ಹುಲಿ ಬಂತು ಹುಲಿ
. 'ಏನ್ರೀ ನಿಮ್ಮೂರಲ್ಲಿ ಹುಲಿ ಕಾಟ ಅಂತೆ.... ಯಾರು ತಂದು ಬಿಟ್ಟಿದ್ದು ಮಾರಾಯ್ರೆ ಈ ಹುಲಿಗಳನ್ನ...ಇದೊಂದು ಕಾಟ ಇರ್ಲಿಲ್ಲ ಈಗ ಇದೂ ಶುರುವಾಗಿದೆ' ಹರಿಹರಪುರದ ಪೇಟೆಯಲ್ಲಿ ಮಿತ್ರ ದಿನೇಶ್ ರವರ ಅಂಗಡಿಯಲ್ಲಿ ಕುಳಿತು ಚಹಾ ಹೀರುತ್ತಿರುವಾಗ ಧಿಡೀರನೆ ಬಿದ್ದ ಈ ಪದಗಳು ಒಮ್ಮೆ ನಮ್ಮಲ್ಲಿ ಮಿಂಚಿನ ಸಂಚಲನವನ್ನುಂಟು ಮಾಡಿದವು . ಹಾಗೆ ನೋಡಿದರೆ ಮಲೆನಾಡಿನ ಜನರಿಗೆ ಹಿಂದಿನಿಂದಲೂ ಬದುಕಿನ ಒಂದು ಭಾಗವೇ ಆಗಿರುವ 'ಕುರ್ಕ' ದ ಬಗ್ಗೆ ಜನರು ಮಾತನಾಡಿಕೊಳ್ಳುವುದು ಸಾಧಾರಣವಾಗಿ ನಾವು ಕೇಳಿರುತ್ತೇವೆ (ಚಿರತೆಗೆ ಇಲ್ಲಿನ ಜನರು 'ಕುರ್ಕ' ಎಂದು ಕರೆಯುವುದು..ಆದರೆ ಕುರ್ಕ ಹಾಗು ಚಿರತೆ ಒಂದೇ ಎಂದು ಇಲ್ಲಿ ವಾದ ಮಾಡಿ ಗೆಲ್ಲಲ್ಲು ಸಾಧ್ಯವಿಲ್ಲ ). ಹಾಗೆಂದು ಹುಲಿಯು ಇಲ್ಲಿನ ಜನರಿಗೆ ಪರಿಚಿತ ಇಲ್ಲವೆಂದೇನಲ್ಲ. ಆಗೊಮ್ಮೆ ಈಗೊಮ್ಮೆ ನಮ್ಮ ದನವನ್ನು ಹುಲಿ ಹಿಡಿಯಿತು ಎಂದು ಹೇಳುವುದನ್ನು ಕೇಳಿದ್ದೇನೆ ಆದರೆ ಈ ಮಾತುಗಳು ಕೇಳಿ ಬರುತ್ತಿದ್ದುದು ತುಂಬಾ ದಟ್ಟ ಅರಣ್ಯಗಳ ಹೊರ ಅಂಚಿನಲ್ಲಿ ವಾಸ ಮಾಡುವ ಜನರ ಬಾಯಲ್ಲೇ ಹೊರತು ಮನುಷ್ಯ ತನ್ನ ಪ್ರಾಬಲ್ಯತೆ ಮೆರೆಯುತ್ತಿರುವ ನಗರ ಪ್ರದೇಶಗಳಲ್ಲಿ ಅಲ್ಲ . 2014 ವರ್ಷದ ಕೊನೆಯ ತಿಂಗಳುಗಳು ಅಂದರೆ ನವೆಂಬರ್ ಹಾಗು ಡಿಸೆಂಬರ್ ಹೊತ್ತಿಗೆ ಇದ್ದಕ್ಕಿದ್ದ ಹಾಗೆ ಕೊಪ್ಪ, ಎನ್ ಆರ್ ಪುರ ಹಾಗು ಶೃಂಗೇರಿ ತಾಲೂಕಿನ ಕೆಲ ಊರುಗಳಲ್ಲಿ 'ಹುಲಿ' ತಟ್ಟೆ oದು ಪ್ರತ್ಯಕ್ಷ ಆಗಿ ಬಿಟ್...