯುವ ಗಣತಿಯಲ್ಲಿ ಪಾಲ್ಗೊಳ್ಳಬೇಕೆಂಬುದು ನನ್ನ ಆಸೆಯಾಗಿತ್ತು .ಈ ಅವದಿಯಲ್ಲಿಯೇ ಬಂಡೀಪುರದಲ್ಲಿ ಹುಲಿಯೊಂದು ಸರಣಿ ಬಲಿ ತೆಗೆದುಕೊಳ್ಳಲು ಶುರು ಮಾಡಿತ್ತು ಹಾಗು ಆ ಬಗ್ಗೆ ನಾನು ಬ್ಲಾಗ್ ನಲ್ಲಿ ಬರೆದಿದ್ದೇನೆ .ಬಂಡೀಪುರದಲ್ಲಿ ಹುಲಿ ಗಣತಿಗೆ ನನಗೆ ಅವಕಾಶ ಮಾಡಿಕೊಡಬೇಕೆಂದು ಕೋರಿ ಅಲ್ಲಿನ ಅಧಿಕಾರಿಗಳಿಗೆ ಮೇಲ್ ಮಾಡಿದೆ. ಅವರು ಈಗಾಗಲೇ ಬಂಡೀಪುರದಲ್ಲಿ ಗಣತಿಗೆ ಪಾಲ್ಗೊಳ್ಳುವ ಸ್ವಯಂಸೇವಕರು ಹೆಚ್ಚಿದ್ದು ಸಾಧ್ಯವಾದರೆ ಅವಕಾಶ ಕಲ್ಪಿಸುವುದಾ...